“ಪ್ರಕೃತಿ ಮಾತೆಯ .. ಮೂರು ಸ್ಥಿತಿಗಳ ಮಕ್ಕಳು”

ಈ ಸೃಷ್ಟಿಯಲ್ಲಿ ಮೂರು ಸ್ಥಿತಿಗಳಲ್ಲಿ ಮಾನವರು ಇರುತ್ತಾರೆ. ತಾಯಿಯಂತಹ ಪ್ರಕೃತಿ .. ತನ್ನ ಮಕ್ಕಳಾದ ಈ ಮೂರು ವಿಧದ ಮಾನವರನ್ನು ಪ್ರೀತಿಸುತ್ತಲೇ ಇರುತ್ತಾಳೆ .. ಆದರೆ ಆ ಮಕ್ಕಳು ಮಾಡುವ ಕೆಲಸಗಳ ಮೇಲೆ ಆ ತಾಯಿಯ ಪ್ರೀತಿಯ ಪ್ರದರ್ಶನದಲ್ಲಿ ಸ್ವಲ್ಪ ವೈವಿಧ್ಯವಿರುತ್ತದೆ.

ಮೊದಲ ಸ್ಥಿತಿಯ ಮಕ್ಕಳು: ಇವರು ಪೂರ್ತಿ ಹಿಂಸಾಮಾರ್ಗದಲ್ಲಿ ಜೀವಿಸುತ್ತಿದ್ದರೂ ಸರಿಯೇ .. ಅವರು ಮಾಡುವ ಕೃತ್ಯಗಳನ್ನು ಪ್ರಕೃತಿಮಾತೆ ಸಹಿಸುತ್ತಾಳೆ! ನಡೆದಷ್ಟು ಕಾಲ “ನಮ್ಮಂತಹವರು ಇನ್ನು ಇಲ್ಲ” ಎಂದು ಅವರು ಅಂದುಕೊಂಡಷ್ಟು ಕಾಲ ಚೆನ್ನಾಗಿಯೇ ಇರುತ್ತದೆ.

ಆದರೆ ಯಾವುದೋ ಜನ್ಮದ ಕರ್ಮಫಲಿತವನ್ನು ಅನುಭವಿಸಬೇಕಾಗಿ ಬಂದಾಗ ಮಾತ್ರ ಆ ತಾಯಿ ಅಹಿಂಸಾತ್ಮಕರಿಗೆ ಸಹಾಯ ಮಾಡುವುದಲ್ಲದೆ ತನ್ನ ಮುಖವನ್ನು ಸಹ ತಿರುಗಿಸಿಕೊಳ್ಳುತ್ತಾಳೆ.

ಎರಡನೆಯ ಸ್ಥಿತಿಯ ಮಕ್ಕಳು:
ಇವರು “ಅಹಿಂಸಾ ಪರಮೋ ಧರ್ಮಃ” ಎನ್ನುವ ಸಿದ್ಧಾಂತವನ್ನು ಎರಡು ಮಾತಿಲ್ಲದೆ ಆಚರಿಸುತ್ತಾ ಇತರ ಜೀವಿಗಳಿಗೆ ಹಿಂಸೆ ಕೊಡದೇ ತಮ್ಮ ಬದುಕು ಎಷ್ಟೋ ಅಷ್ಟರಲ್ಲಿ ಅದರಲ್ಲಿ ಮಾತ್ರ ಜೀವಿಸುತ್ತಾರೆ.

ಇಂತಹವರು ಎದುರಾದಾಗ ಪ್ರಕೃತಿಮಾತೆ ಚೆನ್ನಾಗಿ ಮಾತನಾಡಿಸಿ .. ಅವರನ್ನು ಸಾವಿರಾರು ವರ್ಷ ಬಾಳಿ ಬದುಕಿರಿ ಎಂದು ಆಶೀರ್ವದಿಸುತ್ತಾಳೆ.

ಮೂರನೆಯ ಸ್ಥಿತಿ ಮಕ್ಕಳು: ಇವರು ಧ್ಯಾನ ಸಾಧನೆಯ ಮೂಲಕ ತಮ್ಮನ್ನು ತಾವು ಅರಿತು ವಿಶ್ವಪ್ರಣಾಳಿಕೆಯಲ್ಲಿ ತಮ್ಮ ಪಾಲಿನ ಕರ್ತವ್ಯವನ್ನು ಗುರುತಿಸಿ ಆ ಮಾರ್ಗವಾಗಿ ಪ್ರಯಾಣಿಸುತ್ತಾ ಸಮಸ್ತ ಪ್ರಾಣಿಕೋಟಿಯ ರಕ್ಷಣೆಗಾಗಿ ಲೋಕಕಲ್ಯಾಣ ಕಾರ್ಯಕ್ರಮಗಳನ್ನು ನೆರವೇರಿಸುತ್ತಾ ಸತತವಾಗಿ ಶ್ರಮಿಸುತ್ತಿರುತ್ತಾರೆ.

ಪ್ರಕೃತಿ ನಿಯಮಗಳಿಗೆ ಅನುಗುಣವಾಗಿ ಜೀವಿಸುವ ಇವರನ್ನು ನೋಡಿ ಪ್ರಕೃತಿಮಾತೆ ಪುಲಕಿತಗೊಂಡು ಅವರಿಗೆ ಶಿರಬಾಗಿ ನಮಸ್ಕರಿಸುತ್ತಾಳೆ.