“ಶ್ವಾಸ ಗುರುವಿಗೆ… ಧ್ಯಾನ ಗುರುವಿಗೆ… ಪ್ರಣಾಮ”

“ಆನಾಪಾನಸತಿ”

‘ಆನಾಪಾನಸತಿ’… ಎಂಬುವುದು… ಗೌತಮ ಬುದ್ಧ… 2500 ವರ್ಷಗಳ ಹಿಂದೆ ಉಪಯೋಗಿಸಿದ ಪಾಳೀ ಭಾಷೆಯ ಪದ. ಪಾಳೀ ಭಾಷೆಯಲ್ಲಿ…
‘ಆನ’ ಎಂದರೆ ‘ಉಚ್ಛಾ ಸ’
‘ಅಪಾನ’ಎಂದರೆ ‘ನಿಶ್ವಾಸ’
‘ಸತಿ’ ಎಂದರೆ ‘ಕೂಡಿಕೊಂಡಿರುವುದು’

‘ಆನಾಪಾನಸತಿ’ ಎಂದರೆ ‘ನಮ್ಮ ಶ್ವಾಸದ ಜೊತೆ ನಾವು ಕೂಡಿಕೊಂಡಿರುವುದು’ ಇದನ್ನೇ ಮತ್ತೊಂದು ರೀತಿಯಲ್ಲಿ ‘ಶ್ವಾಸದ ಮೇಲೆ ಗಮನ’ ಎಂದು ನಾವು ಹೇಳುಕೊಳ್ಳುತ್ತಿದ್ದೇವೆ. ಆನಾಪಾನಸತಿ ಎಂಬುವುದೇ ಪ್ರಪಂಚಕ್ಕೆ… ಎಲ್ಲ ಋಷಿಗಳು, ಎಲ್ಲ ಯೋಗಿಗಳು ಸೇರಿ ನಮಗೆ ಕೊಟ್ಟಿರುವಂತಹ ಅದ್ಭುತವಾದ ವರ.

ಅನೇಕ ಧ್ಯಾನ ಪದ್ಧತಿಗಳಿವೆ… ಆದರೆ, ಅದರಲ್ಲಿ ಒಂದೇ ಸರಿಯಾದ ಧ್ಯಾನ ಪದ್ಧತಿ ಎಂದು ಬುದ್ಧ ಹೇಳಿದ್ದಾನೆ.
‘ಸರಿಯಾಗಿರುವ ಧ್ಯಾನ ಪದ್ಧತಿ’ ಎಂದರೆ, ಅದು ಆನಾಪಾನಸತಿ.

ಸಹಜವಾಗಿಯ ಪ್ರತಿಯೊಬ್ಬರೂ ‘ಸತ್ಯವನ್ನು ಕಂಡುಹಿಡಿಯಬೇಕು’ ಎಂದಾಗ ಅಂತಿಮವಾಗಿ ತಲುಪುವ ಸ್ಥಿತಿಯೇ ಆನಾಪಾನಸತಿ… ಕೊನೆಗೆ ಅದನ್ನು ಕಂಡುಹಿಡಿಯುವ ಉಪಾಯವೇ ಆನಾಪಾನಸತಿ.

“ಕುಂಭಕರಹಿತ ಪ್ರಾಣಾಯಾಮ”

‘ಆನಾಪಾನಸತಿ’ಗೆ ಹೊರತಾದ, ಬೇರೆ ಹಠಯೋಗ ಪ್ರಾಣಾಯಾಮಾದಿಗಳು ಗೌತಮ ಬುದ್ಧ ತುಂಬಾ ಅನುಸರಿಸಿದರು. ಅನೇಕ ವರ್ಷಗಳು ಮಾಡಿ, ಮಾಡಿ ಅದರ ನಿಸ್ಸಾರವನ್ನು, ನಿಷ್ಫಲತೆಯನ್ನು ಅವರು ಸ್ವಯಂ ಅನುಭವಿಸಿ ಅವೆಲ್ಲವನ್ನೂ ಪೂರ್ಣವಾಗಿ ತ್ಯಜಿಸಿದರು.

ಶ್ವಾಸದಲ್ಲೇ ರಹಸ್ಯ ಅಡಗಿದೆ ಎಂದು ಗೊತ್ತಿದೆ, ಈ ಕಷ್ಟಕರವಾದ ಕುಂಭಕಾದಿಗಳನ್ನು ಅಭ್ಯಾಸ ಮಾಡಿ ಅವುಗಳ ನಿಷ್ಫಲವನ್ನು ಅನುಭವಿಸಿದ್ದೇನಲ್ಲವೇ. ಸಹಜವಾದ ಶ್ವಾಸವು ಹೇಗೆ ಕೆಲಸಮಾಡುತ್ತದೆ, ಇದರ ರೀತಿ ಯಾವುದು? ಎಂದು ಅವರು ಚರ್ಚಿಸಿಕೊಂಡು… ಬಾಲ್ಯದಿಂದಲೂ ಹೇಗೆ ಶ್ವಾಸವನ್ನು ಗಮನಿಸುತ್ತಿದ್ದೇನೋ ಅದೇ ಸರಿಯಾದದು ಎಂದು ಕಂಡುಕೊಂಡು, ಈ ಆನಾಪಾನಸತಿ ಅಭ್ಯಾಸವನ್ನೇ ಪ್ರಾರಂಭಿಸಿದರು.

ಗೌತಮ ಬುದ್ಧ ಅಸಹಜವಾದ ಹಠಯೋಗ ಪ್ರಾಣಾಯಾಮ ಮುಂತಾದ ಎಲ್ಲಾ ರೀತಿಗಳನ್ನು ಬದಿಗಿಟ್ಟು, ‘ಸಹಜವಾದ ಪ್ರಾಣಾಯಾಮ’ ಎಂದರೆ ‘ಕುಂಭಕರಹಿತ ಪ್ರಾಣಾಯಾಮ’, ಅಂದರೆ, ‘ಆನಾಪಾನಸತಿ’ ಎಂಬುವ ಅದ್ಭುತವಾದ ವಿಧಾನವನ್ನು ತಾನೇ ಸ್ವಯಂ ಆಗಿ ಕಂಡುಹಿಡಿದರು.

“ಸಹಜವಾದ ಶ್ವಾಸ”

ಸೃಷ್ಟಿಯಲ್ಲಿ ಒಂದು ಮೂಲಸಿದ್ಧಾಂತ ಏನು ಹೇಳುತ್ತದೆ ಎಂದರೆ… ‘ಪ್ರಕೃತಿ ಸದಾ ಸಹಜವಾಗಿ ಇರುತ್ತದೆ’ ಎಂದು… ‘ಪ್ರಕೃತಿ ಸದಾ ಸುಲಭ ರೀತಿಯಲ್ಲಿರುತ್ತದೆ’ ಎಂದು. ಯಾವ ಪ್ರಕೃತಿ ಸಹಜವಾಗಿದೆಯೇ, ಸುಲಭ ರೀತಿಯಲ್ಲಿದೆಯೇ ಅದೇ ಸತ್ಯವಾದದ್ದು ಕೂಡಾ ಎಂದು ನಾವು ಸ್ಪಿರಿಚ್ಯುವಲ್ ಸೈನ್ಸ್‌ನಲ್ಲಿ ತಿಳಿದುಕೊಳ್ಳುತ್ತೇವೆ. ಅತಿ ಸುಲಭವಾಗಿರುವುದೇ ಸತ್ಯ. ಅತಿ ಕಠಿಣವಾಗಿರುವುದೇ, ಕಠೋರವಾಗಿರುವುದೇ ಅಸತ್ಯ. ಅತಿ ಸಹಜವಾಗಿರುವುದೇ ಸತ್ಯ. ಅತಿ ಅಸಹಜವಾಗಿರುವುದೇ ಅಸತ್ಯ. ಆದ್ದರಿಂದ, ‘ಸಹಜತೆ’, ‘ಸತ್ಯತೆ’, ‘ಸುಲಭ’… ಈ ಮೂರೂ ಕೂಡಾ ಪರ್ಯಾಯ ಪದಗಳು. ಒಂದು ಇದ್ದರೆ, ಉಳಿದ ಎರಡೂ ಅಲ್ಲಿ ಇರುತ್ತವೆ. ‘ಹಠಯೋಗ ಪ್ರಾಣಾಯಾಮ’ ಎಂಬುವುದು ಅಸಹಜವಾದದ್ದು. ಕುಂಭಿಸುವುದೆಂಬುವುದು ಕಠೋರವಾದದ್ದು… ಆದ್ದರಿಂದ, ಅದು ಸತ್ಯಕ್ಕೆ ದೂರವಾದದ್ದು. ಸುಖಮಯ ರಾಜಯೋಗ ಪ್ರಾಣಾಯಾಮ ಎಂಬುವುದು ಸಹಜವಾದದ್ದು. ಅದರಲ್ಲಿ ಕುಂಭಕ ಇರುವುದಿಲ್ಲ. ಅದು ಕುಂಭಕ ರಹಿತ ಕೇವಲ ಪೂರಕ ರೇಚಕವಾದದ್ದು.

“ಉಪಾಸನ – ವಿಪಸ್ಸನ”

‘ಉಪಾಸನ’ ಎಂದರೆ ಅದು ಬಾಯಿಂದ ಹೊರಬರುವ ಮಂತ್ರಗಳಿಂದ ಕೂಡಿದ ಪ್ರಕ್ರಿಯೆ. ‘ವಿಪಸ್ಸನ’ ಎಂದರೆ ಶ್ವಾಸದಿಂದ ಪ್ರಾರಂಭವಾಗಿ ಮೂರನೆಯ ಕಣ್ಣಿನ ಹತ್ತಿರಕ್ಕೆ ಹೋಗುವ ಪ್ರಕ್ರಿಯೆ.

ಮಂತ್ರೋಚ್ಛಾರಣೆಯಿಂದ ಮಂತ್ರೋಪಾಸಕರು ಅಭ್ಯಾಸ ಮಾಡುತ್ತಿರುತ್ತಾರೆ. ಆ ಮಂತ್ರವನ್ನು ಹೇಳಿ ಹೇಳಿ ಕೊನೆಗೆ ಒಂದಾನೊಂದು ನಿಶ್ಶಬ್ದ ಸ್ಥಿತಿಗೆ, ಮಂತ್ರ-ರಹಿತ-ಸ್ಥಿತಿಗೆ ಸೇರಿಕೊಂಡಾಗ ಕೆಲವು ದಿವ್ಯರೂಪಗಳು ಕಾಣಿಸುತ್ತವೆ. ಆದರೆ, ಅದು ಅಷ್ಟಕ್ಕೆ ನಿಂತುಹೋಗುತ್ತದೆ. ಆ ದಿವ್ಯದೃಷ್ಟಿಯ ಪ್ರಾಥಮಿಕ ಹಂತದಲ್ಲಿ ಸಂಚರಿಸುವುದೇ ಉಪಾಸಕರು ಸಾಧಿಸಲು ಸಾಧ್ಯವಾಗುವುದು. ಅದಕ್ಕಿಂತಾ ಉನ್ನತ ಹಂತವಾದ ‘ಸಂಪೂರ್ಣ ದಿವ್ಯದೃಷ್ಟಿ’ಯನ್ನು ಪಡೆಯಲು ‘ಮಂತ್ರ ಉಚ್ಛಾರಣೆ’ ಯಲ್ಲಿಮಂತ್ರೋಪಾಸನೆಯಲ್ಲಿ ಸಾಧ್ಯವಾಗುವುದೇ ಇಲ್ಲ.

