ಗುರುಪೂರ್ಣಿಮೆ ಉತ್ಸವ – ನಂದವರಂ

” ಒಬ್ಬ ಯೋಗಿ ಬೆಳಗ್ಗೆ ಹೊತ್ತು ಕಣ್ಣುಗಳನ್ನು ತೆರೆದಿಟ್ಟುಕೊಂಡು ನಿರ್ವಿಕಲ್ಪವಾಗಿರುತ್ತಾನೆ ”

ಜುಲೈ 3ರಂದು ಗುರುಪೂರ್ಣಿಮೆ ಸಂದರ್ಭವಾಗಿ ಕರ್ನೂಲ್ ಜಿಲ್ಲೆ, ನಂದವರಂ ಗ್ರಾಮದಲ್ಲಿ ಶ್ರೀ ಸದಾನಂದಯೋಗಿಯವರ ಸಮಾಧಿ ಹತ್ತಿರ ವಿಶೇಷವಾದ ಧ್ಯಾನಕಾರ್ಯಕ್ರಮವು ನಡೆಯಿತು. ರಾತ್ರಿ 9 ರಿಂದ ಮರುದಿನ ಮುಂಜಾನೆ 5 ರವರೆಗೆ ಸಾಮೂಹಿಕ ಧ್ಯಾನ ಮತ್ತು ಸಜ್ಜನಸಾಂಗತ್ಯ ನಡೆಯಿತು. ಈ ಕಾರ್ಯಕ್ರಮಕ್ಕೆ ಸುಮಾರು 12,೦೦೦ ಜನ ಧ್ಯಾನಿಗಳು ಎಲ್ಲಾ ಪ್ರಾಂತಗಳಿಂದ ಬಂದಿರುವುದು ವಿಶೇಷ. ಈ ಕಾರ್ಯಕ್ರಮಕ್ಕೆ ಕ್ರೊಯೇಷಿಯಾದಿಂದ ಬಂದಿದ್ದ 36 ಜನ ಮಾಸ್ಟರ‍್ಸ್ ಸಹ ಪಾಲ್ಗೊಂಡರು. ಕಾರ್ಯಕ್ರಮವು ಕೆಲವು ಸೀನಿಯರ್ ಮಾಸ್ಟರ್‌ಗಳ ಧ್ಯಾನಾನುಭವಗಳಿಂದ ಪ್ರಾರಂಭವಾಯಿತು. ನಂತರ, ಕ್ರೊಯೇಷಿಯನ್ ಮಾಸ್ಟರ್ ಇವಾನ್ ಬಾವ್‌ಸೊವಿಕ್ ಸಹ ತಮ್ಮ ಸಂದೇಶವನ್ನು ನೀಡಿದರು. ನಂತರ, ಸ್ವಲ್ಪ ಸಮಯದ ಕಾಲ ಪತ್ರೀಜಿ ಹಾಡುಗಳನ್ನು ಹಾಡಿಸಿದರು.

ಪತ್ರೀಜಿ ಸಂದೇಶ: ಪತ್ರೀಜಿ ಅವರು ಮಾತನಾಡುತ್ತಾ ಇಲ್ಲಿಗೆ ಬರದೇ ಇರುವ ಗುರುಗಳಿಗೆಲ್ಲರಿಗೂ ನಮಸ್ಕಾರಗಳು. ಗುರುಪೂರ್ಣಿಮೆ ಸಂದರ್ಭವಾಗಿ ಶ್ರೀ ಸದಾನಂದಯೋಗಿ ಅವರಿಗೆ ನಮಸ್ಕಾರ. ಗುರುಪೂರ್ಣಿಮೆ ಸಂದರ್ಭವಾಗಿ ಮೇಲಿನ ಲೋಕಗಳಲ್ಲಿರುವ ಗುರುಗಳಿಗೆಲ್ಲರಿಗೂ ನಮಸ್ಕಾರಗಳು. ಗುರುಪೂರ್ಣಿಮೆ ಸಂದರ್ಭದಲ್ಲಿ ಮುಂದೆ ಆಗಲಿರುವ ಗುರುಗಳಿಗೆಲ್ಲರಿಗೂ ನಮಸ್ಕಾರ. ಗುರುಪೂರ್ಣಿಮೆ ಸಂದರ್ಭವಾಗಿ ಈ ದಿನ ಬೆಳಗುತ್ತಿರುವ ಪೂರ್ಣಿಮೆ ಚಂದ್ರನಿಗೆ ನಮಸ್ಕಾರಗಳು.

