” ವಾಕ್-ಇನ್ ಮಾಸ್ಟರ್ಸ್ “

ತಮ್ಮ ತಮ್ಮ ಜನ್ಮಪರಂಪರೆಗಳಲ್ಲಿ ಎಲ್ಲವನ್ನೂ ಸಾಧಿಸಿದ

ಗುರುಗಳು, ಸದ್ಗುರುಗಳು .. ಎಲ್ಲರೂ ಸೇರಿ ಮೇಲಿನ ಲೋಕಗಳಲ್ಲಿ

“ಪರಮ ಗುರುಮಂಡಳಿ”ರಚಿಸಿಕೊಂಡು ನೆಲೆಗೊಂಡಿದ್ದಾರೆ ..

ಅಲ್ಲದೆ, ಸಮಸ್ತ ಲೋಕಕಲ್ಯಾಣ ಕಾರ್ಯಕ್ರಮಗಳಲ್ಲಿ ತಮ್ಮ ಪಾಲಿನ ವಿವಿಧ

ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದಾರೆ ..

ಇದಕ್ಕೆ ಅನುಗುಣವಾಗಿ .. ಅದರ ಒಂದು ಭಾಗವಾಗಿಯೇ .. ಅವರು ಭೂಲೋಕದ ಉದ್ಧಾರಕ್ಕೆ ಕೂಡಾ ಪ್ರಯತ್ನಿಸುತ್ತಾ ತಾವು ಮರಳಿ ಮಾನವಜನ್ಮ ಪಡೆಯಲು ಆಯ್ಕೆಮಾಡಿಕೊಂಡ ನೂತನ ಮಾರ್ಗವೇ

“ವಾಕ್-ಇನ್” ಮಾರ್ಗ!

ಅವರು .. “ಆ ಪರಮಗುರುಮಂಡಳಿ ಸದಸ್ಯರು” .. ಈ ಭೂಮಿಯ ಮೇಲೆ ಜನ್ಮಪಡೆದಿರುವಂತಹ

ಸಾತ್ವಿಕ ಆತ್ಮಸ್ವರೂಪಿಗಳಲ್ಲಿ ಕೆಲವರನ್ನು ಆಯ್ಕೆಮಾಡಿಕೊಂಡು ..

ಅವರನ್ನು ಅವರವರ ಯೌವ್ವನ-ಪ್ರೌಢಾವಸ್ಥೆಗಳಲ್ಲಿ ಅವರವರ ಶರೀರಗಳಿಂದ ತಪ್ಪಿಸಿ

ತಾವು ಸ್ವಯಂ ದೇಹ ಪ್ರವೇಶ ಮಾಡಿ ಅವರು ಅಂದುಕೊಂಡ ಗುರಿಗಳನ್ನು ಸಾಧಿಸುತ್ತಿದ್ದಾರೆ!

ಇವರನ್ನೇ .. “ವಾಕ್-ಇನ್ ಮಾಸ್ಟರ್ಸ್” (Walk-in Masters) ಎನ್ನುತ್ತೇವೆ!

ಈ ಭೂಮಿಯ ಮೇಲೆ ಜನ್ಮತಾಳಿದ ಪ್ರತಿಯೊಬ್ಬ ಮನುಷ್ಯ ಸಹ

ಮಾನವತ್ವದಲ್ಲಿ ಜೀವಿಸುತ್ತಲೇ .. ದೈವತ್ವವನ್ನು ಹೊಂದಬೇಕು ಎನ್ನುವುದೇ ಇವರ ಗುರಿ ..

ಸಾಮಾನ್ಯವಾಗಿ ಗರ್ಭದಲ್ಲಿರುವ ಪಿಂಡದ ಮೂಲಕ ಜನ್ಮಪಡೆದಿರುವವರು “Born-ins” ಆದರೆ

ಅಭಿವೃದ್ಧಿಯಾದ ಯೌವ್ವನ-ಪ್ರೌಢಾವಸ್ಥೆಗಳಲ್ಲಿರುವ ದೇಹಗಳಲ್ಲಿ ಇರುವವರನ್ನು ತಪ್ಪಿಸಿ

ಕರ್ಮ ತೀರವನ್ನು ದಾಟಿರುವ ಯೋಗಿಗಳು ರಂಗಪ್ರವೇಶ (ದೇಹಪ್ರವೇಶ) ಮಾಡಿದಾಗ

ಅವರನ್ನು “ವಾಕ್-ಇನ್ ಮಾಸ್ಟರ್ಸ್” ಎನ್ನುತ್ತೇವೆ!

