ಮನಸ್ಸು ಸ್ಥಿಮಿತಗೊಂಡರೆ ಸತ್ಯ ಸ್ಥಿತವಾಗುತ್ತದೆ

 

ಮನಸ್ಸನ್ನು ನಿಲ್ಲಿಸಿದರೇನೆ ಸತ್ಯ ತಿಳಿಯುತ್ತದೆ.

ಶ್ವಾಸವೇ ಗುರುವು. ಮನಸ್ಸೇ ಶಿಷ್ಯನು. ಮನಸ್ಸನ್ನು ಶ್ವಾಸದ ಮೇಲೆ ನಿಲ್ಲಿಸಿದಾಗಲೇ ಆತ್ಮ ಸಾಕ್ಷಾತ್ಕಾರವಾಗುತ್ತದೆ.

ಲಂಖಣಂ ಪರಮೌಷಧಂ ಎಂದು ಹಿರಿಯರು ಹೇಳಿದ್ದಕ್ಕೆ ಅರ್ಥ ಕೇವಲ ಉಪವಾಸ ಒಂದೇ ಅಲ್ಲ. ಮಾತಿನಲ್ಲಿ ಮೌನ, ಮನಸ್ಸಿನಲ್ಲಿ ಧ್ಯಾನ ಸಹ ಲಂಖಣದಲ್ಲಿ ಭಾಗವೆ. ಆಗಲೇ ಲಂಖಣಂ ಔಷಧ ಲಕ್ಷಣಗಳನ್ನು ಹೊಂದಿರುತ್ತದೆ.

ಪ್ರತಿಯೊಬ್ಬರೂ ಶ್ವಾಸದ ಮೇಲೆ ಗಮನ ಇಡುವುದರೊಂದಿಗೆ ಧ್ಯಾನವನ್ನು ಅಭ್ಯಾಸ ಮಾಡಬೇಕು. ಧ್ಯಾನಿಗಳ ಸಮಾಜವೇ ಎಲ್ಲಾ ಸಮಸ್ಯೆಗಳಿಗೆ ಪರಿಹಾರ.

ವಿಶ್ವಶಕ್ತಿ ಆವಾಹನೆ, ನಾಡೀಮಂಡಲ ಶುದ್ಧಿ, ಆತ್ಮ ದರ್ಶನ … ಇವೆಲ್ಲಾ ಧ್ಯಾನದಿಂದಲೇ ಲಭ್ಯವಾಗುತ್ತವೆ. ರಾಮನು, ಬುದ್ಧನು, ಏಸು ಮುಂತಾದವರನ್ನು ಸ್ಮರಿಸುವುದಕ್ಕಿಂತಾ ಅವರ ಆಚರಣೆಯನ್ನು ನಾವು ಆಚರಿಸಿದರೆ ನಿಜವಾದ ಫಲಿತ ಲಭಿಸುತ್ತದೆ.