“ಶ್ರದ್ಧಾವಾನ್ ಭವ”

 

ಈ ವಿಶ್ವದಲ್ಲಿ ಜೀವಿಸುತ್ತಿರುವ ನಾವು ಪ್ರತಿಕ್ಷಣ ಅನೇಕರಿಂದ ಅನೇಕಾನೇಕ ಪಾಠಗಳನ್ನು ಕಲಿತುಕೊಳ್ಳುತ್ತೇವೆ.

ಒಂದು ಮರದಿಂದ ಕಲಿತುಕೊಳ್ಳುತ್ತೇವೆ .. ಒಂದು ಪ್ರಾಣಿಯಿಂದ ಕಲಿತುಕೊಳ್ಳುತ್ತೇವೆ .. ಒಂದು ಮೀನಿನಿಂದ ಕಲಿತುಕೊಳ್ಳುತ್ತೇವೆ .. ಒಂದು ಇರುವೆಯಿಂದ ಕಲಿತುಕೊಳ್ಳುತ್ತೇವೆ .. ಒಂದು ಭ್ರಮರದಿಂದ ಕಲಿತುಕೊಳ್ಳುತ್ತೇವೆ! ಹೀಗೆ ಎಷ್ಟೋ ಕಲಿಯಬೇಕು .. ಎಷ್ಟೆಷ್ಟೋ ಕಲಿತುಕೊಳ್ಳಬೇಕು!! ಕಲಿಯಬೇಕು ಎನ್ನುವ ತಪನೆ ಇದ್ದರೆ ಎಷ್ಟಾದರೂ ಕಲಿಯಬಹುದು!

ಹೇಗೆ ನಡೆಯಬೇಕೊ ಕಲಿಯಬೇಕು! ಹೇಗೆ ಕುಳಿತುಕೊಳ್ಳಬೇಕೊ ಕಲಿಯಬೇಕು! ಹೇಗೆ ಮಾತನಾಡಬೇಕೊ ಕಲಿಯಬೇಕು! ಹೇಗೆ ಅಡುಗೆ ಮಾಡಬೇಕೊ ಕಲಿಯಬೇಕು! ಹೇಗೆ ತಿನ್ನಬೇಕೊ ಕಲಿಯಬೇಕು! ಎಷ್ಟು ವಿಷಯಗಳಿವೆಯೋ! ಹೀಗೆ ತನಗಾಗಿ ತಾನು ಕಷ್ಟಪಟ್ಟು ಕಲಿತುಕೊಳ್ಳುತ್ತಾ .. ಮತ್ತು ಸುತ್ತಾ-ಮುತ್ತಾ ಇರುವವರಿಗೆ .. ಅಂತಹ ತಪನೆ ಇರುವವರಿಗೆ .. ಅವರಿಗೆ ಸಹ ಕಷ್ಟಪಟ್ಟು ಎಲ್ಲಾ ವಿಷಯಗಳನ್ನು ಹೇಳಿ ಕೊಡುವವರನ್ನೇ “ಗುರುಗಳು” ಎನ್ನುತ್ತೇವೆ!

“ಪ್ರತ್ಯಕ್ಷ ಗುರುಗಳು .. ಪರೋಕ್ಷ ಗುರುಗಳು”

ಎರಡು ಬಗೆಯ ಗುರುಗಳಿದ್ದಾರೆ: ಪ್ರತ್ಯಕ್ಷ ಗುರುಗಳು .. “ಪರೋಕ್ಷ ಗುರುಗಳು”.

“ಪ್ರತ್ಯಕ್ಷ ಗುರುಗಳು” ಕೆಲವರೇ ಇರುತ್ತಾರೆ. ಆದರೆ ಪರೋಕ್ಷ ಗುರುಗಳು ಅನೇಕಾನೇಕ ಜನ ಇರುತ್ತಾರೆ. ಪ್ರತ್ಯಕ್ಷ ಗುರುಗಳು ಹೊಡೆದು, ಬೈದು, ಸಮಾಧಾನ ಮಾಡಿ, ತಿನ್ನಿಸಿ ಎಲ್ಲಾ ಹೇಳಿಕೊಡುತ್ತಾರೆ. ಹೊಡೆದರೆಂದು, ಬೈದರೆಂದು ಮುನಿಸಿಕೊಂಡು ಹೊರಟುಹೋದರೆ ಏನೂ ಕಲಿಯಲಾಗುವುದಿಲ್ಲ! ಎಲ್ಲಾ ಸಹಿಸಿಕೊಂಡಾಗಲೇ ಎಲ್ಲಾ ಕಲಿಯಬಹುದು!

