“ಪ್ರಾಣಶಕ್ತಿ ಶರಣಂ ಗಚ್ಛಾಮಿ”

“ವಿಶ್ವಮಯ ಪ್ರಾಣಶಕ್ತಿ”

ನಮ್ಮ ಚರ್ಮಚಕ್ಷುವಿಗೆ ಕಾಣಿಸುವ ಭೌತಿಕವಿಶ್ವವೆಲ್ಲಾ ಕೂಡಾ ಮೂಲತಃ
ಸಾಧಾರಣ ಕಣ್ಣಿಗೆ ಕಾಣಿಸದ, ವಿಶ್ವಮಯ ಪ್ರಾಣಶಕ್ತಿ ಕಣಗಳ ಅಭಿವ್ಯಕ್ತೀಕರಣವಾಗಿದೆ
ವಿಶ್ವವೆಲ್ಲಾ ತುಂಬಿರುವ ಈ ಪ್ರಾಣಶಕ್ತಿ ಕಣಗಳು ಅನೇಕ ಹಂತಗಳಲ್ಲಿ ಏಕೀಕೃತವಾಗಿ
ಸ್ಥೂಲವಾಗಿ ನಮ್ಮ ಕಣ್ಣಿಗೆ ಕಾಣಿಸುವ ಹಂತಕ್ಕೆ ಬಂದಾಗ ಅದನ್ನು ನಾವು “ಭೌತಿಕ ಪದಾರ್ಥ”ವೆನ್ನುತ್ತೇವೆ.
ಭೌತಿಕ ಪದಾರ್ಥವೆನ್ನುವುದು “ಘನಸ್ಥಿತಿ” .. “ದ್ರವಸ್ಥಿತಿ” .. “ವಾಯುಸ್ಥಿತಿ” ಮತ್ತು
“ಪ್ಲಾಸ್ಮಾ ಸ್ಥಿತಿ”ಯಾಗಿದೆ. ಹೀಗೆ ವಿಧವಿಧವಾದ ಶಕ್ತಿಸಾಂದ್ರತೆಗಳೊಂದಿಗೆ ಕೂಡಿಕೊಂಡಿದೆ.
ಘನಸ್ಥಿತಿಯಲ್ಲಿರುವ “ಭೌತಿಕಕಾಯ”ವೆನ್ನುವುದು, ಪ್ಲಾಸ್ಮಾ
ಸ್ಥಿತಿಯಲ್ಲಿರುವ “ಪ್ರಾಣಮಯಕೋಶ”ದ ಆಧಾರವಾಗಿ ನಿರ್ಮಿಸಲ್ಪಟ್ಟಿರುತ್ತದೆ.
“ಪ್ರಾಣಮಯ ಕೋಶ” ಎನ್ನುವುದು ನಮ್ಮ ಭೌತಿಕಮಯಕೋಶಕ್ಕೆ ಮೂಲತಃ
ಪ್ರಾಣಾಧಾರವಾದರಿಂದ ಭೌತಿಕಶರೀರವನ್ನು.. ಅದರ ಮೂಲಕ ನಮ್ಮ ಭೌತಿಕ
ಜೀವನವನ್ನು .. ವಿಶೇಷವಾಗಿ ಶಕ್ತಿಮಯ ಮಾಡಿಕೊಳ್ಳಬೇಕೆಂದರೆ, ನಾವು
ನಿಯಮಿತ ಸಮಯದಲ್ಲಿ ನಮ್ಮ ಶಕ್ತಿಗನುಗುಣವಾಗಿ ಧ್ಯಾನ ಮಾಡುತ್ತಾ
ನಮ್ಮ ಪ್ರಾಣಮಯ ಶರೀರವನ್ನು ಪ್ರತಿದಿನ ವಿಶ್ವಮಯ ಪ್ರಾಣಶಕ್ತಿಯೊಂದಿಗೆ ಬಲಪಡಿಸಿಕೊಳ್ಳುತ್ತಾ ಇರಬೇಕು.