ಮಂತ್ರೋಪಾಸಕರು ಐದನೆಯ ಚಕ್ರದವರೆಗೆ ಮಾತ್ರವೇ ತಲುಪುತ್ತಾರೆ. ಅದೇ ‘ವಿಶುದ್ಧಚಕ್ರ’… ಹಾಗೆ ತಲುಪಿಕೊಂಡವರಿಗೆ ಆರನೆಯಚಕ್ರ… ಅಂದರೆ, ‘ಆಜ್ಞಾಚಕ್ರ’… ಎಂದರೆ, ‘ಸುದರ್ಶನ ಚಕ್ರ’ ಛಾಯೆಗಳು ಮಾತ್ರವೇ ಕಾಣುತ್ತವೆ ಅಷ್ಟೇ ವಿನಹ ಅದರಲ್ಲಿ ಪರಿಪಕ್ವತೆ ಸಾಧಿಸಲಾರರು. ಬಾಯಿಂದ ಮಾಡುವ ಕ್ರಿಯೆಯನ್ನು… ಬಿಟ್ಟು , ‘ಶ್ವಾಸದಿಂದ ಮಾಡುವ ಕ್ರಿಯೆ’ಯಾದ ಆನಾಪಾನಸತಿಯನ್ನು ಪ್ರಾರಂಭಿಸಿದರೆ… ದಿವ್ಯದೃಷ್ಟಿ ಸ್ವಲ್ಪಕಾಲದಲ್ಲೇ ದೊರೆತು, ಅದ್ಭುತವಾದ ದಿವ್ಯಜ್ಞಾನ ಉಂಟಾಗಿ ನಮ್ಮ ಜನ್ಮಗಳೆಲ್ಲಾ ನೋಡಿಕೊಳ್ಳುತ್ತೇವೆ. ಅದೇ ಏಳನೆಯದಾದ ‘ಸಹಸ್ರಾರಸ್ಥಿತಿ’.

“ಉಪಾಸನ – ಸಿಂಹಾಸನ”

ಉಪ + ಆಸನ = ಉಪಾಸನ ; ಅಂದರೆ, ‘ಪಕ್ಕಕ್ಕಿರುವ ಆಸನ’
‘ಮಂತ್ರೋಚ್ಛಾರಣೆ’ ಎಂಬುವುದು ಚಿಕ್ಕ ಆಸನ… ‘ಮಂತ್ರಜಪ’ ಎಂಬುವುದು… ಅದು ಪ್ರಧಾನ ಆಸನವಲ್ಲ. ‘ವಿಪಸ್ಸನ’ ಎಂಬುವುದೇ ಪ್ರಧಾನ ಆಸನ… ‘ಸಿಂಹಾಸನ’. ಅಲ್ಲೇ ಮನುಷ್ಯ ‘ಮಹಾರಾಜ’ ಆಗುತ್ತಾನೆ ‘ಸಿಂಹ’ನಾಗುತ್ತಾನೆ… ‘ಪಶುಪತಿ’ ಆಗುತ್ತಾನೆ.

‘ಮಂತ್ರೋಚ್ಛಾರಣೆ’ ಎಂಬುವುದು ಮಣಿಪೂರ ಚಕ್ರದಿಂದ, ಅಂದರೆ, ಮೂರನೆಯ ಚಕ್ರದಿಂದ ಪ್ರಾರಂಭವಾಗುತ್ತದೆ, ಅಂದರೆ, ದೊಡ್ಡ ದೊಡ್ಡ ಮಣಿಗಳಂತಹ ಮಂತ್ರಗಳು ಉಚ್ಛರಿಸಿ ‘ಮಣಿಪೂರ’ದಿಂದ ‘ಅನಾಹತ’ ಎಂಬುವ ಸ್ಥಿತಿಗೆ ತಲುಪಿ ಕೊನೆಗೆ ‘ವಿಶುದ್ಧ’ ಎಂಬುವ ಚಕ್ರದಲ್ಲಿ ಸೇರುತ್ತೇವೆ… ಉಪಾಸನಾ ವ್ರತಗಳಿಂದ ಐದನೆಯ ಚಕ್ರ ಮಾತ್ರ ಉತ್ತೇಜಿತವಾಗುತ್ತದೆ.

ಆದರೆ, ‘ಆನಾಪಾನಸತಿ’ ಎಂಬುವುದು ನೇರವಾಗಿ ವಿಶುದ್ಧ ಚಕ್ರದಿಂದ ಪ್ರಾರಂಭವಾಗಿ ಆಜ್ಞಾ ಚಕ್ರದಿಂದ ಎಲ್ಲರನ್ನೂ ಏಳನೆಯ ಸಹಸ್ರಾರ ಸ್ಥಿತಿಗೆ ತಕ್ಷಣ ಕೊಂಡೊಯ್ಯುತ್ತದೆ.. ಹಾಗೆ… ಆ ಸ್ಥಿತಿಗೆ ತಲುಪಿದವನೇ ಒಬ್ಬ ‘ಏಳು ಬೆಟ್ಟದವನ’… ಅಲ್ಲಿಗೆ ತಲುಪಿದವರೇ ‘ಗ್ರಾಂಡ್ ಮಾಸ್ಟರ‍್ಸ್’.

ಮಂತ್ರೋಪಾಸನೆಯಿಂದ ಶಿಷ್ಯರಾಗಬಹುದು… ಅಷ್ಟೇ ವಿನಹ ಅದರಿಂದ ನಾವು ಗುರುಗಳಾಗಲಾರೆವು. ಮುಖ್ಯಶಿಷ್ಯನಾಗಿ ಇರುತ್ತೇವೆ… ಜೀವನ್ಮುಕ್ತ ಗುರುಗಳ ಹಾಗೆ ಆಗಲಾರೆವು.

ಆರನೆಯದಾದ ಆಜ್ಞಾಚಕ್ರಕ್ಕೆ ತಲುಪಿರುವವರೇ ಗುರುಗಳು. ಏಳನೆಯ ಸ್ಥಿತಿಗೆ ಎಂದರೆ ಸಹಸ್ರಾರಸ್ಥಿತಿಗೆ ತಲುಪಿದವರೇ ಪರಮಗುರುಗಳು.

‘ಮಂತ್ರಜಪ’ ಎಂಬುವುದು ಅಧೋಲೋಕವಾದ ಬಾಯಿಯಲ್ಲಿದೆ. ‘ಆನಾಪಾನಸತಿ’ ಎಂಬುವುದು ಊರ್ಥ್ವಲೋಕವಾದ ನಾಸಿಕದಲ್ಲಿರುತ್ತದೆ.

“ದಿವ್ಯದೃಷ್ಟಿ”

ಈ ರೀತಿಯಲ್ಲಿ ಪಟ್ಟುಬಿಡದೆ, ನಿರಂತರವಾಗಿ ‘ಆನಾಪಾನಸತಿ’ ಧ್ಯಾನ ಮಾಡುವುದರಿಂದ ನಮ್ಮ ನಾಡೀಮಂಡಲವೆಲ್ಲಾ ಶುದ್ಧಿಯಾಗಿ ‘ಕಾಯಾನುಪಸ್ಸನ’ ಎಂಬುವ ಎರಡನೆಯ ಹಂತ ದಾಟಿ ‘ವಿಪಸ್ಸನ’ ಎಂಬುವ ಅದ್ಭುತವಾದ ಮೂರನೆ ಹಂತ. ಅಂದರೆ, ‘ದಿವ್ಯದೃಷ್ಟಿ’ಯಲ್ಲಿ ನಾವು ಪ್ರವೇಶಿಸುತ್ತೇವೆ. ಆಗಲೇ ‘ಮುಕ್ಕಣ್ಣಿನವರು’ ಆಗುತ್ತೇವೆ.

ದಿವ್ಯದೃಷ್ಟಿಯಲ್ಲಿ ಬರುವ ಅನುಭವಗಳೆಲ್ಲಾ ಒಬ್ಬರಿಗೊಬ್ಬರು ಹೇಳಿಕೊಳ್ಳಬೇಕು. ಇದೇ ಸಜ್ಜನಸಾಂಗತ್ಯ. ಇತರೆ ಧ್ಯಾನಿಗಳ ಜೊತೆ ಸಾಂಗತ್ಯ. ನಮಗೆ ಏನೇನು ಕಾಣಿಸಿದೆಯೊ ಅವೆಲ್ಲವನ್ನೂ ಇತರರಿಗೆ ಹೇಳಿಕೊಳ್ಳಬೇಕು. ಪಕ್ಕದವರಿಗೆ ಏನೇನು ಕಾಣಿಸಿದೆಯೊ ಅವೆಲ್ಲವನ್ನೂ ನಾವು ಕೇಳಿಸಿಕೊಳ್ಳಬೇಕು.

‘ವಿಪಸ್ಸನ’ವನ್ನೇ ಇಂಗ್ಲಿಷ್‌ನಲ್ಲಿ ‘ಸೀಯಿಂಗ್’ ಎಂದು, ಕನ್ನಡದಲ್ಲಿ ‘ನೋಡುವುದು/ವೀಕ್ಷಿಸುವುದು’ ಎಂದು ಅರ್ಥ. ಆನಾಪಾನಸತಿಯಿಂದ ನಾವು ಹಿರಿಯರಾಗುತ್ತೇವೆ. ಅಂದರೆ, ಋಷಿಗಳಾಗುತ್ತೇವೆ, ದ್ರಷ್ಟರಾಗುತ್ತೇವೆ.

‘ಯತ್ರ ಯೋಗೀಶ್ವರಃ ಕೃಷ್ಣ’…
ಭಗವದ್ಗೀತೆಯಲ್ಲಿ ಕೊನೆಗೆ ಸಂಜಯನು ಹೇಳಿದ.
“ಯತ್ರ ಯೋಗೀಶ್ವರಃ ಕೃಷ್ಣ ಯತ್ರ ಪಾರ್ಥೋ ಧನುರ್ಧರಃ
ತತ್ರ ಶ್ರೀರ್ವಿಜಯೊ ಭೂತಿರ್ಧುವಾ ನೀತಿರ್ಮತಿರ್ಮಮ|| “

ಎಲ್ಲಿ ವಿಶೇಷವಾದ ಯೋಗವಿರುತ್ತದೆಯೋ, ಎಲ್ಲಿ ಕ್ರಿಯಾಶೀಲವಾದ ಧರ್ಮಬದ್ಧತೆ ಆ ಅರ್ಜುನನ ರೂಪದಲ್ಲಿರುತ್ತದೆಯೋ ಅಲ್ಲಿ ‘ಶ್ರೀ’ ಅಂದರೆ, ‘ಅರ್ಥ’… ‘ವಿಜಯೊ’ ಅಂದರೆ, ‘ಮೋಕ್ಷ’… ‘ಭೂತಿ’ ಅಂದರೆ, ‘ಅದ್ಭುತವಾದ ಕಾಮ’… ಮತ್ತು ‘ದೃವಾನೀತಿ’ ಅಂದರೆ ‘ಧರ್ಮ’- ಧರ್ಮಾರ್ಥಕಾಮಮೋಕ್ಷಗಳೆಂಬುವುವು- ಚತುರ್ವಿಧ ಪುರುಷಾರ್ಥಗಳೆಂಬುವುವು -ಹೇರಳವಾಗಿ ಇರುತ್ತವೆ.
ಯೋಗನಿಷ್ಠೆಯೇ ‘ಕೃಷ್ಣನು’ ಕರ್ತವ್ಯ ನಿಷ್ಠೆಯೇ ‘ಅರ್ಜುನನು’ ಈ ಯೋಗ ನಿಷ್ಠೆ, ಕರ್ತವ್ಯನಿಷ್ಠೆ ನಮ್ಮ ಜೀವನದಲ್ಲಿ ಎಷ್ಟು ಅಧಿಕವಾಗಿ ಇದ್ದರೆ ಅಷ್ಟು ನಾವು ಭಾಗ್ಯವಂತರಾಗುತ್ತೇವೆ ‘ಯೋಗನಿಷ್ಠೆ’ ಎಂದರೆ, ‘ಆನಾಪಾನಸತಿ’ ಅಭ್ಯಾಸವಷ್ಟೆ.

