ಹೊಸ ಪಾಠಗಳು ಕಲಿತುಕೊಳ್ಳುವಾಗ ತಪ್ಪು ಹೆಜ್ಜೆಗಳು ತಪ್ಪಿದ್ದಲ್ಲ

 

ಪ್ರತಿ ಜೀವಿ ಸಹ ತನ್ನ ಪ್ರಗತಿ ಪಥದಲ್ಲಿ ನಿಶ್ಚಯವಾಗಿ ತಪ್ಪುಗಳು ಮಾಡಬೇಕಾದ್ದೇ. ಹೊಸ ಪಾಠಗಳು ಕಲಿತುಕೊಳ್ಳುವಾಗ ತಪ್ಪು ಹೆಜ್ಜೆ ಹಾಕುವುದು ತಪ್ಪಿದ್ದಲ್ಲವಲ್ಲ. ಅಂತಹ ತಪ್ಪುಹೆಜ್ಜೆಗಳು ’ಪಾಪಗಳು ’ ಅಲ್ಲ. ಅವು ’ ತಪ್ಪುಗಳು ’ ಅಲ್ಲ. ’ ಕ್ಷಮಿಸಲಾರದ ಅಪರಾಧಗಳು ’ ಅಲ್ಲ.

ತಾವು ತಪ್ಪದೇ ಹಾಕುವ ತಪ್ಪುಹೆಜ್ಜೆಗಳನ್ನು ತಾವೇ ಕ್ಷಮಿಸಲಾರದ ಅಪರಾಧಗಳೆಂದು ಪರಿಗಣಿಸಿದರೆ ಅಂಥವರಿಗೆ ’ ಎನ್‌ಲೈಟೆನ್‌ಮೆಂಟ್ ’ ಇಲ್ಲ ಎಂದರ್ಥ. ಹಾಗೆಯೇ, ಇತರರು ತಪ್ಪದೇ ಹಾಕಬೇಕಾಗಿ ಬಂದ ತಪ್ಪು ಹೆಜ್ಜೆಗಳನ್ನು ಕ್ಷಮಿಸಲಾರದ ಅಪರಾಧಗಳೆಂದು ಭಾವಿಸಿದರೆ ಅವರಿಗೆ ’ಎನ್‌ಲೈಟೆನ್‌ಮೆಂಟ್ ’ ಇಲ್ಲ ಎಂದರ್ಥ.

ಆದ್ದರಿಂದ, ಕಲಿತುಕೊಳ್ಳುತ್ತಿರುವವರ ತಪ್ಪು ಹೆಜ್ಜೆಗಳನ್ನು ’ ತಪ್ಪು ಹೆಜ್ಜೆಗಳು ’ ಎಂದೇ ಸ್ವೀಕರಿಸಿ ಅವರ ತಪ್ಪು ಹೆಜ್ಜೆಗಳನ್ನು ತಪ್ಪುಗಳಾಗಿ ನೋಡದೇ ಅವು ಅವರವರ ವಿದ್ಯಾಭ್ಯಾಸಗಳಲ್ಲಿ ಕಲಿತುಕೊಳ್ಳಲಿಕ್ಕಾಗಿ ಮಾಡುವ ಚಿಕ್ಕ ಚಿಕ್ಕ ಲೋಪಗಳಿಂದ ಕೂಡಿದ ಪ್ರಯತ್ನಗಳೇ ಎಂದು ಅವುಗಳನ್ನು ಗುರ್ತಿಸುತ್ತಾ ಆ ರೀತಿಯಾಗಿ, ಆ ಅರಿವಿನಲ್ಲಿರುವುದೇ ’ ಎನ್‌ಲೈಟೆನ್ಡ್ ’ ಎಂದರೆ. ಅಷ್ಟೇ ವಿನಹ, ಆ ಯಾವದೇ ವಿದ್ಯೆಗಳು ಕಲಿತುಕೊಳ್ಳುತ್ತಿರುವಾಗ ಏನಾದರೂ ಅಪಸ್ವರವಾದರೇ ತಕ್ಷಣ ಅವರ ಮೇಲೆ ಬಿದ್ದು ಸೀಳಿ ಹಾಳುಮಾಡಿ ಕತ್ತುಹಿಸುಕಿ ನೀನು ಅಪಸ್ವರ ನುಡಿದಿದ್ದೀಯ, ನೀನು ಕೆಲಸಕ್ಕೆ ಬಾರದವನು. ಎಂದು ತಪಿತಸ್ಥನನ್ನಾಗಿ ನಿರ್ಣಯಿಸುವುದು ಎಂಬುವುದು ಎನ್‌ಲೈಟೆನ್‌ಮೆಂಟ್ ಇಲ್ಲದವನ ಸ್ಥಿತಿ.

