“ಶ್ವಾಸವೇ ಗುರುವು”

ಯಾವ ವ್ಯಕ್ತಿಯೂ ಇನ್ನೊಬ್ಬ ವ್ಯಕ್ತಿಗೆ ಗುರುವಲ್ಲ! ಯಾರಪ್ಪಾ ಗುರುವು ಅಂದರೆ ಶ್ವಾಸ! ಅವರ ಶ್ವಾಸವೇ ಅವರಿಗೆ ಗುರುವು! ದೇಹದಲ್ಲಿ ದೀಪವನ್ನು ಬೆಳಗಿಸುವ ಗುರುವೇ ಶ್ವಾಸ!

ತಂತ್ರ – ಪರತಂತ್ರ – ಸ್ವಾತಂತ್ರ್ಯ

ನಾವು ಸಂಪೂರ್ಣವಾದ ಸ್ವಾತಂತ್ರ್ಯವನ್ನು ಹೊಂದಿದ್ದೇವೆ. ನಮ್ಮ ಮೇಲೆ ಯಾರ ಹತೋಟಿ ಇರಬಾರದು. ಇತರರ ಹತೋಟಿನಲ್ಲಿರುವವರು ಪರತಂತ್ರರು. ‘ತಂತ್ರ’ ಎಂದರೇ ದೇಹಕ್ಕೆ ಗುಲಾಮಗಿರಿ ಸ್ಥಿತಿ – ಬಾಡಿ ಡಿಪೆಂಡೆಂಟ್ ಜೀವನ… ‘ಪರತಂತ್ರ’ ಎಂದರೇ ಇತರರಿಗೆ ಗುಲಾಮಗಿರಿ ಸ್ಥಿತಿ – ಅದರ್ ಡಿಪೆಂಡೆಂಟ್ ಜೀವನ…

ಸ್ವಾತಂತ್ರ್ಯ ಎಂದರೆ ಸಂಪೂರ್ಣ ವಿಮುಕ್ತ ಸ್ಥಿತಿ – ಸೋಲ್ ಡಿಪೆಂಡೆಂಟ್ ಜೀವನ…

ಅತ್ಯವಶ್ಯಕ ಪರಿಸ್ಥಿತಿಗಳಲ್ಲಿ ಇತರರ ಸಹಾಯ ತೆಗೆದುಕೊಳ್ಳಬೇಕು. ಅಷ್ಟೇ ವಿನಹ ಸಾಮಾನ್ಯವಾಗಿ ಯಾರೂ ಇನ್ನೊಬ್ಬರ ಮೇಲೆ ಡಿಪೆಂಡೆಂಟ್ ಆಗಬಾರದು. ನಮ್ಮ ಸಾಮರ್ಥ್ಯಶಕ್ತಿ ಅಪೂರ್ವವಾದದ್ದು. ಆದರೆ, ಶೋಚನೀಯಕರವಾದ ವಿಷಯವೇನೆಂದರೆ, ನಾವು ಅದರಲ್ಲಿ ಸಹಸ್ರಾಂಶ ಸಹ ಉಪಂiಗಿಸಿಕೊಳ್ಳುತ್ತಿಲ್ಲ. ಅದಕ್ಕೇ ನಮಗೆ ಈ ದುಸ್ಥಿತಿ. ನೆವರ್ ಥಿಂಕ್ ಫ್ರಮ್ ಬಾಡಿ ಪಾಯಿಂಟ್ ಆಫ್ ವ್ಯೂ … ಥಿಂಕ್ ಆಲ್ವೇಸ್ ಫ್ರಮ್ ಸೋಲ್ ಪಾಯಿಂಟ್ ಆಫ್ ವ್ಯೂ.

***

ಗ್ರಹ = ತೆಗೆದುಕೊಳ್ಳುವುದು – ದೇಹಕ್ಕೆ ಗುಲಾಮ … ತಂತ್ರ
ಪರಿಗ್ರಹ = ವಿಶೇಷವಾಗಿ ತೆಗೆದುಕೊಳ್ಳುವುದು – ಗುಲಾಮ ಜೀವನ … ಪರತಂತ್ರ
ಅಪರಿಗ್ರಹ = ಸ್ವಲ್ಪವೂ ತೆಗೆದುಕೊಳ್ಳದೇ ಇರುವುದು – ಆಧ್ಯಾತ್ಮಿಕ … ಸ್ವಾತಂತ್ರ

ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟೀಸ್ ಮೂವ್‌ಮೆಂಟ್ ೧೮ ಆದರ್ಶ ಸೂತ್ರಗಳಲ್ಲಿ ೧೫ನೆಯ ಪಾಯಿಂಟ್ ಓದಿ. ಅವರವರ ಸಮಸ್ಯೆಗಳನ್ನು ಅವರವರೇ ಪರಿಷ್ಕರಿಸಿಕೊಳ್ಳಬೇಕು. ಅದೇ ಸ್ವಾತಂತ್ಯ, ಶ್ವಾಸದ ಮೇಲೆ ಗಮನವಿಟ್ಟು ಜ್ಞಾನದಿಂದ ಜೀವಿಸಬೇಕು. ಆಗ ಯಾರಮೇಲೆಯೂ ಆಧಾರಪಟ್ಟು ಜೀವಿಸಬೇಕಾದ ಅವಶ್ಯಕತೆ ಬರುವುದೇ ಇಲ್ಲ. ಉದ್ಧರೇದಾತ್ಮನಾತ್ಮಾನಂ.

ನಿನ್ನ ನೀನೇ ಉದ್ಧರಿಸಿಕೊಳ್ಳಬೇಕು. ನಿನ್ನ ದೀಪವನ್ನು ನೀನೆ ಬೆಳಗಿಸಿಕೊಳ್ಳಬೇಕು.

ಸತ್ಯ = ಶುಭ = ಲಾಭ
ಅಸತ್ಯ = ಅಶುಭ = ನಷ್ಟ

ಶುಭದಿಂದ … ಲಾಭ
ಅಶುಭದಿಂದ … ನಷ್ಟ
ಸತ್ಯದಿಂದ … ಶುಭ
ಅಸತ್ಯದಿಂದ…ಅಶುಭ