” 3+1 = ನಾಲ್ಕು ಪಿರಮಿಡ್ ಕೋತಿಗಳು “

 

ನಮ್ಮ ಹಿರಿಯರು ನಮಗೆ “ಮೂರು ಕೋತಿಗಳ” ಉದಾಹರಣೆಯನ್ನು ನೀಡಿದ್ದಾರೆ

“ಕಣ್ಣುಮುಚ್ಚಿಕೊಂಡ ಕೋತಿ” .. “ಕಿವಿಗಳನ್ನು ಮುಚ್ಚಿಕೊಂಡ ಕೋತಿ” .. “ಬಾಯಿ ಮುಚ್ಚಿಕೊಂಡ ಕೋತಿ”

ಇದನ್ನು ಸಾಧಾರಣವಾಗಿ ಎಲ್ಲರೂ

“ಕೆಟ್ಟದ್ದು ನೋಡಬಾರದು” .. “ಕೆಟ್ಟದ್ದು ಕೇಳಬಾರದು” .. “ಕೆಟ್ಟದ್ದು ಮಾತನಾಡಬಾರದು”

ಎಂದೇ ಅರ್ಥಮಾಡಿಕೊಳ್ಳುತ್ತಾರೆ, ನಮ್ಮ ಹಿರಿಯರು ನಮಗೆ ಚಿಕ್ಕಂದಿನಲ್ಲಿ ಹಾಗೆಯೇ ಹೇಳಿಕೊಟ್ಟಿದ್ದಾರೆ.

ಆದರೆ, ನಿಜಕ್ಕೂ ಅದು ಸಮಗ್ರವಾದ ವ್ಯಾಖ್ಯಾನ ಆಗಲಾರದು

’ಕೆಟ್ಟದ್ದು’ ಮಾತ್ರವೇ ಅಲ್ಲ .. ’ನಮಗೆ ಅನಗತ್ಯವಾದವು’ ಕೂಡಾ ನಾವು ನೋಡಬಾರದು, ಕೇಳಬಾರದು

ಮತ್ತು ’ಇತರರಿಗೆ ಕೆಲಸಕ್ಕೆಬಾರದ್ದು, ಇತರರಿಗೆ ಅನಗತ್ಯವಾದವುಗಳನ್ನು’ ಮಾತನಾಡಲೇಬಾರದು!

ಮೊದಲನೆಯ ಕೋತಿ ಏನು ಹೇಳುತ್ತದೆಯೆಂದರೆ “ನೋಡಬಾರದ್ದು, ಅಪ್ರಧಾನವಾದದ್ದು ನೋಡಬಾರದು”.. ಕಣ್ಣು ಮುಚ್ಚಿಕೊಳ್ಳಬೇಕು

ಎರಡನೆಯ ಕೋತಿ ಏನು ಹೇಳುತ್ತದೆಯೆಂದರೆ “ಅನಗತ್ಯವಾದದ್ದನ್ನು ಕೇಳಬಾರದು” ..

ಕಿವಿಗಳು ಮುಚ್ಚಿಕೊಳ್ಳಬೇಕು

ಮೂರನೆಯ ಕೋತಿ ಏನು ಹೇಳುತ್ತದೆಯೆಂದರೆ “ಮಾತನಾಡಬಾರದ್ದು, ಮಾತನಾಡುವ ಅಗತ್ಯವಿಲ್ಲದ್ದು ಮಾತನಾಡಬಾರದು” .. ಬಾಯಿ ಮುಚ್ಚಿಕೊಳ್ಳಬೇಕು

ನಿಜಕ್ಕೂ .. ಯಾವುದು ಅಪ್ರಧಾನವಾದವು, ಯಾವುದು ನೋಡಬಾರದ್ದು??

ಯಾವುದು ಅನಗತ್ಯವಾದವು, ಯಾವುದು ಕೇಳಬಾರದ್ದು??

ಯಾವುದು ಮಾತನಾಡಬಾರದ್ದು??

ನಮ್ಮ ಆಧ್ಯಾತ್ಮಿಕ ಪ್ರಗತಿಗೆ ಸ್ವಲ್ಪ ಮಾತ್ರವೂ ಉಪಯೋಗಕ್ಕೆ ಬಾರದ ದೃಶ್ಯಗಳನ್ನು ನಾವು ಸ್ವಲ್ಪ ಮಾತ್ರವೂ ನೋಡಬಾರದು

ನಮ್ಮ ಆಧ್ಯಾತ್ಮಿಕ ಪ್ರಗತಿಗೆ ಉಪಯೋಗಕ್ಕಿಲ್ಲದ ವಿಷಯಗಳನ್ನು ನಾವು ಕೇಳಲೇಬಾರದು

ನಮ್ಮ ಆಧ್ಯಾತ್ಮಿಕ ಪ್ರಗತಿಗೆ .. ಮತ್ತು ಇತರರ ಆಧ್ಯಾತ್ಮಿಕ ಪ್ರಗತಿಗೂ ಕೂಡ ಸಹಾಯಕವಾಗದ

ಮಾತುಗಳನ್ನು ನಾವು ಮಾತನಾಡಲೇಬಾರದು ..

