ಸತ್ಯವಾಕ್ ಪರಿಸಾಧನೆ

 

ವಾಕ್ಕುಗಳೆಂಬುವುದು ಮೂರು ಬಗೆ ಇರುತ್ತವೆ.
e ಅಶುಭ ವಾಕ್ಕುಗಳು
e ಶುಭ ವಾಕ್ಕುಗಳು
e ಸತ್ಯ ವಾಕ್ಕುಗಳು

ವಾಕ್ಕುಗಳು ಎಂದರೆ ನಮ್ಮ ಬಾಯಿಂದ ಬರುವ ಮಾತುಗಳು. ಜೀಸಸ್ ಕ್ರೈಸ್ಟ್ ಹೇಳಿದನು “What goes into the mouth, that does not defileth a person. What comes out of the mouth … that defileth a person”. ಸಹಸ್ರಾರ ಸ್ಥಿತಿಯಲ್ಲಿರುವ ಆ ಗ್ರಾಂಡ್ ಮಾಸ್ಟರ್ ಎಷ್ಟು ಚೆನ್ನಾಗಿ ಹೇಳಿದ್ದಾರೋ. ಅಂದರೆ, ಮಾನವನ ಬಾಯಿಯಲ್ಲಿ ಏನು ಹೋಗುತ್ತದೆಯೊ ಅದು ಮಾನವನನ್ನು ಮಲಿನಗೊಳಿಸುವುದಿಲ್ಲ. ಮಾನವನ ಬಾಯಿಂದ ಏನು ಹೊರ ಬರುತ್ತವೆಯೊ ಅವೇ ಮಾನವನನ್ನು ಮಲಿನಗೊಳಿಸುವುದು. ಮಾನವನ ಬಾಯಿಂದ ಏನು ಬರುತ್ತದೆ? ವಾಕ್ಕುಗಳು ಬರುತ್ತವೆ. ಈ ವಾಕ್ಕುಗಳು ಅಶುಭ ವಾಕ್ಕುಗಳು ಎಂದು, ಶುಭ ವಾಕ್ಕುಗಳು ಎಂದು, ಸತ್ಯ ವಾಕ್ಕುಗಳು ಎಂದು ಮೂರು ಬಗೆಯದ್ದು. ಮೂಲಾಧಾರ, ಸ್ವಾಧಿಷ್ಠಾನ, ಮಣಿಪೂರಕದಲ್ಲಿ ಇರುವವರೆಲ್ಲಾ ಅಶುಭ ವಾಕ್ಕುಗಳನ್ನೇ ಮಾತನಾಡುತ್ತಿರುತ್ತಾರೆ. ಆಜ್ಞಾ, ಸಹಸ್ರಾರದಲ್ಲಿರುವವರ ಬಾಯಿಂದ ಅಶುಭ ವಾಕ್ಕುಗಳು, ಶುಭ ವಾಕ್ಕುವಳು ಬರುವುದಿಲ್ಲ … ಸದಾ ಸತ್ಯವಾಕ್ಕುಗಳೇ ಬರುತ್ತವೆ.

ಆದ್ದರಿಂದ, ಶ್ರೀಕೃಷ್ಞನು ಶುಭಾಶುಭ ಪರಿತ್ಯಾಗಿ ಎಂದನು. ಶುಭ, ಅಶುಭ ಎರಡೂ ಬೇಡ. ಈ ಎರಡನ್ನೂ ಪರಿತ್ಯಜಿಸಿ. ಅಶುಭ ಎಂಬುವುದು ಕಬ್ಬಿಣದ ಸಂಕೋಲೆಯಾದರೆ, ಶುಭ ಎಂಬುವುದು ಚಿನ್ನದ ಸಂಕೋಲೆ. ಆದರೆ, ಎರಡೂ ಸಂಕೋಲೆಗಳೆ. ಯಾರು ಇತರರಿಗೆ ಒಳ್ಳೆಯದನ್ನೇ ಮಾಡುತ್ತೇನೆ ಎಂದುಕೊಳ್ಳುತ್ತಾನೋ, ಒಳ್ಳೆಯದನ್ನು ಮಾಡಲು ಪ್ರಯತ್ನಿಸುತ್ತಾನೋ … ಅವನು ಅಸತ್ಯದಲ್ಲಿ ಜೀವಿಸುತ್ತಿದ್ದಾನೆ. ಏಕೆಂದರೆ, ಯಾರೂ ಯಾರಿಗೂ ಒಳ್ಳೆಯದನ್ನು ಮಾಡಲಾರರು. ಅವರ ಕರ್ಮವನ್ನು ಅವರೇ ಅನುಭವಿಸುತ್ತಾರೆ. ಒಬ್ಬನು ಇನ್ನೂಬ್ಬನಿಗೆ ಕೆಡಕು ಮಾಡುವುದಾಗಲೀ, ಒಳ್ಳೆಯದನ್ನು ಮಾಡುವುದಾಗಲೀ ಎರಡೂ ಅಸಂಭವ.

