ಬಾಬಾಕಾನ್ಸೆಪ್ಟ್”

 

ಮಾನವನ ಕೈಗೆ ಐದು ಬೆರಳುಗಳಿರುತ್ತವೆ.

1) ಕಿರು ಬೆರಳು 2) ಉಂಗುರದ ಬೆರಳು 3) ಮಧ್ಯೆ ಬೆರಳು 4) ತೋರು ಬೆರಳು 5) ಹೆಬ್ಬೆರಳು.

 

ಈ ಐದು ಬೆರಳುಗಳು ಆಧ್ಯಾತ್ಮಿಕ ಶಾಸ್ತ್ರ ಪರಿಭಾಷೆಯಲ್ಲಿ ನಮ್ಮದೆ ಆದ ವಿವಿಧ ಅಂಶಗಳಿಗೆ ಪ್ರತೀಕಗಳಾಗಿವೆ.

* ಕಿರು ಬೆರಳು > ಭೌತಿಕ ಶರೀರ

* ಉಂಗುರದ ಬೆರಳು > ಮನಸ್ಸು

* ಮಧ್ಯೆ ಬೆರಳು > ಬುದ್ಧಿ

* ತೋರು ಬೆರಳು > ಜೀವಾತ್ಮ

* ಹೆಬ್ಬೆರಳು > ಸರ್ವಾತ್ಮ

 

” ಭೌತಿಕ ಶರೀರ”

 

ಈ ಭೌತಿಕ ಶರೀರ ಪಾಂಚಭೌತಿಕ ಪ್ರಕೃತಿಯಿಂದ, ತಂದೆತಾಯಿಗಳಿಂದ ನಮಗೆ ಸಂಪ್ರಾಪ್ತಿಸುತ್ತದೆ. ನಮ್ಮ ನಿಜಸ್ವರೂಪದಲ್ಲಿ ವ್ಯಕ್ತವಾಗುತ್ತಿರುವ ಅತಿಚಿಕ್ಕ ಭಾಗವೇ ನಮ್ಮ ಈ ಭೌತಿಕ ಶರೀರ. ಅದಕ್ಕೆ ಈ ಭೌತಿಕ ಶರೀರದ ಕೈಬೆರಳುಗಳ ’ ಕಿರು ಬೆರಳು ’, ಅತಿಚಿಕ್ಕ ಬೆರಳಿಂದ ಸೂಚಿಸಲ್ಪಟ್ಟಿದೆ.

ನೀವೇ ನೋಡಿ, ನಾವು ಚಿಕ್ಕ ಮಕ್ಕಳಾಗಿದ್ದಾಗ, ಕ್ಲಾಸ್ ರೂಮ್‌ನಲ್ಲಿ ನಮಗೆ ತಿಳಿಯದೇನೆ ಭೌತಿಕ ಪ್ರಾಕೃತಿಕ ಅವಸರಕ್ಕೆ ಟೀಚರ್, ಟೀಚರ್ ಎನ್ನುತ್ತಾ ತೋರಿಸುವ ಬೆರಳು ಅದೇ ಅಲ್ಲವೇ.

 

“ಮನಸ್ಸು”

 

ಎರಡು ಹೃದಯಗಳು … ಎರಡು ಮನಸ್ಸುಗಳು ಒಂದಾದಾಗ, ಒಂದೇ ತರಂಗಗಳಿಂದ ಅನುನಾದ ಹೊಂದಿ ಉತ್ಸಾಹಭರಿತರಾದಾಗ ನಡೆಯುವ ವಿವಾಹ ಬಂಧಕ್ಕೆ ಸಾಕ್ಷಿಯಾಗಿ ಉಂಗುರಗಳನ್ನು ಬದಲಾಯಿಸಕೊಳ್ಳುವುದು ಈ ಎರಡನೆಯದಾದ ’ ಉಂಗುರದ ಬೆರಳಿಗೇ ’ … ಮತ್ಯಾವ ಬೆರಳಿಗೂ ಅಲ್ಲ. ಅದಕ್ಕೇ ಈ ಎರಡನೆಯ ಬೆರಳು ’ ಮನಸ್ಸಿ ’ನ ಸಂಕೇತ.

