ಬ್ರಹ್ಮಾನಂದ ಸ್ಥಿತಿ

 

ಸಂಸಾರಿಕ ಜೀವನ ಆಧ್ಯಾತ್ಮಿಕ ಉನ್ನತಿಗೆ ಅಡ್ಡಿ ಅಲ್ಲ.

ಚಿತ್ತವೃತ್ತಿಯನ್ನು ನಿರೋಧಿಸಿದವನೇ ಯೋಗಿ ಆಗುತ್ತಾನೆ. ಸತ್ಯವನ್ನು ಪ್ರದರ್ಶಿಸುವವನೇ ದ್ರಷ್ಠನಾಗುತ್ತಾನೆ. ಸ್ವಾನುಭವದಿಂದಲೇ ಆತ್ಮ ಸಾಕ್ಷಾತ್ಕಾರವನ್ನು ಹೊಂದುತ್ತೇವೆ. ಮಾನವರಲ್ಲಿ ಯಾರು ಧ್ಯಾನಮಾಡಿ ದಿವ್ಯಚಕ್ಷುವನ್ನು ಉತ್ತೇಜಿತ ಮಾಡಿಕೊಳ್ಳುತ್ತಾರೋ ಆತನೇ ‘ಶಿವನು’. ಮನಸ್ಸಿನಲ್ಲಿ ಸಿಗುವ ಮುಕ್ತಿ ಮತ್ತೊಂದು ಕಡೆ ಸಿಗುವುದಿಲ್ಲ. ಸ್ನಾನದಿಂದ ದೇಹಶುದ್ಧಿ ಆಗುತ್ತದೆ; ನೀರಿನಿಂದ ದಾಹ ತೀರುತ್ತದೆ. ಮಂತ್ರದಿಂದ ಉಚ್ಛಾರಣೆ ಸರಿಯಾಗಿದ್ದು ವಾಕ್ಕು ದಕ್ಷತೆಯಿಂದ ಕೂಡಿರುತ್ತದೆ. ಧ್ಯಾನದಿಂದ ದೇವನೇ ಕೆಳಗೆ ಇಳಿದು ಬರುತ್ತಾನೆ.

ಸಹಸ್ರಾರ ಸ್ಥಿತಿಯೇ ಬ್ರಹ್ಮಾನಂದ ಸ್ಥಿತಿ. ಧ್ಯಾನಿಗಳ ಜೀವನದ ಗುರಿ ಸಹಸ್ರಾರ ಸ್ಥಿತಿಯಲ್ಲಿ ಸ್ಥಿರವಾಗುವುದು.

ಹೇಗೆ ನಾವು ‘ನಾನು ಭಾರತೀಯ’ ಎಂದು ಹೇಳಿಕೊಳ್ಳುತ್ತೇವೊ ಹಾಗೆಯೇ, ‘ನಾನು ದೇವರು’ ಎಂದು ಹೇಳಿಕೊಳ್ಳುವ ಸ್ಥಿತಿಗೆ ಎಲ್ಲರೂ ಬರಬೇಕು. ತ್ರಿಕರಣ ಶುದ್ಧಿಯಿಂದ ಸಾಧನೆ ಮಾಡುವುದರಿಂದಲೇ ಏನಾದರೂ ಸಾಧ್ಯವಾಗುತ್ತದೆ.