ಪುಟ್ಟಪರ್ತಿ

“ಸಂಗೀತಧ್ಯಾನಯಜ್ಞ

ಮೊದಲನೆಯ ದಿನ

“ಶ್ರೀ ಸಾಯಿರಾಮ್, ನಾವೆಲ್ಲರೂ ಸಹ ಧ್ಯಾನದಲ್ಲಿ ಮಗ್ನರಾಗಿ ನಮ್ಮಿಂದ ಬರುವ ಧ್ಯಾನಶಕ್ತಿಯನ್ನು ಪ್ರಪಂಚಕ್ಕೆ ನೀಡಬೇಕೆಂದು ಪ್ರಾರ್ಥಿಸುತ್ತಿದ್ದೇನೆ. ಜಗತ್ ಕಲ್ಯಾಣಕ್ಕಾಗಿ ಇಲ್ಲಿಂದ ನಾವು ಧ್ಯಾನಶಕ್ತಿಯನ್ನು ಕಳುಹಿಸಬೇಕು. ಅದಕ್ಕಾಗಿ ಅತ್ಯಂತ ಪವಿತ್ರವಾದ ಪುಟ್ಟಪರ್ತಿಯಲ್ಲಿ ನಾವು ಸಂಗೀತ ಧ್ಯಾನಯಜ್ಞ ವನ್ನು ಅತ್ಯಂತ ವೈಭವವಾಗಿ ನಡೆಸುತ್ತಿದ್ದೇವೆ.

ನಾವು ಭಗವಾನ್ ಸತ್ಯಸಾಯಿಗೆ ತುಂಬಾ ಋಣಿಯಾಗಿದ್ದೇವೆ. ಪುಟ್ಟಪರ್ತಿ ಸ್ವಾಮಿಯವರಿಂದ ಅತ್ಯಂತ ಅಭಿಮಾನವನ್ನು ಪಡೆಯುತ್ತಿದ್ದೇವೆ. ಪ್ರಪಂಚಕ್ಕೆ ಸಹಾಯಮಾಡುವುದು ಎಂದರೆ ಒಬ್ಬರಿಗೊಬ್ಬರು ಸಹಾಯ ಮಾಡಿಕೊಳ್ಳುವುದು.

 

“ಪುಟ್ಟಪರ್ತಿ ಅಪೂರ್ವ ಶಕ್ತಿಕ್ಷೇತ್ರ” – ಪತ್ರೀಜಿ

ಪುಟ್ಟಪರ್ತಿಯಲ್ಲಿ ಮೂರು ದಿನಗಳು ಸಂಗೀತ ಧ್ಯಾನಯಜ್ಞ ನಡೆಸಿಕೊಳ್ಳುವುದು ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟೀಸ್ ಮೂವ್‌ಮೆಂಟ್‌ಗೆ ಹೆಮ್ಮೆಯ ವಿಷಯ. ಇದು ಅಪೂರ್ವವಾದ ಶಕ್ತಿಕ್ಷೇತ್ರ, ಈ ಶಕ್ತಿಕ್ಷೇತ್ರದಲ್ಲಿ ಧ್ಯಾನ ಮಾಡಿದರೆ ಮೂರುಪಟ್ಟು ಹೆಚ್ಚು ಶಕ್ತಿವಂತರಾಗುತ್ತೇವೆ. ಈ ಮೂರು ದಿನಗಳ ಧ್ಯಾನಯಜ್ಞವನ್ನು ಹೆಚ್ಚು ಉಪಯೋಗಿಸಿಕೊಳ್ಳಬೇಕು.

ಧ್ಯಾನ ಜೀವನದಲ್ಲಿ ಅತಿಮುಖ್ಯವಾದದ್ದು. ಎಷ್ಟು ಹೆಚ್ಚು ಧ್ಯಾನದಲ್ಲಿರುತ್ತೇವೊ ಅಷ್ಟು ಹೆಚ್ಚು ಶಕ್ತಿವಂತರು, ಯುಕ್ತಿವಂತರಾಗುತ್ತೇವೆ. If you involve yourself in meditation every day, you will acquire passion for your life, wisdom for your life. When you are with soul and natural breath, cosmic energy flows into the body. Body becomes happy and healthy. The body will be forever.