ಮನಸ್ಸು ಪ್ರಧಾನವಾಗಿ ಸಮಾಜದಿಂದ ಬರುತ್ತದೆ. ಅಂದರೆ, ನಾವು ಹಿಂದುವಾಗಿ ಹುಟ್ಟಿ ಬೆಳೆದರೆ ’ ಹಿಂದುತತ್ವದ ಮನಸ್ಸು ’, ಕ್ರಿಸ್ಚಿಯನ್ನಾಗಿ ಹುಟ್ಟಿ ಬೆಳೆದರೆ ’ ಕ್ರೈಸ್ತ ಮನಸ್ಸು ’ … ಹೀಗೆ. ಸ್ಥೂಲವಾಗಿ ನಾವು ಬೆಳೆದ ಪರಿಸರಗಳ ವಾತಾವರಣ, ಆ ವಾತಾವರಣದಲ್ಲಿರುವ ಅಭ್ಯಾಸಗಳು, ಅಭಿಪ್ರಾಯಗಳು, ನಂಬಿಕೆಗಳ ಸಮುದಾಯವೇ ’ ಮನಸ್ಸಾ ’ಗಿ ಬೆಳೆಯುತ್ತದೆ.

* * *

ಅಷ್ಟೇ ಅಲ್ಲ, ಈ ಉಂಗುರದ ಬೆರಳು, ಕಿರುಬೆರಳಿಗಿಂತಾ, ತುಂಬಾ ದೊಡ್ಡದಾಗಿರುತ್ತದೆಯಲ್ಲವೇ … ಆದ್ದರಿಂದ, ಈ ’ ಮನಸ್ಸು ’ ಎಂಬುವುದು ’ ಭೌತಿಕ ಶರೀರ ’ಕ್ಕಿಂತಾ ತುಂಬಾ ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿರುತ್ತದೆ ಎಂಬುವ ವಿಷಯವನ್ನು ಈ ಬೆರಳುಗಳ ಪರಿಮಾಣಗಳಲ್ಲಿರುವ ವ್ಯತ್ಯಾಸವನ್ನು ತೋರಿಸುತ್ತದೆ ಎಂದು ಅರ್ಥ.

ಭೌತಿಕ ಶರೀರವನ್ನು ಪರಿಪಾಲಿಸುವುದು, ನಿಯಂತ್ರಣದಲ್ಲಿ ಇಡುವುದು ಈ ಮನಸ್ಸೇ. ಆದ್ದರಿಂದ, ಅಂತಹ ಮನಸ್ಸನ್ನು ’ ಉಂಗುರದ ಬೆರಳು ’ ಸೂಚಿಸುತ್ತದೆ.

 

“ಬುದ್ಧಿ “

 

ಒಳ್ಳೆಯದನ್ನು, ಕೆಟ್ಟದ್ದನ್ನು … ನಿಜವನ್ನು, ಸುಳ್ಳನ್ನು … ಸರಿಯನ್ನು, ಸರಿಯಲ್ಲದ್ದನ್ನು … ಸತ್ಯವನ್ನು, ಅಸತ್ಯವನ್ನು … ಪ್ರಾಮುಖ್ಯತೆಯನ್ನು ಪ್ರಾಮುಖ್ಯತಾ ರಾಹಿತ್ಯವನ್ನು … ಸೌಂದರ್ಯವನ್ನು, ಕುರೂಪಿಯನ್ನು … ಸುಸ್ಪಷ್ಟವಾಗಿ ಸಾಮಾಜಿಕ ಪ್ರಭಾವಗಳಿಗೆ ಭಿನ್ನವಾಗಿ ನಮಗೆ ವಿವರವಾಗಿ ತಿಳಿಸುವುದೇ ನಮ್ಮ ಬುದ್ಧಿ .