ಒಂದು ತರಗತಿಯಲ್ಲಿ ಶಿಕ್ಷಕ ಚೆನ್ನಾಗಿ ಬೋಧಿಸುತ್ತಿದ್ದಾನೆಂದರೆ, ವಿದ್ಯಾರ್ಥಿಗಳು ಯಾರಾದರೆ ಚೆನ್ನಾಗಿ ಮನಸಿಟ್ಟು ಕೇಳಿಸಿಕೊಳ್ಳುತ್ತಾರೊ ಅವರೇ ಚೆನ್ನಾಗಿ ಕಲಿತುಕೊಳ್ಳಬಲ್ಲರು. ಯಾರು ಚೆನ್ನಾಗಿ ಕೇಳಿಸಿಕೊಳ್ಳುವುದಿಲ್ಲವೊ … ಅವರು ಕಲಿತುಕೊಳ್ಳಲಾಗುವುದಿಲ್ಲ … ಶಿಕ್ಷಕ ಎಷ್ಟು ಶ್ರೇಷ್ಠನಾದನೂ ಸರಿ. ಆದ್ದರಿಂದ, ಶಿಕ್ಷಕರಿಂದ ಯಾರೂ ಕಲಿತುಕೊಳ್ಳಲಾಗುವುದಿಲ್ಲ. ಅವರವರ ಶ್ರದ್ಧೆ, ಭಕ್ತಿಯಿಂದ, ಗುರಿ ಇರುವುದರಿಂದ ಅವರಿಗವರೇ ಕಲಿತುಕೊಳ್ಳುತ್ತಾರೆ. ಯಾರು ಅಜಾಗ್ರತೆಯಿಂದ ಇರುತ್ತ್ತಾರೊ ಅವರು ಕೆಳಜಾರಿ ಹೋಗುತ್ತಾರೆ. ಅವರಿಗೆ ಅವರೇ ಬಂಧುವು. ಅವರಿಗೆ ಅವರೇ ಶತ್ರುವು. ಉದ್ಧರೇದಾತ್ಮ ನಾತ್ಮಾನಾಂ ಆತ್ಮಾನಮವಸಾದಯೇತ್… ಎಂದು ಹೇಳಿದ ಶ್ರೀಕೃಷ್ಣನ ಸತ್ಯವಾಕ್ಕು ಪಿರಮಿಡ್ ಮಾಸ್ಟರ್‌ಗಳೆಲ್ಲರಿಗೂ ಆದರ್ಶ.

ಆದ್ದರಿಂದ, ಪಿರಮಿಡ್ ಮಾಸ್ಟರ್‌ಗಳೆಲ್ಲರೂ ಕೂಡ ಬಾಯಿಯಿಂದ ಮಾತುಗಳು ಬಂದಾಗ ಅಶುಭ ವಾಕ್ಕುಗಳು ಬರುತ್ತಿವೆಯಾ? ಬೇಡ, ಬೇಡ ಎಂದು ಅವನ್ನು ತೆಗೆಯುತ್ತಾರೆ. ಶುಭ ವಾಕ್ಕುಗಳು ಬರುತ್ತಿವೆಯಾ? ಬೇಡ, ಬೇಡ ಅವು ಸಹ ಬೇಡ ಎಂದು ತೆಗೆಯುತ್ತಾರೆ. ಕೇವಲ ಸತ್ಯವಾಕ್ಕುಗಳನ್ನೇ ಮಾತನಾಡುತ್ತಾರೆ. ನಾನು ನಿನಗೆ ಗುರುವು, ನಾನು ನಿನಗೆ ಒಳ್ಳೆಯದನ್ನೇ ಮಾಡುತ್ತೇನೆ; ನಾನು ನಿನಗೆ ಆಶೀರ್ವಾದ ನೀಡುತ್ತೇನೆ ಎಂಬುವ ಮಾತುಗಳು ಅವರ ಬಾಯಿಯಿಂದ ಬರುವುದಿಲ್ಲ. ಯಾರುಯಾರೋ ಬಂದು ನನ್ನ ಆಶೀರ್ವಾದ ನೀಡಿ ಎಂದು ಬಯಸುತ್ತಾರೆ. ಆಪ್ ಕೆ ಆಶೀರ್ವಾದ್ ಚಾಹಿಯೆ ಎನ್ನುತ್ತಿರುತ್ತಾರೆ. ಆದರೆ, ಆಶೀರ್ವಾದ ನೀಡುವವರು ಇಲ್ಲಿ ಯಾರೂ ಇಲ್ಲ. ಏಕೆಂದರೆ, ನೀವು ಸತ್ಯವಾಕ್ ಪರಿಸಾಧಕರು. ನಾನು ‘ಆಶೀರ್ವಾದ’ ಹೇಗೆ ನೀಡಬಲ್ಲೆ? ನಿಮ್ಮ ಕರ್ಮಗಳೇ ನಿಮಗೆ ಆಶೀರ್ವಾದ. ನಿಮ್ಮ ಸುಆಲೋಚನಗಳೇ ನಿಮ್ಮ ಆಶೀರ್ವಾದ. ನಿಮ್ಮ ಪರಿಶೋಧನೆಯೇ, ನಿಮ್ಮ ಪರಿಸಾಧನೆಯೇ ನಿಮ್ಮ ಆಶೀರ್ವಾದ. ಇದೇ ಸತ್ಯವಾಕ್ ಪರಿಸಾಧನೆ.