ಎರಡನೆಯ ದಿನ

ಧ್ಯಾನದಿಂದ ಆತ್ಮಜ್ಞಾನ ಲಭ್ಯವಾಗುತ್ತದೆ. ಧ್ಯಾನದ ಧ್ಯೇಯ ಆತ್ಮಾನುಭವ. ಶರೀರಕ್ಕೆ ಅನುಭವವಿದೆ, ಆದರೆ, ಆತ್ಮಾನುಭವ ಅಧಿಕವಾಗಬೇಕು. ಈ ಆತ್ಮಾನುಭವಕ್ಕೆ ಮಾಡಬೇಕಾದ ಕಾರ್ಯಕ್ರಮವೇ ಧ್ಯಾನ. ಭಗವದ್ಗೀತೆಯಲ್ಲಿ ಕೃಷ್ಣನನ್ನು ’ ಯಾರಯ್ಯಾ ನೀನು? ಏನಯ್ಯಾ ನೀನು? ನೀನು ನನಗೆ ಅರ್ಥವಾಗುತ್ತಿಲ್ಲ ’ ಎಂದು ಅರ್ಜುನನು ಕೇಳಿದ. ’ ಅಹಂ ಆತ್ಮಾ ಗುಡಾಕೇಶ ’ ಎಂದು ಕೃಷ್ಣನು ಉತ್ತರ ನೀಡಿದನು. ’ ಗುಡಾಕೇಶ ’ ಎಂದರೆ ನಿದ್ರೆಯನ್ನು ಜಯಿಸಿದವನು. ಅವನೇ ಆತ್ಮವನ್ನು ತಿಳಿದುಕೊಳ್ಳುತ್ತಾನೆ.

ದಣಿದಿರುವ ಶರೀರಕ್ಕೆ ನಿದ್ರೆಯ ಅವಶ್ಯಕತೆ ಎಷ್ಟು ಇದೆಯೊ, ದಣಿದಿರುವ ಆತ್ಮಕ್ಕೆ ಧ್ಯಾನದ ಅವಶ್ಯಕತೆ ಅಷ್ಟೇ ಇದೆ. ಅರ್ಜುನ ಶರೀರ ಚೆನ್ನಾಗಿದೆ. ಆದರೆ ಆತ್ಮ ದಣಿದಿದೆ. ವಿಷಾದಪೂರಕವಾಗಿದೆ. ’ ನನ್ನ ಗುರುಗಳನ್ನು, ತಾತನವರನ್ನು, ಅಣ್ಣತಮ್ಮಂದಿರನ್ನು ಕೊಲ್ಲಬೇಕಾ ? ಅವರು ಅನ್ಯಾಯ ಮಾಡಿದರೆಂದು ಕೊಲ್ಲಬೇಕಾ ? ’ ಎಂದುಕೊಳ್ಳುತ್ತಾ ಅಲ್ಲಿ ಅರ್ಜುನನ ಆತ್ಮ ದಣಿದಿದೆ. ಅದೇ ಸಮಯದಲ್ಲಿ ಕೃಷ್ಣನ ಆತ್ಮ ದಣಿದಿಲ್ಲ, ನೀರಸವಾಗಿಲ್ಲ, ಧೈರ್ಯದಿಂದಿದೆ. ವಿನೋದದಿಂದ ಇದೆ.