* * *

“ಮನಸ್ಸು ” ಮದಮಾತ್ಸರ್ಯಗಳ ಆಧಾರ, ರಾಗದ್ವೇಷಗಳಿಗೆ ಸನ್ನಿಧಿಯಾಗಿದ್ದರೆ ಬುದ್ಧಿ ಮಾತ್ರ ಇವೆಲ್ಲಕ್ಕೂ ಅತೀತವಾಗಿರುತ್ತದೆ.

* * *

ಜೀವಾತ್ಮ ಕಳೆದ ಅನೇಕಾನೇಕ ಜನ್ಮಗಳು, ಆ ಜನ್ಮಗಳಲ್ಲಿ ಗಳಿಸಿದ ಅನುಭವಗಳಿಂದ ತಿಳಿದಿರುವಂತಹ ಜ್ಞಾನ ಸಾರಾಂಶ ಪಾಠವೇ ಕರ್ಮಫಲವೇ ನಮ್ಮ ಬುದ್ಧಿ .

ಗತಜನ್ಮಗಳ ಅನುಭವ ಜ್ಞಾನವೇ ವಿಚಕ್ಷಣಾಶಕ್ತಿಗೆ ಉತ್ಪತ್ತಿ ಕೇಂದ್ರವಾಗಿರುತ್ತದೆ. ನಮ್ಮ ಜೀವಾತ್ಮಗೆ ಇರುವ ಭೂತಲ ಜೀವನ ಚರಿತ್ರೆ ಸಮಗ್ರ ಸ್ವರೂಪವೇ ಈ ಬುದ್ಧಿ .

* * *

’ ಮಧ್ಯೆ ಬೆರಳು ’ ಸಹಜವಾಗಿಯೇ ಉಂಗುರದ ಬೆರಳಿಗಿಂತಾ ದೊಡ್ಡದಾಗಿರುತ್ತದೆ. ’ಬುದ್ಧಿ’ ಸಹಜವಾಗಿಯೇ ’ಮನಸ್ಸಿ’ ಗಿಂತಾ ದೊಡ್ಡದು. ಮಧ್ಯೇಮಾರ್ಗ ದಲ್ಲಿರಿಸುವುದೇ ಬುದ್ಧಿ … ವಿಪರೀತ ಧೋರಣೆಗಳಿಂದ ತೂಗಾಡುವುದೇ ಮನಸ್ಸು . ಎಲ್ಲಾ ಜನ್ಮಗಳ ಅನುಭವ ಜ್ಞಾನವೆಲ್ಲಾ, ಪ್ರತ್ಯೇಕವಾಗಿ ಈ ಜನ್ಮದ ಅನುಭವ ಜ್ಞಾನಕ್ಕಿಂತಾ, ಈಗಿನ ನಮ್ಮ ಸಾಮಾಜಿಕ ಆಲೋಚನೆಯ ಧೋರಣೆಗಿಂತಾ ಸಹಜವಾಗಿಯೇ … ದೊಡ್ಡದಲ್ಲವೇ.

ಮಧ್ಯೆ ಬೆರಳು “ಬುದ್ಧಿ” ಯನ್ನು ಸೂಚಿಸುತ್ತದೆ.

 

“ಜೀವಾತ್ಮ”

 

ನಾವು ಯಾರನ್ನಾದರು ಉದ್ದೇಶಿಸಿ ಮಾತನಾಡುವಾಗ, ಆ ದಿಕ್ಕಿಗೆ ತೋರಿಸಲು ಉಪಯೋಗಿಸುವುದು ’ ತೋರು ಬೆರಳ ’ನ್ನು ಮಾತ್ರವೇ ಅಲ್ಲವೆ.

