” ಭೂಲೋಕ ಒಂದು ಮಹಾ ಸ್ವತಂತ್ರ ಕ್ಷೇತ್ರ “

 

ಲುಗು “ಭಕ್ತಿ” ಛಾನಲ್‌ನಲ್ಲಿ ಅಕ್ಟೋಬರ್ 14, ಭಾನುವಾರ ಬೆಳಿಗ್ಗೆ 11.30ರಿಂದ 12.00ವರೆಗೂ ಮತ್ತೂ ಅಕ್ಟೋಬರ್ 21, ಭಾನುವಾರ ಬೆಳಿಗ್ಗೆ 11.30ರಿಂದ 12.00ವರೆಗೂ ಪ್ರಸಾರವಾದ ಬ್ರಹ್ಮರ್ಷಿ ಪತ್ರೀಜಿರವರ ಸಂದರ್ಶನ…

ಜೆ.ಕೆ: “ನಮಸ್ಕಾರ ಸಾರ್. ಈ ನಡುವೆ ಆಂಧ್ರಪ್ರದೇಶ್‌ದಲ್ಲಿ ಯಾವ ಜಿಲ್ಲೆಗೆ ಹೋದರೂ ಸಹ ಧ್ಯಾನವು ಒಂದು ಬಿರುಗಾಳಿಯ ಹಾಗೆ ಕಾಣಿಸುತ್ತಿದೆ. ತಮಿಳುನಾಡಿನಲ್ಲಿ, ಕರ್ನಾಟಕದಲ್ಲಿ, ಮತ್ತು ಕೇರಳದಲ್ಲಿ.. ಸಂಪೂರ್ಣ ದೇಶದಲ್ಲೆಲ್ಲಾ ಕೂಡಾ ’ ಆನಾಪಾನಸತಿ ಧ್ಯಾನ ’ ಎನ್ನುವುದು ಒಂದು ಬಿರುಗಾಳಿಯ ಹಾಗೆ ಅದ್ಭುತವಾಗಿ ಹರಡುತ್ತಿರುವಂತೆ ಕಾಣಿಸುತ್ತಿದೆ. ಇದಕ್ಕೆ ಆಚಾರ್ಯ ಸ್ಥಾನದಲ್ಲಿ ಪ್ರಧಾನ ಮೂಲ ಪುರುಷರಾಗಿ ನೀವು ಇದ್ದೀರ. ನಮ್ಮ ಪ್ರೇಕ್ಷಕರಿಗಾಗಿ ಈ ದಿನ ನಿಮ್ಮನ್ನು ಕೆಲವು ಪ್ರಶ್ನೆಗಳನ್ನು ಕೇಳುತ್ತೇನೆ…”

 

ಪತ್ರೀಜಿ: “ಸ್ವಾಮಿ ತಪ್ಪದೇ ಕೇಳಿ”

 

ಜೆ.ಕೆ: “ಸಾರ್.. ಈ ’ ಆನಾಪಾನಸತಿ ’ ಎನ್ನುವುದು ಧ್ಯಾನ ಪ್ರಕ್ರಿಯೆ ಎಂದು ತಿಳಿದಿದ್ದೇವೆ. ನಿಜಕ್ಕೂ “ಆನಾಪಾನಸತಿ” ಎಂದರೆ ಏನು ?

 

ಪತ್ರೀಜಿಮೊದಲನೆಯದಾಗಿ ಹೇಳಬೇಕಾದರೆ ’ ಧ್ಯಾನ ಬಿರುಗಾಳಿ ’ ಎಂದರಲ್ಲವೆ .. ಎಲ್ಲಾ ಕಡೆ ಅದೇ ಆಗಬೇಕು. ನೀವು ಹೋದ ಕಡೆ ಎಲ್ಲಾ ಚೆನ್ನಾಗಿ ಧ್ಯಾನ ಇದೆ. ಆದರೆ, ಪ್ರಪಂಚದಲ್ಲೆಲ್ಲಾ ಈ ಧ್ಯಾನದ ಬಿರುಗಾಳಿ ಬೀಸಬೇಕು; ಅದೇ ನಮ್ಮ ಗುರಿ. ಅಂದರೆ, ಪ್ರತಿ ಮನುಷ್ಯನು ಸಹ ’ ಧ್ಯಾನಿ ’ ಆಗಬೇಕು. ಅದು ಪ್ರಾಥಮಿಕ ಆತ್ಮವಿದ್ಯೆ. ಆತ್ಮವಿದ್ಯಾಭ್ಯಾಸ ಎನ್ನುವುದು ಕಡ್ಡಾಯವಾಗಿ ಬೇಕಲ್ಲವೆ. ಪ್ರತಿಯೊಬ್ಬರೂ ವಿದ್ಯಾವಂತರಾಗಬೇಕು. ಕನಿಷ್ಠ ಪಕ್ಷ ಪ್ರೌಢಶಾಲೆವರೆಗಾದರೂ ಪ್ರಾಪಂಚಿಕ ವಿದ್ಯೆಯ ಅವಶ್ಯಕತೆ ಹೇಗೆ ಇದೆಯೊ.. ಹಾಗೆಯೇ ಪ್ರತಿ ಮನುಷ್ಯನು ಸಹ ಧ್ಯಾನಿ ಆಗಬೇಕೆನ್ನುವುದೆ ನಮ್ಮ ಗುರಿ. ಇನ್ನೂ ಅಂತಹ ಧ್ಯಾನದ ಬಿರುಗಾಳಿ ಬರಬೇಕು. ನಿಮ್ಮ ವಾಕ್ಕು ಫಲಿಸಬೇಕೆಂದು ಬಯಸುತ್ತಿದ್ದೇನೆ.

 

ಜೆ.ಕೆ’ ತಪ್ಪದೇ ಪ್ರಪಂಚಾದ್ಯಂತ ಧ್ಯಾನಮಯವಾಗುತ್ತದೆ ’ ಎಂಬ ನಂಬಿಕೆ ಪ್ರಜೆಗಳಲ್ಲಿ ಈ ನಡುವೆ ತುಂಬಾ ಬರುತ್ತಿದೆ. ಅದಕ್ಕೆ ಉದಾಹರಣೆಯಾಗಿ ಅನೇಕ ಮಂದಿ ವಿದೇಶಿ ವೈದ್ಯರು ತಮ್ಮ ತಮ್ಮ ನಿರ್ದೇಶನ ಚೀಟಿಗಳಲ್ಲಿ ಔಷಧಿಗಳ ಜೊತೆ ಧ್ಯಾನ ಸಹ ಮಾಡಿ ಎಂದು ಬರೆಯುತ್ತಿದ್ದಾರೆ.

 

ಪತ್ರೀಜಿ: “ಸಂಪೂರ್ಣವಾಗಿ ಸರಿ. ಈ ಆರೋಗ್ಯ ಎನ್ನುವುದು ಧ್ಯಾನದಿಂದ ಸಿಗುತ್ತದೆ ಎಂದು ಈ ವೈದ್ಯಕೀಯ ವಿಜ್ಞಾನವು ಈಗ ಚೆನ್ನಾಗಿ ಗ್ರಹಿಸುತ್ತಿದೆ. ವೈದ್ಯರೆಲ್ಲರೂ ಸಹ ನಮ್ಮ ಔಷಧಿಗಳ ಜೊತೆ ಧ್ಯಾನ ಕೂಡಾ ಮಾಡಬೇಕೆಂದು ಈ ರೀತಿಯಲ್ಲಿ ಹೇಳುತ್ತಿದ್ದಾರೆ. ಇದು ತುಂಬಾ ಮಹತ್ತರವಾದ ವಿಷಯ.”

 

ಜೆ.ಕೆ: “ಇದು ವಿಪ್ಲವಾತ್ಮಕವಾದ ಬದಲಾವಣಿ ! ಅಷ್ಟೇ ಅಲ್ಲದೆ ನೀವು ಸ್ಥಾಪಿಸಿದ ಈ ಪಿರಮಿಡ್ ಸಂಸ್ಥೆಯಲ್ಲಿ ಅನೇಕ ಜನ ವೈದ್ಯರು ಆಕರ್ಷಿತರಾಗಿ ಬಂದು ನಿಮಗೆ ಶಿಷ್ಯರಾಗಿ ಬದಲಾಗಿ ???”

 

ಪತ್ರೀಜಿಸತ್ಯಬೇಕೆಂದು ಯಾರು ಬಯಸದೆ ಇರುತ್ತಾರೆ? ಅವರು ವೈದ್ಯರೇ ಆಗಿರಲಿ, ಗೃಹಿಣಿಯಾಗಲಿ, ರಾಜನಾಗಿರಲಿ, ಬಡವನಾಗಿರಲಿ, ಪಂಡಿತರಾಗಲಿ, ಪಾಮರರಾಗಲಿ .. ಯಾರಿಗೆ ಸತ್ಯ ಬೇಕಾಗಿದೆಯೊ, ಅಥವಾ, ಯಾರು ಶಾಂತಿಮಯ ಜೀವನವನ್ನು ಬಯಸುತ್ತಾರೊ, ಅವರೆಲ್ಲರೂ ತಪ್ಪದೇ ಧ್ಯಾನಕ್ಕೆ ಬರಬೇಕಾದ್ದೆ .. ಬರುತ್ತಿದ್ದಾರೆ.

 

ಜೆ.ಕೆಸಾಮಾನ್ಯ ಜನರು, ವ್ಯಾಪಾರಸ್ಥರು, ಉದ್ಯೋಗಸ್ಥರು, ಈ ಒತ್ತಡದಿಂದ, ಮಾನಸಿಕ ಉದ್ವೇಗದಿಂದ ಇರುವುದರಿಂದ ನೀವು ಹೇಳಿದ ವಿಷಯಗಳಿಗೆ ಆಕರ್ಷಿತರಾಗಿ ಧ್ಯಾನ ಮಾಡಿದರೆ ಸಮಾಧಾನ ಇರುತ್ತದೆ, ಒಳ್ಳೆಯದಾಗುತ್ತದೆ ಎಂದು ಆಕರ್ಷಿತರಾಗಿ ಬಂದು ಧ್ಯಾನ ಮಾಡುತ್ತಿರುವ ಪದ್ಧತಿ ಒಂದು ! ಹಾಗಾಗಿ .. ವೈದ್ಯರು ಎಲ್ಲರೂ ಹೆಚ್ಚು ಸಂಖ್ಯೆಯಲ್ಲಿ ನೀವು ಮಾಡುತ್ತಿರುವಂತಹ ಧ್ಯಾನ ಪ್ರಕ್ರಿಯೆಗೆ ಬರುತ್ತಿರುವುದು ಆಶ್ಚರ್ಯ ಏಕೆಂದರೆ ಅವರು ಶಾಸ್ತ್ರೀಯವಾಗಿ ಆಲೋಚಿಸುತ್ತಾರೆ, ವೈಜ್ಞಾನಿಕವಾಗಿ ಆಲೋಚಿಸುತ್ತಾರೆ.

 

ಪತ್ರೀಜಿ: “ಎಲ್ಲರೂ ’ ವೈಜ್ಞಾನಿಕ ’ವಾಗಿಯೇ ಆಲೋಚಿಸುತ್ತಾರೆ. ಶಾಸ್ರ್ತೀಯ ದೃಷ್ಟಿಕೋನ ಎಂಬುವುದು ವೈದ್ಯರ ಪ್ರತ್ಯೇಕ ಸೊತ್ತು ಅಲ್ಲ? ಅದು ನಿಮ್ಮ ಸೊತ್ತು … ನನ್ನ ಸೊತ್ತು … ಎಲ್ಲರ ಸೊತ್ತು ಕೂಡಾ. ಪ್ರತಿ ಮನುಷ್ಯನು ಸಹ ಶಾಸ್ತ್ರೀಯ ದೃಷ್ಟಿಕೋನದಿಂದಲೇ ಇರುತ್ತಾರೆ. ’ ನಾನು ಒಂದು ರೂಪಾಯಿ ಇಟ್ಟರೆ ನನಗೆ ಎರಡು ರೂಪಾಯಿ ಬರಬೇಕು ’ ಎನ್ನುವುದೆ ಶಾಸ್ತ್ರೀಯವಾದ ದೃಷ್ಟಿಕೋನ. ಆದ್ದರಿಂದ, ಉಪಯೋಗವಿಲ್ಲದೆ ಯಾರೂ ಯಾವ ಕೆಲಸ ಸಹ ಮಾಡುವುದಿಲ್ಲ. ವೈದ್ಯನಾದರೂ ಸರಿ, ಯಾರಾದರೂ ಸರಿ…

 

ಶಾಸ್ತ್ರೀಯ ದೃಷ್ಟಿಕೋನ ಎನ್ನುವುದು ಪ್ರತಿ ರೈತನಿಗೂ ಇದೆ, ಪ್ರತಿ ಗೃಹಿಣಿಗೂ ಇದೆ, ಪ್ರತಿ ಕಾರ್ಮಿಕನಿಗೂ ಇದೆ, ಪ್ರತಿ ವಿಜ್ಞಾನಿಗೂ ಇದೆ. ನಾವು ಏನೆಂದು ತಿಳಿಯುತ್ತೇವೆಂದರೆ ’ ವಿಜ್ಞಾನಿಗೆ ಮಾತ್ರ ಇದೆ ’ ಎಂದುಕೊಳ್ಳುತ್ತೇವೆ. ಶಾಸ್ತ್ರೀಯ ದೃಷ್ಟಿಕೋನವು ಪ್ರತಿ ಮನುಷ್ಯನಿಗೂ ಇದೆ, ಅದನ್ನು ಉಪಯೋಗಿಸಿಕೊಂಡು ಆತನು ಶಾಸ್ತ್ರೀಯವಾದ ಪದ್ಧತಿಯಲ್ಲಿ ತನ್ನನ್ನ ತಾನು ಸಂತೋಷವಾಗಿ, ಆರೋಗ್ಯವಾಗಿ ಇರಿಸಿಕೊಳ್ಳಲು ಸ್ವಲ್ಪ ಸಾಧನೆಬೇಕು.

 

ಜೆ.ಕೆ: ಅಂದರೆ, ಈಗ ನಿಮಗೆ ವಿಸ್ತಾರವಾಗಿ ಹರಡಿರುವಂತಹ ಈ ’ ಆನಾಪಾನಸತಿ ’ ಎನ್ನುವುದು ಪೂರ್ವದಲ್ಲಿ ನಮಗೆ ವೇದಗಳಲ್ಲಾಗಲಿ, ಉಪನಿಷತ್ತಿನಲ್ಲಾಗಲಿ ಇದೆಯಾ? ಅಥವಾ ಮಧ್ಯೆ ಇದನ್ನು ಯಾರಾದರೂ ಅನ್ವೇಷಿಸಿದ್ದಾರ ?

 

ಪತ್ರೀಜಿಇದು ಅನಾದಿಕಾಲದಿಂದಲೂ ಬರುತ್ತಿರುವ ಸತ್ಯ. ಅನಂತವಾಗಿರುವ ಸತ್ಯ. ಪ್ರತಿ ಒಬ್ಬರೂ ಈ ಧ್ಯಾನದ ಕಡೆಗೆ ಬರಬೇಕಾದ್ದೆ. ಋಷಿಗಳೆಲ್ಲರೂ ದ್ರಷ್ಟರು. ಉದಾಹರಣೆಗೆ ಹಿಂದೂಮತವನ್ನು ತೆಗೆದುಕೊಳ್ಳೋಣ. ಅದಕ್ಕೆ ಮೂಲಕಾರಕರು ಋಷಿಗಳು. ಧ್ಯಾನ ಮಾಡಿಯೇ ಅವರು ಋಷಿಗಳಾಗಿದ್ದಾರೆ. ಧ್ಯಾನ ಮಾಡದೆ ಯಾರೂ ಸಹ ಋಷಿಗಳಾಗುವುದಿಲ್ಲ. ಪಂಡಿತರಾಗುತ್ತಾರೆ. ಗ್ರಂಥಗಳ ಆಧ್ಯಯನ ಮಾಡಿ ಪಂಡಿತರು ಆದ ಹಾಗೆ ಧ್ಯಾನ ಮಾಡಿ ಋಷಿಗಳಾಗುತ್ತಾರೆ, ಅಷ್ಟೇ. ಅನಾದಿಯಿಂದ ಇರುವುದೆ ಈ ಧ್ಯಾನ .. ಧ್ಯಾನ ಎಂದರೆ ’ ಋಷಿ ಸಂಪ್ರದಾಯ ’ .

 

ಜೆ.ಕೆ: ಈ ಆನಾಪಾನಸತಿ ಯ ಅಸಲು ಮೂಲ ಏನು ?

 

ಪತ್ರೀಜಿ’ ಆನಾಪಾನಸತಿ ’ ಎಂದರೆ ಇದು ಪಾಳೀ ಭಾಷೆ. ಪಂಡಿತರಿಗೆ ಆ ದಿನಗಳಲ್ಲಿ ಸಂಸ್ಕೃತ ಭಾಷೆ ಹೇಗೆ ಇತ್ತೋ.. ಆ ದಿನಗಳಲ್ಲಿ ಪಾಮರರಿಗಾಗಿ ಇದ್ದ ಭಾಷೆಯೆ ಪಾಳೀ ಭಾಷೆ. ಬುದ್ಧನು ಪಾಮರ ಜನರನ್ನು ತನ್ನ ದೃಷ್ಟಿಯಲ್ಲಿಟ್ಟುಕೊಂಡು ತನ್ನ ಪ್ರವಚನಗಳನ್ನು ಪಾಳೀ ಭಾಷೆಯಲ್ಲಿ ವಿವರಿಸಿದರು. ಪಂಡಿತರ ಭಾಷೆಗೆ ದೂರವಾಗಿ, ಪಾಮರರ ಭಾಷೆಗೆ ಹತ್ತಿರವಾಗಿ ಪಾಳೀ ಭಾಷೆಯಲ್ಲಿ ಬುದ್ಧನು ಉಪಯೋಗಿಸಿದ ಪದವೆ ’ ಆನಾಪಾನಸತಿ ’; ’ ಆನ ’ ಎಂದರೆ ’ ಉಚ್ಛ್ವಾಸ ’, ’ ಅಪಾನ ’ ಎಂದರೆ ’ನಿಶ್ವಾಸ’, ’ಸತಿ’ ಎಂದರೆ ಕೂಡಿಕೊಂಡು ಇರುವುದು; ನಮ್ಮ ಉಚ್ಛ್ವಾಸ ನಿಶ್ವಾಸಗಳೊಂದಿಗೆ ನಾವು ಕೂಡಿಕೊಂಡಿರುವುದು ಎಂದು ಹೇಳಿ ಗೌತಮಬುದ್ಧನು ಅನಾದಿಯಿಂದ ಇರುವ ಪ್ರಕ್ರಿಯೆಗೆ ಮೊದಲನೆಯ ಬಾರಿ ಆ ಪದಗಳನ್ನು ಉಪಯೋಗಿಸಿದರು. ಈಗ ಪಾಳೀ ಭಾಷೆ ಇಲ್ಲ ಅಲ್ಲವೇ. ನಮ್ಮದು ಕನ್ನಡ ಭಾಷೆ ಅಲ್ಲವೆ. ಅದಕ್ಕೆ ಸ್ವಲ್ಪ ಸಮಾಂತರವಾಗಿರುವ ಪದವೆ ’ಶ್ವಾಸದ ಮೇಲೆ ಗಮನ’.

 

ಜೆ.ಕೆ: ಆದರೆ ಬಗೆಬಗೆಯ ಧ್ಯಾನ ಪದ್ಧತಿಗಳ ಬಗ್ಗೆ ಕೇಳುತ್ತಿದ್ದೇವೆ ?

ಪತ್ರೀಜಿಬಗೆಬಗೆಯ ಧ್ಯಾನ ಪದ್ಧತಿಗಳು ಇರುತ್ತವೆ. ಸದಾ ಇರುತ್ತವೆ. ಬಗೆಬಗೆಯ ಮನಸ್ತತ್ವಗಳು ಇದೆಯಾ ? ಇಲ್ಲವಾ ?

 

ಜೆ.ಕೆ: “ಇವೆ”

 

ಪತ್ರೀಜಿಕೃತಯುಗದಲ್ಲಿ ಇವೆಯಾ ? ಇಲ್ಲವಾ ? ಕಲಿಯುಗದಲ್ಲಿ ಇವೆಯಾ ? ಇಲ್ಲವಾ ? ಭಾರತದಲ್ಲಿ ಇವೆಯಾ ? ಇಲ್ಲವಾ ? ಆದ್ದರಿಂದ, ಬಗೆಬಗೆಯ ಮನಸ್ತತ್ವಗಳು ಇರುವಾಗ ಬಗೆಬಗೆಯ ಧ್ಯಾನ ಪದ್ಧತಿಗಳು ಸದಾ, ಎಲ್ಲಾ ಕಡೆ ಇರುತ್ತವೆ. ಅದು ಸಹಜ.

