“ವೈದ್ಯೋ ನಾರಾಯಣೋ ಹರಿ”

“ವೈದ್ಯೋ ನಾರಾಯಣೋ ಹರಿ” ಎಂದು ಹೇಳುತ್ತಿರುತ್ತಾರೆ ಅಂದರೆ, ವೈದ್ಯನು ಸಾಕ್ಷಾತ್ ನಾರಾಯಣವೆಂದೂ, ರಕ್ಷಕನೆಂದೂ, ದೇವರ ಸಮಾನನೆಂದೂ ಅರ್ಥ. ಒಬ್ಬ ವೈದ್ಯನು ರೋಗಿಗಳ ವಿಷಯದಲ್ಲಿ ತನ್ನ ಪರಧಿಯಲ್ಲಿ ಸರ್ವಕಾಲ ಸರ್ವಾವಸ್ಥೆಯಲ್ಲೂ ರಕ್ಷಕನ ಪಾತ್ರವನ್ನು ಪೋಷಿಸುತ್ತಾನೆ ಆದ್ದರಿಂದ, ” ದೇವರ ಸಮಾನನು” ಎಂದು ಅರ್ಥ.

ವೈದ್ಯನು ಮಾನಸಿಕ, ಶಾರೀರಕ ಖಾಯಿಲೆಗಳಿಂದ ಕಾಪಾಡುತ್ತಾನೆ. ಆದ್ದರಿಂದಲೆ, ಅವರಿಗೆ ದೇವರ ಸ್ಥಾನ ಕೊಡಲಾಗಿದೆ. ಹಾಗೆ ಮಾನಸಿಕ, ಶಾರೀರಕ ಖಾಯಿಲೆಗಳಿಂದ ಉಪಶಮನವನ್ನು ನೀಡಬೇಕಾದರೆ ಒಬ್ಬ ವೈದ್ಯ ’ ತಾಯಿ ’, ’ ತಂದೆ ’, ’ ಗುರು ’ ಪಾತ್ರಗಳಲ್ಲಿ ತಪ್ಪದೇ ಜೀವಿಸಬೇಕು. ಹಾಗೆ ಜೀವಿಸಿದಾಗಲೇ “ವೈದ್ಯೋ ನಾರಾಯಣೋ ಹರಿ” ಎಂಬುವ ಪದಪ್ರಯೋಗ ಆ ವೈದ್ಯನಿಗೆ ಅನ್ವಯಿಸುತ್ತದೆ.

ಮುಖ್ಯವಾಗಿ “ನರ್ಸಿಂಗ್‌ಹೋಮ್ ” ಗಳನ್ನು ನಿರ್ವಹಿಸುವ ವೈದ್ಯರು ಈ ವಿಷಯವನ್ನು ತ್ರಿಕರಣ ಶುದ್ಧಿಯಿಂದ ಆಚರಿಸಬೇಕು. ” ನರ್ಸಿಂಗ್‌ಹೋಮ್ ” ಎಂದರೆ, ಮನೆಯಲ್ಲಿ ಸಿಗುವಷ್ಟು ಪೋಷಣೆಯನ್ನು ಕೊಡಬೇಕು. ಈ ಪೋಷಣೆ ತಾಯಿಯ ಪ್ರೀತಿ, ತಂದೆಯ ಬಾಧ್ಯತೆ, ಗುರುವಿನ ಜ್ಞಾನದಿಂದ ಕೂಡಿಕೊಂಡಿರುವ ಅವಗಾಹನೆ. ಅವೆಲ್ಲವನ್ನು ಸೇರಿಸಿ ದೈವ ಸಮಾನವಾದ ಸಂಪೂರ್ಣ ರಕ್ಷಣಾ ಭಾರವನ್ನು ನಿರ್ವಹಿಸಬೇಕು.

ಆದ್ದರಿಂದ, ವೈದ್ಯನು ವ್ಯಾಧಿಯನ್ನು ವಾಸಿಮಾಡಲು ಮೌಲಿಕವಾಗಿ ರೋಗಿಗಳ ಮಾನಸಿಕ ಖಾಯಿಲೆಗಳಿಗೆ ಉಪಶಮನವನ್ನು ಕಲ್ಪಿಸಬೇಕು. ಈ ಪ್ರಯತ್ನದಲ್ಲೇ ವ್ಯಾಧಿಗ್ರಸ್ಥನಾಗಿರುವ ವ್ಯಕ್ತಿ ತಕ್ಕ ಸಮಯವನ್ನು ಸಂಪೂರ್ಣವಾಗಿ ಪ್ರತ್ಯೇಕವಾಗಿ ಇಡಬೇಕು.

ಒಬ್ಬ ವೈದ್ಯನು ಒಬ್ಬ ರೋಗಿಯ ವ್ಯಕ್ತಿಗತ ಸಮಸ್ಯೆಗಳನ್ನು ಸಹನೆಯಿಂದ ಕೇಳಬೇಕು.

ಒಬ್ಬ ರೋಗಿ ತನ್ನ ಸಮಸ್ಯೆಗಳನ್ನು ಒಬ್ಬ ವೈದ್ಯನಿಗೆ ಹೇಳಿಕೊಳ್ಳಬೇಕಾದರೆ ಮುಂಚಿತವಾಗಿ ವೈದ್ಯನ ವ್ಯಕ್ತಿತ್ವ ಮಹೋನ್ನತವಾಗಬೇಕು. ಹಾಗೆ ಇದ್ದಾಗಲೇ ರೋಗಿಗೆ ವೈದ್ಯನ ಮೇಲೆ ವಿಶ್ವಾಸ ರೂಪುಗೊಂಡು ಆಗ ತನ್ನ ಸಮಸ್ಯೆಗಳನ್ನು ವಿವರಿಸುತ್ತಾನೆ.

ಪ್ರಾರಂಭದಲ್ಲಿ ವೈದ್ಯನು ’ ತಾಯಿ ’ಯ ಪಾತ್ರವನ್ನು ವಹಿಸಬೇಕಾಗುತ್ತದೆ. ಅನಂತರ ಜವಾಬ್ದಾರಿಯುತವಾದ ’ ತಂದೆ ’ ಪಾತ್ರವನ್ನು ನಿರ್ವಹಿಸಬೇಕಾಗುತ್ತದೆ. ಆ ತದನಂತರ ಆಧ್ಯಾತ್ಮಿಕ ಜ್ಞಾನ ಸೇರಿಸಿ ’ ಗುರುಗಳ ’ ಪಾತ್ರವನ್ನು ವಹಿಸಬೇಕು.

’ ಗುರುಗಳ ’ ಪಾತ್ರವನ್ನು ವಹಿಸಬೇಕಾದರೆ ’ ಆತ್ಮಜ್ಞಾನ ’ ವೈದ್ಯನಿಗೆ ಇರಲೇಬೇಕು. ಆತ್ಮಜ್ಞಾನ ಇರಬೇಕಾದರೆ ನಾರಾಯಣನು ಆಗಲೇಬೇಕು. ಅಂದರೆ, ಯೋಗೀಶ್ವರನು ಆಗಲೇಬೇಕು. ಧ್ಯಾನ ವಿದ್ಯೆಯನ್ನು ಅಭ್ಯಸಿಸಿ ಆತ್ಮಾನುಭವವನ್ನು ಹೊಂದಿರುವ ವೈದ್ಯರೇ ನಿಜವಾದ ವೈದ್ಯರಾಗಿ ವ್ಯವಹರಿಸಬಲ್ಲರು.