“ವಾಯುಪುತ್ರನು”

‘ವಾನರ’ ಎಂದರೆ, ಕೋತಿಯ ಹಾಗೆ ಬುದ್ಧಿ ಇರುವವನು; ಕೋತಿಯಂತಹ ಮನಸ್ಸು ಇರುವವನು. ಮನಸ್ಸು ಸ್ಥಿರತ್ವ ಇಲ್ಲದವನು ‘ವಾನರ’ನ ಸಮಾನ.

ವಾನರನು ‘ಆಂಜನೇಯ ಸ್ವಾಮಿ’ಯ ಹಾಗೆ ಆಗಬೇಕಾದರೆ, ‘ವಾಯುಪುತ್ರನ’ ಹಾಗೇ ಆಗಬೇಕು. ‘ವಾಯುಪುತ್ರರ’ ಹಾಗೆ ಆಗುವುದೆಂದರೇ ಆನಾಪಾನಸತಿ ಅಭ್ಯಾಸ ಮಾಡುವುದೇ.

ಆನಾಪಾನಸತಿ ಮಾಡಿ ಸಿದ್ಧತ್ವವನ್ನು ಹೊಂದಿದವರೆಲ್ಲರೂ ಆಂಜನೇಯ ಸ್ವಾಮಿಗಳೇ. ವಾಯುವನ್ನು ಗಮನಿಸುತ್ತಿದ್ದರೇ ‘ವಾಯುಪುತ್ರ’ರಾಗುತ್ತೇವೆ. ‘ವಾಯುವು’ ಎಂದರೇ ಶ್ವಾಸ ಅದು ನಾಸಿಕದಲ್ಲಿದೆ. ಆದ್ದರಿಂದ, ನಾಸಿಕದಲ್ಲಿರುವ ಆ ‘ಒಳಗೆ ಬರುತ್ತಾ ಹೊರಗೆ ಹೋಗುತ್ತಾ ಇರುವ ವಾಯುವನ್ನು’ ಗಮನಿಸುತ್ತಿದ್ದರೇ, ಗಮನಿಸುತ್ತಿದ್ದರೇ… ನಮ್ಮ ಮನೋಚಾಂಚಲ್ಯ ಹೋಗಿ, ’ಅಂಜನ’ ಸಿದ್ಧಿಸುತ್ತದೆ. ‘ಅಂಜನ’ ಎಂದರೆ ‘ನೋಟ’ ಎಂದರೆ ‘ಮೂರನೆಯ ಕಣ್ಣು’, ‘ದಿವ್ಯದೃಷ್ಟಿ’ ಅಂಜವನ್ನು ಹಾಕಿ ಭೂತ ಭವಿಷ್ಯತ್, ವರ್ತಮಾನ ಕಾಲಗಳೆಲ್ಲವನ್ನೂ ನೋಡುತ್ತೇವಲ್ಲವೇ. ಅಂದರೆ, ‘ಆಂಜನೇಯ ಸ್ವಾಮಿ’ಗಳಾಗುತ್ತೇವೆ.

“ಪಾಶುಪತಾಸ್ತ್ರ – ಸರ್ವರೋಗ ನಿವಾರಿಣಿ”

‘ಆನಾಪಾನಸತಿ’ ಎಂಬುವುದೇ ‘ಪಶುವನ್ನು ಪಶುಪತಿಯಾಗಿ ಮಾಡುವುದು’… ಅಂದರೆ, ತನ್ನೊಳಗಿರುವ ಪ್ರಾಣಿತತ್ವಕ್ಕೆ ತಾನು ಆಧೀನನಾಗದೇ ತನ್ನ ಪ್ರಾಣಿತತ್ವಕ್ಕೆ ತಾನು ‘ಪತಿ’ ಅಂದರೆ, ‘ಯಜಮಾನ ಆಗುವುದು’.

‘ಪಶುವ’ನ್ನು ‘ಪಶುಪತಿ’ಯಾಗಿ ಮಾಡುವ ‘ಪಾಶುಪತಾಸ್ತ್ರ’- ಆನಾಪಾನಸತಿ. ಪಾಶುಪತಾಸ್ತ್ರದಿಂದ ಸಾಧಿಸಲಾಗದೇ ಇರುವುದು ಯಾವುದೂ ಇಲ್ಲ ಹಾಗೆಯೇ ‘ಆನಾಪಾನಸತಿ’ಯಿಂದ ಸಾಧಿಸಲಾಗದೇ ಇರುವುದು ಯಾವುದೂ ಇಲ್ಲ.

‘ಆನಾಪಾನಸತಿ’… ಎಂಬುವುದು ಸರ್ವರೋಗ ನಿವಾರಿಣಿ ಮತ್ತು ವಿಶ್ವಶಕ್ತಿ ಪ್ರದಾಯಿನಿ. ‘ಆನಾಪಾನಸತಿ’ ಎಂಬುವುದು ಸರ್ವಭೋಗಕಾರಿಣಿ – ಎಲ್ಲಾ ಸಮಸ್ಯೆಗಳ ಪರಿಹಾರಿಣಿ. ‘ಆನಾಪಾನಸತಿ’ ಎಂಬುವುದು ಸತ್ಯಜ್ಞಾನ ಪ್ರಸಾದಿನಿ, ಎಲ್ಲಾ ಸಂಶಯಗಳ ಪರಿಹಾರಿಣಿ. ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟೀಸ್ ಮೂವ್‌ಮೆಂಟ್‌ನ ಮೂಲ ಆಧ್ಯಾತ್ಮಿಕ ಸಾಧನಾ ಸಿದ್ಧಾಂತವೇ ಆನಾಪಾನಸತಿ.

“ಕಟ್ಟು, ಹೊಡಿ, ಪಡೆದುಕೋ”

ಕಟ್ಟು ಅಂದರೆ, ಯಾವುದನ್ನು ಕಟ್ಟಿ ಹಾಕಬೇಕು? ‘ಕಟ್ಟು’ ಅಂದರೆ, ಈ ಭೌತಿಕಕಾಯವನ್ನು ಕಟ್ಟಿಹಾಕಬೇಕು. ನಂತರ ಯಾವುದನ್ನು ಹೊಡೆಯಬೇಕು? ಮನಸ್ಸನ್ನು ಹೊಡೆಯಬೇಕು. ಏನನ್ನು ಪಡೆದುಕೊಳ್ಳಬೇಕು? ಅಂಜನವನ್ನು ಪಡೆದುಕೊಳ್ಳಬೇಕು.ದಿವ್ಯದೃಷ್ಟಿಯನ್ನು ಪಡೆದುಕೊಳ್ಳಬೇಕು.ಸೀತಾದೇವಿಯನ್ನು ಪಡೆದುಕೊಳ್ಳಬೇಕು ‘ಕಟ್ಟು’ ಎಂದರೆ ಈ ಭೌತಿಕ ಶರೀರ – ಈ ಭೌತಿಕ ಕಾಯ ಆದ್ದರಿಂದ ‘ದೇಹವನ್ನು ಕಟ್ಟಿಹಾಕುವುದು’ ಎಂದರೆ, ಒಂದು ಕಾಲನ್ನು ಇನ್ನೊಂದು ಕಾಲಿನಿಂದ ಕಟ್ಟಿಹಾಕುವುದು (ಎರಡು ಕಾಲುಗಳನ್ನು ಮಡಚುವುದು), ಒಂದು ಕೈಯನ್ನು ಇನ್ನೊಂದು ಕೈಯಿಂದ ಕಟ್ಟಿಹಾಕುವುದು, ಕಣ್ಣುಗಳನ್ನು ಕಣ್ಣುರೆಪ್ಪೆಗಳಿಂದ ಕಟ್ಟಿಹಾಕುವುದು, ಹಾಗೆ ಈ ‘ದೇಹ’ವನ್ನೆಲ್ಲಾ ಕಟ್ಟಿಹಾಕಿ ಕೂಡಿಸಬೇಕು…. ಚಲನವಿಲ್ಲದೆ, ಎಂದರೆ, ಸ್ಥಿರ-ಸುಖ-ಆಸನವನ್ನು ಹಾಕಬೇಕು… ಅನಂತರ ಮನಸ್ಸನ್ನು ಹೊಡೆಯಬೇಕು. ನಿತ್ಯ ಚಂಚಲವಾಗಿ ಸದಾ ಆಕಡೆ ಈಕಡೆ ತಿರುಗುವ ಮನಸ್ಸನ್ನು ಹೇಗೆ ಹೊಡೆಯಲಾಗುತ್ತದೆ? ಅದು ಸಾಮಾನ್ಯ ಪೊರಕೆಯಿಂದ ಹೊಡೆಯಲ್ಪಡುತ್ತದೆಯಾ? ಅಲ್ಲ ‘ವಾಯುಪುತ್ರರಾಗುವುದು’ ಎಂಬುವುದರಿಂದಲೇ ಮನಸ್ಸನ್ನು ಹೊಡೆಯಲಾಗುತ್ತದೆ ‘ಕಟ್ಟು’, ‘ಹೊಡಿ’, ನಂತರ… ‘ಪಡೆದುಕೋ’ ಅಂದರೆ,… ಅದ್ಭುತವಾದ ದಿವ್ಯಶಕ್ತಿಯನ್ನು ಪಡೆದುಕೊಳ್ಳುತ್ತೇವೆ. ಸೀತಾದೇವಿಯನ್ನು ಪಡೆದುಕೊಳ್ಳುತ್ತೇವೆ. ಸೀತಾದೇವಿ ಭೂಮಿಯೊಳಗಿಂದ ಹುಟ್ಟಿದಳು, ಅಂದರೆ, ಭೂಮಿಯ ಶಕ್ತಿ. ಭೂಮಿ ಎಂಬುವುದು ಇಲ್ಲಿ ಪ್ರಕೃತಿಯ ಪ್ರತೀಕ ಧ್ಯಾನ ಮಾಡಿದರೇ ಪ್ರಕೃತಿ ಶಕ್ತಿ ನಮ್ಮಲ್ಲಿ ಹೇರಳವಾಗಿ ಪ್ರವಹಿಸುತ್ತದ.

“ನಾಸಿಕಾಗ್ರ… ಭ್ರೂಮಧ್ಯ”

‘ಆನಾಪಾನಸತಿ’ ಅಭ್ಯಾಸ ಹೇಗೆ ಮಾಡಬೇಕೆಂದರೆ… ಹಾಯಾಗಿ ಕುಳಿತುಕೊಂಡು, ಎರಡು ಕಾಲುಗಳನ್ನು ಮಡಚಿಕೊಂಡು, ಎರಡು ಕೈಗಳನ್ನು ಜೋಡಿಸಿಕೊಂಡು, ಎರಡು ಕಣ್ಣುಗಳನ್ನು ಮುಚ್ಚಿಕೊಂಡು, ನಮ್ಮ ಮನಸ್ಸನ್ನು ನಿಲ್ಲಿಸಿ (ಕಟ್ಟಿಹಾಕಿ) ‘ಶ್ವಾಸದ ಮೇಲೆ ಗಮನ’ವಿಡಬೇಕು.