ನಿಜಕ್ಕೂ ಈ ’ ನಾವು ’ ಎಂಬುವುದು ಭೌತಿಕ ಶರೀರ ಮಾತ್ರವೇ ಅಲ್ಲ ; ಮನಸ್ಸು ಮಾತ್ರವೇ ಅಲ್ಲ; ಕೇವಲ ’ ಬುದ್ಧಿ ’ ಸಹ ಅಲ್ಲ ; ಅವೆಲ್ಲಾ ಸೇರಿ ನಮ್ಮ ’ ವ್ಯಕ್ತಿತ್ವ ’. ’ ನಾವು ’ ಎಂದರೆ … ಯದಾರ್ಥವಾಗಿ ನೋಡಿದರೆ … ಆತ್ಮಸ್ವರೂಪ … ಜೀವಾತ್ಮ .

’ ನಾವು ’ ಎಂಬುವ ನಿಜವಾದ ಸ್ವರೂಪ … ನಮ್ಮ ಜೀವಾತ್ಮವೇ. ಅನಂತ ಚೈತನ್ಯ ಸಾಗರದೊಳಗಿಂದ ಜನಿಸಿದ ಒಂದು ಚಿಕ್ಕ ಮೋಡದ ತುಣುಕೇ … ಈ ಜೀವಾತ್ಮ. ಸ್ವತಂತ್ರ ಅರಿವಾಗಿ ಪ್ರಕಾಶಿಸುತ್ತಿರುವ ’ ನಾನು ’ವಿನ ನಿಜಸ್ವರೂಪವೇ … ಈ ಜೀವಾತ್ಮ .

ಈ ಸ್ವತಂತ್ರ ಅರಿವನ್ನು, ನಮ್ಮ ನಿಜವಾದ ’ನಾನು’ ಎಂದು ಸೂಚಿಸುವುದೇ ತೋರು ಬೆರಳು.

 

“ಸರ್ವಾತ್ಮ ಅಥವಾ ವಿಶ್ವಾತ್ಮ “

 

’ ಜೀವಾತ್ಮ ’ಗೆ ಮಾತೃ ಸ್ಥಾನವೇ ಈ ಸರ್ವಾತ್ಮ ಅಥವಾ ವಿಶ್ವಾತ್ಮ . ನಾವೆಲ್ಲರೂ ಭೌತಿಕವಾಗಿಯೂ, ಮಾನಸಿಕವಾಗಿಯೂ ಮತ್ತು ಬುದ್ಧಿಪರವಾಗಿಯೂ ಬೇರೆ ಬೇರೆಯಾಗಿ ವಿಭಿನ್ನವಾಗಿರುತ್ತೇವೆ.

ಆದರೇ ಎಲ್ಲಾದಕ್ಕೂ ಆಧಾರವಾಗಿರುವ ಆತ್ಮಪದಾರ್ಥ ಮಾತ್ರ ಎಲ್ಲರಲ್ಲೂ ಒಂದೇ ತರಹ ಇರುತ್ತದೆ. ವಿಶ್ವಾತ್ಮ ಸ್ಥಾಯಿಯಲ್ಲಿ ನಾವೆಲ್ಲರೂ ಏಕ ಸ್ವರೂಪ ವಾಗಿಯೇ ಇರುತ್ತೇವೆ.

ಅನಂತವಾಗಿರುವ ಎಲ್ಲಾ ಜೀವಾತ್ಮಗಳ ಆಧಾರ – ಮೂಲ – ಅಪರಿಮಿತ ಚೈತನ್ಯವನ್ನೇ ವಿಶ್ವಾತ್ಮವಾಗಿ ಕರೆಯುತ್ತಾರೆ. ಈ ಆಧಾರ – ಮೂಲ – ಅಪರಿಮಿತ ಚೈತನ್ಯವೇ ಮತ್ತೊಂದು ವಿಧದಲ್ಲಿ ಬ್ರಹ್ಮಾತ್ಮ ಅಥವಾ ಸರ್ವಭೂತಾತ್ಮ ಎಂದು ಕರೆಯಲ್ಪಡುತ್ತದೆ.