ಜೆ.ಕೆಈಗ ಅದರಲ್ಲಿ ಶಾಸ್ತ್ರೀಯವಾದ ರೀತಿಯಲ್ಲಿ ಈ ಬುದ್ಧನು ಹೇಳಿದ ’ ಆನಾಪಾನಸತಿ ’ ಎನ್ನುವುದು ತುಂಬಾ ಸರಳವಾಗಿ, ಮಧುರವಾಗಿ, ಸುಲಭವಾಗಿ ಫಲವನ್ನು ನೀಡುವ ಹಾಗೆ ಕಾಣುತ್ತಿರುವ ಹಾಗಿದೆ. ಹಾಗಾಗಿ ಹೆಚ್ಚು ಜನ ಇದಕ್ಕೆ ಆಕರ್ಷಿತರಾಗುತ್ತಿದ್ದಾರೆಂದು ನಾನು ಭಾವಿಸುತ್ತಿದ್ದೇನೆ. ನಿಜವಾಗಿಯೂ ಅಷ್ಟು ಶಾಸ್ತ್ರೀಯವಾದ ದೃಷ್ಟಿಕೋನ ಇದರಲ್ಲಿ ಇದೆಯಾ ?

 

ಪತ್ರೀಜಿ’ ಶಾಸ್ತ್ರೀಯ ’ ಅಂದರೆ ‘A+B=C+D’.. ಒಂದೆ ಉಷ್ಣತೆ, ಒತ್ತಡಗಳ (Pressure) ಹತ್ತಿರ ಹಾಗೆಯೆ ಇರುತ್ತದೆ. o.k, ನೀನು ಉಷ್ಣತೆಯನ್ನು, ಒತ್ತಡವನ್ನು ಬದಲಾಯಿಸಿದರೆ ’A+B=D+E’ ಇನ್ನೂ ಸ್ವಲ್ಪ ಉಷ್ಣತೆ ಬದಲಾಯಿಸಿದರೆ ಅದೇ ಸಂಯೊಗವು ’X+Y’ ಯನ್ನು ಕೊಡುತ್ತದೆ.

 

ಇವೆಲ್ಲವು ಶಾಸ್ತ್ರೀಯವೆ. ನೀವು ಒಂದು ಮಂತ್ರವನ್ನು ಹೇಳಿದ್ದೀರ. ಒಂದು ಮಂತ್ರ ಒಂದು ಉಪಾಸನೆಯನ್ನು ಮಾಡಿದರೆ ಯಾವ ಫಲ ಬರುತ್ತದೆಯೊ .. ಆ ಫಲ ಸಿಗುತ್ತದೆ. ಅದು ’ ಶಾಸ್ತ್ರೀಯ ’ ಅಲ್ಲವೇ? ನಾನು ನಿಮಗೆ ಸೇವೆ ಮಾಡಿದೆ. ಸೇವೆ ಮಾಡಿದಕ್ಕೆ ನೀವು ನನಗೆ ಎಲ್ಲಾ ಊರುಗಳು ತೋರಿಸಿದ್ದೀರ. ನನಗೆ ಆ ಲಾಭ ಸಿಕ್ಕಿದೆ. ಅದು ’ ಶಾಸ್ತ್ರೀಯ ’ ಅಲ್ಲವೆ? ಯಾವ ಕೆಲಸ ಮಾಡುವುದರಿಂದ ಯಾವ ಫಲ ಬರುತ್ತದೆ ಎಂದು ಹೇಳುವುದೆ ’ ಶಾಸ್ತ್ರ ’. ಹಾಗೆಯೆ ಬುದ್ಧನು ಮಾಡಿರುವುದು ಏನಂದರೆ ’ಶಾಸ್ತ್ರದ ಹಿಂದೆ ಇರುವ ಶಾಸ್ತ್ರ’ ವನ್ನು ಕಂಡುಹಿಡಿದರು. ಅದು ಅವರ ಹಿರಿತನ. ಕಣ್ಣಿಗೆ ಕಾಣಿಸುವ ಶಾಸ್ತ್ರ ಒಂದು ಇರುತ್ತದೆ. ’ ಕಣ್ಣಿಗೆ ಕಾಣಿಸದ ಶಾಸ್ತ್ರ ’ ಒಂದು ಇರುತ್ತದೆ. ಈ ಕಾಣಿಸುವ ಶಾಸ್ತ್ರದ ಹಿಂದೆ ಇರುವ ಕಾಣಿಸಿದ ಶಾಸ್ತ್ರವನ್ನು ಅವರು ತಮ್ಮ ದಿವ್ಯಚಕ್ಷುವಿನಿಂದ ತಿಳಿದುಕೊಂಡರು.

 

ಜೆ.ಕೆಈ ಶ್ವಾಸದ ಮೇಲೆ ಗಮನಕ್ಕೆ .. ಈ ’ ಮೂರನೆಯ ಕಣ್ಣು ’ ಎನ್ನುತ್ತಾರೆ .. ಅಂತರ್‌ಚಕ್ಷುವು .. ಅದಕ್ಕೆ, ಇದಕ್ಕೆ ಇರುವ ಸಂಬಂಧವೇನು ?

 

ಪತ್ರೀಜಿಶ್ವಾಸದ ಮೇಲೆ ಗಮನದಿಂದಲೆ .. ಅಂತರ್‌ಚಕ್ಷುವು ಬರುತ್ತದೆ ಎಂದು ಹೇಳುತ್ತಿಲ್ಲ. ಗೌತಮಬುದ್ಧನಿಗೆ ಬಾಲ್ಯದಲ್ಲೇ ಎಲ್ಲಾ ಅಂತರ್‌ಚಕ್ಷುಗಳು ಇತ್ತು. ಗೌತಮಬುದ್ಧನಿಗೆ ಅಲ್ಲ ಪ್ರತಿಯೊಂದು ಮಗುವಿಗೂ ಇದೆ. ಆಗಲೂ, ಈಗಲೂ, ಯಾವಾಗಲೂ; ನೀವು ಚಿಕ್ಕಮಗುವಾಗಿದ್ದಾಗ ನಿಮ್ಮ ಅಂತರ್‌ಚಕ್ಷುವಿನಿಂದ ಎಲ್ಲಾ ನೋಡಿರುವಿರಿ. ಮರಣಿಸಿದವರನ್ನು, ಮರಣಿಸದವರನ್ನು, ದೇವತೆಗಳನ್ನು, ಋಷಿಗಳನ್ನು, ಎಲ್ಲರನ್ನೂ ನೋಡಲಾಗುತ್ತಿತ್ತು. ಆದರೆ, ವಯಸ್ಸು ಹೆಚ್ಚುತ್ತಾ ಆ ಶಕ್ತಿ ಹೋಯಿತು.

 

ಆದ್ದರಿಂದ, ಗೌತಮಬುದ್ಧನು ಕಳೆದುಕೊಂಡಿದ್ದನ್ನು ಪುನಃ ಪಡೆಯಲು ಐದು ವರ್ಷಗಳು ಅನೇಕ ಗುರುಗಳ ಹತ್ತಿರ ಹೋದನು. ಅವರು ಹೇಳಿದ್ದನ್ನೆಲ್ಲಾ ಮಾಡಿದನು. ಆದರೂ ಅವರು ಏನು ಮಾಡಿದರೂ ’ ಅದೇನೊ ’ ಬರುತ್ತಿರಲಿಲ್ಲ. ಇನ್ನು ಹೇಗೆ ಬರುತ್ತದೆಂದು ಹೇಳಿ, ನಂತರ ಆಲೋಚಿಸುತ್ತಾ ಸುಮ್ಮನೆ ಒಂದು ಕಡೆ ಏನು ಮಾಡದೆ ಕುಳಿತನು. ಹಾಗೆ ಕುಳಿತ ನಂತರ ಏನು ಮಾಡದೆ ಸುಮ್ಮನೆ ಇದ್ದಾಗ ಪುನಃ ’ ಆ ಬಾಲ್ಯಸ್ಥಿತಿಯ ’ ಅನುಭವವಾಯಿತು. ಅವರಿಗೆ ಆ ಮೂರನೆಯಕಣ್ಣು ಎಂದರೆ ದಿವ್ಯಚಕ್ಷುವು ತೆರೆದುಕೊಂಡಿತು. ಆ ದಿವ್ಯಚಕ್ಷುವಿನಿಂದ ಪರಿಶೋಧನೆ ಮಾಡಿ ಈ ದಿವ್ಯಚಕ್ಷುವು ಎಲ್ಲರಿಗೂ ಸುಲಭವಾಗಿ ಬರಬೇಕಾದರೆ ಏನುಮಾಡಬೇಕೆಂದು ಯೋಚಿಸಿ, ಪುನಃ ಆ ದಿವ್ಯಚಕ್ಷುವಿನಿಂದಲೇ ತಿಳಿದುಕೊಂಡಾಗ.. ’ ಶ್ವಾಸದ ಮೇಲೆ ಗಮನದಿಂದ ’ ಎಂದು ತಿಳಿದುಬಂತು.

 

ಜೆ.ಕೆಅದ್ಭುತ ! ಅದಕ್ಕೆ ನಿಮ್ಮ ಪಥದಲ್ಲಿ ಈಗ ಜನ ಸಾಮಾನ್ಯರೆಲ್ಲರೂ ಇದ್ದಾರೆ ?

ಪತ್ರೀಜಿಏಸುಪ್ರಭುಗಳು ಏನು ಹೇಳಿದರೆಂದರೆ ’ ನೀವು ಹಸುಗೂಸುವಿನ ಹಾಗೆ ಬದಲಾಗುವರೆಗೂ ದೇವರ ಸಾಮ್ರಾಜ್ಯದಲ್ಲಿ/ರಾಜ್ಯದೊಳಗೆ ಹೆಜ್ಜೆ ಇಡಲಾರಿರಿ ’ (Unless you become like a Child,you cannot enter the Kingdom of God ). ಆ ಎಳೆಕೂಸು .. ಆ ಮಗುವು ಶ್ವಾಸದ ಮೇಲೆ ಗಮನ ಇಟ್ಟಿದೆಯಾ? ಆದರೆ ಅದು ದೇವರ ರಾಜ್ಯದಲ್ಲೆ ಇದೆಯಲ್ಲವೇ.

 

ಜೆ.ಕೆಆದ್ದರಿಂದಲೇ ನಾವು ಚಿಕ್ಕಮಕ್ಕಳನ್ನು ಪರಮಾತ್ಮ ಸ್ವರೂಪರೆಂದು ಹೇಳುತ್ತೇವೆ.

ಪತ್ರೀಜಿಸರಿ ! ಆ ರೀತಿಯ ಮನಸ್ತತ್ವ ಬೇಕು .. ಅಂದರೆ ನಿರ್ಮಲವಾದದ್ದು, ಕನ್ನಡಿಯ ಹಾಗೆ .. ಅದು ಇದ್ದರೆ ಬರುತ್ತದೆ. ಅದು ಬರಲು ಅತ್ಯುತ್ತಮವಾದ ಸಾಂಕೇತಿಕ ಪದ್ಧತಿಯೆ ’ ಶ್ವಾಸದ ಮೇಲೆ ಗಮನ ’ ಎಂದು, ಅದು ಬಂದ ನಂತರ ಗೌತಮಬುದ್ಧನು ತಿಳಿದುಕೊಂಡನು.

 

ಜೆ.ಕೆಅಂದರೆ ಈಗ ಶ್ವಾಸದ ಮೇಲೆ ಗಮನ ಇಡುವುದರಿಂದ ಒಂದು ಎಳೆ ಕೂಸಿನ ಹಾಗೆ ನಾವು ಬದಲಾಗುತ್ತೇವೆ, ಶೂನ್ಯ ಸ್ಥಿತಿ ಏರ್ಪಡುತ್ತದೆ.

 

ಪತ್ರೀಜಿತ್ಯಾಗರಾಜ ಸ್ವಾಮಿಯು ತನ್ನ ಸಂಗೀತದಿಂದ ಆ ಶೂನ್ಯಸ್ಥಿತಿಯನ್ನು ಸಂಪಾದಿಸಿಕೊಂಡರು, ಲಯ(ತಾದಾತ್ಮ್ಯವನ್ನು) ಹೊಂದಿದರು. ಆಗ ಅವರ ದಿವ್ಯಚಕ್ಷುವು ಉತ್ತೇಜಿತವಾಗಿ ರಾಮ, ಲಕ್ಮಣ ಎಲ್ಲರೂ ಕಾಣಿಸಿದರು. ಅನಂತರ ರಾಮನು ಕಳ್ಳರಿಂದ ರಕ್ಷಿಸಿದನು. ಅವರಿಗೆ ಹೇಗೆ ಕಾಣಿಸಿದರು. ’ಶ್ವಾಸದ ಮೇಲೆ ಗಮನ’ ಇಟ್ಟಿದ್ದರಾ? ಇಲ್ಲವಲ್ಲಾ? ಆದರೆ, ಆತ ಹಸುಕೂಸಿನ ಹಾಗೆ ತಯಾರಾದರು. ಆದ್ದರಿಂದ, ಎಳೆಕೂಸಿನ ಹಾಗೆ ಸಹಜವಾಗಿಯೆ ತಯಾರಾದರು. ನಾವು ಸ್ವಲ್ಪ ಈ ತಂತ್ರಜ್ಞಾನವನ್ನು ಉಪಯೋಗಿಸಿದರೆ ಎಲ್ಲರೂ ಮಗುವಿನ ಹಾಗೆ ಆಗುವುದು ಸಾಧ್ಯವಿದೆ. ಅದೇ ಶ್ವಾಸದ ಮೇಲೆ ಗಮನದ ಶ್ರೇಷ್ಠತನ/ಹಿರಿತನ.

 

ಜೆ.ಕೆಆದ್ದರಿಂದ, ಆ ರಾಮಚಂದ್ರನು ಕಾಣಿಸಿದಾಗ, ಬಾಣಗಳಿಂದ ಬಂದಾಗ ’ ಬಾಬಾ ನಮ್ಮ ಮನೆಯವರೆಗೂ ’ ಎನ್ನುವ ಕೀರ್ತನೆ ಹಾಡಿದರಾ? ಶೂನ್ಯಸ್ಥಿತಿ ಹೇಗೆ ತಂದುಕೊಳ್ಳಬೇಕೆನ್ನುವಿರಿ ?

ಪತ್ರೀಜಿಆ ಶೂನ್ಯಸ್ಥಿತಿಗೆ ಬರಲು ಮಂತ್ರಗಳು, ತಂತ್ರಗಳು, ಯಂತ್ರಗಳು, ತಾಯತಿಗಳು, ಸೇವೆ, ವಿಧವಿಧವಾದ .. ಕಠೋರ ತಪಸ್ಸುಗಳು ಇವೆಲ್ಲಾವೂ ಸಹ ಅವರವರ ಸಂಶೋಧನೆಯಲ್ಲಿ ಅನೇಕ ಜನ ಕಂಡುಹಿಡಿದರು. ಆದರೆ, ಬುದ್ಧನು ತನ್ನ ದಿವ್ಯಚಕ್ಷುವಿಂದ ತಿಳಿದುಕೊಂಡಿದ್ದು ’ ಆನಾಪಾನಸತಿ ’. ಆದ್ದರಿಂದ, ಉಳಿದದ್ದು ಏನೂ ಅವಶ್ಯಕತೆ ಇಲ್ಲ. ಶ್ವಾಸದ ಮೇಲೆ ಗಮನವಿಟ್ಟರೆ ಚೆನ್ನಾಗಿ ಆ ಶೂನ್ಯಸ್ಥಿತಿಯನ್ನು ತಕ್ಷಣ ಹೊಂದುತ್ತೇವೆ. ತಕ್ಷಣ ಅಂದರೆ .. ತಕ್ಷಣ .. ಯಾರಾದರೂ ಸರಿ. ’ಯಾರಾದರೂ ಸರಿ’ ಅಂದರೆ .. ಸ್ವಲ್ಪ ’ ತಪ್ಪುತಿರುವು’ ಇದೆ.

 

ಅಂದರೆ .. ಗಂಡಸರಿಗಿಂತಾ ಹೆಂಗಸರಿಗೆ ಬೇಗ ಶೂನ್ಯಸ್ಥಿತಿ ಬರುತ್ತದೆ. ಏಕೆಂದರೆ, ಗಂಡಸರಿಗೆ ಸ್ವಲ್ಪ ’ ತಿಳಿವಳಿಕೆ ’ ಹೆಚ್ಚಲ್ಲವೆ. ಹಾಗೆಯೇ, ಪಟ್ಟಣದಲ್ಲಿ ಇರುವವರಿಗಿಂತಾ ಹಳ್ಳಿಗಳಲ್ಲಿ ವಾಸಿಸುವವರಿಗೆ. ಏಕೆಂದರೆ ಪಟ್ಟಣ ವಾಸಿಗಳಿಗೆ ಸ್ವಲ್ಪ ’ ಅತಿಯಾದ ತಿಳಿವಳಿಕೆ ’ ಅಲ್ಲವೆ. ಹಾಗೆಯೆ, ವಿದ್ಯಾವಂತರಿಗಿಂತಾ ಅವಿದ್ಯಾವಂತರಿಗೆ ಬೇಗ, ವಿದ್ಯಾವಂತರಿಗೆ ಸ್ವಲ್ಪ ಅತಿ ತಿಳಿವಳಿಕೆ ಅಲ್ಲವೆ, ಗರ್ವ ಅಲ್ಲವೆ .. ಆ ಗರ್ವ ಇಲ್ಲದಿದ್ದರೆ ಎಲ್ಲರಿಗೂ ಸಿಗುತ್ತದೆ. ಜಂಬ ಇರಕೂಡದು. ಮಕ್ಕಳಿಗೆ ಗರ್ವ ಇದೆಯೆ? ಜಗಳವಾಡುತ್ತಾರೆ ಆದರೆ .. ಗರ್ವ ಇರುವುದಿಲ್ಲ. ಅಹಂಕಾರ ಇರುವುದಿಲ್ಲ.

 

ಜೆ.ಕೆಈಗ ನಾವು ಗೌತಮಬುದ್ಧನನ್ನು ಗುರು ಸಂಪ್ರದಾಯದಲ್ಲಿ ಗುರುವಾಗಿ, ಆಚಾರ್ಯರಾಗಿ..

 

ಪತ್ರೀಜಿಒಬ್ಬ ’ ಗುರುವು ’, ಒಬ್ಬ ’ ಆಚಾರ್ಯರು ’ ಅಲ್ಲ .. ಅವರು ಮಹಾ ಮಹಾ ಮಹಾ ಆಚಾರ್ಯರು.

 

ಜೆ.ಕೆಈ ’ ಪಿರಮಿಡ್ ’ಗೂ, ಈ ಬುದ್ಧನು ಹೇಳಿದ ’ ಆನಾಪಾನಸತಿ ’ಗೂ ಏನು ಸಂಬಂಧ?

 

ಪತ್ರೀಜಿಯಾವ ಸಂಬಂಧವೂ ಇಲ್ಲ. ಈಗ ’A.C’ ಗೂ, ನಾವು ಕುಳಿತುಕೊಳ್ಳುವುದಕ್ಕೂ ಏನಾದರೂ ಸಂಬಂಧವಿದೆಯಾ? ಸಂಬಂಧವಿದೆಯಾ? ಇಲ್ಲವಾ?

 

’A.C’ ಯಲ್ಲಿ ಕುಳಿತುಕೊಂಡರೆ ಚೆನ್ನಾಗಿದೆಯಲ್ಲವೆ! ’A.C’ ಎನ್ನುವುದು, ಬೇರೆ ತಂತ್ರಜ್ಞಾನ .. ಅದು ಬೇರೆ ತಂತ್ರಜ್ಞಾನ. ಹಾಗೆಯೇ, ’ ಪಿರಮಿಡ್ ಶಕ್ತಿ ’ ಎನ್ನುವುದು ಅದು ಒಂದು ವಾಸ್ತು ತಂತ್ರಜ್ಞಾನ ಎಂದುಕೊಳ್ಳಿ. ’ ವಾಸ್ತು ’ ಅನ್ನುವುದಕ್ಕಿಂತಾ ’ ವಸ್ತು ’ ತಂತ್ರಜ್ಞಾನ ಎಂದರೆ ಚೆನ್ನಾಗಿರುತ್ತದೆ. ’ವಸ್ತು’ ಎಂದರೆ ’ಸ್ಥೂಲ ಪದಾರ್ಥ’ ಆ ಸ್ಥೂಲ ಪದಾರ್ಥದ ತಂತ್ರಜ್ಞಾನದಿಂದ ಏನಾಗುತ್ತದೆ ಎಂದರೆ .. Material is energy, Matter is energy.. geometry is energy.. ಅಂದರೆ ಒಂದಾನೊಂದು ಉತ್ತಮ ರೇಖಾಗಣಿತ ಆಕೃತಿಯಲ್ಲಿ ಆ ಶಕ್ತಿ ಎನ್ನುವುದು ಅದು ತನ್ನಲ್ಲಿ ತಾನು ಸುಳಿಯ ಹಾಗೆ ತಿರುಗುತ್ತಾ ಶಕ್ತಿಯು ವ್ಯರ್ಥವಾಗದೆ ಇರುತ್ತದೆ. ಪಿರಮಿಡ್‌ನಲ್ಲಿ ಆ ಶಕ್ತಿಯು ಹೆಚ್ಚಾಗಿರುತ್ತದೆ ಎಂದರ್ಥ. ಆದ್ದರಿಂದ, ಅಂತಹದರಲ್ಲಿ ಆ ಶಕ್ತಿಯು ಚೆನ್ನಾಗಿ ಅಲ್ಲಿಯೆ ಸ್ಥಂಭಿಸಿ ಆ ಶಕ್ತಿಕ್ಷೇತ್ರದಲ್ಲಿ ನಾವು ಕುಳಿತುಕೊಂಡು ಧ್ಯಾನ ಮಾಡಿದರೆ ನಮಗೆ ಧ್ಯಾನವು ಶೀಘ್ರವಾಗಿ ಲಭ್ಯವಾಗುತ್ತದೆ. ಅದಕ್ಕಾಗಿ ನಾವು ಪಿರಮಿಡ್‌ನ್ನು ಧ್ಯಾನಾಭ್ಯಾಸಕ್ಕಾಗಿ ನಿರ್ಮಾಣ ಮಾಡುತ್ತಿದ್ದೇವೆ.