ನಾಸಿಕ ಎಲ್ಲಿ ಪ್ರಾರಂಭವಾಗುತ್ತದೆಯೊ ಅದರ ಹೆಸರೇ ‘ಭ್ರೂಮಧ್ಯ’… ಅದೇ ‘ನಾಸಿಕಾಗ್ರ’ ಎಂದರೆ ‘ಮೂಗಿನ ತುದಿ’ ಅಲ್ಲ.
ಹಾಗೆ ಮಾಡಿದಾಗ ಈ ಶ್ವಾಸ ತನ್ನಷ್ಟಕ್ಕೆ ತಾನೇ ಚಿಕ್ಕದಾಗುತ್ತಾ ಕೊನೆಗೆ ‘ನಾಸಿಕಾಗ್ರ’ದಲ್ಲಿ, ಅಂದರೆ, ‘ಭ್ರೂಮಧ್ಯ’ದಲ್ಲಿ, ಅಂದರೆ, ‘ಆಜ್ಞಾಚಕ್ರ’ದಲ್ಲಿ, ಅಂದರೆ, ‘ಸುದರ್ಶನ ಚಕ್ರಸ್ಥಾನ’ದಲ್ಲಿ ತನ್ನಷ್ಟಕ್ಕೆ ತಾನು ಸುಖವಾಗಿ ಸ್ಥಿರವಾಗಿ ಬಿಡುತ್ತದೆ. ಆಗ ಆ ಸ್ಥಿತಿಯಲ್ಲಿ ನಾವು ತದೇಕವಾಗಿ ಅಲ್ಲೇ ಮನಸ್ಸು ನಿಲ್ಲಿಸಿದರೇ… ತನ್ಮಯವಾಗಿದ್ದರೆ,… ‘ಮೂರನೆಯ ಕಣ್ಣಿ’ನ ವಿಸ್ಫೋಟ ಪ್ರಾರಂಭವಾಗುತ್ತದೆ.
ಈ ಮೂರನೆಯ ಕಣ್ಣಿನ ವಿಸ್ಫೋಟವನ್ನು ಗಮನಿಸುವುದನ್ನೇ ‘ವಿಪಸ್ಸನ’ ಎನ್ನುತ್ತೇವೆ. ‘ಪಶ್ಯತಿ’ ಅಂದರೆ, ಸಂಸ್ಕೃತದಲ್ಲಿ ‘ನೋಡುವುದು (ವೀಕ್ಷಿಸುವುದು)’; ‘ಪಸ್ಸನ’ ಅಂದರೆ, ಪಾಳೀ ಭಾಷೆಯಲ್ಲಿ ‘ವೀಕ್ಷಿಸುವುದು (ನೋಡುವುದು)’; ‘ವಿಪಸ್ಸನ’ ಅಂದರೆ ವಿಶೇಷವಾಗಿ ನೋಡುವುದು ‘ವಿ’ ಅಂದರೆ, ‘ವಿಶೇಷವಾದ’ ಅದೇ ಮೂರನೆಯ ಕಣ್ಣಿನ ನೋಟ – ಮುಕ್ಕಣ್ಣಿನ ನೋಟ ‘ಥರ್ಡ್ ಐ’ ವಿಜನ್

‘ಆನಾಪಾನಸತಿ – ವಿಪಸ್ಸನ’ವನ್ನು ನಾವು ಪ್ರತಿದಿನ ಅಭ್ಯಾಸ ಮಾಡಿ, ಅದರಿಂದ ನಿಧಾನವಾಗಿ ಇತರ ಎಲ್ಲಾ ಲೋಕಗಳನ್ನು ತಿಳಿದುಕೊಂಡು, ಅಲ್ಲೆಲ್ಲಾ ಸಂಚರಿಸುತ್ತಾ, ಆತ್ಮಜ್ಞಾನ, ಆತ್ಮ ವಿಜ್ಞಾನವನ್ನು ಸಂಪಾದಿಸಬೇಕು. ಸಂಪೂರ್ಣವಾದ ‘ಮಲ್ಟೀ ಡೈಮೆನ್ಷನಲ್’ ಅರಿವನ್ನು ಹೊಂದಬೇಕು.

“ಎಲ್ಲಿ ಬೇಕಾದರೂ ಕುಳಿತುಕೊಳ್ಳಬಹುದು”

ಧ್ಯಾನಕ್ಕೆ ಎಲ್ಲಿ ಬೇಕಾದರೂ ಕುಳಿತುಕೊಳ್ಳಬಹುದು; ನೆಲದ ಮೇಲೆ ಚಾಪೆ ಹಾಕಿಕೊಂಡು ಕೂಡಬಹುದು. ಚಾಪೆ ಇಲ್ಲದಿದ್ದರೂ ಪರವಾಗಿಲ್ಲ. ಕಾಲುಗಳನ್ನು ಚಾಚಿಕೊಳ್ಳಬಹುದು. ಮತ್ತು ಗೋಡೆಗೆ ಆನಿಸಿಕೊಂಡು ಕುಳಿತುಕೊಳ್ಳಬಹುದು. ಕುರ್ಚಿಯಲ್ಲಿ ಕುಳಿತುಕೊಳ್ಳಬಹುದು. ಆದರೆ, ಕುರ್ಚಿಯಲ್ಲಿ ಕುಳಿತುಕೊಂಡಾಗ ಪಾದಗಳೆರಡೂ ಒಂದರಮೇಲೊಂದು ಕ್ರಾಸ್ ಮಾಡಿಕೊಳ್ಳಬೇಕು. ಬೆರಳುಗಳಲ್ಲಿ ಬೆರಳುಗಳಿಟ್ಟುಕೊಳ್ಳಬೇಕು. ಹೆಬ್ಬೆರಳುಗಳನ್ನು ಕ್ರಾಸ್ ಮಾಡಿಕೊಳ್ಳಬೇಕು. ಮಲಗಿಕೊಂಡು ಮಾತ್ರ ಧ್ಯಾನ ಮಾಡಬಾರದು. ಮುದುಕುರು, ಕುಳಿತುಕೊಳ್ಳಲು ಕೈಲಾಗದೇ ಇರುವವರಾದರೆ, ಆ ಪರಿಸ್ಥಿತಿಗಳಲ್ಲಿ ಆದರೆ ಮಲಗಿಕೊಂಡು ಧ್ಯಾನ ಮಾಡಿಕೊಳ್ಳಬಹುದು. ಕುಳಿತುಕೊಳ್ಳಲು ಸಾಧ್ಯವಾಗುವವರು, ಆರೋಗ್ಯವಂತರೂ ಮಾತ್ರ ಖಂಡಿತವಾಗಿ ಕುಳಿತುಕೊಂಡೇ ಧ್ಯಾನ ಮಾಡಿಕೊಳ್ಳಬೇಕು. ಪ್ರಾರಂಭದಲ್ಲಿ ಕೊಠಡಿಯನ್ನು ಆದಷ್ಟು ಕತ್ತಲೆ ಮಾಡಿಕೊಳ್ಳಬೇಕು.

‘ಆನಾಪಾನಸತಿ’ಯನ್ನು ಆರಂಭಿಸುವುದಕ್ಕೂ ಮುಂಚೆ ಒಂದು ಅರ್ಧ ಲೋಟಾ ನೀರು ಕುಡಿದು ಇನ್ನೂ ಅರ್ಧ ಲೋಟಾ ನೀರು ಪಕ್ಕಕ್ಕೆ ಇಟ್ಟುಕೊಳ್ಳಬೇಕು. ಅಭ್ಯಾಸ ಮುಗಿದನಂತರ, ನಿಧಾನಕ್ಕೆ ಕಣ್ಣುಗಳನ್ನು ತೆರೆದು ಉಳಿದ ಅರ್ಧ ಲೋಟಾ ನೀರು ಕುಡಿಯಬೇಕು.

ನಾವು ಎಷ್ಟು ಜನರ ಜೊತೆ ಕುಳಿತು ಧ್ಯಾನ ಮಾಡಿದರೆ ಅಷ್ಟು ಚೆನ್ನಾಗಿರುತ್ತದೆ. ಸಾಮೂಹಿಕ ಧ್ಯಾನ ಎಂಬುವುದು ಮೂರು ಪಟ್ಟು ಹೆಚ್ಚು ಶಕ್ತಿದಾಯಕ. ಬಾಲ್ಯದಿಂದಲೇ ಆನಾಪಾನಸತಿ ಪ್ರಾರಂಭಿಸಬೇಕು.

“ವಯಸ್ಸಿಗೆ ತಕ್ಕಹಾಗೆ”

‘ಆನಾಪಾನಸತಿ’ ಎಷ್ಟು ಹೊತ್ತು ಮಾಡಬೇಕೆಂದರೆ… ಕನಿಷ್ಠಪಕ್ಷ ಅವರವರ ವಯಸ್ಸಿಗೆ ತಕ್ಕಹಾಗೆ ಧ್ಯಾನಕ್ಕೆ ಕುಳಿತುಕೊಳ್ಳಬೇಕು. ಅಂದರೆ, ಹತ್ತು ವರ್ಷಗಳ ವಯಸ್ಸು ಇರುವವರು ಹತ್ತು ನಿಮಿಷಗಳು, ಇಪ್ಪತ್ತು ವರ್ಷದವರು ಇಪ್ಪತ್ತು ನಿಮಿಷಗಳು, ಮೂವತ್ತು ವರ್ಷ ವಯಸ್ಸಿನವರು ಮೂವತ್ತು ನಿಮಿಷಗಳು… ಈ ರೀತಿಯಾಗಿ ಧ್ಯಾನದಲ್ಲಿ ತಪ್ಪದೇ ಕುಳಿತುಕೊಳ್ಳಬೇಕು.

ಈ ತರಹ ಪ್ರತಿನಿತ್ಯಾ ಧ್ಯಾನಮಾಡುವ ಅಭ್ಯಾಸ ಮಾಡಿಕೊಳ್ಳಬೇಕು. ಅನ್ನ ಬೇಯಲು ಸಮಯ ಆಗುತ್ತದೆಯಲ್ಲವೇ. ಸುಮ್ಮನೇ ‘ಹಾಗೆ’ ಒಲೆ ಮೇಲೆ ಅಕ್ಕಿ ಇಟ್ಟು ‘ಹೀಗೆ’ ಇಳಿಸಿದರೆ ಅನ್ನ ಸ್ವಲ್ಪವೂ ಬೆಂದಿರುವುದಿಲ್ಲ ಅಲ್ಲವೇ. ಹಾಗೆಯೆ ನಾವು ಸಹ ‘ಬೇಯಬೇಕು’ ಎಂದರೆ, ಈ ಆನಾಪಾನಸತಿ ಎಂಬುವ ಒಲೆಯ ಮೇಲೆ ಸ್ವಲ್ಪಹೊತ್ತು ಇರಬೇಕು. ‘ಎಷ್ಟುಹೊತ್ತು ನಿಲ್ಲಬೇಕು?’ ಎಂದರೆ, ವಯಸ್ಸು ಹೆಚ್ಚು ಇದ್ದಾಗ ಆನಾಪಾನಸತಿ ಎನ್ನುವ ಒಲೆಯ ಮೇಲೆ ಹೆಚ್ಚು ಹೊತ್ತು ಇರಬೇಕು. ಕಡಿಮೆ ವಯಸ್ಸು ಇದ್ದಾಗ ಕಡಿಮೆ ಸಮಯ ಸಾಕಾಗುತ್ತದೆ. ಸರಿಯಾದ ಸಮಯ ಕಾಯಿಸಿದಾಗ ಪೂರ್ತಿಯಾಗಿ ಬೇಯುತ್ತೇವೆ. ಆಗಲೇ ‘ವಿಪಸ್ಸನ’ ಎಂಬುವುದು ನಮಗೆ ಸಂಭವಿಸುತ್ತದೆ.

ಈ ‘ಆನಾಪಾನಸತಿ’ ಎಂಬುವುದು ದಿನಕ್ಕೆ ಒಂದು ಬಾರಿ ಆದರೂ ನಿಶ್ಚಲವಾಗಿ ಕುಳಿತುಕೊಂಡು ಯಾರ ವಯಸ್ಸು ಎಷ್ಟು ಇದೆಯೊ ಅಷ್ಟು ನಿಮಿಷಗಳು ಕುಳಿತುಕೊಳ್ಳಬೇಕು.