* * *

ಸತ್ಯಗಳಿಗೇ ಪರಮಸತ್ಯವಾದ ಸಿದ್ಧಾಂತ ಹೀಗೆ ಹೇಳುತ್ತಿದೆ ;

“ಮಮಾತ್ಮಾ ಸರ್ವಭೂತಾತ್ಮ”

“ನನ್ನಲ್ಲಿರುವ ಆತ್ಮ ಸ್ವರೂಪವೇ ಎಲ್ಲಾ ಜೀವಿಗಳಲ್ಲೂ ಇರುವ ವಿಶ್ವಾತ್ಮ ಸ್ವರೂಪ.”

* * *

ಈ ವಿಶ್ವಾತ್ಮ ನಮ್ಮ ’ ಹೆಬ್ಬೆರಳಿಂದ ’ ಸೂಚಿಸಲ್ಪಡುತ್ತದೆ. ’ ವಿಜಯ ’ ಎನ್ನುವುದು ಸದಾ ಈ ಹೆಬ್ಬೆರಳಿಂದಲೇ ಸೂಚಿಸಲ್ಪಡುತ್ತಿದೆ. ವಿಶ್ವಾತ್ಮ ತತ್ತ್ವವನ್ನು ತಿಳಿಯುವುದರಿಂದ ನಾವೆಲ್ಲರೂ ಘನವಿಜಯವನ್ನು ನಮ್ಮದನ್ನಾಗಿ ಮಾಡಿಕೊಳ್ಳುವುದಕ್ಕೆ ಶ್ರಮಿಸೋಣ.

 

“ಬಾಬಾ ಮುದ್ರೆ “

 

ಬಾಬಾ ಮುದ್ರೆ ಯಲ್ಲಿ ಉಂಗುರದ ಬೆರಳು, ಮಧ್ಯೆ ಬೆರಳು, ಹೆಬ್ಬೆರಳಿಂದ ಮುಡಿಚಿಕೊಂಡಿರುತ್ತದೆ. ಉಳಿದ ಎರಡು ಬೆರಳುಗಳು … ಕಿರು ಬೆರಳು, ತೋರು ಬೆರಳು ಮಾತ್ರ ಬಿಡಿಯಾಗಿ, ನೇರವಾಗಿ ಇರುತ್ತವೆ.

ಅದರ ಭಾವವೇನೆಂದರೆ … ನಮ್ಮ ಆಧ್ಯಾತ್ಮಿಕ ಸಂಪತ್ತಿಗಾಗಿ ಭೌತಿಕ ಶರೀರವನ್ನು ಸ್ವಲ್ಪವೂ ತೊಂದರೆ ಕೊಡಬೇಕಾದ ಅವಶ್ಯಕತೆ ಇಲ್ಲ. ಭೌತಿಕ ಶರೀರಕ್ಕೆ ಕಷ್ಟ ಕೊಡುವುದು ಸರಿಯಾದ ಪದ್ಧತಿ ಅಲ್ಲ … ಅನುಸರಿಸಬೇಕಾದ್ದು ಅಲ್ಲವೇ ಅಲ್ಲ. ಪ್ರಕೃತಿ ದೇವತೆಗಳ ಅಪರೂಪವಾದ ಸಹಾಯದಿಂದ ಈ ಪಾಂಚಭೌತಿಕ ಪ್ರಕೃತಿಯ ವಿಶೇಷವಾದ ಸಾಧನೆಯಿಂದ ನಮಗೆ ಸಂಪ್ರಾಪ್ತಿಸಿದ ಅದ್ಭುತವಾದ, ಅನನ್ಯವಾದ ವರಪ್ರಸಾದ.