ಒಂದು ವೇಳೆ ಅಪರಾಧ ಮಾಡಿದರೂ ಸಹ ಅದನ್ನೇ ಸದಾ ನೆನೆಸಿಕೊಂಡಿರುವುದು ಎಂಬುವುದು ಎನ್‌ಲೈಟೆನ್ಡ್ ಸ್ಥಿತಿಯಲ್ಲ. ಮಾಡಿದ ಅಪರಾಧವನ್ನು ಆಗಿಂದಾಗೆ ಮರೆಯಬೇಕು. ಪದೇ ಪದೇ ನೆನೆಸಿಕೊಳ್ಳುತ್ತಿದ್ದರೇ ಸಮಯ ವ್ಯರ್ಥ ಅಲ್ಲವೇ. ಆದ್ದರಿಂದ, ನಮ್ಮ ತಪ್ಪುಗಳನ್ನು, ನಮ್ಮ ಪಾಪಗಳನ್ನು ನೆನೆಸಿಕೊಂಡು ಅಳುತ್ತಾ ನಿರಂತರ ಮತ್ತೆಮತ್ತೆ ನೆನೆಪು ಮಾಡುವುದಾಗಲೀ, ಇತರರ ತಪ್ಪುಗಳನ್ನು, ಇತರರ ಪಾಪಗಳನ್ನು ಸದಾ ನೆನೆಯುತ್ತಿರುವುದಾಗಲೀ ಇದೆಲ್ಲಾ ಸ್ವಲ್ಪವೂ ಎನ್‌ಲೈಟೆನ್‌ಮೆಂಟ್ ಅನಿಸಿಕೊಳ್ಳುವುದಿಲ್ಲ.

ಮಾಡಬಾರದಂತಹ ಪಾಪಗಳು ಮಾಡಿದರೂ ತಕ್ಕ ರೀತಿಯಲ್ಲಿ ವ್ಯವಹರಿಸಿ, ಅವೆಲ್ಲಾ ತಕ್ಷಣ ಮರೆತುಹೋಗಿ, ನೂತನ ಸೃಜನಾತ್ಮಕವಾದ ಕಾರ್ಯಕಲಾಪಗಳಲ್ಲಿ ಹೊಸದಾಗಿ ಲೀನವಾಗುವುದೇ ’ಎನ್‌ಲೈಟೆನ್‌ಮೆಂಟ್’ ಎಂದರೆ. ಅಷ್ಟೇ ವಿನಹ, ಸದಾ ನಾನು ಪಾಪಿ; ನಾನು ಪಾಪಿ ಎಂದುಕೊಳ್ಳುವುದಾಗಲೀ, ಅದೇ ರೀತಿಯಲ್ಲಿ ಸದಾ ನೀನು ಪಾಪಿ; ನೀನು ಪಾಪಿ ಎಂದು ಜನ್ಮಾಂತ್ಯದವರೆಗೂ ಇತರರನ್ನು ಪೀಡಿಸುವುದಾಗಲಿ, ಸ್ವಲ್ಪವೂ ’ ಎನ್‌ಲೈಟೆನ್‌ಮೆಂಟ್ ’ ಅನಿಸಿಕೊಳ್ಳುವುದಿಲ್ಲ.

