ವಿದ್ಯಾರ್ಥಿಗಳುಧ್ಯಾನ

“ಧ್ಯಾನ ಮಾಡುವುದರಿಂದ ಎಲ್ಲಾ ರಂಗಗಳಲ್ಲೂ ಪ್ರಜ್ಞೆ ಉಂಟಾಗುತ್ತದೆ”.” ವಿದ್ಯಾರ್ಥಿನಿ, ವಿದ್ಯಾರ್ಥಿಯರು ಮುಖ್ಯವಾಗಿ ಐದು ಅಂಶಗಳ ಬಗ್ಗೆ ಶ್ರದ್ಧೆ ತೋರಿಸಬೇಕು. ಅವು ಆಟಗಳು, ಹಾಡುಗಳು, ಓದು, ಕೆಲಸಗಳು, ಧ್ಯಾನ … ” ಇವೆ ಆ ಐದು ಬೆರಳುಗಳು.

“ಚೆನ್ನಾಗಿ ಓದುವುದು ವಿದ್ಯಾರ್ಥಿಗಳ ಪ್ರಥಮ ಕರ್ತವ್ಯ. ಆದರೆ, ಎಲ್ಲಾ ಬಗೆಯ ವಿದ್ಯೆಗಳನ್ನೂ ಕಲಿಯಬೇಕು; ಎಲ್ಲಾ ವಿದ್ಯೆಗಳಲ್ಲೂ-ಒಳ್ಳೆಯ ಪ್ರತಿಭೆಯನ್ನು ತೋರಿಸಬೇಕು.”

“ಉತ್ತಮ ಆಟಗಳಾದ ಕ್ರಿಕೆಟ್, ಫುಟ್‌ಬಾಲ್, ಕೇರಂ, ಚೆಸ್ ಮುಂತಾದ ಒಳಾಂಗಣ ಮತ್ತು ಹೊರಾಂಗಣ ಆಟಗಳನ್ನು ಅದರಲ್ಲಿ ಇಷ್ಟವಾದ ಆಟಗಳಲ್ಲಿ ಪ್ರಾವೀಣ್ಯತೆಯನ್ನು ಹೊಂದಿ ಆನಂದಿಸಿಬೇಕು.”

“ಒಳ್ಳೆಯ ಹಾಡುಗಳನ್ನು ಹಾಡುವುದಾಗಲೀ, ಕೇಳಿಸಿಕೊಳ್ಳುವುದಾಗಲಿ ಮಾಡಬಹುದು. ಅದರಿಂದ ತುಂಬಾ ಮಾನಸಿಕ ಪ್ರಶಾಂತತೆಯನ್ನು ಪಡೆಯಬಹುದು. ಸಂಗೀತವನ್ನು ಕಲಿತುಕೊಳ್ಳಿ.”

“ಅವರವರ ಕೆಲಸಗಳನ್ನು ಅವರೇ ಮಾಡಿಕೊಳ್ಳಬೇಕು. ನಮ್ಮ ಕೆಲಸ ನಾವೇ ಮಾಡಿಕೊಳ್ಳಬೇಕು. ಮನೆಯ ಕೆಲಸಗಳು, ಹೊರಗಿನ ಕೆಲಸಗಳು ಎಲ್ಲಾ ವಿಧವಾದ ಕೆಲಸಗಳನ್ನು ಮಾಡಬೇಕು.”

“ಮೇಲೆ ತಿಳಿಸಿದ ಕಾರ್ಯಗಳನ್ನು ಸಕ್ರಮವಾಗಿ ಮಾಡಬೇಕಾದರೆ ಧ್ಯಾನ ಕಡ್ಡಾಯವಾಗಿ ಮಾಡಬೇಕು.” ” ಧ್ಯಾನ ಸಾಧನೆ ಇಲ್ಲದಿದ್ದರೆ ನಮ್ಮ ಆಟಗಳಲ್ಲಿ, ಹಾಡುಗಳಲ್ಲಿ, ಓದಿನಲ್ಲಿ, ಕೆಲಸ ಕಾರ್ಯಗಳಲ್ಲಿ ಪೂರ್ತಿ ಪ್ರಾವೀಣ್ಯತೆಯನ್ನು ಸಂಪಾದಿಸಲಾರೆವು. ಆದ್ದರಿಂದ, ಧ್ಯಾನ ತಪ್ಪದೇ ಎಲ್ಲರೂ ಆಚರಿಸಬೇಕು. “ಮೇಲೆ ಹೇಳಿದ ಐದು ಕೆಲಸಗಳಿಗೆ ಕೈಯಲ್ಲಿರುವ ಐದು ಬೆರಳು. ಅದರಲ್ಲಿ ಧ್ಯಾನ ಎಂದರೆ ಹೆಬ್ಬೆರಳು. “ಹೆಬ್ಬೆರಳು ಇಲ್ಲದಿದ್ದರೆ ಉಳಿದ ನಾಲ್ಕು ಬೆರಳಿಂದ ಯಾವ ಕೆಲಸವನ್ನೂ ಮಾಡಲಾರೆವು.”