ವಾಸ್ತವವಾಗಿ ನೋಡಿದರೆ ಯಾವ ವಿಧವಾದ ಹಠಯೋಗಗಳ ಸಾಧನೆ ಮಾಡಬೇಕಾದ ಅವಶ್ಯಕತೆ ಇಲ್ಲ. ಯಾವರೀತಿಯಾದ ಪ್ರತ್ಯೇಕ ಶೀರ್ಷಾಸನಗಳನ್ನು ಮಾಡಬೇಕಾದ ಅವಶ್ಯಕತೆ ಇಲ್ಲ.

* * *

ಇನ್ನು ಎರಡನೆಯದಾದ … ಉಂಗುರದ ಬೆರಳು … ಅದೇ ಮನಸ್ಸು , ಮಾತ್ರ, ನಮ್ಮಲ್ಲಿ ಖಚಿತವಾಗಿಯೂ ನಿಯಂತ್ರಿಸಬೇಕಾದ ವಿಭಾಗ. ಮನಸ್ಸಿ ಗೆ ತೀವ್ರಮಟ್ಟದಲ್ಲಿ ಕ್ರಮಶಿಕ್ಷಣ ಅತ್ಯವಶ್ಯಕ … ತಕ್ಕ ಪ್ರಕ್ಷಾಳನೆ ಅನಿವಾರ್ಯ.

* * *

ಅರಿಷಡ್ವರ್ಗಗಳು, ಅನೇಕ ಬಗೆಯ ಸಾಮಾಜಿಕ ಮೂರ್ಖತ್ವಗಳೆಲ್ಲಾ ಈ ಮನಸ್ಸಿನಿಂದಲೇ ನಮ್ಮಿಂದ ಹೊರಗೆ ಪ್ರತಿಬಿಂಬಿಸುತ್ತಿರುತ್ತವೆ. ಸಾಮಾಜಿಕ ಒತ್ತಡಗಳಿಂದ ಪ್ರೇರೇಪಿಸಲ್ಪಡುವಂತಹ ಗುಣದೋಷಗಳೆಲ್ಲಾ ನಮ್ಮ ಬಾಹ್ಯ ವ್ಯಕ್ತಿತ್ವದಲ್ಲಿರುವ ನಿಗೂಢ ಪವಿತ್ರತೆಯನ್ನು, ಸಹಜವಾಗಿರುವ ದಿವ್ಯಜ್ಞಾನವನ್ನು ಭಂಗಗೊಳಿಸುತ್ತದೆ. ಈ ನಿಗೂಢ ವ್ಯಕ್ತಿತ್ವದಲ್ಲಿರುವ ಸಾಮಾಜಿಕ ಮೂರ್ಖತ್ವಗಳನ್ನು, ಗುಣದೋಷಗಳನ್ನು ತೆಳುವಾಗಿ ಮಾಡಿ ಕ್ರಮೇಣ ಆವಿಯಾಗಿ ಮಾಡುವ ಪದ್ಧತಿಯೇ ಧ್ಯಾನ.

* * *

ಮತ್ತು, ಈ ಮನಸ್ಸನ್ನು ಯಾವುದರಿಂದ ನಿಯಂತ್ರಣದಲ್ಲಿಡಲಾಗುತ್ತದೆ ? ಕೇವಲ ವಿಶ್ವಾತ್ಮ ಮಾತ್ರವೇ. ಆದರೆ, ಅದು ಕೇವಲ ಜೀವಾತ್ಮದ ಅನುಮತಿಯಿಂದ ಮಾತ್ರವೇ ಸಾಧ್ಯವಾಗುತ್ತದೆ. ಧ್ಯಾನ ಸ್ಥಿತಿಯಲ್ಲಿ ಹೋಗಲು ಮನಸ್ಸು ಸಂಪೂರ್ಣವಾಗಿ ಅಂಗೀಕರಿಸಲೇಬೇಕು.