ಈ ದಿನ ರಾತ್ರಿ ಎಲ್ಲಾ ನಾವು ಧ್ಯಾನ ಮಾಡುತ್ತೇವೆ. ಹೇಗೆ ಮಾಡುತ್ತೇವೆಂದರೇ ಈ ದಿನವೇ ನಮ್ಮ ಜನ್ಮದಲ್ಲಿ ಕೊನೆಯ ದಿನ ಎಂದುಕೊಂಡು ಧ್ಯಾನ ಮಾಡುತ್ತೇವೆ. ನಮಗೆ ನಾಳೆ ಎನ್ನುವುದಿಲ್ಲ, ಈ ದಿನವೇ ನಮ್ಮ ಶರೀರಕ್ಕೆ, ನಮ್ಮ ಜನ್ಮಕ್ಕೆ ಕೊನೆಯ ದಿನ ಎನ್ನುವಹಾಗೆ ಈ ರಾತ್ರಿ ಎಲ್ಲಾ ನಾವು ತುಂಬಾ ಶ್ರದ್ಧೆಯಿಂದ, ತುಂಬಾ ಏಕಾಗ್ರತೆಯಿಂದ ನಾವು ನಮ್ಮ ಜೀವನವನ್ನು ಧನ್ಯವಾಗಿಸಿಕೊಳ್ಳೋಣ ಎಂದು ಹೇಳಿ ಎಲ್ಲರನ್ನೂ ಧ್ಯಾನದಲ್ಲಿ ಕೂಡಿಸಿದರು.

ಯೋಗಿಗಳ ಸಮಾಧಿ ಹತ್ತಿರ ಕುಳಿತುಕೊಂಡು ಮಾಡುವ ಧ್ಯಾನ ತುಂಬಾ ಶಕ್ತಿಯುತವಾದದ್ದು. ಸಂಗೀತ ಧ್ಯಾನ, ಹುಣ್ಣಿಮೆ ಧ್ಯಾನ, ಪ್ರಕೃತಿ ಮಡಿಲಲ್ಲಿ ಧ್ಯಾನ, ಸಾಮೂಹಿಕ ಧ್ಯಾನ, ಸಮಾಧಿ ಹತ್ತಿರ ಧ್ಯಾನ ನಾವು ಮಾಡುತ್ತಿದ್ದೇವೆ. ಅನೇಕ ಬಗೆಯ ಧ್ಯಾನಗಳು ಇಲ್ಲಿ ಮಿಳಿತಗೊಂಡಿದೆ. ಎಂದು ಹೇಳಿ ತಮ್ಮ ಕೊಳಲು ನಾದದಿಂದ ಎಲ್ಲರನ್ನೂ ಧ್ಯಾನ ಮಗ್ನರನ್ನಾಗಿಸಿದರು.