ಶರೀರ ಇಲ್ಲೇ ಇರುತ್ತದೆ. ಆ ನಾನು ಮಾತ್ರವೇ ಹೋಗುತ್ತದೆ. ಈ ಶರೀರ ಬೇರೆ, ಆ ನಾನು ಬೇರೆ. ಈ ಶರೀರಕ್ಕೆ ಸಾವಿದೆ. ಆ ನಾನುಗೆ ಸಾವಿಲ್ಲ. ಆ ನಾನು ಇಲ್ಲಿಗೆ ಬಂದು ಚೆನ್ನಾಗಿ ಆಟಗಳಾಡಿ ಮೇಲಕ್ಕೆ ಹೋಗುತ್ತದೆ. ಒಂದುವೇಳೆ ನೀನು ಜಯಿಸಿದರೆ ಇದೆಲ್ಲಾ ನಿನಗೆ. ಅದಕ್ಕೆ ’ ಯುದ್ಧಾಯ ಕೃತನಿಶ್ಚಯಃ ’ ಎಂದು ಅರ್ಜುನನಿಗೆ ಉಪದೇಶ ನೀಡಿದನು. ಶ್ರೀಕೃಷ್ಣನು ದಣಿಯದ, ಸುಸ್ತಾಗದ, ನಿತ್ರಾಣಗೊಳ್ಳದ ಆತ್ಮ. ಅರ್ಜುನನು ಒಮ್ಮೆ ಚೆನ್ನಾಗಿರುತ್ತಾನೆ. ಒಮ್ಮೆ ನಿತ್ರಾಣವಾಗಿರುತ್ತಾನೆ. ಮಾಮೂಲು ಸಮಯದಲ್ಲಿ ಚೆನ್ನಾಗಿರುತ್ತಾನೆ. ಕಷ್ಟ ಸಮಯಗಳಲ್ಲಿ ನೀರಸವಾಗಿರುತ್ತಾನೆ. ಏಕೆಂದರೆ, ಧ್ಯಾನ ಇಲ್ಲ ಆದ್ದರಿಂದ, ತಾನು ಆತ್ಮ ಎಂದು ಸಿದ್ಧಾಂತಪರವಾಗಿ ತಿಳಿದರೂ, ಕ್ರಿಯಾತ್ಮವಾಗಿ ಧ್ಯಾನಾನುಭವವಿಲ್ಲ, ಆತ್ಮಾನುಭವವಿಲ್ಲ, ಶ್ರೀಕೃಷ್ಣನಿಗೆ ಕ್ರಿಯಾತ್ಮವಾಗಿ ಧ್ಯಾನಾನುಭವವಿದೆ. ಆತ್ಮಾನುಭವವಿದೆ, ಧರ್ಮದಲ್ಲಿ ಇವರಿಬ್ಬರಿಗೆ ವ್ಯತ್ಯಾಸವಿಲ್ಲ, ಧ್ಯಾನದಲ್ಲಿ ವ್ಯತ್ಯಾಸವಿದೆ. ಧರ್ಮವೆಂದರೆ ಮಾಡಬೇಕಾದ ಕರ್ತವ್ಯ. ಈಗ ಎಲ್ಲರನ್ನೂ ಕೊಲ್ಲುವುದೇ ನಿನ್ನ ಕರ್ತವ್ಯ. ಧರ್ಮಕ್ಕೆ ರಕ್ತ ಸಂಬಂಧಗಳಿಂದ ಕೆಲಸವಿಲ್ಲ …

ಇಲ್ಲಿ … ಈ ಭೂಮಂಡಲದಲ್ಲಿ … ಯಾವ ನಷ್ಟವಾದರೂ, ಅವಮಾನವಾದರೂ, ಶುಭವಾದರೂ, ಅಶುಭವಾದರೂ ’ಆತ್ಮ’ ಹಾಯಾಗಿ ಇರುತ್ತದೆ. ಭೌತಿಕಜನ್ಮ ಆತ್ಮದ ಆಟವಲ್ಲವೇ. ಈ ಜಗತ್ತು ಸರ್ವಾತ್ಮದ ಆಟವಲ್ಲವೇ. ಆಟದಲ್ಲಿ ಒಮ್ಮೆ ಸೋಲುತ್ತೇವೆ, ಒಮ್ಮೆ ಗೆಲ್ಲುತ್ತೇವೆ, ಸೋಲು, ಗೆಲುವು ಇಲ್ಲದ ಆಟ ಇರುತ್ತದೆಯೇ ? ಹಾಡುತ್ತಿರುವಾಗ ಒಂದೊಂದು ಬಾರಿ ಅಪಸ್ವರ ಬರುತ್ತದೆ. ಯಾರಿಗಾದರೂ ಸರಿ ಅಪಸ್ವರ ಬರುತ್ತದೆ. ಆದರೆ, ಆ ಅಪಸ್ವರಕ್ಕೂ, ಆ ಸೋಲಿಗೂ ಆತ್ಮ ನಗುತ್ತದೆ. ಅಳುವುದಿಲ್ಲ. ನಾವು ಆಟದಲ್ಲಿ ಸೋತರೇ … ಇನ್ನೂ ಚೆನ್ನಾಗಿ ಆಡಯ್ಯಾ. ನಿನ್ನ ಹತ್ತಿರ ಕಲಿತುಕೊಳ್ಳುವುದು ಇನ್ನೂ ತುಂಬಾ ಇದೆ ಎಂದುಕೊಳ್ಳುತ್ತಾನೆ ಸೋತವನು. ಹಾಡುವಾಗ ಅಪಸ್ವರ ಬಂದರೆ, ಇನ್ನೂ ಚೆನ್ನಾಗಿ ಅಭ್ಯಾಸ ಮಾಡಬೇಕೆಂದು ಬಯಸುತ್ತೇವೆ. ಅಷ್ಟೇ ವಿನಹ ಒಂದು ಸಲ ಅಪಸ್ವರ ಬಂದರೆ, ನಾನು ಆತ್ಮ ಎಂದು ತಿಳಿದುಕೊಂಡಿರುವವನು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಏಕೆಂದರೆ, ಆತ್ಮಕ್ಕೆ ಹತ್ಯೆ ಇಲ್ಲ.