* * *

ನಮ್ಮ ಜೀವಾತ್ಮ ಅಥವಾ ಸ್ವತಂತ್ರ ಅರಿವು ತನಗೆ ತಾನೇ ಪ್ರಕ್ಷಾಳನೆ ಹೊಂದಬೇಕೆಂದು, ಪವಿತ್ರವಾಗಿ ತಯಾರಾಗಬೇಕೆಂದು ಸಂಕಲ್ಪಿಸಿದಾಗ ಮಾತ್ರವೇ ಯಾರಾದರೂ ಆ ’ ಧ್ಯಾನ ಸ್ಥಿತಿ ’ಗೆ ಹೋಗಬಲ್ಲರು. ಅಂತಹ ’ ಧ್ಯಾನ ಸ್ಥಿತಿ ’ಯಲ್ಲಿ ಮಾತ್ರವೇ ವಿಶ್ವಾತ್ಮ ಮನಸ್ಸನ್ನು ಸಂಸ್ಕರಿಸುವ ಗುರುತರ ಬಾಧ್ಯತೆಯನ್ನು ಸ್ವೀಕರಿಸಿ ಮನಸ್ಸನ್ನು ಪವಿತ್ರವಾಗಿಸುತ್ತದೆ.

ಬಾಬಾ ಮುದ್ರೆ ಯಲ್ಲಿ ಉಂಗುರದ ಬೆರಳು ಹೆಬ್ಬೆರಳಿ ನಲ್ಲಿ ಬಂಧಿಸಿರುವುದಲ್ಲಿ ಇರುವ ಅಂತರಾರ್ಥ ಇದೇ.

ಉಂಗುರದ ಬೆರಳು ಮತ್ತು ಹೆಬ್ಬೆರಳಿಂದ ನಿಯಂತ್ರಿಸಲಾಗಿರುವುದನ್ನೇ ಧ್ಯಾನಯೋಗ ಎನ್ನುತ್ತೇವೆ.

* * *

ಅದೇ ರೀತಿಯಲ್ಲಿ ಬುದ್ಧಿ ಸಹ ಅಷ್ಟೇ … ಮಧ್ಯೆ ಬೆರಳು, ಕೂಡ ಪರಿಮಿತವಾದ ಪ್ರಾಪಂಚಿಕ ಜ್ಞಾನದಿಂದ ಅಲ್ಪ ಸ್ವಲ್ಪ ಜ್ಞಾನದಿಂದ ಇದ್ದು ಅದುಪಾಜ್ಞೆಯಲ್ಲಿ ಇಡಲಾಗುವಹಾಗೆ ಇರುತ್ತದೆ. ಅಲ್ಪ ಸ್ವಲ್ಪ ಜ್ಞಾನ ಯಾವಾಗಲೂ ಪ್ರಮಾದಕರ.

ಅಲ್ಪ ಸ್ವಲ್ಪ ಜ್ಞಾನ ಎಂಬುವುದು ಒಂದು ಪರಿಪೂರ್ಣ ಜ್ಞಾನ ಎಂಬುವುದರಿಂದ ಮಾತ್ರ ನಿಯಂತ್ರಿಸಲಾಗುತ್ತದೆ. ವಿಶ್ವಾತ್ಮ ಮಾತ್ರವೇ ಪರಿಪೂರ್ಣ ಜ್ಞಾನ ದಿಂದ ಬೆಳಗುತ್ತಿರುತ್ತದೆ.

ಮಧ್ಯೆಬೆರಳು ಸಹ ಹೆಬ್ಬೆರಳಿಂದ ಬಂಧಿಸಲ್ಪಟ್ಟಿರುವುದರಲ್ಲಿ ಇರುವ ಅಂತರಾರ್ಥ ಇದೇ.

ಮಧ್ಯೆಬೆರಳು ಹೆಬ್ಬೆರಳಿಂದ ನಿಯಂತ್ರಿಸಲ್ಪಡುವುದೇ ಜ್ಞಾನಯೋಗ .