 

ಜೆ.ಕೆಅಂದರೆ, ಈಗ ಆನಾಪಾನಸತಿ ಧ್ಯಾನವನ್ನು ಪಿರಮಿಡ್‌ನಲ್ಲಿ ಮಾಡಿದರೆ ಹೆಚ್ಚು ಫಲ ಇರುತ್ತದೆ ಎಂದರ್ಥ

 

ಪತ್ರೀಜಿಪಿರಮಿಡ್‌ನಲ್ಲಿ ಮಲಗಿಕೊಂಡರೂ ಸಹ ಬೇಗ ನಿದ್ದೆ ಬರುತ್ತದೆ. ಪಿರಮಿಡ್‌ನಲ್ಲಿ ಏನು ಮಾಡಿದರೂ ಅಧಿಕ ಫಲವು ಬರುತ್ತದೆ. ಮೂರುಪಟ್ಟು ಹೆಚ್ಚು. ನೀವು ಸುಮ್ಮನೆ ಹೋಗಿ ಮಲಗಿಕೊಳ್ಳಿ. ನಿದ್ದೆ ಚೆನ್ನಾಗಿ ಬರುತ್ತದೆ. ನೀವು ಸುಮ್ಮನೆ ಕುಳಿತುಕೊಳ್ಳಿ. ನಿಮ್ಮ ಆಲೋಚನೆಗಳು ಸ್ಥಗಿತಗೊಳ್ಳುತ್ತದೆ (ಅಂದರೆ ಆಲೋಚನಾರಹಿತ ಸ್ಥಿತಿಗೆ ಬೇಗ ತಲಪುತ್ತದೆ).

 

ಜೆ.ಕೆಅದನ್ನೂ..ಇದನ್ನೂ ಸೇರಿಸಿದ್ದು ನೀವೇನಾ ?

 

ಪತ್ರೀಜಿಅನೇಕ ಸ್ಥಳಗಳಲ್ಲಿ ಆ ಸಮ್ಮೇಳನ ಮಾಡಿ ಅದರ ಪ್ರಚಾರ ಮಾಡುತ್ತಿದ್ದಾರೆ. ಅದನ್ನು ಪ್ರಾರಂಭಿಸಿದ್ದು ನಾನಲ್ಲ. ನಾನು ಅನೇಕ ಪುಸ್ತಕಗಳಿಂದ ಗ್ರಹಿಸಿದ್ದೇನಲ್ಲವೆ ? ಆದರೆ, ಎಲ್ಲರಿಗಿಂತಾ ಹೆಚ್ಚು ಪ್ರಚಾರ ಮಾಡಿದ, ಶೇಕಡ ನೂರಕ್ಕೆ 99ರಷ್ಟು ಪ್ರಪಂಚಾದ್ಯಂತ್ಯ ಪ್ರಚಾರ ಮಾಡಿದ್ದು ನಾನೆಂದರೆ ಒಪ್ಪುಕೊಳ್ಳುತ್ತೇನೆ. ’ ಪ್ರಾರಂಭಿಸಿದ್ದು ’ ನಾನಲ್ಲ.

 

ಜೆ.ಕೆ: ಈ ನಡುವೆ ತೆಲುಗು ಚಲನಚಿತ್ರ ರಂಗದ ಸ್ಟಾರ್ ವೆಂಕಟೇಶ್ ಅವರು ’ ಈಗ ಸಂಪೂರ್ಣ ಪ್ರಪಂಚದಲ್ಲಿರುವ ಎಲ್ಲಾ ಧ್ಯಾನಗಳಲ್ಲೂ ನಂಬರ್ 1, Aಶ್ರೇಣಿಯ ಧ್ಯಾನ ಎಂದರೆ ಆನಾಪಾನಸತಿ ಧ್ಯಾನ, ಅದಕ್ಕೆ ಆಲ್ ಕ್ರೆಡಿಟ್ ಗೋಸ್ ಟು ಸುಭಾಷ್ ಪತ್ರಿ ’ ಎಂದರು.

 

ಪತ್ರೀಜಿ99%; ನಾಟ್ ’ ಆಲ್ ’. ಏಕೆಂದರೆ, ಶೇಖಡ ಒಂದರಷ್ಟು ಮತ್ತೊಂದು ರೀತಿಯಲ್ಲಿ ಕಲಿತುಕೊಂಡಿದ್ದೇನಲ್ಲವೆ, ಆ ಪುಸ್ತಕಗಳನ್ನು ಓದಿ ಕಲಿತುಕೊಂಡಿದ್ದೇನಲ್ಲವೆ .. ಇಲ್ಲದಿದ್ದರೆ ನನಗೆ ಇಷ್ಟು ವಿಚಾರ ತಿಳಿಯುತ್ತಿರಲಿಲ್ಲ.

 

ಜೆ.ಕೆ’ ಧ್ಯಾನ ಪ್ರಚಾರ ಮಾಡಬೇಕು ’ ಎಂದು ನಿಜಕ್ಕೂ ನಿಮಗೆ ಏಕೆ ಅನಿಸಿತು ?

 

ಪತ್ರೀಜಿಏಕೆ ಅನಿಸಬಾರದು ?

 

ಜೆ.ಕೆ: ಅಂದರೆ, ಮುಂಚೆ ನೀವು ಕೋರಮಂಡಲ್ ಮತ್ತು ಇನ್ನೊಂದು ಕಡೆ ಎಲ್ಲೊ ಕೆಲಸ ಮಾಡುತ್ತಿದ್ದಿರಲ್ಲವೆ ?

 

ಪತ್ರೀಜಿಕೋಟಿ ವಿದ್ಯೆಗಳು ಕೂಳಿಗಾಗಿಯೆ. ಆ ವಿದ್ಯೆಯು ಹೊಟ್ಟೆಪಾಡಿಗಾಗಿ, ಅವೆಲ್ಲಾ ಮಿಗಿಲಾದವುಗಳಲ್ಲ. ಮತ್ತು ಆತ್ಮತತ್ವ ಹುಟ್ಟಿದಾಗಿನಿಂದಲೂ ನಿಜಕ್ಕೂ ಕೆಲಸ ಪ್ರಾರಂಭವಾಗುತ್ತದೆ.

 

ಜೆ.ಕೆ’ಭೂಗೋಳ’ವನ್ನು ತಬ್ಬಿಕೊಳ್ಳಬೇಕು. ಈ ಭೂಗೋಳಕ್ಕೆ ಧ್ಯಾನವನ್ನು ಕುರಿತು ಹೇಳಬೇಕು’ ಎನ್ನುವ ಹಂಬಲ ನಿಮ್ಮಲ್ಲಿ ಹೇಗೆ ಪ್ರಾರಂಭವಾಯಿತು ?

 

ಪತ್ರೀಜಿ: ಅದು ಹಾಗೆ ಪ್ರಾರಂಭವಾಗಲಿಲ್ಲ. ’ ಸತ್ಯವನ್ನು ತಿಳಿದುಕೊಳ್ಳಬೇಕು ’ ಎಂದು ಪ್ರಾರಂಭವಾಗಿ, ಸತ್ಯವನ್ನು ತಿಳಿದುಕೊಳ್ಳುವುದರಿಂದ ಪ್ರಾರಂಭವಾದ ಆ ಸತ್ಯವು, ಅಲ್ಲಿರುವ ಹತ್ತು ಜನಕ್ಕೆ ಹೇಳಬೇಕೆಂಬ ಹಂಬಲದಿಂದ ಸ್ವಲ್ಪ ಸ್ವಲ್ಪ ಪ್ರಾರಂಭವಾಗಿ ’ಇನ್ನೂ ಹೇಳಿದರೆ ಚೆನ್ನಾಗಿರುತ್ತದೆ’ ಎಂದೆನಿಸಿದಾಗ, ಉದ್ಯೋಗಕ್ಕೆ ರಾಜೀನಾಮೆ ಕೊಟ್ಟು ನಿರಂತರ ಧ್ಯಾನ ಪ್ರಚಾರ ಮಾಡಿದರೆ ಚೆನ್ನಾಗಿರುತ್ತದೆ ಎಂದೆನಿಸಿ ನಿರಂತರ ಮಾಡುತ್ತಾ ಮಾಡುತ್ತಾ .. ಈಗಲೂ ಇದೆ .. ಪ್ರಪಂಚಕೆಲ್ಲಾ ಹೇಳಬೇಕೆಂಬುವುದೆ ನನ್ನ ಭಾವನೆ.

 

ಜೆ.ಕೆಈ ದೃಷ್ಟಿಕೋನಕ್ಕೆ ಬರಲು ನಿಮಗೆನಾದರೂ ಪ್ರೇರಣೆ ? ಈ ಪುಸ್ತಕಗಳು ಅಲ್ಲದೆ ನಿಮಗೆ ಯಾರಾದರೂ ಗುರುವಾಗಲೀ.. ?

 

ಪತ್ರೀಜಿ: ನನಗೆ ಅಂತಹ ಗುರುಗಳು ಎಲ್ಲೂ .. ನಾನು ಮೆಚ್ಚಿಕೊಂಡಿರುವಂತಹ, ನಾನು ಒಪ್ಪಿಕೊಂಡಿರುವಂತಹ, ನಾನು ಸೇವೆಗಳನ್ನು ಮಾಡಬೇಕಾದ ಗುರುಗಳು.. ಕಾಣಿಸಲಿಲ್ಲ. ಹಾಗೆ ಅಂತ ಅವರು ಗುರುಗಳು ಅಲ್ಲ ಎಂದು ಅರ್ಥವಲ್ಲ. ನನಗೆ ಹೇಳಿಕೊಡಲಾಗುವ ಗುರುಗಳು ನನಗೆ ಕಾಣಿಸಲಿಲ್ಲ. ಎಲ್ಲರಿಗೂ ಹೇಳಿಕೊಡಲಾಗುವ ಗುರುಗಳು ಎಲ್ಲರಿಗೂ ಇದ್ದಾರೆ. ನಾನು ಒಬ್ಬ ಸ್ವೇಹಿತನ ಮೂಲಕ, ಒಬ್ಬ ಆಪ್ತಮಿತ್ರನ ಮೂಲಕ, ಈ ಧ್ಯಾನದ ಲಾಭಗಳನ್ನು ಗ್ರಹಿಸಿ ಪುನಃ ಅಲ್ಲಿ, ಇಲ್ಲಿ ಹುಡುಕಿ ಈ ಸೂತ್ರವನ್ನು ಹಿಡಿದುಕೊಂಡೆ. ಆ ಮಿತ್ರನ ಹೆಸರು, ರಾಮಚೆನ್ನಾರೆಡ್ಡಿ, ಅವರು ಮೊದಲು ಧ್ಯಾನಮಾಡಿ ಅದರಲ್ಲಿರುವ ಲಾಭಗಳನ್ನು ಹೊಂದಿದರು. ಅವರಿಗೆ ದಿವ್ಯಚಕ್ಷುವು ವಿಕಾಸಗೊಂಡಿದೆ. ಅದು 1976, 77ರಲ್ಲಿ .. ಅದಾದನಂತರ ’ ಇದರಲ್ಲಿ ಇಷ್ಟು ಇದೆ ಅಲ್ಲವೆ ’ ಎಂದು ಹೇಳಿ ಬಗೆಬಗೆಯಾಗಿ ನಾನು ಪರಿಶೋಧಿಸಿ, ಎಲ್ಲರಿಂದ ಅಲ್ಲಿ ಇಲ್ಲಿ ಇರುವ ವಿಷಯಗಳನ್ನು ಗ್ರಹಿಸಿ, ಸ್ವಾನುಭವದಿಂದ ಹೊಂದಿಸಿ .. ಒಂದು ದಿನ ಎಂದು ಹೇಳಲಾಗುವುದಿಲ್ಲ .. ಎಲ್ಲಾ ಕ್ರಮಕ್ರಮವಾಗಿ ಬಂದಿದೆ.

 

ಜೆ.ಕೆನಿಮ್ಮ ಜೀವನ ಇದಕ್ಕೆ ಸಮರ್ಪಿಸಿದ ಹಾಗೆ .. ?

 

ಪತ್ರೀಜಿಅಂತಹ ಸಮರ್ಪಣೆ ಏನಿಲ್ಲ. ಕ್ರಿಕೆಟ್‌ಗೆ ನಾನು ಸಮರ್ಪಿತ ಮಾಡುತ್ತೇನೆ ! ಮೊನ್ನೆ ಪಂದ್ಯ ಎಲ್ಲಾ ನೋಡಿದೆನಲ್ಲವೆ.

 

ಜೆ.ಕೆನಿಮಗೆ ಸಂಸಾರ ಎಲ್ಲಾ ಇದೆಯಾ ಸ್ವಾಮಿ ?

 

ಪತ್ರೀಜಿನಿಮಗೆ ಇಲ್ಲವಾ ’ ಸಂಸಾರ ’ ?

 

ಜೆ.ಕೆಸಾಮಾನ್ಯ ಗುರುಗಳ ಹಾಗೆ ’ ಸನ್ಯಾಸ ’ ಅದು ಇಲ್ಲವಾ ?

 

ಪತ್ರೀಜಿನನಗೆ ’ ಸಂಸಾರ ’ ಬೇಡಂತೀರಾ ? ಏನ್ ಸಮಾಚಾರ ?

 

ಜೆ.ಕೆಧ್ಯಾನ ಮಾಡುವವರಿಗೆ ಸಂಸಾರ ಇರಬಹುದಾ ?

 

ಪತ್ರೀಜಿ: ಅಂದರೆ ಬೇಡ ಎಂದಾ ನಿಮ್ಮ ಉದ್ದೇಶ ?

 

ಜೆ.ಕೆಇದುವರೆಗೆ ಮಾಡಿದವರೆಲ್ಲರೂ .. ಹಿಮಾಲಯಗಳಿಗೆ ಹೋದರಲ್ಲವೆ ?

 

ಪತ್ರೀಜಿಯಾರು ಹೇಳಿದ್ದಾರೆ ? ಕೃಷ್ಣನಿಗೆ ಎಂಟು ಜನ ಪತ್ನಿಯರು ಇಲ್ಲವಾ? ಅವರು ಯೋಗಿಶ್ವರರಲ್ಲವೆ? ವಶಿಷ್ಟರು, ಅರುಂಧತಿ ಮಹಾಯೋಗೀಶ್ವರರಲ್ಲವೆ ?

 

ಜೆ.ಕೆ’ ಸನ್ಯಾಸತ್ವ ತೆಗೆದುಕೊಳ್ಳುವುದು ’ ಅದೂ..ಬೇಕಾಗಿಲ್ವಾ ?

 

ಪತ್ರೀಜಿ: ಅದೇ ದೊಡ್ಡ ತಪ್ಪುಕಲ್ಪನೆ. ಅದನ್ನು ತೊಲಗಿಸಲ್ಲಿಕ್ಕಾಗಿಯೆ ’ ರಾಮಾಯಣ ’, ’ಮಹಾಭಾರತ’ ಎಲ್ಲಾ ಬಂದಿವೆ. ಅವರು ಅಷ್ಟಾಗಿ ವಿವರಿಸಿದರೂ ಸಹ ನಮಗೆ ಇನ್ನೂ ಅನುಮಾನವೆ? ತಪ್ಪುಕಲ್ಪನೆಗಳೆ? ವಾಲ್ಮೀಕಿ, ವೇದವ್ಯಾಸ .. ಅಂತಹ ಮಾಸ್ಟರ‍್ಸ್ ಬಂದು ಹೇಳಿದರೂ ಕೂಡಾ ನಮಗೆ ಇನ್ನೂ ಅನುಮಾನಗಳೇಕೆ? ರಾವಣಾಸುರನು ಅಷ್ಟು ಜನ ಹೆಂಡತಿಯರನ್ನು ಇಟ್ಟುಕೊಂಡು ಪರಮೇಶ್ವರನನ್ನು ಪ್ರತ್ಯಕ್ಷ ಮಾಡಿಕೊಳ್ಳಲಿಲ್ಲವೆ ?

 

ಜೆ.ಕೆನಾನು ಈ ನಡುವೆ ಧ್ಯಾನದಲ್ಲಿ ಕುಳಿತುಕೊಂಡರೆ ನನ್ನ ಹೆಂಡತಿ ನನ್ನ ಎಬ್ಬಿಸಿದಳು. ’ ನೀವು ಸನ್ಯಾಸದಲ್ಲಿ ಹೋಗಿ ಸೇರುತ್ತೀರ ’ ಎನ್ನುತ್ತಾಳೆ ? ಸನ್ಯಾಸಕ್ಕೂ, ಧ್ಯಾನಕ್ಕೂ ಸಂಬಂಧ ಇದೆಯೆ ?

 

ಪತ್ರೀಜಿಸನ್ಯಾಸ ಅಂದರೆ ಏನು? ಅದಕ್ಕೆ ಸರಿಯಾದ ವ್ಯಾಖ್ಯಾನ ಏನು ? ಸಮ್ಯಕ್+ನ್ಯಾಸ=ಸನ್ಯಾಸ. ’ಸಮ್ಯಕ್’ ಅಂದರೆ ಸರಿಯಾದ, ’ ನ್ಯಾಸ ’ ಎಂದರೆ ತ್ಯಜಿಸುವುದು. ಸರಿಯಾದದ್ದನ್ನು ತ್ಯಜಿಸುವುದನ್ನೆ ’ಸನ್ಯಾಸ’ ಎನ್ನುತ್ತಾರೆ. ಸತ್ಯವನ್ನು ಬಿಟ್ಟರೆ ’ ಹುಚ್ಚನು ’ ಎನ್ನುತ್ತಾರೆ; ’ ಸನ್ಯಾಸ ’ ಎನ್ನುವುದಿಲ್ಲ. ನಿಜಕ್ಕೂ ತಮೋಗುಣವನ್ನು, ರಜೋಗುಣವನ್ನು ಬಿಟ್ಟು, ಶುದ್ಧ ಸಾತ್ವಿಕರಾಗುವುದೇ ಸನ್ಯಾಸ.

 

ಜೆ.ಕೆತುಂಬಾ ಅದ್ಭುತವಾದಂತಹ ವಿಷಯ. ಇದುವರೆಗೂ ನಮಗೆ ಸನ್ಯಾಸವನ್ನು ಕುರಿತು ಅರಿತ ವಿಷಯವೇನೆಂದರೆ ಹೆಂಡತಿ, ಮಕ್ಕಳನ್ನು ಬಿಡುವುದು, ಅಥವಾ ಆಸ್ತಿಗಳನ್ನು ತ್ಯಜಿಸಿ ಗಡ್ಡ ಬೆಳೆಸಿಕೊಳ್ಳುವುದು..

 

ಪತ್ರೀಜಿಅಂತಹ ಸನ್ಯಾಸಿಯನ್ನು ’ ಮರ್ಕಟ ಸನ್ಯಾಸಿ ’ ಎನ್ನುತ್ತಾರೆ. ನಾಲ್ಕು ರೀತಿಯ ಸನ್ಯಾಸಗಳಿವೆ .. ಒಂದು – ಮರ್ಕಟ ಸನ್ಯಾಸ, ಎರಡು – ಆಪತ್ ಸನ್ಯಾಸ, ಮೂರು – ವಿವಿದಿಶ ಸನ್ಯಾಸ, ನಾಲ್ಕು – ವಿದ್ವತ್ ಸನ್ಯಾಸ.

