“ರಘುಪತಿ ರಾಘವ ರಾಜಾರಾಮ್…”

 

ಈ ದಿನ, ನಾವು ಪಿರಮಿಡ್ ಧ್ಯಾನ ಗೀತೆಗಳನ್ನು ಧ್ಯಾನ ಪ್ರಪಂಚಕ್ಕೆ ಅನುಗ್ರಹಿಸಿಕೊಳ್ಳುತ್ತಿದ್ದೇವೆ. ಇಡೀ ಭಾರತ ದೇಶಕ್ಕೆ ಪ್ರಿಯವಾದದ್ದು ಈ ರಾಷ್ಟ್ರೀಯ ಗೀತೆ ರಘುಪತಿ ರಾಘವ ರಾಜಾರಾಮ್… . ಈ ದಿನ, ಈ ಧ್ಯಾನ ಗೀತೆಯನ್ನು ಹಾಡಿಕೊಳ್ಳೊಣ. ಹಿಂದುಗಳು ಬೇರೆ, ಮುಸ್ಲಿಮ್ ಬೇರೆ ಎನ್ನುವ ಭಾವನೆ ಆ ಮಹಾತ್ಮನನ್ನು ಎಷ್ಟು ದುಃಖಕ್ಕೆ ಈಡುಮಾಡಿತೋ. ಪಾಪ ಆತ ಅತ್ತರು, ದುಃಖಿಸಿದರು. ಯಾರು ಹಿಂದೂ ? ಯಾರು ಮುಸ್ಲಿಂ ? ಎಲ್ಲಾ ಒಂದೇ. ಮಾನವರೆಲ್ಲಾ ಒಂದೇ ಜಾತಿ. ಯಾವ ಮತವೂ ಬೇರೆ ಅಲ್ಲ. ಇರುವುದೆಲ್ಲಾ ಒಂದೇ ಮತ. ಆಧ್ಯಾತ್ಮಿಕ ಮತ. ದೈವಿಕ ಮತ.

ಈಶ್ವರನು ಬೇರೆ, ಅಲ್ಲಾ ಬೇರೇನಾ ? ಎಲ್ಲಾ ಒಂದೇ ಅಲ್ಲವೇ … ಎಂದು ಪಾಪ ಗೋಳಾಡಿದರು, ಪ್ರಲಾಪಿಸಿದರು… ಆ ಮಹಾತ್ಮಾ ಗಾಂಧೀಜಿ, ರಾಷ್ಟ್ರಪಿತ. ಅಹಿಂಸೋ ಪರಮೋ ಧರ್ಮಃ. ಎಂದರು ಅವರು.

ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನನ್ನು ಕೊಲ್ಲುವುದು, ಕೊಚ್ಚಿ ಹಾಕುವುದು, ರಕ್ತ ಕುಡಿಯುವುದು. ರಾಮಚಂದ್ರಾ . . . ಏನು ಜಾತಿಯೊ ? ಮತದ ಹೆಸರಿನಲ್ಲಿ ಮಾರಣಹೋಮವಾ? ಹಿಂದುಗಳನ್ನು ನೋಡಿದರೆ ಮುಸ್ಲಿಮರು ಸಹಿಸಲಾರರು, ಮುಸ್ಲಿಮರನ್ನು ನೋಡಿದರೆ ಹಿಂದುಗಳು ಸಹಿಸಲಾರರು. ಒಬ್ಬ ಮನುಷ್ಯನನ್ನು ಸಹಿಸಲಾರದ ಇನ್ನೊಬ್ಬ ಮನುಷ್ಯ…. ಆತನು ಒಬ್ಬ ಹಿಂದುವೋ? ಆತನು ಒಬ್ಬ ಮುಸ್ಲಿಮನೋ. ರಾಮಚಂದ್ರಾ ಎಂದು ಮಹಾತ್ಮಾ ಗಾಂಧಿ ದುಃಖಿಸುತ್ತಿದ್ದರು.