“ಧ್ಯಾನಂ ನಿರ್ವಿಷಯಂ ಮನಃ”

ಮನಸ್ಸು ನಿರ್ವಿಷಯವಾದಾಗ ಮಾತ್ರವೇ ವಿಶ್ವಮಯ ಪ್ರಾಣಶಕ್ತಿ ಮತ್ತಷ್ಟು ನಮ್ಮ
ಪ್ರಾಣಮಯಕೋಶಕ್ಕೆ ಸೇರುತ್ತದೆ.
ಮನಸ್ಸು ಕಕ್ಕಾಬಿಕ್ಕಿಯಾಗಿ ಗೊಂದಲ ಸ್ಥಿತಿಯಲ್ಲಿರುವಾಗ ವಿಶ್ವಮಯ ಪ್ರಾಣ
ಶಕ್ತಿ ಭೌತಿಕ ಶರೀರದೊಳಗೆ ಪ್ರವೇಶಿಸಲಾರದು.
ಅಧಿಕವಾಗಿ ಅನಗತ್ಯವಾದ ವಿಷಯಗಳನ್ನು ದಿನದಲ್ಲಿ ಹೆಚ್ಚು ಸಮಯ ನಮ್ಮ ಚರ್ಮ
ಚಕ್ಷುಗಳಿಂದ ನೋಡುತ್ತಾ, ಮನಸ್ಸಿನಲ್ಲಿ ಬಹಳಷ್ಟು ಅನಗತ್ಯವಾದ ಆಲೋಚನೆಗಳನ್ನು
ಮಾಡುತ್ತಿದ್ದರೆ ಬಹಳಷ್ಟು ಪ್ರಾಣಶಕ್ತಿಯನ್ನು ಕಳೆದುಕೊಳ್ಳುತ್ತಾ ಇರುತ್ತೇವೆ.
ಕಣ್ಣೆರೆಡೂ ಮುಚ್ಚಿಕೊಂಡರೆ, ಭೌತಿಕಕಾಯದ ಪ್ರಾಣಶಕ್ತಿಯು ಶೇಕಡಾ ಎಂಬತ್ತರಷ್ಟು ಉಳಿಯುತ್ತದೆ!
ವ್ಯರ್ಥ ಆಲೋಚನೆಗಳ ತರಂಗಗಳನ್ನು ಕಡಿಮೆ ಮಾಡಿಕೊಂಡು ಮನಸ್ಸನ್ನು
ನಿರ್ವಿಷಯ ಮಾಡಿಕೊಂಡಾಗ, ಭೌತಿಕಕಾಯದ ಪ್ರಾಣಶಕ್ತಿ ನೂರಕ್ಕೆ ನೂರರಷ್ಟು ಉಳಿತಾಯವಾಗುತ್ತದೆ!
ಒಂದು ಕಡೆ .. ಇರುವ ಶಾರೀರಿಕ ಪ್ರಾಣಶಕ್ತಿಯನ್ನು ಅತ್ಯಧಿಕವಾಗಿ ಉಳಿತಾಯ
ಮಾಡಿಕೊಳ್ಳುತ್ತಾ, ಮತ್ತೊಂದು ಕಡೆ ಧ್ಯಾನದ ಮೂಲಕ ವಿಶ್ವದಿಂದ ಮತ್ತಷ್ಟು
ಪ್ರಾಣಶಕ್ತಿಯನ್ನು ನಮ್ಮ ಪ್ರಾಣಮಯಕೋಶದೊಳಗೆ ತೆಗೆದುಕೊಳ್ಳುತ್ತಾ..
ಶಕ್ತಿಯುತವಾಗಿ, ಹಾಯಾಗಿ ಜೀವಿಸುವುದೇ ನವೀನ ಆಧ್ಯಾತ್ಮಿಕ ಜೀವನ ವಿಧಾನ!
ಎಲ್ಲಾ ವ್ಯಾಧಿಗಳಿಗೂ ನಮ್ಮ ಪ್ರಾಣಮಯಕೋಶದಲ್ಲಿ ಪ್ರಾಣಶಕ್ತಿಯ ಕೊರತೆಯೇ ಮೂಲಕಾರಣ
ಪ್ರಾಣಮಯಕೋಶದಲ್ಲಿ ಪ್ರಾಣಶಕ್ತಿಯು ಕಡಿಮೆಯಾಗಲು ಧ್ಯಾನವಿದ್ಯೆಯ ಕೊರತೆಯೇ ಮೂಲಕಾರಣ
ಧ್ಯಾನಾಭ್ಯಾಸ ಇಲ್ಲದಿರುವುದಕ್ಕೆ ಧ್ಯಾನವಿದ್ಯೆ ಇಲ್ಲದಿರುವುದು ಮೂಲಕಾರಣ
ನಮ್ಮ ಅಜ್ಞಾನವೇ, ನಮ್ಮ ತಮೋಗುಣವೇ ಧ್ಯಾನವಿದ್ಯೆಯಿಲ್ಲದಿರುವಿಕೆಗೆ ಮೂಲಕಾರಣ.