 

ಹೆಂಡತಿಯ ಮೇಲೆ ಕೋಪ ಬಂದು ಹಿಮಾಲಯಗಳಿಗೆ ಹೋಗಿ ಅಲ್ಲಿ ಇನ್ನೊಂದು ಹೆಂಡತಿಯನ್ನು ಇಟ್ಟುಕೊಂಡರೆ ಅವನು ಮರ್ಕಟ ಸನ್ಯಾಸಿ. ಸಾಯುವುದಕ್ಕಿಂತಾ ಮುಂಚೆ ಸನ್ಯಾಸ ತೆಗೆದುಕೊಳ್ಳುವವನು ’ಆಪತ್ ಸನ್ಯಾಸಿ’. ಇನ್ನು ಎರಡು ನಿಮಿಷಗಳಲ್ಲಿ ಸಾಯುತ್ತಾನೆ ಅನ್ನುವಾಗ .. ಒಬ್ಬ ವೈಶ್ಯನು ಇಲ್ಲಿ ಎಲ್ಲಾ ಮುಗಿದ ನಂತರ .. ಮೇಲಿನ ಲೋಕಗಳಲ್ಲಿ ಮೋಕ್ಷ ಕಾಯ್ದಿರಿಸಲಿಕ್ಕಾಗಿ .. ಹೆಂಡತಿಯನ್ನು ಬಿಡುವುದು ’ಆಪತ್ ಸನ್ಯಾಸಿ’ ಎನ್ನುತ್ತಾರೆ. ಒಬ್ಬ ಕ್ಷತ್ರಿಯನು ಸತ್ಯಕ್ಕಾಗಿ ಹಂಬಲಿಸಿ ಎಲ್ಲವನ್ನು ತ್ಯಜಿಸಿದವನು .. ವಿವೇಕಾನಂದರ ರೀತಿ ಸನ್ಯಾಸ ಪಡೆದಿರುವವರು. ಅವರನ್ನು ’ವಿವಿದಿಶ ಸನ್ಯಾಸರು’ ಎನ್ನುತ್ತಾರೆ. ಅಂದರೆ ಮನೆ ಬಿಟ್ಟು ಸತ್ಯ ಎಲ್ಲಿದೆ ಎಂದು ತಿಳಿದುಕೊಳ್ಳುವುದು. ಇನ್ನು ರಾಮಕೃಷ್ಣ ಪರಮಹಂಸರು ಮಾಡಿದ್ದು .. ಅವರು ಎಲ್ಲೂ ಹೋಗಲಿಲ್ಲ. ಯಾರನ್ನೂ ಬಿಡಲಿಲ್ಲ. ತಮೋ ರಜೋ ಗುಣಗಳನ್ನು ತ್ಯಜಿಸಿದ್ದಾರೆ. ಅದು ’ವಿದ್ವತ್ ಸನ್ಯಾಸ’. ಒಬ್ಬ ಶೂದ್ರನು ಮಾಡುವುದು ’ಮರ್ಕಟ ಸನ್ಯಾಸ’, ಒಬ್ಬ ವೈಶ್ಯನು ಮಾಡುವುದು ’ ಆಪತ್ ಸನ್ಯಾಸ’, ಒಬ್ಬ ಕ್ಷತ್ರಿಯನು ಮಾಡುವುದು ’ವಿವಿದಿಶ ಸನ್ಯಾಸ’, ಒಬ್ಬ ಬ್ರಾಹ್ಮಣ ಮಾಡುವುದು ’ವಿದ್ವತ್ ಸನ್ಯಾಸ’.

 

ಜೆ.ಕೆಆದರೆ, ನಾನು ಸಾಧಾರಣವಾಗಿ ಕಾಶಿಗೆ ಹೋಗಿ ಎಲ್ಲಾ ಬಿಟ್ಟುಬಿಡಬೇಕೆಂದರೆ, ನಮಗೇನು ಇಷ್ಟವಿಲ್ಲವೊ ಅವುಗಳನ್ನು ಬಿಡುವುದು ಆ ತರಹ ಅಂದುಕೊಂಡೆ. ಇದು ಆ ತರಹ ಅಲ್ಲ ಎನಿಸುತ್ತದೆ. ಅದಕ್ಕೆ ಗುರುಗಳೆ, ಈಗ ನಿಮ್ಮ ಜೊತೆ ಮಾತನಾಡಿದ ನಂತರ ಇದರಲ್ಲಿರುವ ಅನೇಕ ಕೋನಗಳು ಎಲ್ಲಿ, ಹೇಗೆ ಹೋದರೂ ಕೂಡಾ ತುಂಬಾ ಸುಲಭವಾಗಿ ಪಾಲಿಸಲು ಹೆಚ್ಚು ಅನುಕೂಲ ಅನಿಸುತ್ತಿದೆ. ಆದ್ದರಿಂದಲೆ ಈ ನಡುವೆ ಜನರೆಲ್ಲಾ ಈ ಧ್ಯಾನ ಮಾರ್ಗಕ್ಕೆ ಬರುತ್ತಿದ್ದಾರೆ ಎಂದು ನನಗೆ ಅನಿಸುತ್ತಿದೆ. ನೀವು ನಿಮ್ಮ ಧ್ಯಾನಕ್ಕೆ ಬಂದು ಮೂರನೆಯ ಕಣ್ಣು ತೆಗೆದುಕೊಳ್ಳಬೇಕು ಎನ್ನುತ್ತಿರುವಿರಿ .. ಮತ್ತೆ ಪೂರ್ವಕಾಲ ಋಷಿಗಳೆಲ್ಲಾ ದೊಡ್ಡ ’ಅಗ್ನಿ’ಯನ್ನು ಇಟ್ಟುಕೊಂಡು..

 

ಪತ್ರೀಜಿಅಲ್ಲ, ಅಲ್ಲ, ಅವರೆಲ್ಲಾ ಮಾಡಿದ್ದು ’ ಯೋಗಾ ’. ಆದರೆ, ’ ಯಾಗ ’ ಎಂದು ಹೇಳಿ, ’ಹೋಮಗಳು’ ಎಂದು ಹೇಳಿ .. ಅದೆಲ್ಲಾ ಒಂದು ದೊಡ್ಡ ರಾಜ್ಯ, ಅದಕ್ಕೆಲ್ಲಾ ಸಂಬಂಧಿಸಿದ ಏನಾದರೂ ಒಂದು ಮಹತ್ ಪ್ರಜಾಹಿತವಾದ ಕಾರ್ಯಕ್ರಮಕ್ಕೆ ಸಂಕಲ್ಪ ಇಟ್ಟುಕೊಂಡು ಮಾಡಿದ್ದೆ ವಿನಹ, ಧ್ಯಾನಕ್ಕೂ, ಅದಕ್ಕೂ ಸಂಬಂಧವೆ ಇಲ್ಲ.

 

ಏನೇನೊ ಇರುತ್ತದೆ ಅಲ್ಲವೆ .. ರಾಜನಿಗೆ ಮಗ ಹುಟ್ಟಬೇಕೆಂದೊ, ಅನಿಷ್ಟಗಳು ತೊಲಗಬೇಕೆಂದೊ. ಮತ್ತು ಪ್ರಜೆಗಳೆಲ್ಲಾ ’ಧ್ಯಾನಿಗಳು’ ಅಲ್ಲವಲ್ಲಾ .. ಅವರಿಗೇನಾದರು ಒಂದು ಕಾಣಿಸಬೇಕು .. ಒಂದು ’ಹೋಮ’, ಒಂದು ’ಯಾಗ’ ಕಾಣಿಸಬೇಕು .. ಕಾಣಿಸದೆ ಇದ್ದರೆ ಅವರ ದೃಷ್ಟಿಯನ್ನು ಆಕರ್ಷಿಸಲಾಗುವುದಿಲ್ಲ. ಅದು ಕಣ್ಣಿಗೆ ಕಾಣುವ ವಸ್ತುವು ಆದ್ದರಿಂದ ಎಲ್ಲರ ದೃಷ್ಟಿಯನ್ನು ಆಕರ್ಷಿಸಲು, ಎಲ್ಲರ ಸಂಕಲ್ಪವು ಅದರಲ್ಲಿ ಪ್ರತಿಷ್ಠಾಪಿಸಲು ಆ ರೀತಿಯಾದ ಆ ಹೋಮವು, ಆ ಅಗ್ನಿಯು, ಕಾಣುವ ವಸ್ತುಗಳನ್ನು ಇಟ್ಟರು. ಅಷ್ಟೇ ವಿನಹ ಅವರಿಗೆ ಧ್ಯಾನ ತಿಳಿಯದೆ ಅಲ್ಲ. ಅವರಿಗೆ ಅದು ಬೇರೆ, ಇದು ಬೇರೆ .. ಪ್ರಯೋಜನಗಳು ಬೇರೆ ಬೇರೆ.

 

ದಶರಥನು ’ ಪುತ್ರಕಾಮೇಷ್ಟಿ ’ ಯಾಗ ಮಾಡಿದನು. ಎಲ್ಲರನ್ನು ಕರೆಯಬೇಕು. ಏನು ಮಾಡಬೇಕು ? ತಾನು ಧ್ಯಾನದಲ್ಲಿ ಕುಳಿತರೆ ಎಲ್ಲರಿಗೂ ಕಾಣಿಸುತ್ತದಾ? ಅಲ್ಲಿ ಎಲ್ಲರ ಸಂಕಲ್ಪಬೇಕು. ಅದು ರಾಜ್ಯಕ್ಕೆ ಸಂಬಂಧಿಸಿದ್ದು, ವೈಯಕ್ತಿಕಕ್ಕೆ ಸಂಬಂಧಿಸಿದ್ದಲ್ಲ. ಆದ್ದರಿಂದ, ಎಲ್ಲರ ಸಮಕ್ಷಮದಲ್ಲಿ .. ಆ ಹೋಮ ಅವೆಲ್ಲಾ .. ಮಾಡಿದರೇನೆ ವಿನಹ ಅಲ್ಲಿ ಅದು ನಡೆಯುವುದಿಲ್ಲ. ಮತ್ತೆ ಅದು ಬೇರೆ ತಂತ್ರಜ್ಞಾನ.

 

ಜೆ.ಕೆಅಂದರೆ, ಈಗ ಈ ಧ್ಯಾನ ಕೂಡಾ .. ಸಾಮೂಹಿಕ ಧ್ಯಾನ ?

 

ಪತ್ರೀಜಿಸಾಮೂಹಿಕ ಧ್ಯಾನವು ಮೂರು ಪಟ್ಟು ಅಧಿಕ ಶಕ್ತಿಯುತವಾಗಿರುತ್ತದೆ . ಪಿರಮಿಡ್‌ನಲ್ಲಿ ಕುಳಿತು ಮಾಡುವ ಧ್ಯಾನ ಮೂರರಷ್ಟು ಹೆಚ್ಚು ಶಕ್ತಿ ಆಗಿರುತ್ತದೆ, ಹುಣ್ಣಿಮೆ ರಾತ್ರಿಗಳಲ್ಲಿ ಮಾಡುವ ಧ್ಯಾನ ಮೂರರಷ್ಟು ಅಧಿಕ ಶಕ್ತಿಯುತವಾಗಿರುತ್ತದೆ. ಒಬ್ಬ ಯೋಗಿಯ ಸಮಾಧಿಯ ಹತ್ತಿರ ಕುಳಿತುಕೊಂಡು ಮಾಡುವ ಧ್ಯಾನ ಮೂರರಷ್ಟು ಅಧಿಕ ಶಕ್ತಿಯುತವಾಗಿರುತ್ತದೆ. ಹಾಗೆಯೆ, ಕಾಡಿನಲ್ಲಿ ಮಾಡುವ ಧ್ಯಾನ; ಪ್ರತಿಯೊಂದು ಮರ ಸಹ ಒಂದು ದೊಡ್ಡ ಕಾಂತಿಯ ರಾಶಿ/ಸಮೂಹ; ಆದ್ದರಿಂದ, ಕಾಡಿನಲ್ಲಿ ಮರಗಳ ನಡುವೆ ಮಾಡುವ ಧ್ಯಾನ ಮೂರರಷ್ಟು ಅಧಿಕ ಶಕ್ತಿಯುತವಾಗಿರುತ್ತದೆ. ಒಳ್ಳೆಯ ಸಂಗೀತದೊಂದಿಗೆ ಮಾಡುವ ಧ್ಯಾನ ಮೂರರಷ್ಟು ಅಧಿಕ ಶಕ್ತಿಕರವಾಗಿರುತ್ತದೆ.

 

ಜೆ.ಕೆಈಗ ಈ ಧ್ಯಾನವನ್ನು ಮಾಡಬೇಕಾದರೆ ಎಷ್ಟು ಖರ್ಚು ಮಾಡಬೇಕು? ಎಷ್ಟು ಬಂಡವಾಳ ಹಾಕಬೇಕು ?

 

ಪತ್ರೀಜಿ: ತುಂಬಾ ಬಂಡವಾಳ ಬೇಕು.

 

ಜೆ.ಕೆಆದರೆ ಕಷ್ಟವೇ..

 

ಪತ್ರೀಜಿ: ಅಂದರೆ .. 24 ಗಂಟೆಗಳಲ್ಲಿ ಸ್ವಲ್ಪ ಸಮಯವನ್ನು ಮೀಸಲಿಡಬೇಕು. ಈ ಸಮಯವು ಬಂಡವಾಳವಾಗಿ ಬೇಕಾಗಿದೆ.

 

ಜೆ.ಕೆಹಣ ಅಲ್ಲವೆ ?

 

ಪತ್ರೀಜಿಸಮಯ .. ಅದು ಬಂಡವಾಳ ಅಲ್ಲವೆ ? ’ ಬಂಡವಾಳ ’ ಅಂದರೆ ಏನು? ’ಇನ್‌ಪುಟ್’. ಅಂದರೆ, ಒಂದು ವಸ್ತುವು ತಯಾರು ಮಾಡಬೇಕಾದರೆ ಯಾವ ಕಚ್ಚಾ ಪದಾರ್ಥಗಳು ಬೇಕಾಗಿದೆಯೊ ಅದನ್ನು ’ ಬಂಡವಾಳ ’ ಎನ್ನುತ್ತಾರೆ. ’ ಬಂಡವಾಳ ’ ಇಲ್ಲದೆ ಯಾವುದೂ ಬರುವುದಿಲ್ಲ ಸ್ವಾಮಿ. ಪ್ರತಿಯೊಂದಕ್ಕೂ ’ ಬಂಡವಾಳ ’ ಇರುತ್ತದೆ. ನಾವು ತೆಲುಗು ಕಲಿಯಬೇಕು. ಬಂಡವಾಳ ಇಲ್ಲವೆ ? ಗುರುಗಳ ಹತ್ತಿರ ಪ್ರತಿದಿನ ಹೋಗಿ ಬರಬೇಕಲ್ಲವೆ. ಹಾಗೆ ಮಾಡದಿದ್ದರೆ ಭಾಷೆಯು ಹೇಗೆ ಬರುತ್ತದೆ? ಸಂಗೀತವನ್ನು ಕಲಿಯಬೇಕು. ದಿನನಿತ್ಯಾ ಗುರುಗಳ ಹತ್ತಿರ ಹೋಗಿ ನಾಲ್ಕು ಗಂಟೆಗಳು ಕುಳಿತುಕೊಳ್ಳಬೇಕೆ, ಬೇಡವಾ ? ಅದು ’ ಬಂಡವಾಳ ’ ಅಲ್ಲದೆ ಇನ್ನೇನು ? ಧ್ಯಾನಕ್ಕೆ ಬಂಡವಾಳ ಸಮಯ .. ಅದು ಇಲ್ಲದಿದ್ದರೆ ಧ್ಯಾನ ಬರುವುದಿಲ್ಲ.

 

ಜೆ.ಕೆಅಂದರೆ, ಬೇರೆ ಇನ್ನೇನು ಬೇಡವೆ? ಅಂದರೆ .. ಅರ್ಹತೆ .. ಹತ್ತನೇ ತರಗತಿ ಓದಿರಬೇಕು ಹೀಗೆ..

 

ಪತ್ರೀಜಿಯಾವ ವಿದ್ಯೆಗಾದರೂ ಅರ್ಹತೆ ಬೇಕಾಗಿರುವುದು ಒಂದು ಬಂಡವಾಳವೆ. ’ ಶ್ರದ್ಧಾವಾನ್ ಲಭತೇ ಜ್ಞಾನಂ ’ ಅಂದರೆ, ಶ್ರದ್ಧೆ ಎಂಬುವುದು ಮತ್ತೊಂದು ಬಂಡವಾಳ. ಜ್ಞಾನ ಎಂಬುವುದು ಆದಾಯ.

 

ಜೆ.ಕೆಅದು ಇದ್ದರೆ ಸಾಕೆ ?

 

ಪತ್ರೀಜಿಏನಯ್ಯಾ ಸ್ವಾಮಿ, ಅದಿದ್ದರೆ ಇನ್ನೇನುಬೇಕು? ಯಾರಿಗೂ ಶ್ರದ್ಧೆಯೇ ಇಲ್ಲ. ಬಿರ್ಲಾಗೆ, ಟಾಟಾಗೆ ಶ್ರದ್ಧೆ ಇರುವುದರಿಂದಲೇ ಅಂತಹ ಕೋಟೀಶ್ವರರಾಗಿದ್ದಾರೆ. ನಮಗೆ ಯಾವುದರ ಕುರಿತು ಶ್ರದ್ಧೆ ಇರುತ್ತದೆಯೊ ಅದಕ್ಕೆ ಸಂಬಂಧಿಸಿದ ಜ್ಞಾನವು ಬರುತ್ತದೆ. ನಮಗೆ ಶ್ರದ್ಧೆ ಎನ್ನುವುದು ಬಂಡವಾಳ. ನಮಗೆ ಜ್ಞಾನ ಎಂಬುವುದು ಆದಾಯ. ಧ್ಯಾನ ಬರಬೇಕು. ಧ್ಯಾನಕ್ಕೆ ಬಂಡವಾಳ ಇಡಬೇಕು .. ಅದೇ ಸಮಯ. ಸಮಯವನ್ನು ಸರಿಹೊಂದುವಷ್ಟು ಇಟ್ಟರೆ ಧ್ಯಾನ ಲಭ್ಯವಾಗುತ್ತದೆ. ಬಂಡವಾಳ ಇಲ್ಲದೆ ಧ್ಯಾನ ಹೇಗೆ ಬರುತ್ತದೆ? ಇದು ಅಶಾಸ್ತ್ರೀಯ. ಬಂಡವಾಳ ಅಂದರೆ input. Most important input is your sincerity.ಶ್ರದ್ಧೆ ಎನ್ನುವುದು ಬಂಡವಾಳ.

 

ಜೆ.ಕೆಈ ಧ್ಯಾನವನ್ನು ಯಾರಾದರೂ ಮಾಡಬಹುದೆ? ಅಂದರೆ, ವಯಸ್ಸು ವ್ಯತ್ಯಾಸಗಳಾಗಲೀ .. ಅಂದರೆ, 40 ಅಥವಾ 50 ವಯಸ್ಸಿನ ಅನಂತರ ಮಾಡಬೇಕೆ? ಚಿಕ್ಕ ಮಕ್ಕಳು ಸಹ ಮಾಡಬಹುದೆ ?

 

ಪತ್ರೀಜಿ: ಐದು ವರ್ಷಗಳ ಒಳಗೆ ..All ready ದಿವ್ಯಚಕ್ಷುವು ತೆರೆದುಕೊಂಡಿರುತ್ತದೆ. ಆದ್ದರಿಂದ, ಅವರಿಗೆ .. ಧ್ಯಾನದ ಅವಶ್ಯಕತೆ ಇಲ್ಲ. ಅನಂತರ ಕ್ರಮಕ್ರಮವಾಗಿ ದಿವ್ಯಚಕ್ಷುವು ಕುಗ್ಗುತ್ತದೆ. ಆದ್ದರಿಂದ, ಅವರು ಐದು ವರ್ಷದ ನಂತರ ಪ್ರಾರಂಭಿಸಬೇಕು.

 

ಜೆ.ಕೆಧ್ಯಾನ ಎಷ್ಟು ಹೊತ್ತು ಮಾಡಬೇಕು ?

 

ಪತ್ರೀಜಿಎರಡು ತರಹ ಇವೆ. ಒಂದು ಕನಿಷ್ಠ ಪಕ್ಷ .. ಎರಡನೆಯದು ಉತ್ತಮ ಪಕ್ಷ. ಕನಿಷ್ಠ ಪಕ್ಷ ಐದು ವರ್ಷ ದಾಟಿದ ನಂತರ ಯಾರ ವಯಸ್ಸು ಎಷ್ಟು ಇದೆಯೊ ಅಷ್ಟು ನಿಮಿಷಗಳು ಕುಳಿತುಕೊಳ್ಳಬೇಕು. ಇನ್ನು ಉತ್ತಮ ಪಕ್ಷ ಎಂದರೆ ಸ್ಕೈ ಈಜ್ ದಿ ಲಿಮಿಟ್. ಮಾಡಿಕೊಂಡವರಿಗೆ ಮಾಡಿಕೊಂಡಷ್ಟು. ಬಂಡವಾಳ ಹೊಡಿದವರಿಗೆ, ಬಂಡವಾಳ ಹೊಡಿದಷ್ಟು ಲಾಭ.