ಹೀಗೆ ಅಲ್ಲದೇ… ಇನ್ನೂ ಅಧಿಕವಾಗಿ… ಬೇರೆ ಸಮಯಗಳಲ್ಲಿ 5 ನಿಮಿಷಗಳು ಸಮಯ ಸಿಕ್ಕಿದರೆ 5 ನಿಮಿಷಗಳು, 10 ನಿಮಿಷಗಳು ಸಮಯ ಸಿಕ್ಕಿದರೆ 10 ನಿಮಿಷಗಳು, ಎಷ್ಟು ಸಮಯ ಸಿಕ್ಕರೆ ಅಷ್ಟು ಅಭ್ಯಾಸ ಮಾಡುತ್ತಿರಬೇಕು. ಒಂದು ನಿಮಿಷ ಕೂಡಾ ಸಮಯ ವ್ಯರ್ಥಮಾಡದೇ… ಬೇರೆ ಏನೂ ಕೆಲಸ ಇಲ್ಲದಿರುವಾಗ ಚೆನ್ನಾಗಿ ಎರಡು ಕಣ್ಣುಗಳನ್ನು ಮುಚ್ಚಿಕೊಂಡು ಎಲ್ಲಂದರೆ ಅಲ್ಲೇ ಕುಳಿತುಕೊಂಡು ಶ್ವಾಸದ ಮೇಲೆ ಗಮನ ಇಡುವುದನ್ನು ಚೆನ್ನಾಗಿ ಅಭ್ಯಾಸ ಮಾಡಿಕೊಳ್ಳಬೇಕು.

ರಾತ್ರಿಹೊತ್ತು ಮಲಗಿಕೊಳ್ಳುವಾಗ, ಆ ಮಲಗುವುದಕ್ಕಿಂತಾ ಮುಂಚೆ, ಶ್ವಾಸದ ಮೇಲೆ ಗಮನವಿಟ್ಟು ನಾವು ನಿದ್ರಿಸಿದರೆ… ಆ ನಿದ್ದೆ ಎಲ್ಲಾ ಕೂಡಾ ‘ಯೋಗ ನಿದ್ರೆ’ ಆಗಿಬಿಡುತ್ತದೆ. ರಾತ್ರಿ ಮಲಗುವುದಕ್ಕಿಂತಾ ಮುಂಚೆ ಪ್ರತಿಯೊಬ್ಬರೂ ತಪ್ಪದೇ ಶ್ವಾಸದ ಮೇಲೆ ಗಮನದಿಂದ ಆನಾಪಾನಸತಿ ಮಾಡುತ್ತಾ ನಿದ್ರೆಗೆ ಉಪಕ್ರಮಿಸಬೇಕು.

“ನಾಡೀಮಂಡಲ ಶುದ್ಧಿ”

ಧ್ಯಾನವಿಜ್ಞಾನಶಾಸ್ತ್ರದಲ್ಲಿ ಮೂರು ವಿಷಯಗಳಿವೆ: ಒಂದು, ಆನಾಪಾನಸತಿ. ಎರಡು, ಕಾಯಾನುಪಸ್ಸನ. ಮೂರು, ವಿಪಸ್ಸನ.
‘ಆನಾಪಾನಸತಿ’ ಅಭ್ಯಾಸದಲ್ಲಿ ಭೌತಿಕಕಾಯ ಬೇಯುತ್ತದೆ… ಅಂದರೆ, ನಾಡೀಮಂಡಲ ಶುದ್ಧಿ ನಡೆಯುತ್ತದೆ. ಅನೇಕಾನೇಕ ಪ್ರಾಣ ಸಂಚಾರಗಳು ನಮ್ಮ ಪ್ರಾಣಮಯ ಶರೀರದಲ್ಲಿ ನಡೆಯುವುದನ್ನು ನಾವು ಗಮನಿಸುತ್ತೇವೆ. ಎಲ್ಲೆಲ್ಲೋ ನೋವುಗಳು ಬರುತ್ತಿರುತ್ತವೆ. ಎಲ್ಲೆಲ್ಲೋ ಎನರ್ಜಿ ಫ್ಲೋ ಆಗುತ್ತಿರುವುದನ್ನು ನಾವು ಗಮನಿಸುತ್ತಿರುತ್ತೇವೆ. ಇದನ್ನೇ ‘ಕಾಯಾನುಪಸ್ಸನ’ ಎಂದು ಗೌತಮ ಬುದ್ಧನು ಹೇಳಿದನು. ಅಂದರೆ, ಅಂತರ್‌ಶರೀರದಲ್ಲಿ, ನಾಡೀಮಂಡಲದಲ್ಲಿ ನಡೆಯುವ ಬದಲಾವಣೆಗಳನ್ನು ನಾವು ಗಮನಿಸುತ್ತಿರುವುದು.

‘ಕಾಯಾನುಪಸ್ಸನ’ದಲ್ಲಿ ವಿಶೇಷವಾಗಿ ನಾಡೀಮಂಡಲ ಶುದ್ಧಿ ಆಗುತ್ತದೆ. ಆಗ ಇನ್ನೂ ಹೆಚ್ಚು ಧ್ಯಾನ ಮಾಡಬೇಕು.
ದೇಹದ ನಾಡೀಮಂಡಲದಲ್ಲಿ ಎರಡು ಲಕ್ಷ 72 ಸಾವಿರ ನಾಡಿಗಳಿರುತ್ತವೆ. ‘ನಾಡೀ’ ಎಂದರೆ ಒಂದು ಎನರ್ಜಿ ಛಾನಲ್. ನಾಡಿಗಳೆಲ್ಲಾ ಶುದ್ಧವಾಗುವುದನ್ನು ಮತ್ತು ಆ ರೀತಿಯಲ್ಲಿ ಶುದ್ಧವಾಗುವಾಗ ಬರುವ ನೋವುಗಳನ್ನು, ಬಾಧೆಗಳನ್ನು, ಅನುಭವಗಳನ್ನು ‘ಕಾಯಾನುಪಸ್ಸನ’ ಎನ್ನುತ್ತೇವೆ.

“ಪ್ರಾಣ ಶಕ್ತಿ ಆವಾಹನೆ”

‘ಆನಾಪಾನಸತಿ’ ಧ್ಯಾನ ಮಾಡುತ್ತಾ ಇದ್ದರೆ ಅಪಾರವಾದ ಪ್ರಾಣಶಕ್ತಿ ನಮ್ಮ ಒಳಗೆ ಪ್ರವಹಿಸಿ, ಆ ಪ್ರಾಣಶಕ್ತಿಯು ಅನೇಕಾನೇಕ ಮಲಿನ ನಾಡಿಗಳನ್ನು ಶುಚಿ ಮಾಡುತ್ತಿರುವಾಗ ಆ ಕದಲಿಕೆಗಳನ್ನು, ಆ ತೊಳೆಯುವ ರೀತಿಗಳನ್ನೂ, ತೊಳೆಯುವುದರಿಂದ ಬರುವ ನೋವುಗಳನ್ನೂ ಗಮನಿಸುವುದೇ ಕಾಯಾನುಪಸ್ಸನ.

‘ಆನಾಪಾನಸತಿ’ ಅಭ್ಯಾಸದಲ್ಲಿ ಪ್ರಾರಂಭದಲ್ಲಿ ಅನೇಕ ದಿನಗಳು ಬಗೆಬಗೆಯ ಶಾರೀರಕ ನೋವುಗಳನ್ನು ಅನುಭವಿಸುತ್ತಿರುತ್ತೇವೆ. ಈ ಶಾರೀರಕ ನೋವುಗಳು, ಬಾಧೆಗಳು ಎಂಬುವುವು – ಕಾಯಾನುಪಸ್ಸನೆಯಲ್ಲಿ ತಪ್ಪದೇ ಬರುವ ನೋವುಗಳು, ಬಾಧೆಗಳು. ಧ್ಯಾನಾಭ್ಯಾಸದಲ್ಲಿ ಇನ್ನೂ ಹೆಚ್ಚು ಆಳವಾಗಿ ಹೋದರೇನೇ ಅವೆಲ್ಲವನ್ನು ನಾವು ಮೀರಿ ಮುಂದೆ ನಡೆಯಬಲ್ಲೆವು. ಅನೇಕ ಜನರಿಗೆ ಇದು ತಿಳಿಯದೇ ಧ್ಯಾನದಲ್ಲಿ ನೋವುಗಳು ಬರುತ್ತಿವೆ ಎಂದು ಧ್ಯಾನ ಮಾಡುವುದನ್ನು ಬಿಟ್ಟುಬಿಡುತ್ತೇವೆ. ಇದು ತುಂಬಾ ಅಜ್ಞಾನದ ಕೆಲಸ.

“ಆಕಾಶಗಂಗೆ”

‘ಮನಸ್ಸು ಶೂನ್ಯವಾದಾಗ ಅಪಾರವಾದ ವಿಶ್ವಮಯ ಪ್ರಾಣಶಕ್ತಿ ಬ್ರಹ್ಮರಂಧ್ರದಿಂದ… ನಮ್ಮ ಸಹಸ್ರಾರದಿಂದ ನಮ್ಮಲ್ಲಿ ಪ್ರವಹಿಸುತ್ತದೆ. ಇದನ್ನೇ ‘ಗಂಗಾದೇವಿ’ ಎನ್ನುತ್ತೇವೆ ‘ಆಕಾಶಗಂಗೆ’ ಎನ್ನುತ್ತೇವೆ. ಶಿವನ ‘ಎರಡನೆಯ ಹೆಂಡತಿ’ ಎನ್ನುತ್ತೇವೆ. ಆನಾಪಾನಸತಿಯಿಂದ, ಚಿತ್ತವೃತ್ತಿ ನಿರೋಧದಿಂದ, ಮನಸ್ಸು ಶೂನ್ಯವಾಗುವುದರಿಂದ, ಸಹಸ್ರಾರದ ಮೂಲಕ ಆ ಕಾಸ್ಮಿಕ್ ಎನರ್ಜಿ ನಮ್ಮಲ್ಲಿ ಪ್ರವಹಿಸಿದಾಗ- ಆ ‘ಗಂಗಾದೇವಿ’ ನಮ್ಮಲ್ಲಿ ಪ್ರವೇಶಿಸಿದಾಗ- ಆಗಲೇ ಶರೀರ ನಿರ್ಮಲವಾಗುತ್ತದೆ.

“ತಿತೀಕ್ಷೆ… ನೋವುಗಳನ್ನು ಸಹಿಸುವ ಶಕ್ತಿ”

‘ಆನಾಪಾನಸತಿ’ ಪ್ರಾರಂಭಿಸಿದ ನಂತರ ಅನೇಕ ನೋವುಗಳು ಖಂಡಿತಾ ಬರುತ್ತದೆ. ಆದರೆ, ಆ ನೋವುಗಳು ಸಂತೋಷವಾಗಿ ಸಹಿಸಿಕೊಂಡಿರಬೇಕು. ನೋವುಗಳು ಬರುತ್ತಿರುತ್ತವೆ… ಅವುಗಳನ್ನು ಸಹನೆಯಿಂದ, ತಾಳ್ಮೆಯಿಂದ ಸಹಿಸಿಕೊಳ್ಳಬೇಕು.

ಈ ಸಹಿಸಿಕೊಳ್ಳುವ ಶಕ್ತಿಯನ್ನೇ ಶಂಕರಾಚಾರ್ಯರು ‘ತಿತೀಕ್ಷೆ‘ ಎಂದರು. ‘ಶಮ’ – ‘ದಮ’ – ‘ತಿತೀಕ್ಷೆ’ – ‘ಉಪರತಿ’ – ‘ಶ್ರದ್ಧೆ’ – ‘ಸಮಾಧಾನ’ … ಇದನ್ನೇ ಅವರು ‘ಷಟ್ ಸಂಪತ್ತಿ’ ಎಂದರು.