“ವಾಕ್-ಇನ್ ಪ್ರಯೋಗ” ನಡೆದ ಜಾಗೃತ ಆತ್ಮಗಳು

“ಮೈತ್ರೇಯ ಬುದ್ಧ”ರಾಗಿ ತಮ್ಮ ತಮ್ಮ ಸಂಬಂಧಿತ (Walk-outs) ವಾಕ್-ಔಟ್ಸ್ನನ

ಕರ್ಮಬಂಧವಾದ ಕುಟುಂಬಪರವಾದ ಬಾಧ್ಯತೆಗಳನ್ನು ಚೆನ್ನಾಗಿ ನಿರ್ವಹಿಸುತ್ತಲೇ

ವಿಶ್ವಕಲ್ಯಾಣಕರ ಕಾರ್ಯಕ್ರಮಗಳಲ್ಲಿ .. ಮತ್ತು ಆತ್ಮಚೈತನ್ಯ ಆಂದೋಲನಗಳಲ್ಲಿ .. ಸೂತ್ರಧಾರರು ಆಗುತ್ತಿದ್ದಾರೆ

ಸಸ್ಯಾಹಾರ ಜೀವನ .. ಆತ್ಮೈಕ ಅರಿವು .. ಸ್ಥಿತಿಪ್ರಜ್ಞತೆ ಎನ್ನುವುದು

“ವಾಕ್-ಇನ್” ಆಗಿರುವ ಒಬ್ಬ ಮೈತ್ರೇಯ ಬುದ್ಧನ ಮೂಲಭೂತವಾದ ಲಕ್ಷಣಗಳು!

ಆತನು ಈ ಭೂಮಿಯ ಮೇಲೆ ಆತ್ಮಿಕ ಶಾಸ್ತ್ರ ಬೋಧಕನಾಗಿ, ಆನಂದಶಾಸ್ತ್ರ ಸಂಶೋಧಕನಾಗಿ ಇರುತ್ತಾ ದಿನನಿತ್ಯದ ಜೀವನದಲ್ಲಿ ಆಧ್ಯಾತ್ಮಿಕ ಮೌಲ್ಯಗಳಿಗಾಗಿ ಹೋರಾಡುವ ಯೋಧನಂತೆ ಪ್ರಕಾಶಿಸುತ್ತಿರುತ್ತಾನೆ!

“ವಾಕ್-ಇನ್” ಎನ್ನುವ ಅದ್ಭುತ ವಿಷಯವನ್ನು ಅಮೆರಿಕಾ ದೇಶಕ್ಕೆ ಸೇರಿದ

ಪ್ರಮುಖ ಆಧ್ಯಾತ್ಮಿಕ ಮೀಡಿಯಮ್ ಆದ ರೂತ್ ಮಾಂಟ್‌ಗೋಮೆರೀ (Ruth Montgomery)

ತಮ್ಮ ಸಂಶೋಧನಾತ್ಮಕ, ಅನುಭವಜ್ಞಾನದಿಂದ ರಚಿಸಿದ “Strangers among Us” ಎನ್ನುವ ಕೃತಿಯ ಮೂಲಕ

ಮೊದಲನೆಯ ಬಾರಿ ಭೂಲೋಕಕ್ಕೆ ತಿಳಿಸಿದರು!

ವಿಶ್ವ ಆಧ್ಯಾತ್ಮಿಕ ಜಗತ್ತಿಗೆ ಹೊಸದಾದ ತಿರುವನ್ನು ನೀಡಿ ಅದ್ಭುತ ಸಂಚಲನ ಉಂಟುಮಾಡಿದ

“ವಾಕ್-ಇನ್ಸ್” ಕುರಿತು ವಿಶೇಷ ಮಾಹಿತಿಗಳಿರುವ ಕೃತಿ ಅದು!

ಉದ್ಯೋಗನಿಮಿತ್ತ ಬೆಂಗಳೂರು ನಗರದಲ್ಲಿ 1985ರಲ್ಲಿ ಒಮ್ಮೆ ನಾನು ಮೂರು ದಿನಗಳು ಇದ್ದಾಗ Strangers among Us ಕೃತಿಯ ಪರಿಚಯವಾಯಿತು ..

ತಕ್ಷಣ ನನ್ನ ವಿಚಿತ್ರ ಪರಿಸ್ಥಿತಿ ನನಗೆ ಅರ್ಥವಾಗಲಾರಂಭಿಸಿತು:

ನಾನು ಕೂಡಾ ಆ ಗುರುಮಂಡಳಿಗೆ ಸೇರಿದ ಒಬ್ಬ ಸದಸ್ಯನು!