 

ಜೆ.ಕೆಅಂದರೆ, ಕಡಿಮೆ ಬಂಡವಾಳ ಹಾಕಿ ಅಧಿಕ ಲಾಭವನ್ನು ಹೊಂದುವ ಉಪಾಯ ಏನಾದರೂ ಇದರಲ್ಲಿ ಇದೆಯಾ ಎಂದು ?

 

ಪತ್ರೀಜಿಆ ತರಹ ಎಲ್ಲೂ ಇಲ್ಲ. ಇದರಲ್ಲೂ ಕೂಡಾ ಇಲ್ಲ.

 

ಜೆ.ಕೆ: ಒಬ್ಬ ಧ್ಯಾನಿಗೆ ಧ್ಯಾನ ಮಾಡುವಾಗ ಎಂತಹ ಸ್ಥಿತಿಗಳು ಬರುತ್ತವೆ ?

 

ಪತ್ರೀಜಿ: ಬಗೆಬಗೆಯ ಸ್ಥಿತಿಗಳು ಬರುತ್ತವೆ. ಶರೀರವು ಹಗುರವಾದ ಹಾಗೆ ಅನಿಸುತ್ತದೆ. ಶರೀರವು ಎಲ್ಲೋ ಹಾರಿಹೋದ ಹಾಗೆ ಅನಿಸುತ್ತದೆ. ಸಂಗೀತ ಕೇಳಿಸುತ್ತದೆ. ಅನಾಹತ ನಾದಗಳು ಕೇಳಿಸುತ್ತದೆ. ನಮಗೆ ಒಳಗೆಲ್ಲಾ ಶಕ್ತಿಯ ಸಂಚಾರವು ತಿಳಿಯುತ್ತದೆ. ಅದುವರೆಗೂ ಇಲ್ಲದ ’ ನೋವುಗಳು ’ ಬರುತ್ತವೆ. ಇರುವು ನೋವುಗಳು ಹೋಗುತ್ತವೆ.

 

ಜೆ.ಕೆಇಲ್ಲದ ನೋವುಗಳು ಬರುತ್ತವಾ ??

 

ಪತ್ರೀಜಿಬರುತ್ತವೆ, ಹಾಲಾಹಲವು ಮೊದಲು ಬರುತ್ತದೆ ಅಲ್ಲವೆ.

 

ಜೆ.ಕೆ: ನೋವುಗಳೆಂದರೆ .. ಶರೀರ ತಡೆಯಲಾಗದಷ್ಟು ಬರುತ್ತವೆಯೆ ?

 

ಪತ್ರೀಜಿಸಾಯುವಷ್ಟು ನೋವುಗಳು ಬರುತ್ತವೆ.

 

ಜೆ.ಕೆಅಂದರೆ, ಸಂಪೂರ್ಣ ಶರೀರವೆಲ್ಲಾ ಹಿಂಡಿದಹಾಗೆ ಆಗುತ್ತದೆಯೆ ??

 

ಪತ್ರೀಜಿಮಾಡಿ ನೋಡಿ ಸ್ವಾಮೀಜಿ. ಗತ ಜನ್ಮಗಳಲ್ಲಿ ಪಾಪ ಮಾಡಿದ್ದರೆ ಈ ಜನ್ಮದಲ್ಲಿ ಧ್ಯಾನ ಎನ್ನುವುದು ಹಿಂಡಿಹಾಕುತ್ತದೆ. ಗತ ಜನ್ಮಗಳಲ್ಲಿ ಪುಣ್ಯ ಮಾಡಿದ್ದರೆ ಈ ಜನ್ಮದಲ್ಲಿ ಧ್ಯಾನ ಎನ್ನುವುದು ಹಾಯಾಗಿರುತ್ತದೆ. ನಿಜಕ್ಕೂ ಧ್ಯಾನ ಮಾಡಿದ ಹಾಗೆ ತಿಳಿಯುವುದಿಲ್ಲ.

 

ಜೆ.ಕೆ’ ಪುನರ್ಜನ್ಮಗಳು ’ ನೀವು ನಂಬುತ್ತೀರಾ ?

 

ಪತ್ರೀಜಿಒಬ್ಬ ಮನುಷ್ಯನು ನಂಬಿದರೂ ನಂಬದೆ ಹೋದರೂ ಅವು ಇವೆ. ಗತಜನ್ಮಗಳ ಕರ್ಮಗಳ Continuation ಪ್ರಭಾವವೇ ವರ್ತಮಾನ ಜನ್ಮದ ಕರ್ಮಗಳು.

 

ಜೆ.ಕೆಮನುಷ್ಯರೆ ಮನುಷ್ಯರಾಗಿ ಹುಟ್ಟುತ್ತಾರಾ? ಇಲ್ಲದಿದ್ದರೆ ಈ ಪುರಾಣಗಳು ಇವೆಲ್ಲಾ ಓದುವಾಗ ನೀನು ಪಾಪ ಮಾಡಿದರೆ .. ಕ್ರಿಮಿಕೀಟಕಗಳಾಗಿ ಹುಟ್ಟುವೆ .. ಹೀಗೆ ಎಲ್ಲಾ ಹೇಳುತ್ತಾರಲ್ಲವೆ.

 

ಪತ್ರೀಜಿ: ಅವು ಭಯಪಡಿಸಲು ಕೆಲವರು ಹೇಳಿದ ತುಂಟ ಚೇಷ್ಟೆಗಳು. ಹಾಗೆ ಹೇಳಿದರೇನೆ ವಿನಹ ಇವರು ಭಯಪಡುವುದಿಲ್ಲ.

 

ಜೆ.ಕೆಈಗ ನಾನು ಮಾನವ ಜನ್ಮ ತಾಳಿದ್ದೆನೆ ಸಾರ್. ಹೋದ ಜನ್ಮದಲ್ಲಿ ಕೂಡಾ ನಾನು ಮಾನವನಾಗಿಯೆ ಜನ್ಮ ತಾಳಿರುವೇನೆ ? ಬರುವ ಜನ್ಮದಲ್ಲಿ ಕೂಡಾ ನಾನು ಮಾನವನಾಗಿಯೆ ಹುಟ್ಟುವೇನೆ ?

 

ಪತ್ರೀಜಿಇದು ಒಬ್ಬೊಬ್ಬರಿಗೆ ಒಂದೊಂದು ತರಹ ಇರುತ್ತದೆ. ಆದರೆ, ಬೈ ಅಂಡ್ ಲಾರ್ಜ್, ಒಂದು ಬಾರಿ ನಾವು ಮಾನವ ಜನ್ಮದಲ್ಲಿ ಬಂದ ನಂತರ ಆ ಪರಂಪರೆಯು ಪೂರ್ತಿ ಆಗುವವರೆಗೂ .. ಅಂದರೆ ಅದರಲ್ಲಿ ಮುಕ್ತಸ್ಥಿತಿ ಬರುವವರೆಗೂ .. ಅದರಲ್ಲೆ ಇರುತ್ತೇವೆ.

 

ಜೆ.ಕೆಮುಕ್ತಸ್ಥಿತಿ ಬರುವುದು ಅಂದರೆ ? ಈ ಧ್ಯಾನದಲ್ಲಿ ಅದು ಲಭ್ಯವಾಗುತ್ತದೆಯೆ ?

 

ಪತ್ರೀಜಿಮುಕ್ತಸ್ಥಿತಿ ಅಂದರೆ ತನ್ನನ್ನು ತಾನು ಪೂರ್ಣವಾಗಿ ಅರಿತುಕೊಂಡ ಸ್ಥಿತಿ. ಧ್ಯಾನದಲ್ಲಿ ಮಾತ್ರವೇ ಅದು ಲಭ್ಯ.

 

ಜೆ.ಕೆಇನ್ನು ಬೇರೆ ಪ್ರಕ್ರಿಯೆ ಇಲ್ಲವೆ ?

 

ಪತ್ರೀಜಿಬೇರೆ ಪ್ರಕ್ರಿಯೆಗಳಲ್ಲಿ ಸುತ್ತು ಬಳಸಿ ಊಟ ಮಾಡಿದಹಾಗಿರುತ್ತದೆ.

 

ಜೆ.ಕೆಅಂದರೆ, ನೀವು ಯಾವ ಪದ್ಧತಿಗಳನ್ನೂ ನಿಂದಿಸುತ್ತಿಲ್ಲವೆ ? ಇತರರು ಪಾಲಿಸುವ ಪದ್ಧತಿಗಳನ್ನು ನಿಂದಿಸದೇ ಅವು ಸಹ ಪದ್ಧತಿಗಳೆ ಆದರೆ ಇದು ಸುಲಭವಾದ ಪದ್ಧತಿ ಎಂದು ಹೇಳುತ್ತಿದ್ದೀರಾ ?

 

ಪತ್ರೀಜಿ’ ಅದು ಕಷ್ಟ ’, ’ ಇದು ಸುಲಭ ’ ಎಂದಲ್ಲ. ಅದು ಅವರಿಗೆ ತಿಳಿಯದೆ ಅವರಿಗವರೇ ಅನೇಕ ಅವಾಂತರಗಳನ್ನು ಕಲ್ಪಿಸಿಕೊಂಡು ಮಾಡಿದ್ದು. ಈಗ ನಾನು ಹೀಗೆ ಗಾಳಿಯಲ್ಲಿ ಕೈ ತಿರುಗಿಸುತ್ತಾ ಊಟ ಮಾಡಿದೆ ಎಂದುಕೊಳ್ಳಿ. ಇದು ’ಕಷ್ಟಕರ’ವಾದುದ್ದು ಎನ್ನುವಿರೆ ? ಏನು ಹೇಳುತ್ತೀರ ? ನನಗೆ ನಾನೇ ಕಷ್ಟಗಳನ್ನು ಏಕೆ ಕಲ್ಪಿಸಿಕೊಳ್ಳುತ್ತೇನೆ ? ತಿಳಿಯದೆ ಕಲ್ಪಿಸಿಕೊಳ್ಳುತ್ತೇನೆ. ತಿಳಿದು ತಿಳಿದು ಯಾರಾದರೂ ಮಾಡುತ್ತಾರೆಯೆ ? ತಿಳಿಯದೆ .. ಆ ಬಾಯಿ ಎಲ್ಲಿದೆಯೊ ತಿಳಿಯದೆ .. ತಿರುಗಿಸಿ ತಿರುಗಿಸಿ ಕೊನೆಗೆ ಬಾಯಿ ಹತ್ತಿರಕ್ಕೆ ಬರುತ್ತಾನೆ. ಬಾಯಿ ಇಲ್ಲೆ ಇದೆ ಎಂದು ತಿಳಿದುಕೊಂಡ ನಂತರ ಇಲ್ಲಿಗೆ ಬರುತ್ತಾನೆ. ಹಾಗೆಯೇ, ಎಲ್ಲರಿಗೂ ಬಾಯಿ ಇಲ್ಲೆ ಇದೆ ಎಂದು ಹೇಳುವುದಕ್ಕಾಗಿಯೆ ಈ ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟೀಸ್ ಮೂವ್‌ಮೆಂಟ್ ಜನಿಸಿದೆ.

 

ಎಲ್ಲಾ ’ ಗುರು ’ ಕೃಪೆ ಎಂದರೆ .. ಎಲ್ಲಾ ’ ಗುರಿ ’ ಕೃಪೆ .. ನೀವು ರಮಣಮಹರ್ಷಿಯ ಹತ್ತಿರಕ್ಕೆ ಹೋಗಿದ್ದರೆ .. ಅವರು ನಿಮ್ಮ ಜೊತೆ ಮಾತಾಡಿದ್ದರೆ ಅವರು ಅದೇ ಹೇಳುತ್ತಾರೆ ಗೊತ್ತೆ.

 

ಜೆ.ಕೆನೀವು ಈ ಧ್ಯಾನದ ಪ್ರಚಾರವನ್ನು ಅನೇಕ ವರ್ಷಗಳ ಹಿಂದಿನಿಂದಲೆ ಮಾಡುತ್ತಿದ್ದೀರಲ್ಲವೆ, ಆಗ ನಿಮ್ಮ ಕುಟುಂಬ ಸದಸ್ಯರಿಂದ ನಿಮಗೆ …?

 

ಪತ್ರೀಜಿಕೆಲವು ಕುಟುಂಬ ಸದಸ್ಯರು ಆಗಲೂ, ಈಗಲೂ ವಿರುದ್ಧವಾಗಿಯೆ ಇದ್ದಾರೆ. ಕೆಲವರು ಆಗಲೂ, ಈಗಲೂ ಹೋಲಿಸಿದರೆ ಸ್ವಲ್ಪ ಸುಮುಖವಾಗಿಯೆ ಇದ್ದಾರೆ. ಕೆಲವರು ಕುಟುಂಬ ಸದಸ್ಯರು ಆಗಲೂ, ಈಗಲೂ, ಉತ್ಸಾಹಕರವಾಗಿಯೆ ಇದ್ದಾರೆ. ಸದಾ ಹಾಗೆ ಇರುತ್ತದೆ. ಕುಟುಂಬ ದೊಡ್ಡದಲ್ಲವೆ, ಸದಸ್ಯರೂ ಬಗೆಬಗೆಗಳು.

 

ಜೆ.ಕೆಈಗ ನೀವು ಪ್ರಚಾರ ಮಾಡುತ್ತಿರುವ ಪದ್ಧತಿಯಲ್ಲಿ .. ನಿಮ್ಮ ಅನುಚರರು, ನಿಮ್ಮ ಅನುಯಾಯಿಗಳು……

 

ಪತ್ರೀಜಿನನಗೆ ಯಾರೂ ’ ಅನುಚರರು ’ ಇಲ್ಲ, ನನಗೆ ಮಿತ್ರರಿದ್ದಾರೆ.

 

ಜೆ.ಕೆಮಿತ್ರರು ….’ ಶಿಷ್ಯರು ’ ಕೂಡಾ ಇದ್ದಾರೆ.

 

ಪತ್ರೀಜಿಮಿತ್ರರೆ … ನನ್ನ ಜೊತೆ ಸೇರಿ ಕೆಲಸ ಮಾಡುವವರೆಲ್ಲಾ ನನ್ನ ಮಿತ್ರರು. ಅಷ್ಟೇ.

 

ಜೆ.ಕೆ: ಇಲ್ಲಿ ಅದ್ಭುತವಾದಂತಹದ್ದು… ಒಂದು ಶ್ರೇಷ್ಠವಾದ ದೃಷ್ಟಿಯು ಇಲ್ಲಿ ನಿಮ್ಮ ಮೇಲೆ ಬಂದಿದೆ ಸ್ವಾಮಿ. ನಾನು ಅನೇಕ ಬಾರಿ ಕೇಳಿದೆ, ’ ಯಾರೂ ನನ್ನನ್ನು ಗುರುಗಳೆಂದು ಕರೆಯಬೇಡಿ ’ ಎಂದು ನೀವು ಹೇಳುವಿರಂತೆ ! ’ ಗುರುಗಳು ’ ಎಂದು ಹೇಳದಿದ್ದರೆ ಮತ್ತೆ ಹೇಗೆ ?

 

ನಿಮ್ಮ ಮುಖದಲ್ಲಿರುವ ತೇಜಸ್ಸನ್ನು ನೋಡಿದ ತಕ್ಷಣ ನಮಸ್ಕರಿಸಬೇಕೆನಿಸುತ್ತದೆ, ನೀವೇನೊ ಬೈಯುತ್ತೀರಂತೆ. ನಿಜಕ್ಕೂ …

 

ಪತ್ರೀಜಿ’ ಬೈಯುವುದು ’ ಎಂದರೆ…ಸಾಮ, ದಾನ, ದಂಡ, ಭೇದ … ಎನ್ನುವ ನಾಲ್ಕು ಉಪಾಯಗಳಿವೆ. ಸಾಮಕ್ಕಿಂತಾ ದೊಡ್ಡ ಉಪಾಯವು ದಾನ, ದಾನಕ್ಕ್ಕಿಂತಾ ದೊಡ್ಡ ಉಪಾಯವು ಬೈಯುವುದು, ಅಂದರೆ, ದಂಡನೆ. ಅದಕ್ಕಿಂತಾ ದೊಡ್ಡ ಉಪಾಯ ವಿಷಯವು ಕೆಲವು ದಿನಗಳು ದೂರವಾಗಿ ಇರುವುದು !

 

ಜೆ.ಕೆ: ಅಮ್ಮ ಚಿಕ್ಕ ವಯಸ್ಸಿನಲ್ಲಿದ್ದಾಗ ಬೈದರೆ ವರ … ಆ ರೀತಿ ಅನಿಸುತ್ತದೆ.

ಪತ್ರೀಜಿಕೇವಲ ಅದು ಒಂದು ಉಪಾಯ.

 

ಜೆ.ಕೆನಿಜಕ್ಕೂ ’ ಗುರುವು ’ ಅಂದರೆ ಯಾರು ?

 

ಪತ್ರೀಜಿನೀವು ಈಗ ರಮಣಮಹರ್ಷಿಯ ಹತ್ತಿರಕ್ಕೆ ಹೋಗಿದ್ದರೆ, ಅವರು ನಿಮಗೆ ಏನು ಹೇಳುತ್ತಾರೆ ಗೊತ್ತೆ …’ ಗುರಿ ಎನ್ನುವುದೆ ಗುರುವು ’ ಎಂದು. ’ ಗುರಿ ’ ಅಂದರೆ ’ ಶ್ರದ್ಧೆ ’, ಅದೇ ಜೀವನದಲ್ಲಿ ಸರಿಯಾದ ಬಂಡವಾಳ; ಆ ನಮ್ಮ ಬಂಡವಾಳವೆ ನಮಗೆ ಗುರುವು. ಯಾರಿಗೆ ಸಂಗೀತ ಕುರಿತು ಗುರಿ ಇದ್ದರೆ, ಆ ಗುರಿಯೇ ಅವರಿಗೆ ಗುರು, ಒಂದು ತರಗತಿಯಲ್ಲಿ ಅಧ್ಯಾಪಕರು ಪಾಠಗಳನ್ನು ಹೇಳುತ್ತಿದ್ದಾರೆಂದುಕೊಳ್ಳಿ, ಇಬ್ಬರು ವಿದ್ಯಾರ್ಥಿಗಳು ಶ್ರದ್ಧೆಯಿಂದ ಕೇಳುತ್ತಿರುತ್ತಾರೆ, ಉಳಿದವರೆಲ್ಲಾ ಅವರವರ ಗಮನದಲ್ಲಿ ಅವರು ಇರುತ್ತಾರೆ. ಅಧ್ಯಾಪಕರು ಹೇಳಿದ್ದು ಅವರಿಗೆ ಕೇಳಿಸುವುದಿಲ್ಲ. ಏಕೆಂದರೆ, ಅವರು ’ ಬೇರೆ ಗಮನ ’ ದಲ್ಲಿದ್ದಾರೆ. ಇಬ್ಬರು ಶಿಷ್ಯರು ಮಾತ್ರ, ಗುರಿಯಿಂದ ಕೇಳಿಸಿಕೊಳ್ಳುತ್ತಿದ್ದಾರೆ. ಆ ’ ಗುರಿ ’ ಎನ್ನುವುದೆ ಅವರಿಗೆ ’ ಗುರುವು ’ ಆಗಿ ಬದಲಾಗಿದೆ. ಅಂದರೆ ಆ ’ಗುರಿ’ ಇಲ್ಲದಿದ್ದರೆ, ಆ ’ ಗುರುವು ’ ಅಲ್ಲಿ ಇಲ್ಲ. ಆ ’ ಗುರು ’ವನ್ನು ಸೃಷ್ಟಿಸಿದ್ದು ಇವರೆ. ಇವರ ಗುರಿ ಇಲ್ಲದಿದ್ದರೆ, ಅಲ್ಲಿ ಗುರುವು ಗುರುವೇ ಅಲ್ಲ. ಆದ್ದರಿಂದ, ರಮಣಮಹರ್ಷಿ ಏನು ಹೇಳಿದ್ದಾರೆಂದರೆ, ’ ಗುರಿಯೇ ಗುರುವು ’ ಎಂದರು. ಅವರು ಶಾಶ್ವತ ಸತ್ಯವನ್ನು ತಿಳಿದುಕೊಂಡಿರುವವರು. ಯಾವ ಲೋಕಕ್ಕೆ ಹೋದರೂ – ಯಾವ ಕಾಲಕ್ಕೆ ಹೋದರೂ ಅಲ್ಲಿ ಹೇಳುವುದು ಸಹ ಇದೇ… ’ ಗುರಿಯೇ ಗುರುವು ’.

