“ಸಮಸ್ಥಿತಿ”

” ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು … ಎಂಬುವುದು ಪ್ರಾಪಂಚಿಕ ನಾಣ್ಣುಡಿ; ಆದರೇ ಧ್ಯಾನ ಮಾಡಿ ನೋಡು, ಪಿರಮಿಡ್ ಕಟ್ಟಿ ನೋಡು … ಎಂದು ಈ ದಿನದ ಪಿರಮಿಡ್ ಸೊಸೈಟಿಯ ನಾಣ್ಣುಡಿ.

“ಪಿರಮಿಡ್‌ಗಳನ್ನು ಕಟ್ಟುವವರು ನೇರವಾಗಿ ಸತ್ಯಲೋಕಗಳಿಗೆ ಹೋಗುತ್ತಾರೆ. ತನಗೆ ತಾನೇ ಧ್ಯಾನ ಮಾಡುವುದಕ್ಕಿಂತಾ ಪಿರಮಿಡ್‌ಗಳನ್ನು ಕಟ್ಟಿ ಇತರರಿಗೆ ಧ್ಯಾನಪ್ರೋತ್ಸಾಹ ನೀಡುವುದು ಅಸಾಧಾರಣ ವಿಷಯ. ಪಿರಮಿಡ್‌ಗಳನ್ನು ಕಟ್ಟಿದವರು ಧ್ಯಾನದಲ್ಲಿ ತುಂಬಾ ಎತ್ತರಕ್ಕೆ ಬೆಳೆದಿರುವವರು.”

* * *

“ಪಿರಮಿಡ್ ಎಲ್ಲಾ ಕೋನಗಳಲ್ಲೂ ಸಮವಾಗಿರುತ್ತದೆ. ಹಾಗೆಯೇ ಜ್ಞಾನಿ ಸದಾ ಸಮಸ್ಥಿತಿಯಲ್ಲಿರುತ್ತಾನೆ. ಪಿರಮಿಡ್ ಸ್ಥಿರವಾಗಿರುತ್ತದೆ. ಅದರಲ್ಲಿ ಧ್ಯಾನಮಾಡುವವರನ್ನು ಸ್ಥಿರೀಕರಿಸುತ್ತದೆ. ಪಿರಮಿಡ್ ತುಂಬಾ ಶಕ್ತಿಯುತವಾದದ್ದು. ನಮ್ಮನ್ನು ಶಕ್ತಿಯುತರನ್ನಾಗಿಸುತ್ತದೆ.”