* * *

ಸಮಸ್ತ ಪ್ರಾಣಿಕೋಟಿಯಲ್ಲಿ ಆತ್ಮವಾಗಿ ಪ್ರಾರಂಭದಲ್ಲೂ ಇದ್ದವನು, ಮಧ್ಯೆಯಲ್ಲೂ ಇದ್ದವನು, ಅಂತ್ಯದಲ್ಲೂ ಇದ್ದವನು ಎಂದು ಶ್ರೀಕೃಷ್ಣನು ತಿಳಿಸಿದನು. ಆತ್ಮ ಆದಿ, ಅನಾದಿ. ಆತ್ಮ ಅಂತ, ಅನಂತ, ಮಧ್ಯಮ. ಅದು ನಾವೆಲ್ಲರೂ ಆಗಿದ್ದೇವೆ. ಸಮಸ್ತ ಪ್ರಾಣಿಕೋಟಿ … ಪ್ರತಿಯೊಂದು ಮರ … ಪ್ರತಿಯೊಂದು ಹುತ್ತ … ಪ್ರತಿಯೊಂದು ಸೊಳ್ಳೆ … ಪ್ರತಿಯೊಂದು ಆನೆ … ಪ್ರತಿಯೊಬ್ಬ ಮನುಷ್ಯ ಆತ್ಮನಾಗಿದ್ದಾನೆ. ಈ ವಿಷಯ ಪ್ರತಿಯೊಂದು ಹುತ್ತಕ್ಕೂ ತಿಳಿದಿದೆ. ಪ್ರತಿಯೊಂದು ಪ್ರಾಣಿಗೂ ತಿಳಿದಿದೆ. ಪ್ರತಿಯೊಂದು ಮರಕ್ಕೂ ತಿಳಿದಿದೆ – ಕೇವಲ ಮನುಷ್ಯನಿಗೆ ಮಾತ್ರ ತಿಳಿದಿಲ್ಲ. ಆದ್ದರಿಂದ, ಯಾವ ಮರವೂ ದುಃಖಿಸುವುದಿಲ್ಲ. ಅಲ್ಲಿ ಆತ್ಮ ನಿತ್ರಾಣಗೊಳ್ಳುವುದಿಲ್ಲ. ದಣಿವಾಗುವುದಿಲ್ಲ. ತಾನು ಆತ್ಮ ಎಂದು ತಿಳಿದುಕೊಂಡಿದೆ. ಶಾರೀರಕವಾಗಿ ಜೀವನವನ್ನು ಜೀವಿಸುತ್ತದೆ … ಗೆದ್ದರೂ, ಸೋತರೂ, ಯಾವ ಪ್ರಾಣಿಯೂ ಅಳುವುದಿಲ್ಲ. ಯಾವ ಪ್ರಾಣಿಯ ಆತ್ಮವಾದರೂ ಅದು ನಿತ್ರಾಣವಾಗದ, ನೀರಸವಾಗದ ಆತ್ಮ, ನಿರಾಮಯವಾದ ಆತ್ಮ.