ಷಟ್ ಸಂಪತ್ತುಗಳಲ್ಲಿ ಮೂರನೆಯದೇ ‘ತಿತೀಕ್ಷೆ’, ಅಂದರೆ, ಬಾಧೆಗಳನ್ನು ಸಹನೆಯಿಂದ ಭರಿಸುವುದು. ನಾವು ಧ್ಯಾನದಲ್ಲಿ ಕುಳಿತಿರುವಾಗ ಅನೇಕಾನೇಕ ನೋವುಗಳು, ಬಾಧೆಗಳು ಬರುತ್ತವೆ. ನಾಡೀಮಂಡಲ ಎಂಬುವುದು ಎಷ್ಟು ಅಶುದ್ಧವಾಗುತ್ತದೆಯೋ… ‘ಕ್ಲೀನ್’ ಮಾಡುವಾಗ… ಅಷ್ಟು ಹೆಚ್ಚು ನೋವುಗಳು ಬರುತ್ತಿರುತ್ತವೆ.

ಮನುಷ್ಯ ತನ್ನ ಜನ್ಮ ಪರಂಪರೆಯಲ್ಲಿ ಪ್ರಾಥಮಿಕ ಅಹಂಕಾರ ಪೂರಿತ ಜನ್ಮಗಳಲ್ಲಿ ಅನೇಕಾನೇಕ ಹಿಂಸಾತ್ಮಕ ಕರ್ಮಗಳಿಂದ ತನ್ನ ನಾಡೀಮಂಡಲವನ್ನು ಎಷ್ಟು ಅಶುದ್ಧ ಮಾಡುಕೊಂಡಿದ್ದನೋ… ಮತ್ತೆ ಅಂತಹ ಅಶುದ್ಧಿಯನ್ನು ತನ್ನ ಕೊನೆಯ ಜನ್ಮಗಳಲ್ಲಿ, ಖಂಡಿತಾ ಶುದ್ಧಿ ಮಾಡಿಕೊಳ್ಳಬೇಕಾದ್ದೇ. ನಾಡೀಮಂಡಲ ಎಷ್ಟು ಅಶುದ್ಧಿಯಾಗಿತ್ತದೆಯೋ, ಅದನ್ನು ‘ಕ್ಲೀನ್’ ಮಾಡುವಾಗ ಅಷ್ಟು ಹೆಚ್ಚು ನೋವುಗಳು ಬರುತ್ತಿರುತ್ತವೆ.

ಗತಜನ್ಮಗಳಲ್ಲಿ ನಾವು ಯೋಗ ಅಭ್ಯಾಸ ಮಾಡದೇ ಹೋದರೇ… ಗತಜನ್ಮಗಳಲ್ಲಿ ಹೆಚ್ಚಾಗಿ ಪಾಪಚರಿತರಾಗಿದ್ದರೇ… ಈ ಜನ್ಮದಲ್ಲಿ ನಾವು ಆನಾಪಾನಸತಿ ಅಭ್ಯಾಸ ಪ್ರಾರಂಭಿಸಿದಾಗ ಅನೇಕ ದಿನಗಳು ಆ ನಾಡೀಮಂಡಲ ಶುದ್ಧಿಯಲ್ಲೇ ಹೆಚ್ಚು ಯೋಗ ಸಮಯವನ್ನು ಕಳೆಯಬೇಕಾಗುತ್ತದೆ. ಅನೇಕ ಗಂಟೆಗಳ ಕಾಲ ಆ ಕಾಯಾನುಪಸ್ಸನದಲ್ಲೇ… ಆ ಎರಡನೆಯ ಹಂತದಲ್ಲೇ… ಖಂಡಿತಾ ಇರಬೇಕು ಅನೇಕ ಬಾಧೆಗಳನ್ನು ತಪ್ಪದೇ ಅನುಭವಿಸಬೇಕು.

ಈ ‘ಕಾಯಾನುಪಸ್ಸನ’ದ ನಂತರದ ಹಂತ, ಅಂದರೆ ‘ಎರಡನೆಯ ಹಂತ’ವೇ ನಾಡೀಮಂಡಲ ಶುದ್ಧಿಯ ಹಂತವು ಎಷ್ಟು ದಿನಗಳಲ್ಲಿ, ಎಷ್ಟು ವಾರಗಳಲ್ಲಿ, ಎಷ್ಟು ತಿಂಗಳಗಳಲ್ಲಿ ಪೂರ್ತಿ ಆಗುತ್ತದೆ’ ಎಂಬುವುದು ನಮ್ಮ ಗತಜನ್ಮಗಳ ಚರಿತ್ರೆಯನ್ನು ಅವಲಂಬಿಸಿದೆ.

ಆದ್ದರಿಂದ, “ಗತಜನ್ಮಗಳಲ್ಲಿ ನಾವು ಏನು ಮಾಡಿದ್ದೇವೆ?”, ಏನು ಮಾಡಲಿಲ್ಲ? ಎಂಬುವುದರ ಮೇಲೆ ಈ ಜನ್ಮದಲ್ಲಿ ಈ ಕಾಯಾನುಪಸ್ಸನ ಹಂತ ‘ಎಷ್ಟು ಇರುತ್ತದೆ?’, ‘ಎಷ್ಟು ಇರುವುದಿಲ್ಲ?’ ಎಂದು ನಮಗೆ ತಿಳಿದು ಬರುತ್ತದೆ.

ಆದರೆ, ಗತಜನ್ಮಗಳಲ್ಲೇ ದೊಡ್ಡ ಯೋಗ ಅಭ್ಯಾಸಿ ಆಗಿದ್ದರೆ, ಕಾಯಾನುಪಸ್ಸನ ಎಂಬುವ ಎರಡನೆಯ ಹಂತ ನಿಜಕ್ಕೂ ಸ್ವಲ್ಪವೂ ಇಲ್ಲದೇ ಇರಬಹುದು. ಅಥವಾ, ಸ್ವಲ್ಪ ಇರಬಹುದು. ಅಥವಾ ಆನಾಪಾನಸತಿ ಪ್ರಾರಂಭಿಸುತ್ತಲೇ ಮೂರನೆಯ ಕಣ್ಣು ತೆರೆದುಕೊಳ್ಳಬಹುದು. ತಕ್ಷಣ ವಿಪಸ್ಸನ ಹಂತಕ್ಕೆ ಹೊರಟುಹೋಗಬಹುದು.

“ಸುಖಮಯ ಪ್ರಾಣಾಯಾಮ”

‘ಆನಾಪಾನಸತಿ’ ಎಂದರೆ ಸುಖಮಯ ಪ್ರಾಣಾಯಾಮ ಹಠಯೋಗ ಪ್ರಾಣಾಯಾಮದಲ್ಲಿ ‘ಕುಂಭಕ’ ಎಂಬುವುದು ಇರುತ್ತದೆ. ಶ್ವಾಸ ತೆಗೆದುಕೊಳ್ಳುವುದನ್ನು ‘ಪೂರಕ’ ಎನ್ನುತ್ತೇವೆ. ಶ್ವಾಸ ಬಿಡುವುದನ್ನು ‘ರೇಚಕ’ ಎನ್ನುತ್ತೇವೆ. ಶ್ವಾಸ ನಿಲ್ಲಿಸುವುದನ್ನು, ಬಂಧಿಸುವುದನ್ನು, ‘ಕುಂಭಕ’ ಎನ್ನುತ್ತೇವೆ. ಶ್ವಾಸವನ್ನು ಒಳಗೆ ಎಳೆದುಕೊಂಡು ನಾಸಿಕದಲ್ಲಿ ನಿಲ್ಲುಸುವುದೇ ‘ಅಂತರ್‌ಕುಂಭಕ’ ಎನ್ನುತ್ತಾರೆ; ಶ್ವಾಸವನ್ನು ಹೊರಗೆ ಬಿಟ್ಟು ಪುನಃ ನಾಸಿಕದೊಳಗೆ ತೆಗೆದುಕೊಳ್ಳದೇ ಇರುವುದೇ, ಶ್ವಾಸವನ್ನು ನಾಸಿಕದ ಹೊರಗೆ ಇಡುವುದೇ ‘ಬಹಿರ್‌ಕುಂಭಕ’ ಎನ್ನುತ್ತಾರೆ. ಕುಂಭಕ ಎಂಬುವುದು ಹಠಯೋಗ ಪ್ರಾಣಾಯಾಮದಲ್ಲಿ ಪ್ರಧಾನವಾದ ಅಂಶ. ಆದರೆ, ಬುದ್ಧಯೋಗ ಪ್ರಾಣಾಯಾಮದಲ್ಲಿ ಕುಂಭಕ ಎಂಬುವುದು ಸಂಪೂರ್ಣವಾಗಿ ನಿಷಿದ್ಧ ಆದ್ದರಿಂದ, ಈ ಆನಾಪಾನಸತಿ ‘ಸುಃಖಮಯ ಪ್ರಾಣಾಯಾಮ’… ಕೇವಲ ಪೂರಕರೇಚಕಾತ್ಮಕ ಕುಂಭಕರಹಿತ… ಸ್ವಲ್ಪವೂ ಕಷ್ಟವಿಲ್ಲದಿರುವುದು

“ಶ್ರದ್ಧೆಯಿಂದ ಕೂಡಿರುವ ಧ್ಯಾನದೀಕ್ಷೆ”

ಗತಜನ್ಮಗಳಲ್ಲಿ ಏನೇ ಆಗಿದ್ದರೂ, ಈ ಜನ್ಮದಲ್ಲಿ ಎಷ್ಟು ಕಟ್ಟುನಿಟ್ಟಾಗಿ ಈ ಧ್ಯಾನದ ಅಭ್ಯಾಸ ಮಾಡುತ್ತೇವೆಯೊ ಅದರಮೇಲೆ ವಿಶೇಷವಾಗಿ ಫಲಿತಾಂಶಗಳು ಅವಲಂಬಿಸಿರುತ್ತವೆ. ಧ್ಯಾನಾಭ್ಯಾಸ ತುಂಬಾ ಶ್ರದ್ಧೆಯಿಂದ ಮಾಡಿದರೆ ನಲವತ್ತು ದಿನಗಳಲ್ಲಿ ಯಾರಿಗಾದರೂ ಸರಿ ಈ ಕಾಯಾನುಪಸ್ಸನ, ನಾಡೀಮಂಡಲ ಶುದ್ಧಿ ಎಂಬುವ ಹಂತ ಪೂರ್ಣಗೊಂಡು ವಿಪಸ್ಸನ ಹಂತಕ್ಕೆ ಖಂಡಿತವಾಗಿಯೂ ಬೇಗ ಬಂದುಬಿಡುತ್ತಾರೆ. ನಲವತ್ತು ದಿನಗಳ ದೀಕ್ಷೆಯನ್ನೇ ‘ಮಂಡಲ ದೀಕ್ಷೆ’ ಎಂದಿದ್ದೇವೆ.

