“ಸ್ವರ್ಗಜೀವನಸೂತ್ರಗಳು”

 

  • ” ವಾಸ್ತವ ಮೂಲಂ ಇದಂ ಸ್ವರ್ಗಂ “

ಯಾರಾದರು ಆಗಲಿ … ಯಾವಾಗಾದರು ಆಗಲಿ … ಎಲ್ಲಾದರು ಆಗಲಿ … ವಾಸ್ತವದಲ್ಲಿ

ಜೀವಿಸಬೇಕು.

ವಾಸ್ತವದಲ್ಲಿ ಜೀವಿಸಬೇಕು, ಅದೇ ನಾವು ಮಾಡಬೇಕಾದ್ದು.

ವಾಸ್ತವದಲ್ಲಿ ಇಲ್ಲದಿದ್ದರೆ ಸ್ವರ್ಗ ಎಲ್ಲಿದೆ? ವಾಸ್ತವದಲ್ಲಿ ದುಃಖ ಎಲ್ಲಿದೆ ?

ವಾಸ್ತವದಲ್ಲಿ ಜೀವಿಸಿದರೇನೆ ಸ್ವರ್ಗ, ವಾಸ್ತವದಲ್ಲಿ ಇಲ್ಲದಿದ್ದರೇನೆ ನರಕ.

ಇದೇ ಮೊದಲನೆಯ ಸ್ವರ್ಗ ಜೀವನ ಸೂತ್ರ. ಅಂದರೆ ಸರಿಯಾದ ರೀತಿಯಲ್ಲಿ ಜೀವಿಸುವ ಸೂತ್ರ.

 

  • ” ಸರ್ವಂ ಖಲ್ವಿದಂ ಬ್ರಹ್ಮ “

ಇಲ್ಲಿ ಇರುವುದೆಲ್ಲಾ ಬ್ರಹ್ಮ ಪದಾರ್ಥವೆ. ಇಲ್ಲಿ ಇರುವುದೆಲ್ಲಾ ಚೈತನ್ಯ ಪದಾರ್ಥವೆ.

ವಾಸ್ತವವಾಗಿ ನಾವೆಲ್ಲರೂ ಭಗವತ್ ಪದಾರ್ಥವೆ.

ವಾಸ್ತವವಾಗಿ ನಾವೆಲ್ಲರೂ ಮೂಲಸೃಷ್ಟಿಗೆ ಸಂಬಂಧಿಸಿದ ಆತ್ಮಪದಾರ್ಥವೆ.

ನಾವು ಸದಾ ಆತ್ಮಪದಾರ್ಥವಾಗಿಯೆ ಜೀವಿಸಬೇಕು.

ಇದೇ ಎರಡನೆಯ ಸ್ವರ್ಗ ಜೀವನ ಸೂತ್ರ.

 

  • ” ಈಶ್ವರಪ್ರಣಿಧಾನ “

ಪ್ರತಿಯೊಂದು ಪ್ರಾಣಿಯೂ ಭಗವಂತನೆ.

ಎಲ್ಲಾ ಪ್ರಾಣಿಕೋಟಿ ಬಗ್ಗೆ ಸದಾ ಪ್ರಣಾಮ ಭಾವನೆ … ಹೊಂದಿರಬೇಕು.

ಸಕಲ ಜೀವರಾಶಿ ಕುರಿತು, ಎಲ್ಲಾ ಸಮಯದಲ್ಲೂ, ’ ಮಮಾತ್ಮ ’ ಭಾವನೆ ಹೊಂದಿರಬೇಕು.

ಇದೇ ಮೂರನೆಯ ಸ್ವರ್ಗ ಜೀವನ ಸೂತ್ರ.

 

  • ” ಧ್ಯಾನ ಮೂಲಂ ಇದಂ ಜ್ಞಾನಂ “

ಈ ಜ್ಞಾನವೆಲ್ಲಾ … ಧ್ಯಾನ ಪದಾರ್ಥದಲ್ಲಿ ಮಾತ್ರವೆ ಅನುಭವವಾಗುತ್ತದೆ.

ನಾವು ಭಗವತ್ ಪದಾರ್ಥವಾಗಿದ್ದರೂ ಧ್ಯಾನ ಪದಾರ್ಥವಾಗಿ ಇಲ್ಲದಿರುವಾಗ ನಮಗೆ

ನಾವು ಪ್ರಜ್ಞೆಯ ಸ್ಥಿತಿಗೆ ಬರಲಾರೆವು.

ಧ್ಯಾನ ಪದಾರ್ಥದಲ್ಲಿ ಬರುವವರೆಗೂ ಭಗವತ್ ಪದಾರ್ಥಕ್ಕೆ ತಾನು ಭಗವತ್

ಪದಾರ್ಥ ಎಂದು ತಿಳಿಯುವುದಿಲ್ಲ.

ನಾವು ಪ್ರತ್ಯೇಕವಾಗಿ ಧ್ಯಾನಮೂರ್ತರಾಗಬೇಕು.

ಇದೇ ನಾಲ್ಕನೆಯ ಸ್ವರ್ಗ ಜೀವನ ಸೂತ್ರ.

 

  • ” ಶ್ವಾಸ ಮೂಲಂ ಇದಂ ಧ್ಯಾನಂ “

ಬೀಜ ವೃಕ್ಷಕ್ಕೆ ಮೂಲ … ಧ್ಯಾನಕ್ಕೆ ಶ್ವಾಸ ಮೂಲ…

ಇದೇ ಐದನೆಯ ಸ್ವರ್ಗಜೀವನ ಸೂತ್ರ .

ಸ್ವರ್ಗವನ್ನು ಬಯಸುವವರು ” ವಾಸ್ತವಕ್ಕಾಗಿ” ತಮಸ್ಸನ್ನು ತ್ಯಜಿಸಿ ತಪಸ್ಸನ್ನು

ಕೈಹಿಡಿಯಬೇಕು.

“ಆಧ್ಯಾತ್ಮಿಕತೆ” ಎಂಬುವುದೇ ತಪಸ್ಸು … ” ಧ್ಯಾನ” ದಿಂದಲೇ ಆಧ್ಯಾತ್ಮಿಕತೆ.

ಧ್ಯಾನ “ಶ್ವಾಸ” ದಿಂದ ಮಾತ್ರವೇ ಸಂಭವ.

ಆ ಶ್ವಾಸ ನಮ್ಮೆಲ್ಲರ ಹತ್ತಿರವಿದೆ. ಇನ್ನು ಅದರ ಹತ್ತಿರ ನಾವು ಹೋಗೋಣ.