“ಭಗವಾನ್ ಶ್ರೀ ಸತ್ಯಸಾಯಿ”

ಪ್ರಪಂಚದಲ್ಲಿ ಎರಡು ಬಗೆಯ ಪ್ರಜೆಗಳಿದ್ದಾರೆ:
1. ನಾಸ್ತಿಕರು 2. ಆಸ್ತಿಕರು

“ಈ ಕಣ್ಣುಗಳಿಗೆ ಕಾಣಿಸುವುದೇ ಸತ್ಯ, ಈ ಕಣ್ಣುಗಳಿಗೆ ಕಾಣಿಸದೇ ಇರುವುದಕ್ಕೆ ಅಸ್ತಿತ್ವವೇ ಇಲ್ಲ” ಎನ್ನುವುದೇ ನಾಸ್ತಿಕತ್ವ. “ಭೌತಿಕ ಚಕ್ಷುಗಳಿಗೆ ತಿಳಿಯದೇ ಇರುವುದು, ಮತ್ತು ದಿವ್ಯಚಕ್ಷುವಿನಿಂದಲೇ ಸ್ಫುಟವಾಗುವುವೂ, ಇವೆ” ಎಂದು ಹೇಳುವುದೇ ಆಸ್ತಿಕತ್ವ. “ದಿವ್ಯಚಕ್ಷುವಿನಿಂದ ಸ್ಫುಟವಾಗುವ ಆತ್ಮ ಪದಾರ್ಥವೇ ಎಲ್ಲಾ ಭೌತಿಕತೆಗಳಿಗೂ ಮೂಲಾಧಾರ” ಎನ್ನುವುದೇ ಮೂಲ ಆಸ್ತಿಕ ಸಿದ್ಧಾಂತ.

***

ಸೃಷ್ಟಿಯಲ್ಲಿ ಅನಾದಿ ಕಾಲದಿಂದಲೂ ನಾಸ್ತಿಕತೆಗೂ, ಆಸ್ತಿಕತೆಗೂ ಪರಸ್ಪರ ಘರ್ಷಣೆ ನಿರಂತರವಾಗಿ ನಡೆಯುತ್ತಲೇ ಇದೆ. ನಾಸ್ತಿಕರು ಸದಾ ದುಃಖಕರವಾದ ಜೀವನವನ್ನು ಕಳೆಯುತ್ತಲೇ ಇದ್ದಾರೆ, ಆಸ್ತಿಕರು ಸದಾ ಆನಂದದಲ್ಲಿ ತೇಲುತ್ತಾ ಆನಂದ ಜೀವನವನ್ನು ಕಳೆಯುತ್ತಾ ನಿತ್ಯ ಪ್ರಗತಿಯನ್ನು ಸಾಧಿಸುತ್ತಲೇ ಇದ್ದಾರೆ.
ಸರ್ವ ದೇಶ ಕಾಲ ಪರಿಸ್ಥಿತಿಗಳಲ್ಲೂ ಮಹಾತ್ಮರು ಸ್ವಚ್ಛಕರವಾದ ಆಸ್ತಿಕತೆಯನ್ನು ಬೋಧಿಸಲು ಅವತರಿಸುತ್ತಲೇ ಇದ್ದಾರೆ.
ಅಂತಹ ಮಹಾತ್ಮರಲ್ಲಿ ಇಂದಿನ ಭಗವಾನ್ ಸತ್ಯಸಾಯಿ ಅಗ್ರಗಣ್ಯರು. ನಾಸ್ತಿಕ ಮೂರ್ಖರನ್ನು ಆಸ್ತಿಕ ಜ್ಞಾನಿಗಳನ್ನಾಗಿ ತಯಾರು ಮಾಡುವುದೇ ಅವರ ಜನ್ಮದ ಗುರಿ.

***

“ನಾಸ್ತಿಕತೆ” ಎನ್ನುವುದೇ ಸರ್ವ ರೋಗಗಳಿಗೂ, ಸರ್ವ ಗೊಂದಲಗಳಿಗೂ, ಸರ್ವ ಚಿಂತೆಗಳಿಗೂ, ಸರ್ವ ಭಯಗಳಿಗೂ, ಸರ್ವ ಯುದ್ಧಗಳಿಗೂ ಮೂಲ ಕಾರಣ. “ಸ್ವಚ್ಛವಾದ ಆಸ್ತಿಕತೆ” ಎನ್ನುವುದೇ ಸಕಲ ಆರೋಗ್ಯಗಳಿಗೂ, ಸಕಲ ಸೌಭಾಗ್ಯಗಳಿಗೂ, ಸಕಲ ಸಿದ್ಧಿಗಳಿಗೂ ಮೂಲ ಬೀಜ.

***

ಪ್ರಪಂಚದಾದ್ಯಂತ್ಯಾ ಲಕ್ಷಾಂತರ ಪ್ರಜೆಗಳು… ಭಗವಾನ್ ಸತ್ಯಸಾಯಿಯವರ ತ್ಯಾಗಮಯ ಜೀವನದಿಂದ ಮೂರ್ಖನಾಸ್ತಿಕತ್ವದಿಂದ ಒಳ್ಳೆಯ ಆಸ್ತಿಕತ್ವದ ಕಡೆ ಬದಲಾಗಿದ್ದಾರೆ. ಭಗವಾನ್ ಸತ್ಯಸಾಯಿಯವರಿಗೆ ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟೀಸ್ ಧ್ಯಾನಿಗಳೆಲ್ಲರ ಪರವಾಗಿ, ಮತ್ತು ನನ್ನ ಪರವಾಗಿ, ವಿನಮ್ರ ನಮಸ್ಕಾರಗಳು.

“ಸ್ವಚ್ಛವಾದ ಆಸ್ತಿಕತೆ” ಇಂದ ಇನ್ನೂ ಮುಂದಕ್ಕೆ ನಾವು ಪ್ರಗತಿಶೀಲರಾಗಿ ನಮ್ಮ “ಸ್ವಂತ ಸಿದ್ಧತ್ವ”ದ ಕಡೆ.. ನಮ್ಮ “ಸ್ವಂತ ಬುದ್ಧತ್ವ”ದ ಕಡೆ ಹೋಗೋಣ.

ಭಗವಾನ್ ಸತ್ಯಸಾಯಿ ತೋರಿಸಿದ ಮಾರ್ಗದಲ್ಲಿ ಪಯಣಿಸುತ್ತಾ.. ಅಂತಹ ತ್ಯಾಗ ಪುರುಷರ ಹಾಗೆ ನಾವೂ ಆಗೋಣ.

“ಸಿದ್ಧತ್ವ” ಎನ್ನುವುದು ನಿರಂತರ ಧ್ಯಾನ ಸಾಧನೆ ಇಂದಲೇ ಸಾಧ್ಯ. ಪ್ರಥಮವಾಗಿ “ನಾಸ್ತಿಕ”ರೆಲ್ಲಾ “ಆಸ್ತಿಕ”ರಾಗ ಬೇಕು.
ದ್ವಿತೀಯವಾಗಿ “ಆಸ್ತಿಕರು” “ಆಧ್ಯಾತ್ಮಿಕ ಶಾಸ್ತ್ರಜ್ಞ”ರಾಗಿ ಬೆಳೆಯಬೇಕು.