* * *

ಧ್ಯಾನ ಮಾಡದ ಅರ್ಜುನನು ’ ಮೊಗ್ಗು ’ ಇದ್ದಂತೆ. ಧ್ಯಾನ ಮಾಡಿದ ಆ ಕೃಷ್ಣನು ಒಂದು ಮಹಾ ಅರಳಿದ ಪುಷ್ಪ. ಪುಷ್ಪವು ಫಲವಾಗಿ ಪ್ರಸಾದವನ್ನು ನೀಡುತ್ತದೆ. ನಾವು ಕೇಳಿರುವ ಗೀತಾಶ್ಲೋಕಗಳು ಕೃಷ್ಣ ಪ್ರಸಾದವೇ. ಅವರ ಫಲವಾದರೆ ನಾವು ಅದನ್ನು ಉಣ್ಣುತ್ತಿದ್ದೇವಲ್ಲವೇ . ಹಸಿ ಕಾಯಿಯಾದರೆ ನಾವು ಭುಜಿಸುತ್ತೇವೆಯೆ ? ಒಂದು ಮೊಗ್ಗು ಮುದುಡಿಕೊಂಡಿದೆ. ಒಂದು ಹೂವು ಅರಳಿಕೊಂಡಿದೆ. ಧ್ಯಾನ ಮಾಡದ ಆತ್ಮ ಮುದುಡಿಕೊಂಡಿದೆ. ಎಷ್ಟು ಹೆಚ್ಚು ಧ್ಯಾನ ಮಾಡುತ್ತೇವೊ ಅಷ್ಟು ಹೆಚ್ಚಾಗಿ ಅರಳುತ್ತೇವೆ. ಈ ಅರಳುವುದಕ್ಕೆ ಅಂತ್ಯವೇ ಇಲ್ಲ. ಆ ಸಹಸ್ರದಳ ಕಮಲದ ದಳಗಳು ಸತತವಾಗಿ ಅರಳುತ್ತಲೇ ಇರುತ್ತವೆ. ಸಹಸ್ರದಳ ಕಮಲವೆಂದರೆ ’ ಸಾವಿರ ದಳಗಳು ’ ಎಂದಲ್ಲ. ’ಅನಂತಕೋಟಿ’ ಎಂದರ್ಥ. ಎಷ್ಟು ಹೆಚ್ಚು ಧ್ಯಾನ ಮಾಡುತ್ತೇವೆಯೊ ಅಷ್ಟು ಹೆಚ್ಚು ದಳಗಳು ಅರಳುತ್ತಲೇ ಇರುತ್ತವೆ. ಅಷ್ಟಷ್ಟು ನಾವು ವಿಸ್ತಾರವಾಗಿವಿಶಾಲವಾಗಿಪ್ರಕಾಶವಂತರಾಗುತ್ತಲೇ ಇರುತ್ತೇವೆ.

* * *

ಪುಟ್ಟಪರ್ತಿ ತುಂಬಾ ವಿಶೇಷವಾದ ಸ್ಥಳ. ಇಲ್ಲಿ ನಾವು ಭೇಟಿಯಾಗುವುದು, ಧ್ಯಾನ ಮಾಡುವುದು ಅರಳಲಿಕ್ಕಾಗಿಯೇ ಇನ್ನೂ ಹೆಚ್ಚು ವಿಕಾಸಗೊಳ್ಳಲಿಕ್ಕಾಗಿಯೇ ಎಷ್ಟು ಹೆಚ್ಚು ಅರಳುತ್ತೇವೆಯೊ ಅಷ್ಟು ಶೋಭಿಸುತ್ತೇವೆ. ಹೂವಿಗೆ ಕಾಂತಿಯಿದೆ. ಪರಿಮಳವಿದೆ. ಅಷ್ಟು ಪರಿಮಳ ಭರಿತರಾಗುತ್ತೇವೆ. ಧ್ಯಾನಾಭ್ಯಾಸ ಅನಂತ. ಆತ್ಮಾನುಭವ ಅನಂತ. ಆತ್ಮದ ಶೋಭೆ, ಪರಿಮಳ, ವಿಕಾಸ … ಅನಂತ.