ಯಾವಾಗ ಜೀವಾತ್ಮ ತನ್ನಲ್ಲಿ ದಿವ್ಯಜ್ಞಾನ ಪ್ರಕಾಶವನ್ನು ಇಚ್ಚಿಸುತ್ತದೆಯೇ ಆಗ ಮಾತ್ರವೇ ಆ ಜೀವಾತ್ಮ ಧ್ಯಾನದಲ್ಲಿ ಮಗ್ನವಾಗುತ್ತದೆ.

ಜೀವಾತ್ಮ ಧ್ಯಾನಸ್ಥಿತಿಯಲ್ಲಿ ಹೆಜ್ಜೆ ಇಟ್ಟ ತಕ್ಷಣ ವಿಶ್ವಾತ್ಮ ಬುದ್ಧಿಯನ್ನು ತನ್ನ ಅಧೀನದಲ್ಲಿ ತೆಗೆದುಕೊಂಡು ಸಂಪೂರ್ಣ ಪರಿಣಿತಿಯನ್ನು ಪ್ರಸಾದಿಸುತ್ತದೆ. ಪರಿಮಿತ ಬುದ್ಧಿ … ಪ್ರಾಪಂಚಿಕ ಬುದ್ಧಿ … ಕೊನೆಗೆ ಅಪರಿಮಿತ ಆಧ್ಯಾತ್ಮಿಕ ಪರಿಜ್ಞಾನದಲ್ಲಿ ನಲೆದಾಡಿ … ಪರಿಪೂರ್ಣ ಬುದ್ಧಿ (ಸದ್ಬುದ್ಧಿ) ಯಾಗಿ ಉದಯಿಸುತ್ತದೆ.

* * *

ಪ್ರಾಪಂಚಿಕ ಅಲ್ಪ ಸ್ವಲ್ಪ ತಿಳಿವಳಿಕೆ ಪರಿಪೂರ್ಣ ಬುದ್ಧಿಯಾಗಿ ಪರಿಣಿತಿ ಹೊಂದುವುದನ್ನೇ ಆಧ್ಯಾತ್ಮಿಕ ಜ್ಞಾನ ವಿಕಾಸವಾಗಿ ಕರೆಯಲ್ಪಡುತ್ತದೆ. ಅರ್ಥಮಾಡಿಕೊಳ್ಳಬೇಕಾದ ಅತಿಮುಖ್ಯ ವಿಷಯವೇನೆಂದರೆ, ಈ ಜ್ಞಾನಂiಗ ವೆಂಬುವುದು ಧ್ಯಾನಯೋಗ ದಿಂದಲೇ ಸಹಜವಾಗಿ, ಅದ್ಭುತವಾಗಿ ತನ್ನಷ್ಟಕ್ಕೆ ತಾನಾಗಿಯೇ ಪ್ರಾಪ್ತಿಸುತ್ತದೆ!

 

ಬಾಬಾ ಕಾನ್ಸೆಪ್ಟ್ ಸಾರಾಂಶ ಸ್ಥೂಲವಾಗಿ …

ಉಂಗುರದ ಬೆರಳು ಪ್ರಕ್ಷಾಳನೆ … ಧ್ಯಾನಯೋಗ

ಮಧ್ಯೆ ಬೆರಳು ಪ್ರಕ್ಷಾಳನೆ … ಜ್ಞಾನಯೋಗ

 

ಮನಸ್ಸಿನ ಮಟ್ಟದಿಂದ ಪರಿಪೂರ್ಣ ಬುದ್ಧಿ ಮಟ್ಟಕ್ಕೆ ನಡೆಯುವ ಪರಿಣಾಮವೇ … ಧ್ಯಾನ , ಆಧ್ಯಾತ್ಮಿಕ ಶಾಸ್ತ್ರ , ಅಥವಾ ದಿವ್ಯಜ್ಞಾನ ಪ್ರಕಾಶ (ಎನ್‌ಲೈಟೆನ್‌ಮೆಂಟ್) .