ಸದಾ .. ಆಧ್ಯಾತ್ಮಿಕ ದೃಷ್ಟಿಯಿಂದ .. ನೋಡುವಂಥದ್ದನ್ನೇ ನೋಡಬೇಕು

ಸದಾ .. ಆಧ್ಯಾತ್ಮಿಕ ದೃಷ್ಟಿಯಿಂದ .. ಕೇಳಬೇಕಾದುವುಗಳನ್ನೇ ಕೇಳಬೇಕು

ಸದಾ .. ಆಧ್ಯಾತ್ಮಿಕ ಶಾಸ್ತ್ರಪರವಾಗಿ .. ಮಾತನಾಡುವಂಥದ್ದನ್ನೇ ಮಾತನಾಡಬೇಕು

ಬೇರೆಯದು ಅಧಿಕವಾಗಿ ನೋಡಬಾರದು .. ಬೇರೆಯದು ಅಧಿಕವಾಗಿ ಕೇಳಬಾರದು

ಬೇರೆಯದು ಅಧಿಕವಾಗಿ ಮಾತನಾಡಲೇಬಾರದು

ಇದು ನಮ್ಮ ಹಿರಿಯರು ನಮಗೆ ನೀಡಿದಂತಹ “ಪಿರಮಿಡ್ ಮೂರು ಕೋತಿಗಳ” ಪೂರ್ಣಕಥೆ!

ಆದರೆ, ಪಿರಮಿಡ್ ಸ್ಪಿರಿಚ್ಯುಯಲ್ ಸೊಸೈಟೀಸ್ ಮೂವ್‌ಮೆಂಟ್‌ರವರು

“ನಾಲ್ಕನೆಯ ಕೋತಿ”ಯನ್ನು ಉದಾಹರಣೆಯಾಗಿ ನೀಡುತ್ತಿದ್ದಾರೆ!

“ನಾಲ್ಕನೆಯ ಕೋತಿ” ಏನು ಸೂಚಿಸುತ್ತದೆಯೆಂದರೆ ..

ಇತರರ ಆಧ್ಯಾತ್ಮಿಕ ಪ್ರಗತಿಗೇ ಆಗಲಿ ..

ಸ್ವಂತ ಆಧ್ಯಾತ್ಮಿಕ ಪ್ರಗತಿಗೇ ಆಗಲಿ

ಉಪಯೋಗವಲ್ಲದ ಆಲೋಚನೆಗಳನ್ನು .. ಸಂಸ್ಕಾರರಹಿತ ಆಲೋಚನೆಗಳನ್ನು

ಆಲೋಚಿಸಲೇಬಾರದು!

ಒಂದು ಆಲೋಚನೆ ಕೂಡಾ ನಮ್ಮ “ಮನಸ್ಸು-ಮಸ್ತಿಷ್ಕ-ಮಿದುಳು”

ಇವುಗಳಿಂದ ಆಧ್ಯಾತ್ಮಿಕವಾಗಿ ಮತ್ತು

ಸರ್ವಕುಶಲೋಪರಿಯಾಗಿಯೂ ಇಲ್ಲದ ಆಲೋಚನೆಗಳು ಹೊರಬೀಳಬಾರದು!

ಇದೇ ಒಬ್ಬ ಯೋಗೀಶ್ವರನ ಸಹಜ ಸ್ವಭಾವ!

“ನಾಲ್ಕನೆಯ ಕೋತಿ” ಅಂದರೆ “ಅನಗತ್ಯವಾದವುಗಳನ್ನು ಆಲೋಚಿಸದ ಕೋತಿ”

ನಾಲ್ಕನೆಯ ಕೋತಿ = “ಪಿರಮಿಡ್ ಮಾಸ್ಟರ್ ಆದ ಕೋತಿ”

ಕಣ್ಣು, ಕಿವಿಗಳು, ಬಾಯಿ ಎನ್ನುವುದು ಬಹಿರ್‌ಇಂದ್ರಿಯಗಳು

ಬರ್ಹಿರೇಂದ್ರಿಯಗಳ ಮೇಲೆ ನಿಯಂತ್ರಣ ಎಂಬುದು “ಮಧ್ಯಮ ಹಂತದ ಸಾಧನೆ”ಯಾದರೆ,

ಮನಸ್ಸಿನ ಮೇಲೆ, ಅಂತರೇಂದ್ರಿಯದ ಮೇಲೆ ನಿಯಂತ್ರಣ ಎಂಬುದು “ಉತ್ತಮ ಹಂತದ ಸಾಧನೆ”ಯಾಗುತ್ತದೆ ..

“ಪಿರಮಿಡ್ ಆಧ್ಯಾತ್ಮಿಕ – ಸಾಧನೆ” ಯಾಗುತ್ತದೆ !

ಮೊಟ್ಟಮೊದಲ ಕೋತಿ ಸರಿಯಾದ ರೀತಿಯಲ್ಲಿ ನೋಡುವ ಕೋತಿ

ಎರಡನೆಯ ಕೋತಿ ಸರಿಯಾದ ರೀತಿಯಲ್ಲಿ ಕೇಳುವ ಕೋತಿ

ಮೂರನೆಯ ಕೋತಿ ಸರಿಯಾದ ರೀತಿಯಲ್ಲಿ ಮಾತನಾಡುವ ಕೋತಿ

ನಾಲ್ಕನೆಯ ಕೋತಿ ಸರಿಯಾದ ರೀತಿಯಲ್ಲಿ ಆಲೋಚಿಸುವ ಕೋತಿ

ಇದೇ “ಪಿರಮಿಡ್‌ನ ನಾಲ್ಕು ಕೋತಿಗಳ” ಕಥೆ ..