ಅಹಿಂಸೆಗೆ ಅವತಾರ ಮೂರ್ತಿ ಮಹಾತ್ಮಾ ಗಾಂಧೀಜಿ. ಹಿಂಸಾ ಛೋಡೊ ಎನ್ನುವುದಕ್ಕೆ ಇನ್ನೊಂದು ಹೆಸರೇ ಮಹಾತ್ಮಾ ಗಾಂಧೀಜಿ. ಈ ಹಿಂಸೆ ಎನ್ನುವುದನ್ನು ಬಿಟ್ಟುಬಿಡುವುದು, ಮತ್ತು ಹಂಸ ಎನ್ನುವುದನ್ನು ಹಿಡಿದುಕೊಳ್ಳುವುದು ಅದು ಎರಡನೆಯ ಹೆಜ್ಜೆ. ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟೀಸ್ ಮಾಸ್ಟರ‍್ಸ್ ಈ ಹಿಂಸೆಯನ್ನು ಬಿಟ್ಟು ಹಂಸವನ್ನು ಹಿಡಿದುಕೊಳ್ಳಿ ಎಂದು ಆ ಎರಡನೆಯ ಹೆಜ್ಜೆಯನ್ನು ಸೂಚಿಸುತ್ತಿದ್ದಾರೆ.

ಮೊದಲನೆಯ ಹೆಜ್ಜೆ…. ಮೊದಲನೆಯ ಮೆಟ್ಟಲು…. ಅಂದರೆ, ಅಹಿಂಸೋ ಪರಮೋ ಧರ್ಮಃ ಎನ್ನುತ್ತಾ ಜೀವಿಸುವುದು. ಅಹಿಂಸಾಯುತವಾಗಿಯೇ ಭಾರತದೇಶ ಸ್ವಾತಂತ್ರ್ಯವನ್ನು ಸಂಪಾದಿಸಿದೆ. ಪ್ರಿಯ ಮಿತ್ರರೇ, ಮೈಡಿಯರ್ ಫ್ರೆಂಡ್ಸ್, ಮೈ ಡಿಯರ್ ಮಾಸ್ಟರ್ಸ್, ಮೈ ಡಿಯರ್ ಗಾಡ್ಸ್ ಆಫ್ ಕರ್ನಾಟಕ.

ಮಹಾತ್ಮಾ ಗಾಂಧೀಜಿ ವಿಶುದ್ಧ ಚಕ್ರಕ್ಕೆ ಪ್ರತೀಕ. ಅವರು ಯಾವರೀತಿಯಲ್ಲಿ ಪ್ರಾರ್ಥಿಸಿದರೆಂದರೆ ಇಡೀ ಜಗತ್ತಿಗೇ ಸನ್ಮತಿಯನ್ನು ನೀಡಿ ಸ್ವಾಮಿ ಎಂದು ಕೇಳಿಕೊಂಡರು. ಸನ್ಮತಿ ಎಂದರೆ ಸತ್ಯದಿಂದ ಕೂಡಿಕೊಂಡಿರುವ ಮತಿ. ಸತ್ಯ ಎಂದರೆ ಆತ್ಮ. ಎಲ್ಲಿ ನಮ್ಮ ಮತಿ ಆತ್ಮದಿಂದ ಕೂಡಿಕೊಂಡು ಇರುತ್ತದೊ ಅದು ಸನ್ಮತಿ. ಎಲ್ಲರೂ ಸರಿಸಮಾನರೇ ಎನ್ನುವುದು ಸನ್ಮತಿ. ನಾನು ಈ ಶರೀರವಲ್ಲ ಆತ್ಮಪದಾರ್ಥ ಎಂದು ತಿಳಿದುಕೊಂಡಿರುವುದೇ ಸನ್ಮತಿ. ಅವರವರ ವಾಸ್ತವಕ್ಕೆ ಅವರವರೇ ಸೃಷ್ಟಿಕರ್ತರು ಎಂದು ಪೂರ್ತಿಯಾಗಿ ತಿಳಿದುಕೊಂಡಿರುವವನದು ಸನ್ಮತಿ. ನಾವು ಅನೇಕ ಜನ್ಮಪರಂಪರೆ ಉಳ್ಳವರು. ಅನೇಕ ಕರ್ಮಪರಂಪರೆಗಳಲ್ಲಿ, ಅನೇಕ ಪಾಠಗಳನ್ನು ಕಲಿತುಕೊಳ್ಳುತ್ತಿದ್ದೇವೆ …. ಎಂದು ತಿಳಿದುಕೊಳ್ಳುವುದೇ ಸನ್ಮತಿ. ನಾವು ಅತ್ಯಂತ ಶಕ್ತಿಯುತವಾದ ಆತ್ಮಪದಾರ್ಥ …. ಎಂದು ತಿಳಿದುಕೊಳ್ಳುವುದೇ ಸನ್ಮತಿ. ಕೆಡಕು ಮಾಡಿದರೆ ನಮಗೆ ಕೆಟ್ಟಫಲವೇ ಬರುತ್ತದೆ; ಒಳ್ಳೆಯದು ಮಾಡಿದರೆ ಒಳ್ಳೆಯ ಫಲವೇ ಬರುತ್ತದೆ ಎಂದು ಕರ್ಮಸಿದ್ಧಾಂತದ ಮೌಲಿಕ ಪ್ರಭಾವವನ್ನು ನಮ್ಮ ಜೀವನದಲ್ಲಿ ತಿಳಿದುಕೊಳ್ಳುವುದೇ ಸನ್ಮತಿ.