ಜೀಸಸ್… ‘ಐ ಫಾಸ್ಟೆಡ್ ಫಾರ್ ಫಾರ್ಟೀ ಡೇಸ್‘ ಎಂದರು. ಅಂದರೆ, ಜೀಸಸ್ ನಲವತ್ತು ದಿನಗಳು ಎಡಬಿಡದೆ ಧ್ಯಾನ ಮಾಡಿದರೆಂದು ಅರ್ಥ, ಜೀಸಸ್ ಕ್ರೈಸ್ಟ್‌ರ ಹಾಗೆ ನಾವು ಕೂಡಾ ದೈವ ಪುತ್ರರಾಗಬೇಕಾದರೆ, ನಾವು ಕೂಡಾ ನಿರಂತರವಾಗಿ ಧ್ಯಾನ ಮಾಡಬೇಕಾದ್ದೆ ನಲವತ್ತು ದಿನಗಳು ಈ ಮಂಡಲ ದೀಕ್ಷೆಯಲ್ಲಿ ಆನಾಪಾನಸತಿ ಧ್ಯಾನಾಭ್ಯಾಸ ಮಾಡಿದರೆ, ಪ್ರತಿಯೊಬ್ಬ ಮನುಷ್ಯ ಸಹ ತಪ್ಪದೇ ಒಬ್ಬ ಮಾಸ್ಟರ್ ಆಗುತ್ತಾನೆ.

“ಜೀವನೇ ದೇವನು”

ಈ ದೇಹವೇ ದೇವಾಲಯ ಈ ಜೀವನೇ ದೇವನು ಆದರೆ, ಇದೆಲ್ಲಾ ನಮಗೆ ‘ಅನುಭವ’ದಲ್ಲಿ ಬರಬೇಕು. ಪುಸ್ತಕಗಳ ಮೂಲಕ, ಗುರುಗಳ ವಾಣಿಯ ಮೂಲಕ ಮತ್ತು ಪಂಡಿತರ ಪ್ರವಚನಗಳನ್ನು ಆಲಿಸುವುದರಿಂದ ನಾವು ಆಧ್ಯಾತ್ಮಿಕ ಸತ್ಯಗಳನ್ನು ತಿಳಿದುಕೊಳ್ಳಬಹುದು. ಆದರೆ, ಸ್ವಾನುಭವಪೂರ್ವಕವಾಗಿ ಅದು ಇಲ್ಲದಿದ್ದರೆ, ಅದು ‘ಜ್ಞಾನ’ ಆಗಲಾರದು.

‘ಆತ್ಮವೇ ಪರಬ್ರಹ್ಮ’ – ಮೊದಲನೆಯ ಸತ್ಯ
‘ಜೀವನೇ ದೇವನು’- ದ್ವಿತೀಯ ಸತ್ಯ
‘ದೇಹವೇ ದೇವಾಲಯ’ – ತೃತೀಯ ಸತ್ಯ

ಈ ಮೂರು ಆಧ್ಯಾತ್ಮಿಕ ಸತ್ಯಗಳು… ಈ ಮೂರು ಸೂತ್ರಗಳೇ ಜ್ಞಾನ.

‘ನಾನೇ ಎಲ್ಲಾ‘ ಎಂಬುವುದು ಪ್ರಪ್ರಥಮ ಸತ್ಯ. ಇಲ್ಲಿರುವವನೇ ಆ ದಿವ್ಯ ಮಾನವನು ಎಂಬುವುದು ಎರಡನೆಯ ಸತ್ಯ. ‘ಈ ದೇಹವೇ ದೇವಾಲಯ’, ‘ಈ ಶರೀರವೇ ದೇವಾಲಯ’, ‘ಈ ಸೆಲ್ ಸ್ಟ್ರಕ್‌ಚರೇ ದೇವಾಲಯ’, ‘ಈ ಕಣ ವಿಭಾಗವೇ ದೇವಾಲಯ’. ಅದರಲ್ಲಿ ‘ರಾರಾಜಿಸುತ್ತಿರುವವನೇ ದೇವನು’ ಎಂಬುವುದೇ ಮೂರನೆಯ ಸತ್ಯ.

“ಸಾಧನೆ… ಸಾಧನೆ… ಸಾಧನೆ”

ಈ ‘ಜ್ಞಾನ’ ಬರಬೇಕಾದರೆ ಏನು ಮಾಡಬೇಕು? ‘ಸಾಧನಾ ಮಾರ್ಗ’ದಲ್ಲಿ ಪ್ರವೇಶಿಸಬೇಕು ಈ ಸಾಧನಾ ಮಾರ್ಗದಲ್ಲಿರುವ ನಾಲ್ಕು ಸತ್ಯಗಳೇನೆಂದರೆ…

ಪ್ರಪ್ರಥಮವಾಗಿ – ‘ಶ್ವಾಸವೇ ಗುರುವು’
ಎರಡನೆಯದು – ‘ಸಮಯವೇ ಸಾಧನೆ’
ಮೂರನೆಯದು – ‘ಸಹನವೇ ಪ್ರಗತಿ’
ನಾಲ್ಕನೆಯದು – ‘ಅನುಭವವೇ ಜ್ಞಾನ’

‘ಸಾಧನೆ’ ಎಂಬುವುದು ‘ಗುರುಗಳಿಂದಲೇ’ ಪ್ರಾರಂಭವಾಗುತ್ತದೆ ಎಲ್ಲಿ ಸದ್ಗುರುವಿಲ್ಲವೋ… ಎಲ್ಲಿ ಹೇಳುವವರು ಇಲ್ಲವೋ… ಏನು ಮಾಡಬೇಕೊ, ಹೀಗೆ ಮಾಡಬೇಕೊ, ಯಾವಾಗ ಮಾಡಬೇಕೊ, ಎಲ್ಲಿ ಮಾಡಬೇಕೊ, ಯಾವುದು ಹೇಗೆ ಮಾಡಬಾರದೋ, ಯಾವುದು ಯಾವಾಗ ಮಾಡಬಾರದೋ, ಯಾವದು ಎಲ್ಲಿ ಮಾಡಬಾರದೋ… ಮತ್ತೆ ಇವೆಲ್ಲಾ ಹೇಳುವವನೇ ಗುರುವು.

“ಮನಸ್ಸೇ ಶಿಷ್ಯನು – ಶ್ವಾಸವೇ ಗುರುವು”

‘ನಮಗೆ ನಾವೇ ಗುರು ನಮ್ಮ ಶ್ವಾಸವೇ ನಮ್ಮ ಗುರು ‘ನಮ್ಮ’ ಅಂದರೆ ‘ನಮ್ಮ ಮನಸ್ಸು’ ಮನಸ್ಸೆಂಬುವುದೇ ಶಿಷ್ಯನು ಶ್ವಾಸ ಎಂಬುವುದೇ ಗುರು ಶಿಷ್ಯನು ಗುರುವಿನ ಹತ್ತಿರ ಕುಳಿತುಕೊಳ್ಳಬೇಕು, ಅಂದರೆ, ಮನಸ್ಸು ಎಂಬುವುದು ಶ್ವಾಸದ ಹತ್ತಿರ ಕುಳಿತುಕೊಳ್ಳಬೇಕು ಮನಸ್ಸು ಎಂಬುವ ಶಿಷ್ಯನು ಶ್ವಾಸ ಎನ್ನುವ ಗುರುವಿನ ಹತ್ತಿರ ಪಟ್ಟಾಗಿ ಕುಳಿತುಕೊಳ್ಳಬೇಕು. ಚೆನ್ನಾಗಿ ಹಠಯೋಗ ಸಾಧನೆ ಮಾಡುವವರಾದರೆ ಪದ್ಮಾಸನ ಹಾಕಿಕೊಂಡು ಕುಳಿತುಕೊಳ್ಳುತ್ತಾರೆ. ಯಾವುದೇ ಇತರ ಯೋಗಭ್ಯಾಸವನ್ನು ತಿಳಿಯದವರು ಚೆನ್ನಾಗಿ ಸುಖಾಸನವನ್ನು ಹಾಕಿಕೊಂಡು ಕುಳಿತುಕೊಳ್ಳಬೇಕು. ಸುಖಾಸನವನ್ನು ಹಾಕಿಕೊಂಡು ಯಾರ ಹತ್ತಿರ ಕುಳಿತುಕೊಳ್ಳುತ್ತೇವೆ? ‘ಗುರುವಿನ’ ಹತ್ತಿರ ಯಾರು ಗುರು? ಶ್ವಾಸವೇ ಗುರು ಆದ್ದರಿಂದ, ಇಲ್ಲಿ ಇನ್ನೊಬ್ಬ ಮನುಷ್ಯನ ಅವಶ್ಯಕತೆ ಇಲ’.

“ಗುರುವು ಇಲ್ಲದ ವಿದ್ಯೆ ಕುರುಡು ವಿದ್ಯೆ”

ಸಂಗೀತ ಕಲಿತುಕೊಳ್ಳಬೇಕಾದರೆ ಗುರುಗಳಿರಬೇಕು ಸಂಸ್ಕೃತ ಕಲಿತುಕೊಳ್ಳಬೇಕಾದರೆ ಸಂಸ್ಕೃತ ಗುರುಗಳು ಬೇಕು. ಹಾಗೆಯೇ, ಆಧ್ಯಾತ್ಮಿಕದಲ್ಲಿ ಸಹ. ‘ನಾನೇ ಎಲ್ಲಾ’ ಎಂದು ತಿಳಿದುಕೊಳ್ಳಬೇಕಾದರೆ ಏನು ಮಾಡಬೇಕು? ‘ಈ ದೇಹವೇ ದೇವಾಲಯ’ ಎನ್ನುತ್ತಿದ್ದಾರೆ. ಅದು ನಮ್ಮ ಸ್ವಂತ ಅನುಭವಕ್ಕೆ ಬರಬೇಕಾದರೆ ಗುರುಗಳ ಹತ್ತಿರಕ್ಕೆ ಹೋಗಬೇಕು. ಗುರುಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಬೇಕು. ಗುರುಗಳಿಗೆ ಸೇವೆ ಮಾಡಬೇಕು. ಆಗ ಆ ಗುರುವು ಬೋಧಿಸುತ್ತಾನೆ… ಜ್ಞಾನವನ್ನು ನೀಡುತ್ತಾನೆ… ಎಲ್ಲಾ ಬೋಧಿಸುತ್ತಾನೆ.

ಆದರೆ, ಈ ಆಧ್ಯಾತ್ಮಿಕ ಸಾಧನಾ ಮಾರ್ಗದಲ್ಲಿ ಮಾತ್ರ ‘ಯಾರು ಗುರುವು?’… ‘ಗುರುವೆಂದರೇ ಏನು?’… ‘ಶ್ವಾಸವೇ ಗುರುವು’. ನಿಜಕ್ಕೂ ಒಬ್ಬ ಮುಮುಕ್ಷುವು ಇನ್ನೊಬ್ಬ ಗುರುಗಳ ಹತ್ತಿರಕ್ಕೆ ಹೋಗಲೇಬೇಕಾಗಿಲ್ಲ… ಆಧ್ಯಾತ್ಮಿಕ ಸಾಧನೆ ಎಂಬುವುದು ನಮ್ಮ ಒಳಗೆ ನಾವು ಮಾಡುವ ಪ್ರಯಾಣ.

“ಧ್ಯಾನ… ಆತ್ಮ ಪ್ರಯಾಣ”

ಎರಡು ಬಗೆಯ ಪ್ರಯಾಣಗಳಿವೆ. ಒಂದು ಪ್ರಾಪಂಚಿಕ ಪ್ರಯಾಣ… ಇಲ್ಲಿ ಹೊರಗಿನವರನ್ನು ಕೇಳಬೇಕು. ಎರಡನೆಯದು ಆಧ್ಯಾತ್ಮಿಕ ಪ್ರಯಾಣ… ಇಲ್ಲಿ ಒಳಗೆ ಇರುವವರನ್ನು ಕೇಳಬೇಕು.