ಜರ್ಮನ್ ಭಾಷೆಯ ಗುರುಗಳಿಂದ .. ಸ್ವಲ್ಪ ಜರ್ಮನ್ ಭಾಷೆಯನ್ನು ನಾನು ಕಲಿತುಕೊಂಡಿದ್ದೇನೆ; ಯೋಗಾ ಟೀಚರ್ ಹತ್ತಿರ ಸ್ವಲ್ಪ ಯೋಗಾ ಕಲಿತುಕೊಂಡಿದ್ದೇನೆ. ಮತ್ತೆ ಸಂಗೀತ ಗುರುಗಳಿಂದ ವಿಶೇಷವಾಗಿ ಸಂಗೀತವನ್ನು ಕಲಿತುಕೊಂಡಿದ್ದೇನೆ.

ಮಹಾತ್ಮಾಗಾಂಧೀ ಅವರ ಮೂಲಕ ’ಸತ್ಯ’ವನ್ನು ಕುರಿತು ತಿಳಿದುಕೊಂಡಿದ್ದೇನೆ. ವಿಲಿಯಮ್ ಷೇಕ್‌ಸ್ಪಿಯರ್ ಅವರ ಮೂಲಕ ’ಇಂಗ್ಲೀಷ್’ ಭಾಷೆ ಕಲಿತಿದ್ದೇನೆ; ದೊಡ್ಡ ದೊಡ್ಡ ಕ್ರಿಕೆಟ್ ಆಟಗಾರರನ್ನು ನೋಡಿ ಕ್ರಿಕೆಟ್ ಸ್ವಲ್ಪ ಕಲಿತಿದ್ದೇನೆ. ಸಾವಿರಾರು ಪುಸ್ತಕಗಳನ್ನು ಓದಿ ಸಾವಿರಾರು “ಪರೋಕ್ಷ ಗುರುಗಳ” ಮೂಲಕ ಅನೇಕಾನೇಕ ವಿಷಯಗಳನ್ನು ಕಲಿತುಕೊಂಡಿದ್ದೇನೆ. ಈ ವಿಧವಾಗಿ ಅನೇಕಾನೇಕ ಪ್ರತ್ಯಕ್ಷ ಗುರುಗಳ ಮತ್ತೆ ಪರೋಕ್ಷ ಗುರುಗಳ ಹತ್ತಿರ ಕಲಿತುಕೊಂಡ ಪೂರ್ಣಸಾರವೇ “ಈ ನಾನು!”

ನಾವು ಸಹ ಅನೇಕರಿಗೆ ಗುರುಗಳಾಗಿದ್ದೇವೆ .. ಮತ್ತೆ ನಾವು ಸಹ ಅನೇಕ ವಿಷಯಗಳನ್ನು ಅನೇಕರಿಗೆ ಹೇಳಿ ಕೊಟ್ಟಿದ್ದೇವೆ! ನಾವು ಸಹ ಕೆಲವರಿಗೆ “ಪ್ರತ್ಯಕ್ಷ ಗುರುಗಳು” .. ಮತ್ತೆ ನೂರಾರು, ಸಾವಿರಾರು ಜನರಿಗೆ ಪರೋಕ್ಷ ಗುರುಗಳು!

“ಗುರಿಯೇ ಗುರುವು”

ಒಂದು ದಿನ ಒಬ್ಬ ಜಿಜ್ಞಾಸು ರಮಣ ಮಹರ್ಷಿಯವರ ಹತ್ತಿರ ಹೋಗಿ “ಗುರುಗಳೆಂದರೆ ಯಾರು ಸ್ವಾಮಿ?” ಎಂದು ಕೇಳಿದನು.

ಅವರು ಪ್ರಶ್ನೆಯನ್ನು ಸರಿಮಾಡುತ್ತಾ ..

“ಗುರುವು ಅಂದರೆ ’ಯಾರು’ ಎಂದಲ್ಲದೇ, ಗುರುವು ಎಂದರೆ ’ಏನು’ ಎಂದು ಕೇಳಬೇಕು ಎಂದರು ರಮಣ ಮಹರ್ಷಿ.

ಅವರು ಪುನಃ “ಗುರುವು ಅಂದರೆ ಏನು?” ಎಂದು ಕೇಳಿದನು.

“ಗುರಿಯೇ ಗುರುವು” ಎಂದರು ರಮಣ ಮಹರ್ಷಿ!

“ಗುರಿ” ಎನ್ನುವ ತತ್ವವೇ “ಗುರುವು” ..

ನಮ್ಮ ಗುರಿಯೇ ನಮ್ಮ ದೈವ! ಅದಕ್ಕೇ ಗುರುರ್ದೇವೋ .. ಮಹೇಶ್ವರಃ ಎಂದರು.

“ಈಶ್ವರ” ಅಂದರೆ “ಪಾಲನೆ” .. “ಮಹಾ” .. ಅಂದರೆ .. “ವಿಶೇಷವಾಗಿ” .. ನಮ್ಮ ’ಗುರಿ’ಯ ಮೂಲಕ ನಮ್ಮ ಜೀವನ ವಿಶೇಷವಾಗಿ ಪಾಲಿಸಲ್ಪಡುತ್ತದೆ.

