“ಮಾಂಸಾಹಾರ ತಿನ್ನಬಾರದು”

 

ಮಾಂಸಾಹಾರ ಎನ್ನುವುದು ನಿಜಕ್ಕೂ ಆಹಾರವೇ ಅಲ್ಲ. ಅದು ವಿಷ ಪದಾರ್ಥ. ಶರೀರವನ್ನು ಬಡವಾಗಿಸುತ್ತದೆ. ನಾಶ ಮಾಡುತ್ತದೆ. ರೋಗಮಯ ಮಾಡುತ್ತದೆ.

ಆದ್ದರಿಂದ, ಮಾನವನಿಗೆ ಸರಿಯಾದ ಆಹಾರ ಸಸ್ಯಾಹಾರವೆ. ಪ್ರಾಣಿಗಳನ್ನು ಕೊಂದು ತಿನ್ನಲು ಮಾನವನೇನು ಕ್ರೂರ ಮೃಗವಲ್ಲ. ಮಾನವನು ಸಸ್ಯಾಹಾರಿ; ಆದ್ದರಿಂದ, ಒಳ್ಳೆಯ ಸ್ವಾದಿಷ್ಠವಾದ ಸಸ್ಯಾಹಾರವನ್ನೇ, ರುಚಿಕರವಾದ ಸಸ್ಯಾಹಾರವನ್ನೇ ಭುಜಿಸಬೇಕು.

ನಿಜಕ್ಕೂ ಪಿರಮಿಡ್ ಮಾಸ್ಟರ್‌ಗಳಿಗೇ ಅಲ್ಲ, ಪಿರಮಿಡ್ ಮಾಸ್ಟರ್‌ಗಳಲ್ಲದವರೂ ಸಹ, ಸಮಸ್ತ ಮಾನವ ಜಾತಿಗೆ ಮೌಲಿಕವಾದ ಅಂಶ -ಸಸ್ಯಾಹಾರ.

ಸಸ್ಯಾಹಾರ ಸೇವಿಸುವವರಿಗೆ ಧ್ಯಾನ ತುಂಬಾ ಬೇಗ ಕುದುರುತ್ತದೆ. ಧ್ಯಾನಮಾಡಲು ಪ್ರಾರಂಭಿಸಿದವರಿಗೆ ತಕ್ಷಣ ಸಸ್ಯಾಹಾರ ಅಭ್ಯಾಸವಾಗುತ್ತದೆ; ಮಾಂಸಾಹಾರ ತ್ಯಜಿಸಲ್ಪಡುತ್ತದೆ. ಸಾಧಾರಣ ಸೈನ್ಸ್-ಮೆಡಿಕಲ್ ಸೈನ್ಸ್ ಹೇಳಿದಹಾಗೆ ಪ್ರೊಟೀನ್ಸ್ ಮಾಂಸಾಹಾರದಲ್ಲೇ ಇರುತ್ತದೆ ಎಂದರೆ ಅದು ತುಂಬಾ ತಪ್ಪು ಕಲ್ಪನೆ. ಪ್ರೊಟೀನ್ಸ್ ಸಸ್ಯಾಹಾರದಲ್ಲೇ ಹೆಚ್ಚಾಗಿರುತ್ತವೆ. ಆದ್ದರಿಂದ, ಯಾರೂ ಸಹ ಮಾಂಸಾಹಾರವನ್ನು ತಿನ್ನಬಾರದು. ಎಲ್ಲರೂ ಸಹ ಸಸ್ಯಾಹಾರವನ್ನೇ ತಿನ್ನಬೇಕು. ಸಸ್ಯಾಹಾರದಲ್ಲೂ ಕೂಡಾ ಫ್ರಿಜ್‌ನಲ್ಲಿಟ್ಟ ಎರಡು ದಿನಗಳ ಸಾಂಬಾರು, ಮೂರು ದಿನಗಳ ಪಲ್ಯ ತಿನ್ನಬಾರದು. ಫ್ರೆಷ್ ಆಗಿ ಮಾಡಿಕೊಂಡು ತಿನ್ನಬೇಕು; ಬಿಸಿ ಬಿಸಿಯಾಗಿ ತಿನ್ನಬೇಕು. ಹಣ್ಣುಗಳು ಹೆಚ್ಚು ತಿನ್ನಬೇಕು. ನೀರು ತುಂಬಾ ಕುಡಿಯಬೇಕು. ನೀರು ಎಷ್ಟು ಹೆಚ್ಚು ಕುಡಿಯುತ್ತೇವೆಯೋ ಶರೀರಕ್ಕೆ ಅಷ್ಟು ಒಳ್ಳೆಯದು.