* * *

ಶರೀರಕ್ಕೆ ಎರಡು ರೊಟ್ಟಿಗಳನ್ನು ಮಾಡಿಕೊಂಡು, ತಿನ್ನಬೇಕು. ಬೆಳಿಗ್ಗೆ ಒಂದು ರೊಟ್ಟಿ, ರಾತ್ರಿ ಒಂದು ರೊಟ್ಟಿ. ಉಳಿದ ಸಮಯಗಳಲ್ಲಿ ಧ್ಯಾನ, ಸ್ವಾಧ್ಯಾಯ, ಸಜ್ಜನ ಸಾಂಗತ್ಯ, ಆಟಗಳು, ಹಾಡುಗಳು, ವಿದ್ಯೆಗಳು, ಕಲೆಗಳು … ಆತ್ಮವನ್ನು ತಿಳಿದುಕೊಂಡವನಿಗೆ ಭವಿಷ್ಯತ್ತಿನ ಚಿಂತೆ ಹೋಗುತ್ತದೆ. ಏಕೆಂದರೆ, ಭವಿಷ್ಯತ್ತೆಲ್ಲಾ ಬಂಗಾರವೆ. ಜನ್ಮಿಸುವುದಕ್ಕಿಂತಾ ಮುಂಚೆ ಎಲ್ಲಾ ಬಂಗಾರದಿಂದಲೆ ಬಂದಿದ್ದೇವೆ. ಧ್ಯಾನ ಮಾಡುವವರಿಗೆ ನಾಳಿನ ಕುರಿತು ಚಿಂತೆ ಇಲ್ಲ. ನಿನ್ನೆಯ ಕುರಿತು ಬಾಧೆ ಇಲ್ಲ. ವರ್ತಮಾನದಲ್ಲಿ ಕಲಿತುಕೊಳ್ಳುವುದು, ವರ್ತಮಾನದಲ್ಲಿ ಜೀವಿಸುವುದು. ನಾವು ಎಲ್ಲರಿಂದಲೂ ಕಲಿತುಕೊಳ್ಳಬೇಕು.

 

ಮೂರನೆಯ ದಿನ

ಈ ಜನ್ಮದಲ್ಲಿ ನನಗೆ ಯಾವ ರೋಗವೂ ಬರಲಿಲ್ಲ. ದುಃಖ ಆಗಲಿಲ್ಲ. ಇವೆಲ್ಲವೂ ಹೋಗಲಾಡಿಸಿಕೊಳ್ಳಲು ನಾನು ಧ್ಯಾನ ಮಾಡಲಿಲ್ಲ. ಮೋಕ್ಷಕ್ಕಾಗಿ ನಾನು ಧ್ಯಾನ ಮಾಡಲಿಲ್ಲ. ಜನ್ಮತಹ ನನಗೆ ಮೋಕ್ಷವಿದೆ. ಧ್ಯಾನ ಬರುವುದಕ್ಕಿಂತಾ ಮುಂಚೆಯೇ ನನಗೆಲ್ಲಾ ವಿದ್ಯೆಗಳೂ ಬರುತ್ತಿತ್ತು. ಆದರೆ, ಧ್ಯಾನದಿಂದ ಪ್ರಪಂಚದಲ್ಲೆಲ್ಲಾ ಮಿತ್ರರಾಗಿದ್ದಾರೆ. ಇದೇ ನನ್ನ ಸ್ವಂತ ಅನುಭವ. ನಿಜವಾದ ಲಾಭ. ಪಿರಮಿಡ್ ಧ್ಯಾನದಿಂದ ಮಾಂಸ ತಿನ್ನುವವರೆಲ್ಲಾ ಧ್ಯಾನದಿಂದ ಸಸ್ಯಾಹಾರಿಗಳಾಗಿದ್ದಾರೆ. ಅದು ನನಗೆ ಎಲ್ಲದಕ್ಕಿಂತಾ ಮುಖ್ಯವಾದ ಲಾಭ. ನಾನು ಹುಟ್ಟಿದ್ದು ಮಾನವರಿಗಾಗಿ ಅಲ್ಲ. ಪ್ರಾಣಿಗಳಿಗಾಗಿ. ಕೊನೆಯ ಪ್ರಾಣಿ ಹಾಯಾಗಿ ಜೀವಿಸುವವರೆಗು ನಾನು ಈ ಶರೀರವನ್ನು ಬಿಡುವುದಿಲ್ಲ.