ಅನಂತರ, ಐದು ನಿಮಿಷಗಳು ಮೌನವಾಗಿರಿಸಿದರು. ಕಣ್ಣುಗಳಿಂದ ಎಲ್ಲಾ ನೋಡುತ್ತಿದ್ದರೂ ಮನಸ್ಸಿನಲ್ಲಿ ಯಾವ ಯೋಚನೆ ಇರಬಾರದು. ಕಣ್ಣುಗಳು ಕೇವಲ ಕನ್ನಡಿಯ ಹಾಗೆ ತಯಾರಾಗಬೇಕಷ್ಟೇ. ಒಳಗಿನ ಮನಸ್ಸಿಗೆ ಯಾವ ಕೆಲಸವೂ ಸಹ ಇರಬಾರದು. ಇದನ್ನೇ ತೆರೆದ ಕಣ್ಣುಗಳಿಂದ ಧ್ಯಾನ ಎನ್ನುತ್ತಾರೆ. ಕಣ್ಣುಗಳಿಂದ ಯಾವುದನ್ನು ನೋಡುತ್ತಿದ್ದರೂ ಅದರ ಮೇಲೆ commentry ಇರಬಾರದು. ವ್ಯಾಖ್ಯಾನ ಮಾಡಬಾರದು. No comments on what we see, simply seeing. ಸುಮ್ಮನೇ ಕಾಣುತ್ತಿದೆ ಅಷ್ಟೆ. ಮನಸ್ಸಿನಲ್ಲಿಯೇ ಯಾವ ಟೀಕೆ-ಟಿಪ್ಪಣಿ ಮಾಡುವುದು ಬೇಡ. ಯಾವ ತೀರ್ಪು ಇಲ್ಲದೆ ಸುಮ್ಮನೇ ವೀಕ್ಷಿಸುತ್ತಿರುವುದು. ಮನಸ್ಸಿಗೆ ಯಾವ ಕೆಲಸ ಕಲ್ಪಿಸದೇ ಸುಮ್ಮನೆ ನೋಡುತ್ತಿರುವುದು. ಒಬ್ಬ ಯೋಗಿ ಹಗಲುಹೊತ್ತು ಹೇಗೆ ಜೀವಿಸುತ್ತಾನೆ ಎಂದರೆ, ಎಲ್ಲಾ ನೋಡುತ್ತಿರುತ್ತಾನೆ, ಆದರೆ, ಯಾವುದರಮೇಲೂ ವ್ಯಾಖ್ಯಾನ ಇರುವುದಿಲ್ಲ. ಒಬ್ಬ ಯೋಗಿ ಬೆಳಗ್ಗೆ ಹೊತ್ತು ಕಣ್ಣುಗಳನ್ನು ತೆರೆದಿಟ್ಟುಕೊಂಡು ನಿರ್ವಿಕಲ್ಪವಾಗಿರುತ್ತಾನೆ, ರಾತ್ರಿ ಹೊತ್ತು ಕಣ್ಣುಗಳನ್ನು ಮುಚ್ಚಿಕೊಂಡು ನಿರ್ವಿಕಲ್ಪವಾಗಿರುತ್ತಾನೆ. ಕಣ್ಣುಗಳು ತೆರೆದಿಟ್ಟು ನಿರ್ವಿಕಲ್ಪವಾಗಿ ಇದ್ದರೆ ಕಣ್ಣುಗಳು ಮುಚ್ಚಿದ ತಕ್ಷಣ ಮೂರನೆಯ ಕಣ್ಣು ತೆರೆದುಕೊಳ್ಳುತ್ತದೆ. ಇದು ಅಭ್ಯಾಸ ಮಾಡಬೇಕು. ಪ್ರತಿದಿನ ಒಂದು ಗಂಟೆಕಾಲ ಕಣ್ಣುಗಳನ್ನು ತೆಗೆದು ನಿರ್ವಿಕಲ್ಪವಾಗಿರಲು ಸಮಯವನ್ನು ಇಡಬೇಕು. ಸಾಮಾನ್ಯವಾಗಿ ಪ್ರತಿಯೊಂದು ದೃಶ್ಯದ ಮೇಲೂ ನಮ್ಮ ತೀರ್ಪು ಇರುತ್ತದೆ. ನಮ್ಮ judgement ಇರುತ್ತದೆ. ಆ ತೀರ್ಪು ಎನ್ನುವುದು ಇರಬಾರದು. ನಮ್ಮ commentry ವ್ಯಾಖ್ಯಾನ ಇರಬಾರದು. ಈ ಚರ್ಮಚಕ್ಷುಗಳಿಗೆ ಕಾಣುವ ದೃಶ್ಯಗಳನ್ನು ಸುಮ್ಮನೆ ನೋಡುವುದು, ತಟಸ್ಥವಾಗಿ ಇರುವುದು ಎಂದು ಹೇಳಿದರು. ಅನಂತರ ಎರಡನೆಯ ಬಾರಿ ಕೂಡಾ ಹೀಗೆ ಮನಸ್ಸನ್ನು ನಿರ್ವಿಕಲ್ಪವಾಗಿರಿಸಿಕೊಳ್ಳಲು ಅಭ್ಯಾಸಮಾಡಿಸಿದರು.

ಈ ಪ್ರಪಂಚದಲ್ಲೂ, ಮೇಲಿನ ಲೋಕಗಳಲ್ಲೂ ಅನೇಕ ಜನ ಮಹಾನುಭಾವರು (ಗುರುಗಳು) ಇದ್ದಾರೆ. ಅವರಿಗೆಲ್ಲರಿಗೂ ಮತ್ತು ನಮ್ಮ ಮನಮೆಚ್ಚಿದ ಗುರುಗಳಾದ ಬ್ರಹ್ಮರ್ಷಿ ಪತ್ರೀಜಿ ಅವರಿಗೆ ಗುರುಪೂರ್ಣಿಮೆ ಸಂದರ್ಭದಲ್ಲಿ ಶತಕೋಟಿ ನಮಸ್ಕಾರಗಳು.