“ಹಂಸಶ್ವಾಸ”

 

‘ಹಂಸ ಧ್ಯಾನ’ ಎಂದರೆ ’ಶ್ವಾಸ ಧ್ಯಾಸ’ … ಎಂದರೆ ಶ್ವಾಸದ ಮೇಲೆ ಗಮನ.

ಹಂಸ ಧ್ಯಾನದಿಂದಲೇ ’ಪರಮಹಂಸ’ ಆಗುವುದು.

ಇಲ್ಲಿಯವರೆಗೆ ಈ ಸೃಷ್ಟಿಯಲ್ಲಿ ಅನೇಕರು ಪರಮಹಂಸಗಳಾಗಿ ಹೋದರು

ಈಗ ಅನೇಕ ಜನ ಆಗುತ್ತಿದ್ದಾರೆ

ಉಳಿದವರೆಲ್ಲಾ ಭವಿಷ್ಯತ್ತಿನಲ್ಲಿ ಆಗಲಿದ್ದಾರೆ.

* * *

ಪ್ರತಿ ಸ್ತ್ರೀ, ಪ್ರತಿ ಪುರುಷನು, ಪ್ರತಿ ಬಾಲಕನು ಪರಮಹಂಸ ಆಗಬೇಕಾದ್ದೇ

ಪರಮಹಂಸ ಆಗುವುದು ಹೇಗೆ ?

‘ಹಂಸ ಗಮನ’ದಿಂದಲೇ ಪರಮಹಂಸ ಆಗುತ್ತೇವೆ.

ಪರಮಹಂಸ ಆದನಂತರವೇ ಜೀವನದಲ್ಲಿ ಹಾಯಾಗಿ ಇರಲಾಗವುದು.

ಆಗಲೇ ಜೀವನದಲ್ಲಿ ಆನಂದ ಬರುವುದು.

* * *

ಹಂಸ ಎನ್ನುವುದು ಹಾಲನ್ನು, ನೀರನ್ನು ಬೇರೆ ಮಾಡುತ್ತದೆ ಎಂದು ಪ್ರತೀತಿ…

ಹಾಲು ಎಂದರೆ ಸತ್ಯ, ನಿತ್ಯ …

ನೀರು ಎಂದರೆ ಅಸತ್ಯ, ಅನಿತ್ಯ …

ಹಂಸ ಧ್ಯಾನದಿಂದಲೇ

ನಿತ್ಯವೂ-ಅನಿತ್ಯವೂ ಬೇರೆ ಬೇರೆ

ದೇಹಿ-ದೇಹವೂ ಬೇರೆ ಬೇರೆ ಎಂದು ತಿಳಿದುಕೊಳ್ಳುತ್ತೇವೆ.

ನಿತ್ಯವನ್ನೂ, ಅನಿತ್ಯವನ್ನೂ ಪೂರ್ತಿಯಾಗಿ ಬೇರೆ ಮಾಡಿದವನು ’ ಪರಮಹಂಸ ’

ಎಂದು ಅರ್ಥ.

* * *

ಸರಸ್ವತಿದೇವಿ ವಾಹನ ಹಂಸ.

‘ಸರಸ್ವತಿ’ ಎಂದರೆ ವಿದ್ಯಾಮಾತೆ, ಕಲೆಗಳ ನಿಲಯ.

‘ಹಂಸ ಧ್ಯಾನ’ದಿಂದಲೇ ನಾವು ವಿದ್ಯಾಭ್ಯಾಸದಲ್ಲಿ ಮೇಲಕ್ಕೆ ಬರುತ್ತೇವೆ,

ಎಲ್ಲಾ ಕಲೆಗಳನ್ನು ನಮ್ಮದನ್ನಾಗಿ ಮಾಡಿಕೊಳ್ಳುತ್ತೇವೆ.

‘ಹಂಸಮೂರ್ತಿ’ ಆದರೇನೆ ನಾವು ಧ್ಯಾನಮೂರ್ತಿ ಆಗುವುದು.

‘ಧ್ಯಾನಮೂರ್ತಿ’ ಆದರೇನೆ ನಾವು ಪ್ರಜ್ಞಾಮೂರ್ತಿ ಆಗುವುದು.

ಎಲ್ಲರೂ ಹಂಸಾತ್ಮಗಳಾಗೋಣ.

ಹಂಸೋ ಶರಣಂ ಗಚ್ಛಾಮಿ|

ಹಂಸ ಯೇವ ಶರಣಂ ವಯಂ||

* * *