* * *

ನಾನು 2095 ವರೆಗೂ ಶರೀರ ತ್ಯಜಿಸುವುದಿಲ್ಲ. ಅಷ್ಟರೊಳಗೆ ಈ ಪ್ರಪಂಚದಲ್ಲಿ ಎಲ್ಲಾ ಪ್ರಾಣಿಗಳು ಶಾಶ್ವತವಾಗಿ, ಹಾಯಾಗಿ ಜೀವಿಸುವ ರೀತಿಯಲ್ಲಿ ಯಾವ ವಿಧವಾದ ದೌರ್ಜನ್ಯಗಳನ್ನು ಮಾಡದೇ ಎಲ್ಲಾ ಮಾನವರನ್ನೂ ಸೌಜನ್ಯಮೂರ್ತಿಗಳನ್ನಾಗಿ ತಯಾರುಮಾಡಲಿಕ್ಕಾಗಿಯೆ ನಾನಿದ್ದೇನೆ.

ನಾನು ಅಂದುಕೊಂಡಿದ್ದನ್ನು ಸಾಧಿಸುತ್ತೇನೆ. ಈ ಭೂಮಂಡಲವನ್ನು ಸಸ್ಯಾಹಾರಿಯನ್ನಾಗಿ ಮಾಡಲು ನಾನೊಬ್ಬನೇ ಸಾಕು. ಯಾವ ದಿನ ಈ ಭೂಮಂಡಲವೆಲ್ಲಾ ಸಸ್ಯಾಹಾರಿಯಾಗುತ್ತದೆಯೋ ಆ ದಿನ ನಾನು ಬೇರೆ ಸೌರಮಂಡಲಕ್ಕೆ ಹೋಗಬೇಕಾಗಿದೆ. ಮತ್ತೆ ಅದು ನನ್ನ ಕಾರ್ಯಕ್ರಮ. ನಮ್ಮೆಲ್ಲರ ಕಾರ್ಯಕ್ರಮ.

* * *

“ಪಕ್ಷಿ ಜಾತಿಯನ್ನು ಹಿಡಿದು ತುಂಬಾ ಹಿಂಸೆಗಳನ್ನು ಕೊಟ್ಟು,

ಹೊಟ್ಟೆ ತುಂಬಾ ಕೂಳು ತುಂಬಿಸಿಕೊಳ್ಳಲು

ಬೇಯಿಸಿಕೊಂಡು ತಿನ್ನುವವನು ವಸುಧ ಚಾಂಡಾಲನು

ವಿಶ್ವದಾಭಿರಾಮ ಕೇಳು ವೇಮ”

ನನ್ನ ಜನ್ಮ ಕಾರಣ ಈ ಒಂದು ಪದ್ಯ . ಇಲ್ಲಿ ಪ್ರಾಣಿಹಿಂಸೆ ನಡೆಯುತ್ತಿದೆ. ಈ ಭೂಲೋಕದಲ್ಲಿ ಸ್ತ್ರೀಯರ ಮೇಲೆ ಪುರುಷರು ಅತ್ಯಾಚಾರ ನಡೆಸುತ್ತಿದ್ದಾರೆ. ಚಿಕ್ಕ ಮಕ್ಕಳನ್ನು ತಂದೆ-ತಾಯಿಯರು ಬಲವಂತವಾಗಿ ಓದುಗಳನ್ನು ಓದಿಸಿ, ಬಾಧಿಸುತ್ತಾ ಕಿತ್ತು ತಿನ್ನುತ್ತಿದ್ದಾರೆ. ಸಾವು, ಹುಟ್ಟು ಇಲ್ಲದ ವಿದ್ಯೆ, ಅಂದರೆ, ಆತ್ಮಜ್ಞಾನವನ್ನು ಅಭ್ಯಸಿಸಬೇಕು. ಭಗವಾನ್ ಸತ್ಯಸಾಯಿಬಾಬಾರವರು ಯಾವ ವಿದ್ಯೆಯನ್ನೂ ಆಭ್ಯಸಿಸಲಿಲ್ಲ. ಆದರೆ, ನಮ್ಮೆಲ್ಲರಿಗೂ ವಿದ್ಯೆಯನ್ನು ಬೋಧಿಸುತ್ತಿದ್ದಾರೆ. ಅವರು ಓದಿದ್ದು ಆತ್ಮ ವಿದ್ಯೆ. ಪ್ರಪಂಚವನ್ನೆಲ್ಲಾ ಆಳುತ್ತಿದ್ದಾರೆ. ಅವರು ಏನು ಓದಿದ್ದಾರೆ ? ಅವರು ಓದಿದ್ದು ಆತ್ಮ ಜ್ಞಾನ. ಜ್ಞಾನದ ವಿದ್ಯೆ. ವಿವೇಕಾನಂದನು, ರಾಮಕೃಷ್ಣ ಪರಮಹಂಸ, ರಮಣ ಮಹರ್ಷಿ … ಆತ್ಮ ವಿದ್ಯೆಯನ್ನೇ ಅಭ್ಯಾಸಮಾಡಿದ್ದಾರೆ. ಈ ಆತ್ಮ ವಿದ್ಯೆಯನ್ನು ಹೇಳಿಕೊಡಲಿಕ್ಕಾಗಿಯೇ ನಾವು ಊರೂರು ತಿರುಗುತ್ತಿದ್ದೇವೆ.

