” ಬ್ರಹ್ಮರ್ಷಿ ಪತ್ರೀಜಿ ಅವರ ಹಿತವಚನಗಳು “

* “ಬಾಯಿಯಿಂದ ಬಂದ ಮಾತುಗಳೇ ನಮ್ಮ ಹಣೆಬರಹಕ್ಕೆ ಕಾರಣ ”

* “ಸ್ವಲ್ಪ ಶ್ವಾಸದ ಮೇಲೆ ಗಮನ – ಬೆಟ್ಟದಷ್ಟು ಸಂಜೀವಿನಿ”

* “ಸಕಲ ಪ್ರಾಣಿಕೋಟಿಯೊಂದಿಗೆ ಸ್ನೇಹವೇ ಬುದ್ಧತ್ವ”

* “ಸತ್ಯವನ್ನು ಪ್ರೀತಿಸು .. ಸತ್ಯವೆಂದರೆ ಧ್ಯಾನವೇ”

* “ಶಾರೀರಿಕವಾಗಿ ಜೀವಿಸು .. ಶರೀರದಲ್ಲಿನ ಆತ್ಮವಾಗಿ ಜೀವಿಸು”

* “ಯಾರನ್ನೂ ನಿನ್ನ ಆಳನ್ನಾಗಿಸಿಕೊಳ್ಳಬೇಡ – ಯಾರಿಗೂ ನೀನು ಆಳು ಆಗಬೇಡ”

* “ಸತ್ಯ ಒಂದು ದಳದ ಪದ್ಮವಲ್ಲ – ಸತ್ಯ ಸಾವಿರ ದಳದ ಪದ್ಮ .. ಸತ್ಯ ಸಾವಿರ ಹೆಡೆಗಳ ಹಾವು”

* ” ‘ನೈತಿಕ ಮೌಲ್ಯಗಳು’ ಎನ್ನುವುದು – ಆಧ್ಯಾತ್ಮಿಕ ಮೌಲ್ಯಗಳಿಂದಲೇ ಒಡಮೂಡುತ್ತವೆ .. ಮೊದಲು ಆಧ್ಯಾತ್ಮಿಕ ಸಾಧನೆ – ಅದರಲ್ಲಿಯೇ ನೈತಿಕ ಮೌಲ್ಯಗಳ ಪ್ರವಾಹ

* “ಗತಕಾಲದಿಂದ ಇಂದು ಇರಬಾರದು – ಭವಿಷ್ಯತ್ತಿನಿಂದ ಈ ದಿನ ಉದ್ಭವಿಸಬೇಕು”

* “ಅಜಾಗರೂಕತೆಯ ತಪ್ಪುಗಳಿವೆ ಆದರೆ – ಗ್ರಹಚಾರಗಳು ಇಲ್ಲ”

* “ಮಾಡಬೇಕಾಗಿರುವುದನ್ನು ಮಾಡಿದರೆ – ಹೊಂದಬೇಕಾದ್ದನ್ನು ಹೊಂದುತ್ತೇವೆ”

* “ಒಂದೇ ಮಾತನ್ನು ಎರಡು ಬಾರಿ ಮಾತನಾಡಬಾರದು .. ಒಂದೇ ವ್ಯಾಖ್ಯಾನವನ್ನು ಪುನಃಪುನಃ ಹೇಳಬಾರದು”

* “ಪ್ರಪಂಚದಲ್ಲಿ ಮೂರ್ಖತನ ಎನ್ನುವುದು ಏನಾದರೂ ಇದ್ದರೆ ಅದು – ಹೇಳಿದ್ದೇ ಹೇಳುವುದು. ಆಡಿದ ಮಾತುಗಳನ್ನೇ ಆಡುತ್ತಿರಬೇಡ; ಆಡದ ಮಾತುಗಳನ್ನಾಡು”

* “ಪ್ರತಿ ಮನುಷ್ಯನಲ್ಲೂ ಪ್ರತ್ಯೇಕತೆ ಇರುತ್ತದೆ .. ಎಲ್ಲರಲ್ಲೂ ವಿಶೇಷವಾದ ಪ್ರತ್ಯೇಕತೆಗಳು ಇರುತ್ತವೆ ”

* “‘ನೈತಿಕ ಮೌಲ್ಯಗಳು’ ಅಂದರೆ? .. ಇತರರ ವಿಷಯಗಳಲ್ಲಿ – ತಲೆಹಾಕದೆ ಇರುವುದು .. ಮೂರನೆಯ ಮನುಷ್ಯನನ್ನು ಕುರಿತು ಮಾತನಾಡಿಕೊಳ್ಳದೇ ಇರುವುದು”

* “ತಂದೆತಾಯಿಯರನ್ನು ಗೌರವಿಸುವುದು ಎಂದರೇ? .. ದೇಹಪರವಾಗಿ ಅವರಿಗೆ ಸೇವೆ ಮಾಡುವುದು .. ಅಷ್ಟೇ ಹೊರತು ಅವರು ಹೇಳಿದ ಪ್ರತಿಯೊಂದು ಮಾತನ್ನು .. ಆಚರಿಸುವುದಲ್ಲ”

* “ಹಂಚಿದ್ದು ಹೆಚ್ಚುತ್ತದೆ .. ಬಚ್ಚಿಟ್ಟಿದ್ದು ದೋಚಿಕೊಳ್ಳಲ್ಪಡುತ್ತದೆ”

* “ಇಲ್ಲದ್ದನ್ನು ಬಯಸಬಾರದು .. ಬಂದಿದ್ದನ್ನು ಬೇಡ ಅನ್ನಬಾರದು”

* “ಇಂದಿನ ಸಹನೆಯೇ ನಾಳಿನ ಕಲಿಕೆ”

* “ಹಿಂಸೆ ಹೆಚ್ಚಾದರೆ ಪ್ರತಿಹಿಂಸೆ – ಹಂಸ ಹೆಚ್ಚಾದರೆ ಪರಮಹಂಸ”

* “‘ಧ್ಯಾನ’ ಪುಷ್ಪವಾದರೆ – ‘ಧ್ಯಾನ ಪ್ರಚಾರ’ ಪುಷ್ಪದ ಸುಗಂಧ .. ಸುಗಂಧವಿಲ್ಲದ ಪುಷ್ಪವು, ಪುಷ್ಪವಾ?!”

* “ತಿಂದರೆ ಉದ್ದಿನ ವಡೆಯೇ ತಿನ್ನಬೇಕು – ಕೇಳಿಸಿಕೊಂಡರೇ ಭಾರತವೇ ಕೇಳಿಸಿಕೊಳ್ಳಬೇಕು;”

* “ಮಾತನಾಡಿದರೆ ಒಬ್ಬ ಬುದ್ಧನೇ ಮಾತನಾಡಬೇಕು .. ಮಾಡಿದರೆ ಆನಾಪಾನಸತಿ ಧ್ಯಾನವೇ ಮಾಡಬೇಕು; ಕಟ್ಟಿದರೇ ಪಿರಮಿಡ್‌ಗಳನ್ನೇ ಕಟ್ಟಬೇಕು”

* “ಭೂತಕಾಲವೇ ದೊಡ್ಡಭೂತ – ವರ್ತಮಾನವೇ ಬಹುಮಾನ”