 

ಜೆ.ಕೆಹಾಗಾದರೆ ಈಗ ಲೋಕದಲ್ಲಿ ಪ್ರಚಾರದಲ್ಲಿ ಇದ್ದಹಾಗೆ ’ ಅವರು ಗುರುವು ’, ’ ಅವರು ಹೇಳಿದ ಹಾಗೆ ನಾವು ನಡೆದುಕೊಳ್ಳಬೇಕು ’ ಮುಂತಾದವು ?

 

ಪತ್ರೀಜಿಅವರು ಸಹ ಗುರುವೇ – ಏಕೆ ಆಗುವುದಿಲ್ಲ ? ಅವರು ಗುರು; ಅವರ ಹತ್ತಿರ ’ ಗುರಿ ’ ಇದೆ ಆದ್ದರಿಂದ, ಅವರು ’ ಗುರು ’ ಆಗದೆ ಹೇಗಿರುತ್ತಾರೆ.

 

ಜೆ.ಕೆಬಹಳ ಅದ್ಭುತ ಸಾರ್. ಇದು… ’ ಗುರಿ ’ ಎನ್ನುವುದು … ಯಾರ ಹತ್ತಿರ ಇದ್ದರೆ ಅವರು ಗುರುಗಳಾ ???

 

ಪತ್ರೀಜಿ: ಅಷ್ಟೇ … ಆದರೆ, ನೀವು ’ ಗುರು ’ ಎನ್ನುವ ಪದಕ್ಕೆ ವಿರುದ್ಧ ಪದ ಹೇಳಿ ನೋಡೋಣ ?

 

ಜೆ.ಕೆ: ’ ಶಿಷ್ಯ ’

 

ಪತ್ರೀಜಿಅಲ್ಲ…ಇನ್ನೊಂದು ಹೇಳಿ

 

ಜೆ.ಕೆ?????

 

ಪತ್ರೀಜಿ: ’ ಗುರು ’ವಿಗೆ ವಿರುದ್ಧ ಪದ ’ ಲಘು ’. ಗುರು ಎಂದರೆ ಭಾರವಾಗಿರುವವನು. ಲಘು ಎಂದರೆ ಹಗುರವಾಗಿ ಇರುವವನು. ಒಬ್ಬ ಮನುಷ್ಯನ ಸಂಗೀತವು ಗುರು ಎಂದರೆ…ಅವರಿಗೆ ಸಂಗೀತದ ವಿಷಯದಲ್ಲಿ ಗುರಿ ಇದೆ. ಆದ್ದರಿಂದ … ಸಂಗೀತದ ಗುರು ಆದರು.

 

ನಮ್ಮ ತಂದೆಯವರಿದ್ದಾರೆ. ನಾನು ಸಂಗೀತ ಕಲಿತುಕೊಳ್ಳುತ್ತಿರುವಾಗ ಅವರು ಸದಾ ಹೇಳುತ್ತಿದ್ದರು … ಏನು ಬರುತ್ತದೋ ಸಂಗೀತದಿಂದ ? ಹಣ ಬರುತ್ತದ್ದೆಯೆ ? ’ ಎಂದು ಅವರಿಗೆ ಸಂಗೀತ ಅಂದರೆ ಇಷ್ಟ ಇರುತ್ತಿರಲಿಲ್ಲ ನಾನು ಸಂಗೀತದ ಗುರುಗಳ ಹತ್ತಿರ ಹೋಗುವುದು ಇಷ್ಟವಿರಲಿಲ್ಲ. ಅಂದರೆ, ಅವರಿಗೆ ಸಂಗೀತದಲ್ಲಿ ’ ಗುರಿ ’ ಇಲ್ಲ. ಆದ್ದರಿಂದ, ಅವರು ಸಂಗೀತ ಎನ್ನುವ ಕ್ಷೇತ್ರದಲ್ಲಿ ಒಬ್ಬ ’ಲಘು’. ನಮ್ಮ ತಾಯಿ ’ ಸಂಗೀತ ಕಲಿತುಕೋ, ನಾನು ಬಾಲ್ಯದಲ್ಲಿ ಕಲಿಯಲಿಲ್ಲ ನೀನಾದರೂ ಕಲಿ ’ ಎಂದು ನನ್ನ ಹಿಂದೆ ಬಿದ್ದರು. ಅಂದರೆ, ಆಕೆಗೆ ಸಂಗೀತದ ಬಗ್ಗೆ ’ ಗುರಿ ’ ಇದೆ. ಆದ್ದರಿಂದ, ಆಕೆ ಒಬ್ಬ ಸಂಗೀತ ಗುರು.

 

ಹಾಗೆಯೇ, ಯಾವ ಕ್ಷೇತ್ರದಲ್ಲಾದರೂ ಸರಿಯೆ. ಧ್ಯಾನದಲ್ಲಿ ಸಹ … ಧ್ಯಾನದ ಬಗ್ಗೆ ಯಾರಿಗೆ ’ ಗುರಿ ’ ಇರುತ್ತದೆಯೊ ಅವರೆಲ್ಲಾ ಧ್ಯಾನ ಗುರುಗಳೆ. ಕೃಷ್ಣನಿಗೆ ಧ್ಯಾನದ ಕುರಿತು ’ ಗುರಿ ’ ಇದೆ. ಆದ್ದರಿಂದ, ಅವರು ಒಬ್ಬ ಧ್ಯಾನ ಗುರು. ಯಾವ ರೀತಿಯಲ್ಲಿ ಗುರುವಾಗಿದ್ದಾರೆ ?? ’ ಗುರಿ ’ ಇರುವವರು. ಆದ್ದರಿಂದ, ಗುರು.

 

ಜೆ.ಕೆನೀವು ಹೇಳುವುದು ಎಷ್ಟು ಜನಕ್ಕೆ ಅರ್ಥ ಆಗುತ್ತದೊ, ತುಂಬಾ ನೂತನವಾದ ಸಿದ್ಧಾಂತ ಸ್ವಾಮೀಜಿ.

 

ಪತ್ರೀಜಿಇದು ತುಂಬಾ ಹಳೆಯ ಸಿದ್ಧಾಂತವೆ.

 

ಜೆ.ಕೆ: ಗುರು ಬ್ರಹ್ಮ … ಗುರು ವಿಷ್ಣು … ಗುರು ದೇವೋ…

 

ಪತ್ರೀಜಿಗುರುಬ್ರಹ್ಮ ಎಂದರೆ ’ಗುರಿಯೇ ಬ್ರಹ್ಮ’ ಎಂದು ಅರ್ಥ. ಅಂದರೆ, ನಮ್ಮ ಶ್ರದ್ದೆ ಎನ್ನುವುದೆ ಎಲ್ಲಾದಕ್ಕೂ ಜನ್ಮ ನೀಡುವುದು. ಈ ಗುರಿಯೆ ನಮಗೆ ವಿದ್ಯೆಯನ್ನು ಹುಟ್ಟಿಸುವುದು. ’ಗುರು ವಿಷ್ಣು’ ಅಂದರೆ, ಗುರಿಯೇ ಆ ಸ್ಥಿತಿಗೆ ಬೆಳೆಸುವುದು. ಆ ಗುರಿಯನ್ನು ತೆಗೆದು ಹಾಕಿದರೆ, ಆ ಸ್ಥಿತಿಯು ಮೌಲ್ಯವನ್ನು ಕಳೆದುಕೊಳ್ಳುತ್ತದೆ.

 

ಆ ಗುರಿ ಎನ್ನುವುದು ಸಾಕ್ಷಾತ್ ಪರಬ್ರಹ್ಮ. ಪರಬ್ರಹ್ಮನನ್ನು ತೋರಿಸುವುದು ಸಹ ಈ ಗುರಿ ಎನ್ನುವುದೆ. ಆ ’ ಗುರಿ ’ .. ಆ ಶ್ವಾಸದ ಮೇಲೆ ’ ಗಮನ ’ ಎನ್ನುವುದು ಇಲ್ಲದಿದ್ದರೆ ಶರೀರ ಇರುತ್ತದೆ … ಆದರೆ, ಪರಬ್ರಹ್ಮನ ಅನುಭವ ಇರುವುದಿಲ್ಲ.

 

ಎಲ್ಲಿ ಗುರಿ ಇರುತ್ತದೊ, ಅಲ್ಲಿ ಶಾಸ್ತ್ರ ಇರುತ್ತದೆ. ವಿದ್ಯೆ ಇರುತ್ತದೆ. ’ ಗುರುದೇವೊ ’ … ಅಂದರೆ, ಆ ಗುರಿಯೇ ನಮ್ಮನ್ನು ಮೇಲಿರುವ ದೇವಲೋಕಗಳಿಗೆ ಕೊಂಡೊಯ್ಯುತ್ತದೆ.

 

’ ಗುರು ಸಾಕ್ಷಾತ್ ಪರಬ್ರಹ್ಮ ’ … ಮೂಲ ಸತ್ಯ ಅಂದರೇನೇ ’ ಗುರಿ ’. ಮೂಲ ಚೈತನ್ಯವೇ ’ ಗುರಿ ’ ಸ್ವರೂಪವಾಗಿ ಹೊಂದಿದೆ. ಆದ್ದರಿಂದ, ಅಂತಹ ಗುರುವಿಗೆ ನಮಸ್ಕಾರ. ಅಂದರೆ ಆ ಶ್ರದ್ಧೆಗೆ ನಮಸ್ಕಾರ.

 

ಜೆ.ಕೆವೇದದಲ್ಲಿ ’ ಮಾತೃದೇವೋಭವ ’ .. ’ ಪಿತೃದೇವೋಭವ ’ .. ’ ಆಚಾರ್ಯದೇವೋಭವ ’..ಎಂದು ಹೇಳುತ್ತಾರಲ್ಲವೆ .. ’ ಆಚಾರ್ಯ ’ ಎಂದರೆ ’ ಗುರಿ ’ಯೆ? ಅಥವ ಅದು ಬೇರೆಯೆ ?

 

ಪತ್ರೀಜಿಆಚಾರ್ಯ ಎಂದರೆ .. ’ ಯಃ ಯಾಚಿನೋತಿ ಆಚರತಿ, ಆಚಾರ ಯತಿ ಚ ಸಃ ಆಚಾರ್ಯ ’ ಯಾರು ಜ್ಞಾನವನ್ನು ಅರಸುತ್ತಾರೋ, ಆಚರಿಸುತ್ತಾರೋ, ಇತರರನ್ನು ಆಚರಿಸುವ ಹಾಗೇ ಮಾಡುತ್ತರೋ ಅವರು ಆಚಾರ್ಯರು. ಗುರುವಾದವನು ಇತರರನ್ನು ಆಚರಿಸುವ ಹಾಗೆ ಮಾಡದೇ ಇರಬಹುದು. ಆದರೆ, ಅವರಿಗೆ ’ ಗುರಿ ’ ಇದೆ. ಆಚರಿಸುವ ಹಾಗೆ ಮಾಡಿದರೆ ಅವರು ಆಚಾರ್ಯರು. ಶಂಕರಾಚಾರ್ಯರಿಗೆ ಆತ್ಮಜ್ಞಾನದ ಕುರಿತು ಗುರಿ ಮಾತ್ರವಲ್ಲ… ಎಲ್ಲರಿಂದಲೂ ಆಚರಿಸುವ ಹಾಗೇ ಮಾಡಿದರು. ಆದ್ದರಿಂದ, ಅವರು ಆಚಾರ್ಯರು. ಒಬ್ಬ ಗುರುವಿಗೆ ಇನ್ನೊಬ್ಬರನ್ನು ಕೂಡಾ ಗುರುವಿನ ಹಾಗೆ ತಯಾರು ಮಾಡಬೇಕೆಂಬ ’ ಆ ಗುರಿ ’ ಇದ್ದರೆ ಅವರು ಆಚಾರ್ಯರೆ. ನಿಮಗೆ ಗುರುವು ಆಗಬೇಕೆಂಬ ಗುರಿಯೆ ಅಲ್ಲದೇ, ಎಲ್ಲರೂ ಸಹ ಗುರುವಿನ ಹಾಗೆ ಆಗಬೇಕೆಂಬ ಗುರಿ ಇದ್ದರೆ ನೀವು ಸಹ ಆಚಾರ್ಯರು.

 

ಜೆ.ಕೆಧ್ಯಾನ ಮಾಡಿದರೆ ನಾವು ಯಾರ ಹತ್ತಿರ ಹೋಗಬೇಕೆಂದರೆ ಅವರ ಹತ್ತಿರಕ್ಕೆ, ಎಲ್ಲಿಗೆ ಹೋಗಬೇಕೆಂದರೆ ಅಲ್ಲಿಗೆ ಹೋಗಬಹುದೆ ??

 

ಪತ್ರೀಜಿಅವರೇ ನಿಮ್ಮ ಬಳಿ ಬರುತ್ತಾರೆ. ಅವರ ಹತ್ತಿರ ಹೋಗುವ ಶಕ್ತಿ ನಿಮಗಿಲ್ಲ. ಆದರೆ, ನಿಮ್ಮ ಬಳಿ ಬರುವ ಶಕ್ತಿ ಅವರಿಗಿದೆ. ಆದರೆ, ಅವರು ನಿಮ್ಮ ಹತ್ತಿರ ಬಂದಾಗ ಅವರನ್ನು ನೋಡುವ ಶಕ್ತಿ ನೀವು ಸಂಪಾದಿಸಿಕೊಳ್ಳಬಹುದು. ಅದೇ ಧ್ಯಾನ.

 

ಜೆ.ಕೆ: ನೀವು ಹೇಳುತ್ತಿದ್ದರೆ ಎಲ್ಲಾ ವಿಷಯಗಳು ತುಂಬಾ ಹೊಸದಾಗಿದೆ ಎಂದು ಅನಿಸುತ್ತಿದೆ. ಅದ್ಭುತವಾಗಿ ಭಾಸವಾಗುತ್ತಿದೆ. ”

 

ಪತ್ರೀಜಿ: ರಾವಣಾಸುರನು ಧ್ಯಾನ ಮಾಡುತ್ತಿರುವಾಗ, ಆತ ಕೈಲಾಸಕ್ಕೆ ಹೋಗಲಿಲ್ಲ. ಶಿವನೆ ಆತನ ಬಳಿ ಬಂದನು.

 

ಜೆ.ಕೆಅಂದರೆ, ಆತನನ್ನು ಬರಮಾಡಿಕೊಳ್ಳುವ ಶಕ್ತಿ ….

 

ಪತ್ರೀಜಿಆತನನ್ನು ಯಾರೂ ಬರಮಾಡಿಕೊಳ್ಳುವುದಿಲ್ಲ. ದೇವಲೋಕಗಳ ವಾಸಿಗಳು ತಮ್ಮಷ್ಟಕ್ಕೆ ತಾವೆ ಬರುತ್ತಾರೆ. ಅವರು ಇಷ್ಟಪೂರ್ವಕವಾಗಿ ಬಂದಾಗ ಅವರನ್ನು ನೋಡುವ ಶಕ್ತ್ತಿಯನ್ನು ನಾವು ಸಂಪಾದಿಸಿಕೊಳ್ಳಬೇಕು. ಬರಮಾಡಿಕೊಳ್ಳುವ ಶಕ್ತಿ ಯಾರಿಗೂ ಇಲ್ಲ. ಒಂದು ಆತ್ಮ ಇನ್ನೊಂದು ಆತ್ಮವನ್ನು ಬರಮಾಡಿಕೊಳ್ಳಲಾರದು. ಬರಮಾಡಿಕೊಳ್ಳುವುದು ಎಂದರೆ ಅದು ಮಹಾಬಲತ್ಕಾರ. ಆ ಪದಜಾಲವೆ ಕೂಡದು. ಧ್ಯಾನ ಮಾಡದಿದ್ದರೆ ಅವರು ಬಂದರೂ ಸಹ ನೋಡಲಾರದ ಸ್ಥಿತಿಯಲ್ಲಿ ನಾವು ಇರುತ್ತೇವೆ.

 

ಜೆ.ಕೆಬಂದರೆ ಹೇಗೆ ನೋಡಬಹುದು ಸಾರ್ ?

 

ಪತ್ರೀಜಿಮೂರನೆಯ ಕಣ್ಣು ತೆಗೆದುಕೊಂಡರೆ ಅವರು ಕಾಣುತ್ತಾರೆ. ಮೂರನೆಯ ಕಣ್ಣು ಏಕೆಂದರೆ … ಅವರು ಭೌತಿಕ ದೇಹದೊಂದಿಗೆ ಬರುವುದಿಲ್ಲ ಅಲ್ಲವೆ ! ಅವರ ಹತ್ತಿರ ಭೌತಿಕದೇಹ ಇಲ್ಲವಲ್ಲಾ.

 

ಜೆ.ಕೆಅಂದರೆ, ಭಗವದ್ಗೀತೆಯಲ್ಲಿ ’ ದಿವ್ಯ ಪದಾನಿ ತೇ ಚಕ್ಷುವು ’ ಎಂದು ಅರ್ಜುನನಿಗೆ ಕೃಷ್ಣ ಪರಮಾತ್ಮ ’ ಪಕ್ಕದಲ್ಲೆ ಇದ್ದು ಕೂಡಾ ನೀನು ನೋಡಲಾರೆ. ನೋಡಬೇಕೆಂದರೆ ನಿನಗೆ ಬೇರೆ ಕಣ್ಣು ಬೇಕಾಗಿದೆ. ಅದು ನೀಡುತ್ತೇನೆ ’, ಎಂದನು.

 

ಪತ್ರೀಜಿನಾಟಕೀಯವಾಗಿ ’ ಕೊಡುತ್ತೇನೆ ’ ಎಂದನು. ಯಾರೂ ಯಾರಿಗೂ ಏನೂ ಕೊಡಲಾಗುವುದಿಲ್ಲ. ಅದು ವೇದವ್ಯಾಸರ ಚಮತ್ಕಾರ.

 

ಜೆ.ಕೆನನ್ನ ಮೂರನೆಯ ಕಣ್ಣು ತೆರೆದುಕೊಳ್ಳಬೇಕೆಂದರೆ ನೀವು ಒಬ್ಬ ಗುರುವಾಗಿ ತೆರೆಸಲಾಗುವುದಿಲ್ಲವೆ ??

 

ಪತ್ರೀಜಿನಿಮ್ಮ ಗುರುವು ತೆರೆಸುತ್ತಾನೆ. ನಿಮ್ಮ ಗುರಿಯೇ ನಿಮಗೆ ಗುರುವು.

 

ಗುರಿಯಿಂದ ಸಾಧನೆ ಮಾಡುತ್ತಾ, ಮಾಡುತ್ತಿದ್ದರೆ … ಆಗ ಕ್ರಮಕ್ರಮೇಣ ಮೂರನೆಯ ಕಣ್ಣು ತೆಗೆದುಕೊಳ್ಳುತ್ತದೆ.

 

ಜೆ.ಕೆಓಹೋ… ಅದ್ಭುತ … ನಮ್ಮ ಬೀದಿಯಲ್ಲಿ ಒಬ್ಬಾತ ಇದ್ದಾನೆ. ಆತನಿಗೆ ಧ್ಯಾನವೆಂದರೆ ತುಂಬಾ ಇಷ್ಟ. ಆತ ’ ನಾನು ಪೂರ್ವಜನ್ಮ ನೋಡಿಕೊಂಡಿದ್ದೇನೆ ’ ಎಂದು ಹೇಳಿದನು …

 

ಪತ್ರೀಜಿಹೌದು .. ಏಕೆ ನಗುತ್ತಿರಿ ? ಅಂದರೆ …. ನಿಮಗೆ ಇದೆಲ್ಲಾ ಹಾಸ್ಯಾಸ್ಪದವಾಗಿದೆಯೆ ?

 

ಜೆ.ಕೆಹಾಸ್ಯಾಸ್ಪದ ಅಲ್ಲ ಸಾರ್ … ಅಂದರೆ ಧ್ಯಾನದಲ್ಲಿ ’ ನಾನು ಇಂತಹ ಜನ್ಮ ತೆಗೆದುಕೊಂಡಿದ್ದೇನೆ ’ ಎಂದು ತಿಳಿಯುತ್ತದೆಯಾ ಸಾರ್ ???

 

ಪತ್ರೀಜಿಹೌದು, ಬುದ್ಧನು ತಿಳಿದುಕೊಳ್ಳಲಿಲ್ಲವೆ ??

 

ಜೆ.ಕೆಹೌದು … ಆದರೆ … ಆ ಕಾಲ ಬೇರೆ – ಈ ಕಾಲ ಬೇರೆ ಅಲ್ಲವೆ ?