* * *

ಮನುಷ್ಯನ ಜೀವನ ’ ರೋಟಿ, ಕಪಡಾ, ಮಕಾನ್ ’ಗಾಗಿ ಅಲ್ಲ, ’ ಸಂಗೀತ್, ನೃತ್ಯ್ ಏವಂ ಧ್ಯಾನ್ ’ ಅದಕ್ಕಾಗಿಯೇ ಜೀವನ. ರೋಟಿ, ಕಪಡಾ, ಮಕಾನ್ … ಎಂದರೆ ಭೌತಿಕ. ಸಂಗೀತ್, ನೃತ್ಯ್, ಧ್ಯಾನ್ ಅಂದರೆ ಅದು ಆಧ್ಯಾತ್ಮಿಕ. ಶಿವನ ಕೈಯಲ್ಲಿರುವ ಢಮರುಗ – ಅದೇ ಮೃದಂಗ – ಸಂಗೀತ – ಅವರು ನೃತ್ಯ ತುಂಬಾ ಚೆನ್ನಾಗಿ ಮಾಡುತ್ತಾರೆ – ಧ್ಯಾನ ಮಾಡುತ್ತಾರೆ. ಪರಮೇಶ್ವರನು ಪರಮ ಮಾನವ ಜೀವನಕ್ಕೆ ಆದರ್ಶನೀಯನಾದವನು. ಅವರ ಶರೀರದಲ್ಲಿ ಅರ್ಧಭಾಗ ಪಾರ್ವತಿ. ಪಾರ್ವತಿ ಶರೀರದಲ್ಲಿ ಶಿವನು ಅರ್ಧಭಾಗ ಅಲ್ಲವಲ್ಲ. ಪುರುಷನಲ್ಲಿ ಸ್ತ್ರೀ ಲಕ್ಷಣಗಳು ಇಲ್ಲದಿದ್ದರೇ ಪೂರ್ಣವಾಗುವುದಿಲ್ಲ. ಸ್ತ್ರೀಯರು ತಮ್ಮಲ್ಲಿ ತಾವು ಸಂಪೂರ್ಣರು. ಪುರುಷರೇ ತುಂಬಾ ಕಡಿಮೆ. ಸ್ತ್ರೀಯರಿಂದ ಶಾಂತಿ, ಸಹನೆ, ಅಂಗೀಕಾರ, ವಾತ್ಸಲ್ಯ ಎಂಬುವ ಗುಣಗಳನ್ನು ಸಂಪಾದಿಸಿಕೊಂಡರೇನೆ ಪುರುಷರು ಸಂಪೂರ್ಣರಾಗಬಲ್ಲರು. ಇದೇ ಅರ್ಧನಾರೀಶ್ವರತತ್ವವೆಂದರೆ. ಯಾವ ಸ್ತ್ರೀಗೆ ಸಹ ಪುರುಷ ಲಕ್ಷಣಗಳ ಅವಶ್ಯಕತೆ ಇಲ್ಲ. ಹಾಗೆಯೆ, ನಾವು ಶಿವನ ಹಾಗೆ ಸಂಗೀತ, ನೃತ್ಯ, ಧ್ಯಾನ ಕಲಿತುಕೊಳ್ಳಬೇಕು.