ನಾನು ಸಂಗೀತದಲ್ಲಿ ಸ್ವಲ್ಪ ’ಗುರಿ’ ಇಟ್ಟಿದ್ದೇನೆ. ಆದ್ದರಿಂದ, ಸ್ವಲ್ಪ ಮಟ್ಟಿಗೆ ಸಂಗೀತಜ್ಞನಾಗಿದ್ದೇನೆ. ನೀವು ನನ್ನ ಜ್ಞಾನದ ಮೇಲೆ ಸ್ವಲ್ಪ ’ಗುರಿ’ಇಟ್ಟಿದ್ದೀರ. ಆದ್ದರಿಂದ, ನೀವು ಸ್ವಲ್ಪದಲ್ಲಿ ಸ್ವಲ್ಪ ಜ್ಞಾನಿಗಳಾಗಿದ್ದೀರ. ನಿಮ್ಮ ಶ್ವಾಸದ ಮೇಲೆ ನೀವು ’ಗುರಿ’ ಇಟ್ಟಿರುವಿರಿ. ಆದ್ದರಿಂದ, ನೀವು ಧ್ಯಾನಿಗಳಾಗಿರುವಿರಿ.

ಆದ್ದರಿಂದ, ನಮ್ಮ ಗುರಿಯೇ ನಮಗೆ ಗುರುವು!

“ಗುರಿ ಅಂದರೆ ಶ್ರದ್ಧೆ”

“ಗುರಿ” ಎನ್ನುವ ಕನ್ನಡ ಪದಕ್ಕೆ ಸರಿಸಮಾನವಾದ ಸಂಸ್ಕೃತ ಪದ “ಶ್ರದ್ಧೆ”.

ಭಗವದ್ಗೀತೆಯಲ್ಲಿ ವೇದವ್ಯಾಸರು .. “ಶ್ರದ್ಧವಾನ್ ಲಭತೇ ಜ್ಞಾನಂ” ಎಂದರು .. “ಶ್ರದ್ಧೆ ಇದ್ದಾಗಲೇ ಜ್ಞಾನ ಲಭಿಸುತ್ತದೆ” ಎಂದು ಅರ್ಥ!

ಗೌತಮಬುದ್ಧರು ಮರಣಿಸುತ್ತಿದ್ದಾಗ ಅವರ ಪ್ರಿಯ ಶಿಷ್ಯರಾದ ಆನಂದನು “ಸ್ವಾಮೀ! ನೀವು ಹೋದರೆ ನಮ್ಮನ್ನು ನೋಡಿಕೊಳ್ಳುವವರು ಯಾರು?”ಎಂದು ಬಿಕ್ಕಿಬಿಕ್ಕಿ ಅತ್ತನು. ಆಗ ಬುದ್ಧ ಭಗವಾನರು “ನಿನ್ನನ್ನು ನೀನೇ ಪರಿಪಾಲಿಸಿಕೋ”, “ಅಪ್ಪೋ ದೀಪೋ ಭವ” ಎಂದರು.

ಶ್ರೀಕೃಷ್ಣನು “ಕೌರವರಿಗೆ ತುಂಬಾ ಹೇಳಿಕೊಡೋಣ” ಎಂದುಕೊಂಡನು. ಆದರೆ, ಕೌರವರು ಕಲಿತುಕೊಂಡರೇ?? ಇಲ್ಲ. ಏಕೆಂದರೆ, ಅವರಿಗೆ ಶ್ರದ್ಧೆ ಇಲ್ಲ! ಪಾಂಡವರಿಗೆ ಶ್ರದ್ಧೆ ಇದೆ. ಆದ್ದರಿಂದ, ಅವರು .. ಪಾಂಡವರಿಗೆ ಗುರುಗಳಾದರು.

ನಾವು ಎಲ್ಲವನ್ನೂ ಶ್ರದ್ಧೆಯ ಮೂಲಕವೇ ಸಾಧಿಸುತ್ತೇವೆ .. ಪ್ರತಿದಿನ ಶ್ರದ್ಧೆಯನ್ನು ಸಾಣೆಹಿಡಿಯಬೇಕು.

“ಶ್ರದ್ಧೆ”ಯನ್ನು ಸಾಣೆಹಿಡಿಯಲಾಗುವ ವಿಧಾನದ ಹೆಸರೇ “ಧ್ಯಾನ”!
“ಶ್ರದ್ಧೆ”ಯನ್ನು ಸಾಣೆಹಿಡಿಯಲಾಗುವ ವಿಧಾನದ ಹೆಸರೇ “ಜ್ಞಾನ”!