“ವೈಕುಂಠದ್ವಾರ.. ಜಯವಿಜಯರು”

 

ಮೂರನೆಯ ನೇತ್ರವೇ ವೈಕುಂಠದ್ವಾರ. ವೈಕುಂಠದ ದ್ವಾರ ಪಾಲಕರೇ ಜಯವಿಜಯರು. ಸತ್ಯವೇ ವೈಕುಂಠಲೋಕ. ವೈಕುಂಠ ದ್ವಾರದ ಹತ್ತಿರ ಕಾವಲು ಕಾಯುವ ದ್ವಾರಪಾಲಕರೇ, ಜಯವಿಜಯರೇ – ಉಚ್ಛ್ವಾಸ ನಿಶ್ವಾಸಗಳು . “ಜಯವಿಜಯರು” ಸದಾ ಗಸ್ತು ಕಾಯುತ್ತಿರುತ್ತಾರೆ .. ಕಾವಲು ಕಾಯುತ್ತಾ .. ಅಲ್ಲಿಂದ ಇಲ್ಲಿ, ಇಲ್ಲಿಂದ ಅಲ್ಲಿ .. ತಿರುಗುತ್ತಲೇ ಇರುತ್ತಾರೆ. ನಾಸಿಕದಲ್ಲಿ ವಾಯುವು ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಸದಾ ಓಡಾಡುತ್ತಲೇ ಇರುತ್ತದೆ. ಆದ್ದರಿಂದ, ಆ ದ್ವಾರಪಾಲಕರ ಜೊತೆ ನಾವು ಸ್ನೇಹ ಬೆಳಸಿದರೆ, ಅವರನ್ನು ಸಲಿಗೆ ಮಾಡಿಕೊಂಡರೆ .. ಸಂತೋಷದಿಂದ ಅವರು ನಮ್ಮನ್ನು ಒಳಗೆ ಕಳಿಸುತ್ತಾರೆ. ಅಂದರೆ, ವೈಕುಂಠದ್ವಾರದ ಬಾಗಿಲುಗಳು ತೆರೆದುಕೊಳ್ಳುತ್ತದೆ. ನಾವು ಯಾವಾಗ ಆನಾಪಾನಸತಿ ಅಭ್ಯಾಸ ಮಾಡುತ್ತೇವೊ .. ಅಂದರೆ, ಜಯವಿಜಯರ ಜೊತೆ ಕಲೆತು ಇರುತ್ತೇವೊ .. ಆಗಲೇ ಮೂರನೆಯ ಕಣ್ಣು ತೆರೆದುಕೊಳ್ಳುವುದು – ಆಗಲೇ ವೈಕುಂಠದ್ವಾರ ತೆರೆದುಕೊಳ್ಳುವುದು .. ಆಗಲೇ ನಮಗೆ ವೈಕುಂಠ ಲೋಕ ಪ್ರವೇಶವಾಗುತ್ತದೆ .. ಆಗಲೇ ನಾವು ವೈಕುಂಠ ಲೋಕವಾಸಿಗಳಾಗುವುದು. ಯಾರು ಜಯವಿಜಯರ ಜೊತೆ ಸ್ನೇಹ ಬೆಳೆಸುತ್ತಾರೋ, ಅಂದರೆ, ಶ್ವಾಸದ ಮೇಲೆ ಗಮನವಿಡುತ್ತಾರೋ .. ಆನಾಪಾನಸತಿ ಅಭ್ಯಾಸ ಮಾಡುತ್ತಾರೋ .. ಅವರಿಗೆ ಇಹಲೋಕದಲ್ಲಿ ಜಯ, ಪರಲೋಕದಲ್ಲಿ ವಿಜಯ.