ಒಂದು ವೇಳೆ ಹೊರಗೆ ಮಾಡುವ ಪ್ರಯಾಣವಾದರೆ ಹೊರಗಿನವರನ್ನೇ ಕೇಳಿ ಮಾರ್ಗ ತಿಳಿದುಕೊಳ್ಳಬೇಕು… ಇದು ಒಳಗೆ ಮಾಡುವ ಪ್ರಯಾಣ. ಆದ್ದರಿಂದ, ಒಳಗಿರುವವನನ್ನೇ ಕೇಳಬೇಕು. ಆದರೆ, ಒಳಗೆ ಮಾಡುವ ಪ್ರಯಾಣಕ್ಕೆ ಹೊರಗಿನವರನ್ನು ಹೇಗೆ ಕೇಳುತ್ತೇವೆ? ಹೊರಗೆ ಮಾಡುವ ಪ್ರಯಾಣಗಳಿಗೆ ಒಳಗೆ ಯಾರನ್ನು ಕೇಳುತ್ತೇವೆ?

ಆದರೆ, ಒಳಗೆ ಯಾರು ಇದ್ದಾರೆ? ‘ನಮ್ಮ ಶ್ವಾಸ’… ಅದುವರೆಗೂ ನಮಗೆ ಗೊತ್ತಿದೆ… ನಮಗೆ ಖಂಡಿತವಾಗಿ ಗೊತ್ತಿದೆ… ಶ್ವಾಸ ಎಂಬುವುದು ಹೊರಗಿನಿಂದ ಒಳಗೆ ಹೋಗುತ್ತದೆ ಎಂದು, ಒಳಗಿಂದ ಹೊರಗೆ ಬರುತ್ತದೆ ಎಂದು.

ಆದ್ದರಿಂದ, ಈ ಆಧ್ಯಾತ್ಮಿಕ ಪ್ರಯಾಣದಲ್ಲಿ ‘ಶ್ವಾಸವೇ ಗುರುವು’ ಎಂದು ಆಧ್ಯಾತ್ಮಿಕ ಶಾಸ್ತ್ರ ಬೋಧಿಸುತ್ತದೆ ಅದ್ಭುತವಾದ, ಪ್ರಾಥಮಿಕವಾದ ಈ ಧ್ಯಾನಸೂತ್ರ… ಈ ಆತ್ಮವಿಜ್ಞಾನಸೂತ್ರ… ಏನೆಂದರೆ ಶ್ವಾಸವೇ ಗುರುವು.

“ಗೌತಮ ಬುದ್ಧ”

ಗೌತಮ ಬುದ್ಧ ಅನೇಕ ಜನ ಗುರುಗಳ ಹತ್ತಿರಕ್ಕೆ ಹೋದನು. ಅಲಾರಕಲಮುನು, ಉದ್ಧಕರಾಮಭದ್ರನು, ಇನ್ನೂ ಅನೇಕ ಮಂದಿ… ಒಬ್ಬರು ‘ಮಂತ್ರವೇ ಗುರುವೆಂದು… ಮತ್ತೊಬ್ಬರು ಆಹಾರ ಸೇವಿಸದೇ ಇರು. ಅದೇ ನಿನ್ನ ಗುರುವು ಆಗುತ್ತದೆ’ ಎಂದು… ‘ಉಪನಿಷತ್ತುಗಳು ಹೇಳಿದ್ದೇ ಮನನ ಮಾಡುತ್ತಿರು’ ಎಂದು… ಉಸಿರು ಬಿಗಿದಿಟ್ಟುಕೊಂಡಿರು. ಚಕ್ರಗಳ ಮೇಲೆ ಮನಸ್ಸನ್ನು ಏಕಾಗ್ರ ಮಾಡು. ಭೃಕುಟದ ನಡುವೆ ಮಧ್ಯದಲ್ಲಿ ಮನಸ್ಸನ್ನು ಕೇಂದ್ರೀಕರಿಸು… ಹೀಗೆ ಅನೇಕ ಗುರುಗಳು ಅನೇಕ ರೀತಿಯಲ್ಲಿ ಬೋಧಿಸಿದರು. ಅವರು ಎಲ್ಲಾ ತ್ರಿಕರಣ ಶುದ್ಧಿಯಿಂದ ಮಾಡಿದರು. ಅವರು ಎಲ್ಲವನ್ನೂ ಅಭ್ಯಸಿಸಿ ತಾನು ಕಲಿತುಕೊಂಡಿದ್ದೆಲ್ಲಾ ಒಂದೊಂದಾಗಿ… ‘ಅದು ತಪ್ಪು’… ‘ಇದು ತಪ್ಪು’… ಎಂದು ಅರ್ಥಮಾಡಿಕೊಂಡು ಪರಿಷ್ಕರಿಸಿಕೊಳ್ಳಲು ಐದುವರೆ ವರ್ಷ ಹಿಡಿಸಿತು. ಕೊನೆಗೆ ಸಹಜವಾಗಿ, ಸರಳವಾಗಿ ಸುಲಭವಾಗಿ ಇರುವ ತನ್ನ ಶ್ವಾಸದ ಮೇಲೆ… ಯಾವ ಕುಂಭಕವೂ ಇಲ್ಲದ… ಕೇವಲ ಪೂರಕರೇಚಕಾತ್ಮಕವಾದ… ತನ್ನ ಶ್ವಾಸ ಧಾರೆಯ ಮೇಲೆ ತನ್ನ ಧ್ಯಾಸ (ಗಮನ) ಧಾರೆಯನ್ನು ಸಂಲಗ್ನ ಮಾಡಿದನು… ‘ಆನಾಪಾನಸತಿ’ ಸಾಧನೆ ಪ್ರಾರಂಭಿಸಿದನು..

ತಕ್ಷಣ ಮೊದಲನೆಯ ಜಾವದಲ್ಲಿ ‘ಮೂರನೆಯ ಕಣ್ಣು’ ತೆರೆದುಕೊಂಡಿತು. ಎರಡನೆಯ ಜಾವದಲ್ಲಿ ಆ ಮೂರನೆಯ ಕಣ್ಣಿನಿಂದ ತನ್ನ ‘ಜನ್ಮ ಪರಂಪರೆ’, ತನ್ನ ‘ಕರ್ಮ ಪರಂಪರೆ’ ತಿಳಿಯಿತು.

ಮೂರನೆಯ ಜಾವದಲ್ಲಿ ‘ಈ ಪ್ರಪಂಚದಲ್ಲಿರುವ ದುಃಖವು ಆಸೆಯಿಂದ (ತೃಷ್ಣೆ) ಉಂಟಾಗುತ್ತದೆ ಎಂದೂ, ಆಸೆಯು ಅವಿದ್ಯೆಯಿಂದ ರೂಪುಗೊಳ್ಳುತ್ತದೆ’ ಎಂದು… ‘ಅವಿದ್ಯೆ’ ಚಿತ್ತವೃತ್ತಿ ನಿರೋಧದಿಂದ ಅಂತ್ಯವಾಗುತ್ತದೆ ಎಂದು… ತಿಳಿದುಕೊಂಡನು. ಧ್ಯಾನ ಜ್ಞಾನ ಸಾಧನೆಗಾಗಿ ಅಷ್ಟಾಂಗ ಮಾರ್ಗವನ್ನು ಕಂಡುಹಿಡಿದನು. ದುಃಖ ನಿವಾರಣೆಗೆ ಉಪಾಯ ತಿಳಿದುಕೊಂಡನು.

ತಿಳಿದುಕೊಂಡು, ನಂತರ ತನ್ನ ಜೀವನ ಪರ್ಯಂತ ಎಲ್ಲರಿಗೂ ‘ಆನಾಪಾನಸತಿ’ ಧ್ಯಾನ ಬೋಧಿಸಿದನು; ‘ನಾನು ಈ ವಿಧವಾಗಿ ಸರಳವಾದ, ಸುಲಭವಾದ, ಸ್ವಾಭಾವಿಕವಾದ… ಶ್ವಾಸದ ಮೇಲೆ ಗಮನ ಇಟ್ಟಿದ್ದೇನೆ; ಇನ್ನೇನೂ ಮಾಡಬೇಕಾಗಿಲ್ಲ’.

‘ಮಂತ್ರ’ ಹೇಳಬೇಕಾಗಿಲ್ಲ… ‘ರಾಮ’ ‘ರಾಮ’ ಎಂದು ಹೇಳಬಾರದು… ರಾಮನ ವಿಗ್ರಹದ ಮೇಲೆ ಗಮನ ಬೇಡ… ಯಾವುದೇ ಗುರುಗಳ ಚಿತ್ರದ ಮೇಲೆ ಗಮನ ಬೇಡ… ಕಣ್ಣುಗಳನ್ನು ಮಿಟಿಕಿಸಿ… ಅಥವಾ ಉಸಿರು ಬಿಗಿಹಿಡಿದು… ಕುಂಭಕ ಮುಂತಾದ್ದು ಮಾಡಬಾರದು…. ಮಾಡಬೇಕಾಗಿದ್ದು ಒಂದೇ. ಅದೇ… ‘ಶ್ವಾಸ ಮೇಲೆ ಗಮನ’… ಏಕೆಂದರೆ ಶ್ವಾಸ ಎಂಬುವುದೇ ಗುರುವು ತಾನು ಯಾರಿಗೂ ಗುರುವಲ್ಲವೆಂದು ಬುದ್ಧನೇ ಎಲ್ಲರಿಗೂ ಹೇಳಿದ.

‘ಅಪ್ಪೋದೀಪೋಭವ’ – ‘ಅವರವರ ಬಾಳಿನ ಜ್ಯೋತಿ ಅವರೇ ಆಗಬೇಕು’ ಅಂದರೆ ಏನು? ‘ನಾನು ನಿನ್ನ ಬಾಳಿನ ಜ್ಯೋತಿ ಅಲ್ಲ’ ಎಂದನು ಗೌತಮ ಬುದ್ಧನು ‘ನಿನ್ನ ಶ್ವಾಸವೇ ನಿನ್ನ ದೀಪ… ನಿನ್ನ ಶ್ವಾಸವೇ ನಿನ್ನ ಗುರು’… ಎಂದು ಬುದ್ಧನು ಅಂತಿಮ ಶ್ವಾಸದಿಂದ ಇದ್ದಾಗ ಆನಂದನಿಗೆ ಹೇಳಿದನು.

“ಕಾಯದಲ್ಲಿರುವ ಉಸಿರಿನಲ್ಲಿ ಗಣಿ ಇದೆ”

‘ಗುರುವೇ ವಿದ್ಯೆ ನೀಡುವುದು. ಗುರುವು ಇಲ್ಲದೇ ಪ್ರಪಂಚದಲ್ಲೆಲ್ಲಾ ಕುರುಡು ವಿದ್ಯೆ ನಡೆಯುತ್ತಿದೆ ನಮಗೆ ‘ಶ್ವಾಸವೇ ಗುರು’ ನಮ್ಮ ನಾಸಿಕದಲ್ಲೇ ಗುರುಗಳಿದ್ದಾರೆ ಅನ್ನಮಾಚಾರ್ಯರು ಏನೆಂದಿದ್ದಾರೆ ಎಂದರೆ ‘ಉಸಿರಿನಲ್ಲಿ ದೇವರಿದ್ದಾರೆ.ಯೋಗೀಂದ್ರರಿಗೆ ಕಾಯದಲ್ಲಿರುವ ಉಸಿರಿನಲ್ಲಿ ಗಣಿ ಇದೆ’ಎಂದರು. ಈ ಯೋಗ ರಹಸ್ಯ ವಾಲ್ಮೀಕಿಗೆ ಸಹ ಗೊತ್ತಿದೆ. ಅದಕ್ಕೆ ‘ವಾಯುಪುತ್ರನಾಗು ತಂದೇ ಪವನಪುತ್ರನಾಗು ತಂದೇ ಮಾರುತೀ ಪುತ್ರನಾಗು ತಂದೇ‘ ಎಂದನು. ಇದನ್ನೇ ಗೌತಮ ಬುದ್ಧನು ‘ಆನಾಪಾನಸತಿ’ ಎಂದನು’.