ತಪ್ಪುಗಳು ಮಾಡುವವರ ಹತ್ತಿರ ಅವರು ಯಾವ ರೀತಿ ತಪ್ಪುಗಳು ಮಾಡಿದ್ದಾರೊ ಪರೀಕ್ಷಿಸಿ ಆ ತಪ್ಪುಗಳನ್ನು ನಮ್ಮ ಜೀವನದಲ್ಲಿ ಮಾಡದೇ ಕೆಲಿತುಕೊಳ್ಳಲಾಗುವುದೇ ’ ಎನ್‌ಲೈಟೆನ್‌ಮೆಂಟ್ ’ ಅಂದರೆ. ಹಾಗೆಯೇ, ಒಳ್ಳೇ ಕೆಲಸ ಮಾಡುವವರನ್ನು ಪರೀಕ್ಷಿಸಿ ಅವರು ಯಾವರೀತಿಯಲ್ಲಿ ಒಳ್ಳೆಯ ಕೆಲಸಗಳು ಮಾಡಿದ್ದಾರೋ ತಿಳಿದುಕೊಂಡು ಆ ರೀತಿಯಲ್ಲಿ ನಾವೂ ಸಹ ಒಳ್ಳೆಯವರಾಗಿರಬೇಕು ಎಂದು ನಿರ್ಣಯಿಸುವುದು ಅದೇ ’ ಎನ್‌ಲೈಟೆನ್‌ಮೆಂಟ್ ’ ಎಂದರೆ.

ಅಂದರೆ, ಒಬ್ಬ ಎನ್‌ಲೈಟೆನ್ಡ್ ಮಾಸ್ಟರ್ ಎಲ್ಲರಿಂದ ಕಲಿತುಕೊಳ್ಳಬಲ್ಲ. ಪಾಪಗಳು ಮಾಡಿದವರಿಂದ, ಪುಣ್ಯಗಳು ಮಾಡಿದವರಿಂದ ಕಲಿತುಕೊಳ್ಳುತ್ತಲೇ ಇರುತ್ತಾನೆ.

ಪಾಪಗಳು ಮಾಡುವವರಿಂದ ಪಾಪಗಳು ಹೇಗೆ ಮಾಡಬಾರದೊ ತಿಳಿದುಕೊಳ್ಳುತ್ತಾನೆ; ಪುಣ್ಯ ಕಾರ್ಯಕ್ರಮಗಳು ಮಾಡುವವರಿಂದ ಯಾವ ರೀತಿಯಲ್ಲಿ ಪುಣ್ಯ ಕಾರ್ಯಕ್ರಮಗಳು ಕೈ ಹಿಡಿಯಬೇಕೂ ತಿಳಿದುಕೊಳ್ಳುತ್ತಾನೆ.

ಈ ರೀತಿಯಲ್ಲಿ ಎಲ್ಲರ ಹತ್ತಿರದಿಂದ ಅದ್ಭುತವಾದ ಪಾಠಗಳನ್ನು ಸದಾ, ಅವಿಶ್ರಾಂತವಾಗಿ, ಕಲಿತುಕೊಳ್ಳುತ್ತಾ ಇರುವವನೇ ಎನ್‌ಲೈಟೆನ್ಡ್ ಮಾಸ್ಟರ್. ಯಾರ ಹತ್ತಿರದಿಂದಲೂ ಏನೂ ಕಲಿತುಕೊಳ್ಳದೆ ಇರುವವನು ಕತ್ತಲೆಯ ಬದುಕು ಬದುಕುವವನು. ಸ್ವಲ್ಪವೂ ಪ್ರಕಾಶ ಇಲ್ಲದವನು, ಸ್ವಲ್ಪವೂ ಎನ್‌ಲೈಟೆನ್‌ಮೆಂಟ್ ಇಲ್ಲದವನು.