1979ನೆಯ ವರ್ಷದಲ್ಲಿ ’ಸುಭಾಷ್’ ಎನ್ನುವವರ ಅನುಮತಿಯಿಂದ, ಆತನನ್ನು ತಪ್ಪಿಸಿ ..

ಆ ಉತ್ತಮ ಮಾನವನ 32 ವರ್ಷಗಳ ದೇಹದೊಳಗೆ ..

“ವಾಕ್-ಇನ್ ಮಾಸ್ಟರ್” ಆಗಿ ಪ್ರವೇಶಿಸಿದ್ದೇನೆ ..

ತಕ್ಷಣ ನನ್ನ ವಿಶ್ವಕಲ್ಯಾಣ ಕಾರ್ಯಕ್ರಮ ಪ್ರಾರಂಭವಾಯಿತು ..

ನನ್ನ ದಿನನಿತ್ಯ ಧ್ಯಾನ-ಸ್ವಾಧ್ಯಾಯ .. ದಿನನಿತ್ಯ ಧ್ಯಾನ ಶಿಕ್ಷಣ – ಸ್ವಾಧ್ಯಾಯ ಶಿಕ್ಷಣ ಕಾರ್ಯಕ್ರಮ

ನನ್ನ ಹಾಗೆ “ವಾಕ್-ಇನ್” ಆದ ಜಾಗೃತ ಆತ್ಮಸ್ವರೂಪರು

ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟೀಸ್ ಮೂವ್‌ಮೆಂಟ್‌ನಲ್ಲಿ, ಪ್ರಸ್ತುತ, ಶೇಕಡಾ ೮೦ರಷ್ಟು ಇದ್ದಾರೆ!

ಸ್ವಜಾತಿ ಹಕ್ಕಿಗಳು ಒಂದರನ್ನು ಮತ್ತೊಂದು ಗುರುತಿಸಿಕೊಂಡು .. ಸಮೂಹಗಳಾಗಿ ಏರ್ಪಡಿಸಿಕೊಂಡಂತೆ ..

ನನ್ನ ಜೀವನದ ಗುರಿ ನನ್ನ ಸ್ವಜಾತಿ ಹಕ್ಕಿಗಳೆಲ್ಲವನ್ನೂ ಗುರ್ತಿಸಿ

ಒಂದು ಮೈತ್ರೇಯ ಬುದ್ಧರ ಮಹಾಸಮೂಹವನ್ನು ಒಂದುಗೂಡಿಸುವುದು!

ಆ “ಮೈತ್ರೇಯ ಬುದ್ಧರ ಮಹಾಸಮೂಹ”ದ ಹೆಸರೇ .. “PSSM”

PSSMನಲ್ಲಿರುವ “ವಾಕ್-ಇನ್” ಮಾಸ್ಟರ್‌ಗಳೆಲ್ಲರೂ ..

ನೂತನ ಧ್ಯಾನ ಆಧ್ಯಾತ್ಮಿಕ New Age ನವಯುಗ ಕ್ರಾಂತಿಯನ್ನು ಸೃಷ್ಟಿಸುತ್ತಾ ..

ಈ ಭೂಮಿಯನ್ನು ಸ್ವರ್ಗಸಮಾನವನ್ನಾಗಿಸಲು

ರಾತ್ರಿ-ಹಗಲು ಎನ್ನದೇ ಕಷ್ಟಪಡುತ್ತಿದ್ದಾರೆ!

ಈ “ನೂತನ ಶಾಸ್ತ್ರೀಯ ಪಿರಮಿಡ್ ಆಧ್ಯಾತ್ಮಿಕ ಮೂಸೆ”ಯ ಸೃಷ್ಟಿ ಕಾರ್ಯಕ್ರಮ

2012ನೆಯ ವರ್ಷದವರೆಗೂ ಆದಷ್ಟು ಪೂರ್ಣಗೊಂಡಿದೆ ..

ಮತ್ತು 2034ನೆಯ ವರ್ಷದೊಳಗೆ ಭೂಗೋಳದ ಇಡೀ ಮನುಕುಲವೆಲ್ಲಾ

“PSSM ಹಕ್ಕಿಗಳ ಬೃಹತ್ ಸಮುದಾಯ” ಆಗಿಬಿಡುತ್ತದೆ!

ಪಿರಮಿಡ್ ಮಾಸ್ಟರ್‌ಗಳಿಗೆ ಜೈ!

ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟೀಸ್ ಮೂವ್‌ಮೆಂಟ್‌ಗೆ ಜೈ! ಜೈ!

ರೂತ್ ಮಾಂಟ್‌ಗೋಮೆರೀಗೆ ಜೈ! ಜೈ! ಜೈ!