 

ಪತ್ರೀಜಿನಿಜಕ್ಕೂ ಹೇಳಬೇಕೆಂದರೆ ಈ ಕಾಲದಲ್ಲೇ ಇನ್ನೂ ಬೇಗ ಬರುತ್ತದೆ .. ಏಕೆಂದರೆ….ಭೂಮಿ ಎಂಬುವುದು ಸದ್ಯಕ್ಕೆ ಒಂದು ಪ್ರತ್ಯೇಕ ಮಹಾಶಕ್ತಿ ಕಕ್ಷೆಯ ಒಳಗೆ ಹೋಗುತ್ತಿದೆ. ಅದನ್ನು ’ ಫೋಟಾನ್ ಬಾಂಡ್ ’ ಎನ್ನುತ್ತಾರೆ. ಅಂದಿನ ಕಾಲಕ್ಕಿಂತ, ಈ ಸಮಯದಲ್ಲಿ ಧ್ಯಾನ ಮಾಡಿದರೆ ಎಲ್ಲರಿಗೂ ತುಂಬಾ ಬೇಗ ಅನುಭವಗಳು ಬರುತ್ತವೆ.

 

ಜೆ.ಕೆಹಿಮಾಲಯಗಳಲ್ಲಿ – ಬಾಬಾಗಳು ಅವರೆಲ್ಲರೂ ಇರುತ್ತಾರಲ್ಲವೆ ಸ್ವಾಮೀಜಿಗಳು ಇರುತ್ತಾರಲ್ಲವೆ – ಅವರ ಕುರಿತು ಹೇಳಿ.

 

ಪತ್ರೀಜಿಪ್ರತಿಯೊಂದು ಕಡೆ ಸ್ವಾಮೀಜಿಗಳಿರುತ್ತಾರೆ.

 

ಜೆ.ಕೆಹಿಮಾಲಯಗಳಲ್ಲಿ ಮಾತ್ರ ಅಲ್ಲವೆ ?

 

ಪತ್ರೀಜಿಹೈದರಾಬಾದ್‌ನಲ್ಲಿ ಕೂಡಾ ಇರುತ್ತಾರೆ, ನಾಂಪಲ್ಲಿಯಲ್ಲಿ ಕೂಡಾ ಇರುತ್ತಾರೆ. ’ ನಾಂಪಲ್ಲಿ ಬಾಬಾ ’ ಕುರಿತು ನಿಮಗೆ ತಿಳಿದಿಲ್ಲವೆ ??

 

ಜೆ.ಕೆ’ ನಾಂಪಲ್ಲಿ ’ ಬಾಬಾ ಹೆಸರು ಕೇಳಿದ್ದೇನೆ. ಅಂದರೆ, ಇವರಿಗೆ ಹಿಮಾಲಯಗಳಿಲ್ಲಿರುವ ಸ್ವಾಮಿಗಳ ಶ್ರೇಣಿ ಇರುತ್ತದೆಯೆ ?

 

ಪತ್ರೀಜಿ’ ಅವರಷ್ಟು ಶ್ರೇಣಿ ’ ಇರುವುದಿಲ್ಲ … ಸ್ವಲ್ಪ ಹೆಚ್ಚು ಇರುತ್ತದೆ.

 

ಜೆ.ಕೆಅಂದರೆ ಧ್ಯಾನ ಮಾಡಲು ಹಿಮಾಲಯಗಳಿಗೆ ಹೋಗಬೇಕಾದ ಅವಶ್ಯಕತೆ ಇಲ್ಲವೆ ??

 

ಪತ್ರೀಜಿ: ಜನಾರಣ್ಯದಲ್ಲಿ ಇದ್ದು ಯೋಗಿ ಆದವನು ಸಾಮಾನ್ಯ ವೃಕ್ಷಾರಣ್ಯದಲ್ಲಿರುವ ಯೋಗಿಗಿಂತಾ ಉತ್ತಮ. ತಡೆದುಕೊಳ್ಳುವ ಶಕ್ತಿ ತುಂಬಾ ಹೆಚ್ಚಾಗಿ ಇದ್ದರೇನೆ ವಿನಹ ಅವರು ಇಲ್ಲಿ ಇರಲಾರರು – ಇಲ್ಲಿ ಇದ್ದಾರೆ. ಅಂದರೆ … ಅವರ ಶಕ್ತಿ ಹೆಚ್ಚು, ಅವರ ಸಾಧನೆಯು ಹೆಚ್ಚು. ಲಂಕೆಯಲ್ಲಿ ಸೀತೆಗೆ ಏನು ಆಗಲಿಲ್ಲವೆಂದರೆ ಆಕೆಯ ಶಕ್ತಿಯು ಹೆಚ್ಚಲ್ಲವೆ. ಇಲ್ಲದಿದ್ದರೆ ಗಲಾಟೆ ಆಗುತ್ತಿತ್ತು. ಆಕೆಯ ಶಕ್ತಿಯೆ ಹೆಚ್ಚು ಆದ್ದರಿಂದ ಲಂಕೆಯಲ್ಲಿದ್ದರೂ ಆಕೆಗೆ ಏನೂ ಆಗಲಿಲ್ಲ.

 

ಜೆ.ಕೆ’ ಬಾಬಾ ’ ಸಿನಿಮ ನೊಡಿದ್ದೇನೆ ಸಾರ್ … ಅದು ತುಂಬಾ ಚೆನ್ನಾಗಿದೆ ಎಂದೆನಿಸಿತು ಆದರೆ, ಆ ಮುದ್ರೆಗಳಿಗೆ ಏನಾದರೂ ಪ್ರತ್ಯೇಕವಾದ ಅರ್ಥವಿರುತ್ತದೆಯೆ ಸಾರ್ ?

 

ಪತ್ರೀಜಿಈಗ ನೀವು ದೇವಾಲಯಗಳಿಗೆ ಹೋದರೆ ವಿಗ್ರಹಗಳಿಗೆ ’ ಅಭಯ ಮುದ್ರೆ ’ – ’ ವರದ ಮುದ್ರೆ’ ಮುಂತಾದ ಮುದ್ರೆಗಳು ಇರುತ್ತದೆ ಅಲ್ಲವೆ. ’ ಅಭಯ ’ ಅಂದರೆ … ’ಭಯರಹಿತವಾಗಿ…ಇದ್ದರೆ…ನಿಮಗೆ ಬೇಕಾದ ವರಗಳೆಲ್ಲಾ ಸಿಗುತ್ತವೆ ’ ಎಂದು ಅವರ ಭಾವನೆ. ಸದಾ ಭಯಪಡುತ್ತಿದ್ದರೆ ಯಾವ ವರಗಳು ಸಿಗುವುದಿಲ್ಲ. ನಮ್ಮಲ್ಲಿರುವ ಭಯವನ್ನು ತೆಗೆದರೆ ಬರಬೇಕಾದ ವರಗಳೆಲ್ಲಾ ನಮಗೆ ಬರುತ್ತವೆ ಎಂದರ್ಥ.

 

’ ಬಾಬಾ ಮುದ್ರೆ ’ – ಯಲ್ಲಿ ಕಿರುಬೆರಳಿಗೆ ಅರ್ಥ – ಭೌತಿಕ ಶರೀರ. ಉಂಗುರದ ಬೆರಳು ಮನಸ್ಸಿಗೆ ಸಂಬಂಧಪಟ್ಟಿದ್ದು. ಮಧ್ಯೆ ಬೆರಳು-ಮಧ್ಯೆಯಲ್ಲಿರುವ ಬೆರಳು ಈ ಎರಡಕ್ಕಿಂತಾ ದೊಡ್ಡದಾಗಿರುವ ಬೆರಳು, ಇದು ಬುದ್ಧಿಗೆ ಸಂಕೇತ. ಶರೀರಕ್ಕಿಂತಾ ಮನಸ್ಸು ಶ್ರೇಷ್ಠ, ಮನಸ್ಸಿಗಿಂತಾ … ಬುದ್ಧಿ ಶ್ರೇಷ್ಠ.

 

ಈ ಐದು ಬೆರಳುಗಳಲ್ಲಿ ಮಧ್ಯ ಬೆರಳು ಬುದ್ಧಿ. ಯಾರು ಹೆಚ್ಚು ತಿನ್ನದೆ, ಕಡಿಮೆ ತಿನ್ನದೆ ಮಧ್ಯೇ ಮಾರ್ಗದಲ್ಲಿ ಇರುತ್ತಾರೆಯೊ, ಯಾರು ಹೆಚ್ಚು ಮಾತನಾಡದೇ – ಕಡಿಮೆ ಮಾತನಾಡದೇ ಮಧ್ಯೇ ಮಾರ್ಗದಲ್ಲಿ ಇರುತ್ತಾರೆಯೊ – ಹೆಚ್ಚು ನಿದ್ರೆ ಮಾಡದೆ ಕಡಿಮೆ ನಿದ್ದೆ ಮಾಡದೆ ಮಧ್ಯಸ್ಥವಾಗಿ ಇರುತ್ತಾರೊ – ಎಲ್ಲದರಲ್ಲೂ … ಮಧ್ಯಸ್ಥರಾಗಿ ಇರುತ್ತಾರೋ ಮಧ್ಯದಿಂದಲೆ ಆ ಮಧ್ಯಸ್ಥನು ಎಂದರ್ಥ, ಅದೇ ಬುದ್ಧಿ. ಅದಕ್ಕೆ ’ ಪಾಂಡವರಲ್ಲಿ ಮಧ್ಯಮನು ನಾನು ’ ಎಂದು ಕೃಷ್ಣನು ಹೇಳಿದ. – ’ ಅತಿ ಸರ್ವತ್ರಾ ವರ್ಜಯೇತ್ ’. ’ ಅತಿ ’ ಇರುವವನಿಗೆ ಬುದ್ಧಿ ಇಲ್ಲ…ಬುದ್ಧಿಗೆ ಸಂಕೇತ ’ ಮಧ್ಯೆ ಬೆರಳು ’ ಎಂದರ್ಥ.

 

ನಂತರ ನಾಲ್ಕನೆಯದು ತೋರು ಬೆರಳು ಅಂದರೆ – ಎಲ್ಲರನ್ನೂ ಕರೆದಾಗ -’ ನೀನು ಬಾರಪ್ಪಾ ’ ಎಂದು ತೋರು ಬೆರಳು ತೋರಿಸಿಯೆ ಕರೆಯುತ್ತೇವೆ. ತೋರುಬೆರಳು ಆತ್ಮಕ್ಕೆ ಸಂಕೇತ. ನೀನು ಯಾರು…? ನೀನು ಒಂದು ಆತ್ಮ. ಆದ್ದರಿಂದ, ನಿನ್ನ ಆತ್ಮನನ್ನು ಸರಿಯಾಗಿ ನೋಡಿಕೊ, ನಿನ್ನ ದೇಹವನ್ನು ಬಿಡು – ನಿನ್ನ ಮನಸ್ಸನ್ನು ಪಕ್ಕಕ್ಕೆ ಇಡು – ನಿನ್ನ ಬುದ್ಧಿಯನ್ನು ಕೂಡಾ ಪಕ್ಕಕ್ಕೆ ಇಡು … ’ ನಿನ್ನ ನೀನು ಸರಿಯಾಗಿ ನೋಡಿಕೊ ’. ಸರ್ವ ಧರ್ಮಾನ್ ಪರಿತ್ಯಜ್ಯ … ಶರೀರ ಧರ್ಮವನ್ನು, ಮನೋಧರ್ಮವನ್ನು, ಬುದ್ಧಿ ಧರ್ಮವನ್ನು ಬಿಡು … ’ ನಿನ್ನನ್ನು ನೀನು ಶರಣು ಬೇಡಿಕೊ ’ ಎನ್ನುವುದಕ್ಕೆ ಈ ತೋರು ಬೆರಳೇ ಸೂಚನೆ.

 

ಹೆಬ್ಬೆರಳು ಸರ್ವಾತ್ಮಕ್ಕೆ ಸಂಕೇತ. ಆ ಬೆರಳು ’ ಅಲಕ್ ನಿರಂಜನ್ ’.

 

’ ಬಾಬಾ ಮುದ್ರೆ ’ಯಲ್ಲಿ … ಏನಿದೆ ? ಈ ಮನಸ್ಸನ್ನು, ಈ ಬುದ್ಧಿಯನ್ನು ಪ್ರಕ್ಷಾಳನೆ ಮಾಡುವುದಕ್ಕಾಗಿ ಹೀಗೆ ಕಿರು ಬೆರಳು-ತೋರು ಬೆರಳು-ಇವನ್ನು ಕದಲಿಸದೆ ಉಂಗುರದ ಬೆರಳು, ಮಧ್ಯೆ ಬೆರಳು ಮಡಚಿ ಮುದ್ರೆಯನ್ನು ಹಾಕಿದ್ದಾರೆ ಎಂದರ್ಥ. ಪ್ರಕ್ಷಾಳನೆ ಮಾಡಬೇಕಾದ್ದು ಆತ್ಮವನಲ್ಲ, ಶರೀರವನ್ನಲ್ಲ…ಪ್ರಕ್ಷಾಳನೆ ಮಾಡಬೇಕಾಗಿರುವುದು ಮನಸ್ಸನ್ನು ಮತ್ತು ಬುದ್ಧಿಯನ್ನು ಚಂಚಲತೆಯಿಂದ ಇರುವ ಮನಸ್ಸನ್ನು, ಮತ್ತು ಅಪರಿಪಕ್ವತೆಯಿಂದ ಇರುವ ಬುದ್ಧಿಯನ್ನು – ಸರ್ವಾತ್ಮಕ್ಕೆ ಅರ್ಪಿಸಬೇಕು. ಅವುಗಳನ್ನು ಸರ್ವಾತ್ಮಕ್ಕೆ ಅರ್ಪಿಸಿದರೆ … ಆ ಸರ್ವಾತ್ಮ ಅವುಗಳನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳುತ್ತದೆ. ಆಗ ಸರ್ವಾತ್ಮವು ಚಂಚಲವಾಗಿರುವ ಮನಸ್ಸನ್ನು-ಅಪರಿಪಕ್ವವಾಗಿರುವ ಬುದ್ಧಿಯನ್ನು ಶುದ್ಧೀಕರಿಸುತ್ತದೆ – ತನ್ನ ಮುಷ್ಟಿಯಲ್ಲಿಟ್ಟುಕೊಂಡು ಶುದ್ಧಿ ಮಾಡುತ್ತಾ, ಮಾಡುತ್ತಾ, ಮಾಡುತ್ತಾ…ಈಗ ಅಗಸನಿಗೆ ನಾವು ಒಗೆಯಲು ಬಟ್ಟೆಗಳನ್ನು ಕೊಡುತ್ತೇವೆ-ಅವನು ಎಷ್ಟು ದಿನ ಬಟ್ಟೆಗಳನ್ನು ತನ್ನ ಹತ್ತಿರ ಇಟ್ಟುಕೊಳ್ಳುತ್ತಾನೆ … ?

 

ಜೆ.ಕೆಕೊಳೆ ಹೋದ ತಕ್ಷಣ ಕೊಡುತ್ತಾನೆ.

 

ಪತ್ರೀಜಿಇದು ಕೂಡಾ ಹಾಗೆಯೇ … ಈ ಸರ್ವಾತ್ಮನು ಸಹ…ಈ ಮನಸ್ಸನ್ನೂ, ಬುದ್ಧಿಯನ್ನೂ ಒಗೆದು ಒಣಗಿಸುವುದು ಪೂರ್ತಿ ಆದ ನಂತರ ಬಿಟ್ಟುಬಿಡುತ್ತದೆ. ನಿಮ್ಮ ಮನಸ್ಸು-ನಿಮ್ಮ ಬುದ್ಧಿ ಶುದ್ಧಿ ಆದ ತಕ್ಷಣ – ’ ನಾನು ’ ಅನ್ನುವುದು ಸರ್ವಾತ್ಮದೊಳಗೆ ಮಾಯವಾಗುತ್ತದೆ. ಈ ’ ಬಾಬಾ ಮುದ್ರೆ ’ ಎನ್ನುವುದು ಮಾರ್ಗ … ’ ಚಿನ್ ಮುದ್ರೆ ’ ಎನ್ನುವುದು ಧ್ಯೇಯ. ’ ಬಾಬಾ ಮುದ್ರೆ ’ಯಲ್ಲಿ ಆ ಅಗಸನು ಒಗೆಯುವ ಪ್ರಕ್ರಿಯೆಯಲ್ಲಿ ಇರುತ್ತಾನೆ – ’ ಚಿನ್ ಮುದ್ರೆ ’ ಎನ್ನುವುದು ಒಗೆದ ಬಟ್ಟೆಗಳನ್ನು ಧರಿಸುವ ಬದುಕಿಗೆ ಪ್ರತೀಕ – ಅರ್ಥವಾಯಿತೆ ?

 

ಮಾಮೂಲು ಕೈ … ಒಂದು ಬೇಬಿ ಸೋಲ್‌ನ ಒಂದು ಶೈಶವ ಸ್ಥಿತಿಯನ್ನೂ, – ಅನೇಕ ಜನ್ಮಗಳ ಪರಂಪರೆಯಲ್ಲಿ ಮೊಟ್ಟಮೊದಲನೆಯ ಜನ್ಮ ಪರಂಪರೆಗಳು ಇರುತ್ತವಲ್ಲವೆ ಅದನ್ನು ’ ಶೈಶವಾತ್ಮ ’ ಎನ್ನುತ್ತೇವೆ. ತದನಂತರ ಕೆಲವು ದಿನಗಳಿಗೆ ’ ಬಾಲಾತ್ಮ ’ – ಇನ್ನೂ ಕೆಲವು ದಿನಗಳ ನಂತರ ಯುವಾತ್ಮ. ಇನ್ನೂ ಕೆಲವು ಜನ್ಮಗಳು ಹೋದ ನಂತರ ಪ್ರೌಢಾತ್ಮ – ಇನ್ನೂ ಕೆಲವು ಜನ್ಮಗಳ ನಂತರ ವೃದ್ಧಾತ್ಮ – ಪುನಃ ಅನಂತರ ವಿಮುಕ್ತಾತ್ಮ – ಪರಮಾತ್ಮ.

 

ಜೆ.ಕೆಅಂದರೆ, ಶೈಶವ, ಬಾಲ್ಯ, ಯೌವನ, ವೃದ್ಧಾಪ್ಯ ಎನ್ನುವುದು ಆತ್ಮಕ್ಕೆ ಸಹ ವರ್ತಿಸುತ್ತದೆಯೆ ?

 

ಪತ್ತೀಜಿ’ ಆತ್ಮ ’ಕ್ಕೆ ವರ್ತಿಸುವುದಿಲ್ಲ ಆದರೆ…ಜೀವಾತ್ಮಕ್ಕೆ ವರ್ತಿಸುತ್ತದೆ. ಇದನ್ನೇ ಏನೆಂದು ಹೇಳುತ್ತಾರೆಂದರೆ – ’ ಪಾರಡಾಕ್ಸ್ ’ ಎನ್ನುತ್ತಾರೆ.

 

ಜೆ.ಕೆಗುರುಗಳಲ್ಲಿ ಅನೇಕ ಬಗೆಯ ಗುರುಗಳಿರುತ್ತಾರೆಯೆ ?

 

ಪತ್ರೀಜಿ: ಗುರುಗಳಲ್ಲಿ ಅನೇಕ ಬಗೆಯ ಗುರುಗಳಿರುತ್ತಾರೆ … ಲಘುಗಳಲ್ಲಿ ಕೂಡಾ ಅನೇಕ ರೀತಿ ಇರುತ್ತಾರೆ. ’ ಬಗೆಬಗೆ ’ ಎನ್ನುವುದು ಯಾವುದರಲ್ಲಿಲ್ಲ ? ಬಗೆಬಗೆಯ ಹಣ್ಣುಗಳಿವೆ – ಬಗೆಬಗೆಯ ಕಾಯಿಗಳಿವೆ – ಬಗೆಬಗೆಯ ಮಿಡಿಕಾಯಿಗಳಿವೆ.

 

ಜೆ.ಕೆ: ಗುರಿಯೇ ಗುರುವೆಂದು ನೀವು ಹೇಳಿದ ತಕ್ಷಣಾ ನನಗೆ ಎಲ್ಲಾ ಚೆನ್ನಾಗಿ ಅರ್ಥವಾಗಿದೆ.

 

ಪತ್ರೀಜಿ: ಆದ್ದರಿಂದ, ಒಬ್ಬ ಮನುಷ್ಯನು ಇನ್ನೊಬ್ಬ ಮನುಷ್ಯನಿಗೆ ಗುರುವಲ್ಲ ಮಿತ್ರನು. ಪರಸ್ಪರ ಪರಮ ಮಿತ್ರರು ಆಗಬಹುದು – ತಾತ್ಕಾಲಿಕ ಮಿತ್ರರಾಗಬಹುದು. ಮಿತ್ರತ್ವದಲ್ಲಿ ಮಿತ್ರತ್ವ ಮಾತ್ರವೇ ಇದೆ. ಆದರೆ, ಯಾರೂ ಯಾರಿಗೂ ಗುರುಗಳಲ್ಲ – ಜಿಡ್ಡು ಕೃಷ್ಣಮೂರ್ತಿರವರು ಹೇಳಿದ್ದಾರಲ್ಲಾ-ಯಾರೂ ಯಾರಿಗೂ ಗುರು ಅಲ್ಲ ಎಂದು.