ಯಾವ ಪ್ರಾಣಿಯನ್ನೂ ಕೊಲ್ಲದೆ ಎಲ್ಲಾ ಪ್ರಾಣಿಗಳನ್ನೂ ರಕ್ಷಿಸುವುದೇ ಸನ್ಮತಿ. ಮೈ ಡಿಯರ್ ಫ್ರೆಂಡ್ಸ್! ಮೈ ಡಿಯರ್ ಮಾಸ್ಟರ್ಸ್, ಮೈ ಡಿಯರ್ ಗಾಡ್ಸ್ ಆಫ್ ಕರ್ನಾಟಕ.

ಎಲ್ಲರಿಗೂ ಸನ್ಮತಿಯನ್ನು ಪ್ರಸಾದಿಸಿ ಭಗವಾನ್ ಎಂದು ಅವರು ಬೇಡಿಕೊಳ್ಳುತ್ತಿದ್ದಾರೆ. ಸಬ್‌ಕೋ ಸನ್ಮತಿ ದೇ ಭಗವಾನ್.

ಸನ್ಮತಿ ಯಾರು ಕೊಡುತ್ತಾರೆ ? ಅವರಿಗೆ ಅವರೇ ಸಂಪಾದಿಸಿಕೊಳ್ಳಬೇಕು …. ಧ್ಯಾನದಿಂದ …. ಶ್ವಾಸದ ಮೇಲಿನ ಗಮನದಿಂದ.

ಚಿತ್ತವೃತ್ತಿ ನಿರೋಧದಿಂದ…. ವಿಶ್ವಪ್ರಾಣಶಕ್ತಿ ಆವಾಹನೆಯಿಂದ…. ನಾಡೀಮಂಡಲ ಶುದ್ಧಿಯಿಂದ…. ದಿವ್ಯಚಕ್ಷುವು ಉತ್ತೇಜನವಾಗುವುದರಿಂದ… ಅವರವರ ಮತಿಯನ್ನು, ಅವರವರ ಸನ್ಮತಿಯನ್ನು ಅವರೇ ತಂದುಕೊಳ್ಳಬೇಕು.

ಕೊಡುವ ನಾಥನು ಯಾರೂ ಇಲ್ಲ; ಸಂಪಾದಿಸಿಕೊಳ್ಳುವ ನಾಥನು ಇದ್ದಾನೆ.

ಮಹಾತ್ಮಾ ಗಾಂಧೀಯವರಂತೆ, ಈ ಭಾರತ ದೇಶ ಪ್ರಜೆಗಳು, ಇನ್ನು ಮೇಲಾದರೂ ಆಗಲಿ, ಇನ್ನು ಮೇಲಾದರೂ ಆಗಲಿ, ಇನ್ನು ಮೇಲಾದರೂ ಆಗಲಿ.

ರಘುಪತಿ ರಾಘವ ರಾಜಾರಾಮ್! ಪತಿತ ಪಾವನ ಸೀತಾರಾಮ್! ಈಶ್ವರ ಅಲ್ಲಾ ತೇರೇ ನಾಮ್! ಸಬ್‌ಕೋ ಸನ್ಮತಿ ದೇ ಭಗವಾನ್!