ವಿಜಯವಾಡ

“ಸರ್ವಮತಸಸ್ಯಾಹಾರಸಮೇಳನ

 

“ಮೈಡಿಯರ್ ಗಾಡ್ಸ್ ಆಫ್ ದಿಸ್ ಗ್ರೇಟ್ ಎರ್ತ್, ಮೊದಲು ನಾವೆಲ್ಲರೂ ತಿಳಿದುಕೊಳ್ಳಬೇಕಾದ ವಿಷಯ ’ ನಾವು ದೇವರುಗಳು ’. ಅನಂತರ ತಿಳಿದುಕೊಳ್ಳಬೇಕಾದ ವಿಷಯ ’ಸಕಲ ಪ್ರಾಣಿಕೋಟಿ ಎಲ್ಲಾ ಕೂಡಾ ದೈವತ್ವವೇ’. ಸರ್ವಂ ಖಲ್ವಿದಂ ಬ್ರಹ್ಮ . ’ ಸರ್ವಂ ’, ಅಂದರೆ, ಎಲ್ಲಾ. ’ಖಲು’, ಅಂದರೆ, ಇರುವುದು. ’ ಇದಮ್ ’, ಅಂದರೆ, ಈ ಇರುವುದೆಲ್ಲಾ ಬ್ರಹ್ಮವೇ. ನಾವು ಮಾಡಬೇಕಾಗಿರುವುದು ಎರಡಿವೆ : ’ ಸತ್ಯಂ ವದ ’ – ’ ಧರ್ಮಂ ಚರ ’. ಸತ್ಯವನ್ನು ಮಾತನಾಡಬೇಕು. ಧರ್ಮವನ್ನು ಆಚರಿಸಬೇಕು. ಸತ್ಯ ಒಂದೇ. ’ ಸತ್ಯ ’ ಜೀಸಸ್‌ಕ್ರೈಸ್ಟ್‌ಗೆ ಒಂದು ತರಹ, ಮಹಾವೀರನಿಗೆ ಒಂದು ತರಹ ಇನ್ನು ಕೃಷ್ಣನಿಗೆ ಮತ್ತೊಂದು ತರಹ ಇರುವುದಿಲ್ಲ.”

“ಎಲ್ಲರಿಗೂ ಧರ್ಮ ಒಂದೇ. ಸತ್ಯ ಒಂದೇ. ಸೂರ್ಯನೊಬ್ಬನೇ ಇದ್ದಾನೆ. ಚಂದ್ರನೊಬ್ಬನೆ ಇದ್ದಾನೆ. ಒಂದೇ ಸತ್ಯವಿದೆ. ಒಂದೇ ಧರ್ಮವಿದೆ. ಆ ಸತ್ಯದ ಹೆಸರೇ ಧ್ಯಾನ. ಆ ಧರ್ಮದ ಹೆಸರೇ ಸಸ್ಯಾಹಾರ.”

“ಡಿಯರ್ ಫ್ರೆಂಡ್ಸ್, ಈ ದಿನ ಅಕ್ಟೊಬರ್ 2. ಈ ಪವಿತ್ರ ದಿನದಲ್ಲಿ ಅನೇಕ ಮಹಾತ್ಮರ ಜೊತೆ ಈ ಸರ್ವಮತ ಸಸ್ಯಾಹಾರ ಸಮ್ಮೇಳನವನ್ನು ಮೊದಲನೆಯ ಬಾರಿ ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟೀಸ್ ಮೂವ್‌ಮೆಂಟ್ ಆಚರಿಸುತ್ತಿದೆ. ಇದು ನನಗೆ ತುಂಬಾ ಸಂತೋಷಕರವಾದ ವಿಷಯ. ಯಾರಾದರೂ ಸರಿಯೆ … ಈ ಧ್ಯಾನ, ಅಹಿಂಸೆಗಳಲ್ಲಿ … ಈ ಎರಡರಲ್ಲಿ … ಯಾವುದೋ ಒಂದು ಹಿಡಿದುಕೊಳ್ಳಬೇಕೆಂದರೆ … ಅಹಿಂಸೆಯನ್ನೇ ಹಿಡಿದುಕೊಳ್ಳುತ್ತೇನೆ. ನನಗೆ ಧ್ಯಾನ ಸಹ ಬೇಡ. ಆದರೆ, ಸಸ್ಯಾಹಾರ ಬೇಕು.”

“ಈ ಗಾಂಧಿ ಜಯಂತಿ ಸಂದರ್ಭವಾಗಿ ಮಹಾಪಟ್ಟಣವಾದ ವಿಜಯವಾಡನಲ್ಲಿ ಸ್ಪಿರಿಚ್ಯುವಲ್ ಸೊಸೈಟಿ ಮೂವ್‌ಮೆಂಟ್ ಈ ಸರ್ವಮತ ಸಸ್ಯಾಹಾರ ಸಮ್ಮೇಳನದಲ್ಲಿ ಪ್ರಪಂಚವೆಲ್ಲಾ ಸಹ ಸಸ್ಯಾಹಾರವಾಗಬೇಕು ಎನ್ನುವ ಸಂಕಲ್ಪವನ್ನು ಕೈಗೊಂಡು ಅದಕ್ಕಾಗಿ ನಾವು ಧ್ಯಾನ ಮಾಡೋಣ.”