 

ಜೆ.ಕೆ: ಅಂದರೆ, ಆ ವಿವಾದದಿಂದ ’ ಬಾಬಾಮುದ್ರೆ ’ ಯಿಂದ ಜನ ತಳಮಳ ಆಗುತ್ತಿದ್ದಾರೇನೊ ??

 

ಪತ್ರೀಜಿ: ಯಾರೂ ತಳಮಳ ಆಗುತ್ತಿಲ್ಲ – ಯಾರಿಗೆ ಏನುಬೇಕೊ ಅವರು ಖಂಡಿತವಾಗಿ ಮಾಡುತ್ತಿದ್ದಾರೆ. ಅವರವರ ಆತ್ಮಸ್ಥಿತಿಯ ಅನುಸಾರ ಅವರು ಸರಿಯಾಗಿಯೆ ಮಾಡುತ್ತಿದ್ದಾರೆ.

 

ಯಾರು ಏನು ಹೇಳಿದರೂ ಅದು ಸರಿ. ಇಲ್ಲದಿದ್ದರೆ ಅವನು ಯಾಕೆ ನನಗೆ ಹಾಗೆ ಹೇಳುತ್ತಾನೆ ? ಈಗ ನಾನು ಮೋಸಗಾರನೆ. ಮೋಸಗಾರನ ಹಾಗೆ ಕಾಣುತ್ತಿದ್ದೀನೆ ? ಯಾರೂ ಮೋಸಗಾರರಲ್ಲ. ಅವರಲ್ಲಿರುವ ಸೀಮಿತ ಅನುಭವದಿಂದ ಅವರಿಗೆ ತಿಳಿದ ಸೀಮಿತ ಸತ್ಯವನ್ನು ಅವರು ತಮ್ಮ ಶಕ್ತ್ಯಾನುಸಾರ ತಿಳಿಯಪಡಿಸುತ್ತಿದ್ದಾರೆ. ಆ ಸೀಮಿತ ಸತ್ಯ ಬೇಕಾದವರಿಗೆ ಅದು ಮಹಾಪ್ರಕಾಶ, ಮಹಾಪ್ರಸಾದ. ಒಂದನೆಯ ತರಗತಿಯಲ್ಲಿದ್ದಾಗ ನೀವು ಒಬ್ಬ ಶಿಕ್ಷಕನ ಹತ್ತಿರ ಓದಿರುವಿರಿ – ಪ್ರಸ್ತುತ ಆ ಶಿಕ್ಷಕನು ನಿಮಗೆ ಹೇಳುವುದಕ್ಕೆ ಕೆಲಸಕ್ಕೆ ಬರುತ್ತಾನೆಯೆ ? ಎಲ್ಲವು ಅಷ್ಟೇ.

 

ಜೆ.ಕೆಅಂದರೆ, ಮನುಷ್ಯನ ಮಾನಸಿಕ ಪರಿಪಕ್ವತೆ ಎನ್ನುವುದು ಬುದ್ಧಿಯ ವಿಕಾಸ ಆಗುತ್ತಿದ್ದಷ್ಟು … ?

 

ಪತ್ರೀಜಿಹೌದು, ಒಂದು ಬೆಟ್ಟ ಇದೆ ಎಂದುಕೊಳ್ಳೋಣ … ಒಬ್ಬನು ಸ್ವಲ್ಪ ಎತ್ತರದವರೆಗೂ ಹತ್ತಿದನು, ಅವನಿಗೆ ಸುತ್ತಾಮುತ್ತಾ ಇರುವ ಸ್ಥಳ ಸ್ವಲ್ಪ ಕಾಣುತ್ತಿದೆ-ಇನ್ನೂ ಸ್ವಲ್ಪ ಮೇಲಕ್ಕೆ ಹತ್ತಿದರೆ ಇನ್ನೂ ಸ್ವಲ್ಪ ಹೆಚ್ಚಾಗಿ ಕಾಣುತ್ತದೆ-ಹೆಚ್ಚು ಕಾಣಿಸಿದರೆ ಹೆಚ್ಚು ವಿಷಯ ಇದೆ ಎಂದು ಹೇಳುತ್ತಾನೆ – ಹೆಚ್ಚು ತೋರಿಸಬಲ್ಲ. ಸ್ವಲ್ಪ ಬೆಟ್ಟ ಮಾತ್ರವೆ ಹತ್ತಿದರೆ – ಕಡಿಮೆ ವಿಷಯ ಹೇಳಬಲ್ಲ – ಕಡಿಮೆ ತೋರಿಸಬಲ್ಲ-ಬೆಟ್ಟದ ತುದಿಯಲ್ಲಿ ಇರುವವನು ಎಲ್ಲಾ ತೋರಿಸಬಲ್ಲ-ಬುದ್ಧನು ಪೂರ್ತಿ ಬೆಟ್ಟವನ್ನು ಹತ್ತಿ ನಿಂತಿರುವನು, ಆದ್ದರಿಂದ, ಎಲ್ಲಾ ವಿಷಯಗಳನ್ನು ಹೇಳಿದ ಮತ್ತು ಎಲ್ಲಾ ತೋರಿಸಿದ. ಮತ್ತೆ ಮಧ್ಯೆಯಲ್ಲಿರುವವರು … ?

 

ಜೆ.ಕೆಅಲ್ಲಿಯವರೆಗೆ …

 

ಪತ್ರೀಜಿಮತ್ತೆ ಅವರನ್ನು ’ ಅಸತ್ಯ ’ ಎಂದರೆ ಹೇಗೆ ? ಅದು ಅವರನ್ನು ದೂಷಿಸಿದ ಹಾಗೆ ಆಗುತ್ತದೆ. ಅದು ಪೂರ್ತಿಯಾಗಿ ತಪ್ಪು.

 

ಜೆ.ಕೆ:2012 ಮುಗಿಯುವಷ್ಟರಲ್ಲಿ ಪ್ರಪಂಚವನ್ನೆಲ್ಲಾ ಧ್ಯಾನಮಯವಾಗಿಸುವುದನ್ನೇ ನಿಮ್ಮ ಆಶಯವಾಗಿಟ್ಟುಕೊಂಡು…ಅದಕ್ಕಾಗಿ ಒಂದು ಸಮಯವನ್ನು ಸಹ … ಇಟ್ಟುಕೊಂಡಿದ್ದೀರ.

 

ಪತ್ರೀಜಿ: ಗುರಿ ಎಂದು ಇಟ್ಟುಕೊಳ್ಳದಿದ್ದರೆ ನಾವು ಹೆಚ್ಚು ಕೆಲಸ ಮಾಡಲಾಗುವುದಿಲ್ಲ – ಯಾವಾಗಲಾದರೂ ಸರಿಯೆ ನಾವು ’ ಗುರಿ ’ ಎನ್ನುವುದು ಎಷ್ಟು ಕಷ್ಟಕರವಾಗಿ ಇಟ್ಟುಕೊಂಡರೆ … ಅಷ್ಟು ಹೆಚ್ಚು ಕೆಲಸ ನಾವು ಮಾಡಬಲ್ಲೆವು. ಅದಕ್ಕಾಗಿಯೆ ಹಾಗೆ ಇಟ್ಟುಕೊಂಡಿರುವೆ.

 

ಜೆ.ಕೆನಿಮ್ಮ ಗುರಿಗಳಲ್ಲಿ, ಈಗ ನೀವು ಶೇಕಡ ಎಷ್ಟು ಸಾಧಿಸಿರಬಹುದು ?

 

ಪತ್ರೀಜಿಆ ದಿನದ್ದು ಆ ದಿನಕ್ಕೆ ಮುಗಿದು ಬಿಡುತ್ತದೆ ಅಷ್ಟೇ – ಆ ದಿನಕ್ಕಿಂತಾ ಒಂದು ದಿನ ಮುಂಚಿತಾಗಿಯೂ – ಅರ್ಧ ಕೆಲಸಾನೆ ಆಗಿರಬಹುದು. ಆದರೆ, ಆ ದಿನಕ್ಕೆ ಮಾತ್ರ ಸಂಪೂರ್ಣವಾಗಿ ಮುಗಿಯುತ್ತದೆ ಎಂದು ವಿಶ್ವಾಸ. ಹೇಗೆ ಅಂತ ’ ಲೆಕ್ಕಿಸಿ ’ ಹೇಳಲಾಗುವುದಿಲ್ಲ – ಆತ್ಮ ಸಂಕೇತಗಳನ್ನು ಗಮನಿಸಿ ನಿರ್ಣಯವಾಗುತ್ತದೆ.

 

ಜೆ.ಕೆನಿಜವಾಗಲೂ ಒಂದು ಮಹಾ ಸುಂದರವಾದ ಸಂಕಲ್ಪ..ನೀವು ಊಹಿಸುತ್ತಿರುವ ಪ್ರಪಂಚವನ್ನು 2012ನೇ ದಿನ ಪ್ರಪಂಚವೆಲ್ಲ ಧ್ಯಾನಮಯವಾಗಿರುವಾಗ ಹೇಗಿರುತ್ತದೊ ನೋಡಬೇಕೆಂದು … ಯಾವದೋ ಒಂದು ದೃಶ್ಯ ಕಾಣಿಸುತ್ತಿದೆ. ಎಷ್ಟು ಹಾಯಾಗಿ ಇರುತ್ತದೊ … ಬಾಧೆಗಳು, ಕಷ್ಟಗಳು, ನಷ್ಟಗಳು, ಈರ್ಷ್ಯೆ, ದ್ವೇಷಗಳಿರುವುದಿಲ್ಲ; ಹಗೆತನ/ಸೇಡು, ಪ್ರತೀಕಾರಗಳು ಇರುವುದಿಲ್ಲ; ಎಲ್ಲರೂ ಎಲ್ಲರಿಗೂ ಗುರುಗಳೆ … ಎಲ್ಲರೂ ಆನಂದದಲ್ಲಿರುತ್ತಾರೆ, ಎಲ್ಲರೂ ಒಂದು ತರಹ ನೆಮ್ಮದಿಯನ್ನು ಅನುಭವಿಸುತ್ತಾ ಇರುತ್ತಾರೆ. ಆರೋಗ್ಯವಾಗಿ ಇರುತ್ತಾರೆ. ಮಾನಸಿಕವಾಗಿ ತುಂಬಾ ಚೆನ್ನಾಗಿ … ಶಕ್ತಿಯುತವಾಗಿ ಇರುತ್ತಾರೆ, ಯುದ್ಧಗಳು ಇರುವುದಿಲ್ಲ.

 

ಆದರೆ, ಇನ್ನೊಂದು ಪ್ರಶ್ನೆ … ಈಗ ಧ್ಯಾನಕ್ಕೆ ಯಾವ ಅರ್ಹತೆ ಇಲ್ಲದೆ ಕೂಡಾ ಬರುತ್ತಿದ್ದಾರಲ್ಲ ಸಾರ್… ಅಂದರೆ, ಕೆಲವು ಪದ್ಧತಿಗಳು, ಅಭ್ಯಾಸಗಳು ಈಗ ಮಾಂಸಾಹಾರ ತಿನ್ನುವವರು ಕೆಲವರು ಇರುತ್ತಾರಲ್ಲವೆ … ಅವರು ಸಹ ಧ್ಯಾನ ಮಾಡಬಹುದೆ ?

 

ಪತ್ರೀಜಿರಾವಣಾಸುರನು ಮಾಡಿದ್ದಾನಲ್ಲವೆ – ಅವನು ರಾಕ್ಷಸನಲ್ಲವೆ – ಅಂದರೆ, ರಾಕ್ಷಸ ಪ್ರವೃತ್ತಿ ಇದ್ದವನಲ್ಲವೆ … ಒಳ್ಳೆಯತನ ಯಾರಿಗೆ ಬೇಕಾಗಿದೆ … ಕೆಟ್ಟದ್ದನ್ನು ಮಾಡುವವನಿಗೆ ಬೇಕು. ಒಳ್ಳೆಯದು ಇನ್ನೂ ಯಾರಿಗೆ ಬೇಕು … ಒಳ್ಳೆಯದನ್ನು ಮಾಡುವವನಿಗೆ ಕೂಡಾ ಬೇಕಾಗಿದೆ. ಒಳ್ಳೆಯತನ ಯಾರಿಗೆ ಬೇಡ ?

 

ಜೆ.ಕೆಎಲ್ಲರಿಗೂ ಬೇಕು.

 

ಪತ್ರೀಜಿ: ಆದ್ದರಿಂದ, ಧ್ಯಾನವು ಸಹ ಎಲ್ಲರಿಗೂ ಬೇಕಾಗಿದೆ.

 

ಜೆ.ಕೆಎಲ್ಲರಿಗೂ ಅವಶ್ಯಕತೆ ಇದೆ ಎಂದು ಹೇಳುತ್ತೀರ – ಆದರೆ …ಈ ’ಮಾಂಸಾಹಾರ’ ತಿಂದರೆ? ಮತ್ತೆ ವ್ಯತ್ಯಾಸಗಳೇನು ಬರುವುದಿಲ್ಲವೆ ?

 

ಪತ್ರೀಜಿಯಾವ ಕರ್ಮ ಮಾಡಿದರೆ ಆ ಕರ್ಮ ಫಲ ಬರುತ್ತದೆ. ಕೆಟ್ಟ ಕರ್ಮಕ್ಕೆ-ಕೆಟ್ಟ ಫಲ … ಅಹಿಂಸಾ ಪ್ರವೃತ್ತಿಗೆ ಒಳ್ಳೆಯ ಫಲ – ರಾವಣನಿಗೆ ಧ್ಯಾನ ಪ್ರವೃತ್ತಿ ಇರುವುದರಿಂದ ಶಂಕರನು ಪ್ರತ್ಯಕ್ಷನಾದನು. ಒಳ್ಳೆಯದಕ್ಕೆ ಸದಾ ಒಳ್ಳೆಯ ಫಲವೇ ಸಿಗುತ್ತದೆ.

 

ಜೆ.ಕೆ: ಸಸ್ಯಾಹಾರಿ ಆಗುವುದರಿಂದ ಧ್ಯಾನದಲ್ಲಿ ಹೆಚ್ಚು ಗುರಿ ಸಾಧನೆಯಾಗುತ್ತದೆಯೆ ?

 

ಪತ್ರೀಜಿಸಸ್ಯಾಹಾರಿಗಳಾಗಿ ಇದ್ದರೇನೆ … ನಿಜಕ್ಕೂ ಧ್ಯಾನ ಎನ್ನುವ ಗುರಿ ಸಾಧನೆ ಸಾಧ್ಯ. ಮಾಂಸಾಹಾರಿಯಾಗಿ ಇದ್ದಾಗಲೂ ಕೂಡಾ ಯಾರಿಗಾದರೂ ಧ್ಯಾನದಲ್ಲಿ ಗುರಿ ಬಂದಿದೆ ಎಂದರೆ… ಅವನು ಗತ ಜನ್ಮಗಳಲ್ಲೆ ಧ್ಯಾನಿ ಆಗ್ಗಿದ ಕಾರಣದಿಂದ ಆ ಗುರಿ ಬಂದಿದೆ.

 

ಎಷ್ಟು ಪ್ರಾಣಿಗಳನ್ನು ನಾವು ಕೊಂದು ತಿನ್ನುತ್ತೇವೊ, ಅಷ್ಟಾಗಿ ಅದರ ಫಲವನ್ನು ಅನುಭವಿಸುತ್ತಲೇ ಇರುತ್ತೇವೆ. ಒಂದು ಪ್ರಾಣಿಯು ಇನ್ನೊಂದು ಪ್ರಾಣಿಯನ್ನು ಹಿಂಸಿಸುವ ಸ್ವಾತಂತ್ರ ಇದೆ. ಹಿಂಸೆ ಮಾಡಬಹುದು. ನಮ್ಮ ಸ್ವಾತಂತ್ರಕ್ಕೆ ಯಾರೂ ಅಡ್ಡಿ ಬರುವುದಿಲ್ಲ. ನಾವು ಏನು ಬೇಕಾದರೂ-ಎಲ್ಲಿ ಬೇಕಾದರೂ ಮಾಡಬಹುದು. ಈ ಭೂಲೋಕವೆ ಒಂದು ಮಹಾ ಸ್ವಾತಂತ್ರ ಕ್ಷೇತ್ರ. ಸ್ವೇಚ್ಛೆ ಅಂದರೆ ’ ಸ್ವ ಇಚ್ಛೆ ’ ಅಂದರೆ ’ ಸ್ವಂತ ಇಷ್ಟ ’. ಭಗವದ್ಗಿತೆ ಎಲ್ಲಾ ಹೇಳಿದ ನಂತರ ಕೃಷ್ಣನು ಅರ್ಜುನನಿಗೆ ’ ಯಥೇಚ್ಚಸಿ ತಥಾ ಕುರು ’, ’ ನಿನ್ನ ಇಷ್ಟ ಬಂದ ಹಾಗೆ ನೀನು ಮಾಡು ’ ಎಂದನಲ್ಲವೆ. ನಮ್ಮ ಸ್ವೇಚ್ಛೆಯನ್ನು ನಮಗಿಲ್ಲದೆ ಮಾಡುವ ನಾಥನು-ಮೇಲೆ ಲೋಕಗಳಲ್ಲಿ ಇರುವ ದೇವರು ಯಾರೂ ಇಲ್ಲ-ಸೃಷ್ಟಿಯಲ್ಲಿ ನಮಗೆ ಏನು ಮಾಡಬೇಕೆಂದನಿಸಿದರೂ ಹಾಗೆ ಮಾಡುವ ಸ್ವಾತಂತ್ರ/ಸ್ವೇಚ್ಛೆ ನಮಗೆ ಪೂರ್ಣವಾಗಿದೆ. ಅದೇ ಆತ್ಮದ ಪ್ರಚಂಡ ತೇಜ -ಆದರೆ ಅದರ ಪರಿಣಾಮವನ್ನು ಮಾತ್ರ ನಾವು ತಪ್ಪದೆ ಅನುಭವಿಸಬೇಕಾಗುತ್ತದೆ.

 

ಜೆ.ಕೆಒಟ್ಟಾರೆ ನೀವು ಹೇಳುತ್ತಿರುವ ಪದ್ಧತಿ ತುಂಬಾ ಚೆನ್ನಾಗಿದೆ. ಅದಕ್ಕೆ ತಕ್ಕಹಾಗೆ … ಬಹಳ ಹಿಂದೆ ಜೀಸಸ್ ತಮ್ಮ ಅಭಿಪ್ರಾಯಗಳನ್ನು ಪ್ರಪಂಚದಲ್ಲೆಲ್ಲಾ ತಿಳಿಸಬೇಕೆಂದು ಕೊಂಡಾಗ ಅವರ ಹತ್ತಿರ 12 ಜನ ಮಿತ್ರರೆ ಇದ್ದರು – ಹಾಗೆಯೆ, ಬುದ್ಧನಿಗೆ 5, 6 ಜನಕ್ಕಿಂತಾ ಹೆಚ್ಚು ಇದ್ದಹಾಗೆ ಚರಿತ್ರೆಯಲ್ಲಿ ಇದ್ದ ಹಾಗಿಲ್ಲ. ಆದರೆ, ಈ ದಿನ ನಿಮ್ಮ ಜೊತೆ ಇಷ್ಟುಜನ …

 

ನಿಮ್ಮ ದಾರಿಯಲ್ಲಿ, ನೀವು ತೋರಿಸುತ್ತಿರುವ ದಾರಿಯಲ್ಲಿ, ಸಾವಿರಾರು ಜನ ತಯಾರಾಗಿದ್ದಾರೆ-ಅವರ ಕೈ ಹಿಡಿದುಕೊಂಡು, ಲಕ್ಷಾಂತರ ಜನ ನೀವು ಹೇಳಿರುವ ಈ ಧ್ಯಾನದಲ್ಲಿ ಶಾಂತಿಯನ್ನು ಹೊಂದಬಲ್ಲವರಾಗುತ್ತಿದ್ದಾರೆ. ನಿಮ್ಮ ಆಶಯಗಳ, ಆದರ್ಶಗಳಿಗೆ ಅನುಗುಣವಾಗಿ 2012 ಬರಬೇಕು-ಈ ಪ್ರಪಂಚವೆಲ್ಲಾ ಧ್ಯಾನಮಯವಾಗಬೇಕೆಂದು ಬಯಸುತ್ತಿದ್ದೇವೆ.

 

ಪತ್ರೀಜಿಎಲ್ಲಾ ಕಾಲದ ಮಹಿಮೆ. ಮೇಲೆ ತಥಾಸ್ತು ದೇವತಗಳಿದ್ದಾರೆ – ತಥಾಸ್ತು.