“ಧ್ಯಾನ ವಿಧ್ಯೆ”

ನಮ್ಮ ಪ್ರಾಣಮಯಕೋಶದಲ್ಲಿ ಮೂಲಭೂತವಾಗಿ ಪ್ರಾಣಶಕ್ತಿ ಲೋಪವಾಗಿರುವುದೇ ಎಲ್ಲ ವ್ಯಾಧಿಗಳಿಗೆ ಮೂಲಕಾರಣ
ಮತ್ತು ಪ್ರಾಣಮಯಕೋಶದಲ್ಲಿ ಪ್ರಾಣಶಕ್ತಿ ಲೋಪಿಸುವುದಕ್ಕೆ ಧ್ಯಾನಾಭ್ಯಾಸ ಇಲ್ಲದಿರುವುದೇ ಮೂಲಕಾರಣ. ಧ್ಯಾನ ಅಭ್ಯಾಸ ಇಲ್ಲದಿರುವುದಕ್ಕೆಧ್ಯಾನವಿದ್ಯೆ ಇಲ್ಲದಿರುವುದೇ ಮೂಲಕಾರಣ
ಧ್ಯಾನ ವಿದ್ಯೆ ಇಲ್ಲದಿರುವುದಕ್ಕೆ ಮೂಲಕಾರಣ ನಮ್ಮ ಅಜ್ಞಾನವೇ, ನಮ್ಮ ತಮೋಗುಣವೇ.

“ಶಕ್ತಿಯುತವಾದ ಧ್ಯಾನ”

ಪಿರಮಿಡ್‌ನಲ್ಲಿ ಧ್ಯಾನ ಮಾಡಿದರೆ .. ನಮ್ಮ ಧ್ಯಾನ “ಮೂರುಪಟ್ಟು” ಮತ್ತಷ್ಟು ಶಕ್ತಿಯುತವಾಗಿರುತ್ತದೆ.
ಸಾಮೂಹಿಕ ಧ್ಯಾನ ಮಾಡಿದರೆ .. ನಮ್ಮ ಧ್ಯಾನ “ಮೂರುಪಟ್ಟು” ಅಧಿಕ ಶಕ್ತಿಯುತವಾಗಿರುತ್ತದೆ.
ಹುಣ್ಣಿಮೆ ಧ್ಯಾನ ಮಾಡಿದರೆ .. ನಮ್ಮ ಧ್ಯಾನ “ಮೂರುಪಟ್ಟು” ಅಧಿಕ ಶಕ್ತಿಯುತವಾಗಿರುತ್ತದೆ.
ವೃಕ್ಷಸಾಮ್ರಾಜ್ಯದೊಂದಿಗೆ ಕೂಡಿ ಧ್ಯಾನ ಮಾಡಿದರೆ .. ನಮ್ಮ ಧ್ಯಾನ “ಮೂರುಪಟ್ಟು” ಅಧಿಕ ಶಕ್ತಿಯುತವಾಗಿರುತ್ತದೆ
ಶಾಸ್ತ್ರೀಯ ಸಂಗೀತ ವಾದ್ಯದೊಂದಿಗೆ ಕೂಡಿ ಧ್ಯಾನ ಮಾಡಿದರೆ .. ನಮ್ಮ ಧ್ಯಾನ “ಮೂರುಪಟ್ಟು” ಅಧಿಕ ಶಕ್ತಿಯುತವಾಗಿರುತ್ತದೆ.

“ದೈನಂದಿನ ಧ್ಯಾನ”

ಹೀಗೆ ಶ್ರದ್ಧಾಪೂರ್ವಕ, ದೈನಂದಿನ ಧ್ಯಾನದ ಮೂಲಕ ನಮ್ಮ ಪ್ರಾಣಮಯ ಶರೀರ
ಮತ್ತಷ್ಟು, ವಿಶ್ವಮಯ ಪ್ರಾಣಶಕ್ತಿಯೊಂದಿಗೆ ಪೂರ್ಣವಾಗುತ್ತಾ
ಇರಬೇಕು. ಧ್ಯಾನದ ಧ್ಯೇಯ ನಾವು ವಿಶ್ವಮಯ ಪ್ರಾಣಶಕ್ತಿಯನ್ನು ಗ್ರಹಿಸುವುದೇ.

ಪ್ರಾಣಶಕ್ತಿ ಶರಣಂ ಗಚ್ಛಾಮಿ!
ಧ್ಯಾನವಿದ್ಯಾ ಶರಣಂ ಗಚ್ಛಾಮಿ!!
ಧ್ಯಾನಾಭ್ಯಾಸಂ ಶರಣಂ ಗಚ್ಛಾಮಿ!!!