“ಪ್ರಕೃತಿ ಪುತ್ರರು”

 

“ಎಷ್ಟು ಕಲಿತರೂ .. ಎಷ್ಟು ನೋಡಿದರೂ
ಎಂತಹವರಾದರೂ .. ಕಾಂತ ದಾಸರೇ”

ಪ್ರಮುಖ ವಾಗ್ಗೇಯಕಾರರಾದ ಶ್ರೀ ತ್ಯಾಗರಾಜಸ್ವಾಮಿ ತಮ್ಮ ಅದ್ಭುತವಾದ ಕೀರ್ತನೆಯಲ್ಲಿ ನಮಗೆ ಒಂದು ದೊಡ್ಡ ಸತ್ಯವನ್ನು ತಿಳಿಸಿದ್ದಾರೆ.

“ಕಾಂತ” ಎಂದರೆ “ಪ್ರಕೃತಿ”! ಅಂದರೆ ನಮ್ಮ ಸ್ವಂತ ಸಹಜಸ್ವಭಾವ. “ಕಾಂತ ದಾಸರು” ಎಂದರೆ “ಪ್ರಕೃತಿ ತತ್ತ್ವಗಳಿಗೆ ವಶರಾಗಿ ಇರುವವರು”. ಅಂದರೆ “ಯಾರ ಸ್ವಂತ ಪ್ರಕೃತಿ ಸ್ವಭಾವಗಳಿಗೆ ಅವರೇ ವಶರಾಗಿ ಇರುವವರು” ಎಂದು ಅರ್ಥ. ಹಾಗೇ ಯಾರಿಗೆ ಅವರು ತಮ್ಮ ತಮ್ಮ ಸಹಜ ಪ್ರಕೃತಿಯನ್ನು ಅನುಸರಿಸಿಕೊಂಡು ಹೋಗುತ್ತಾ ಇರುವುದೇ ಸರಿಯಾದ ಜೀವನ ವಿಧಾನ!

ಈ ಲೋಕದಲ್ಲಿ ಪ್ರತಿಯೊಬ್ಬರೂ ತಮ್ಮ ತಮ್ಮ ಜನ್ಮಪರಂಪರೆಯ್ಲ ಭಾಗವಾಗಿ ಕೆಲವು ಜನ್ಮಗಳು ತಮೋಗುಣ ಪ್ರಕೃತಿಯಿಂದ, ಕೆಲವು ಜನ್ಮಗಳುರಜೋಗುಣ ಪ್ರಕೃತಿಯಿಂದ, ಕೆಲವು ಜನ್ಮಗಳು ಸತ್ವಗುಣ ಪ್ರಕೃತಿಯಿಂದ ಅದರಲ್ಲಿ ಮತ್ತೆ ಕೆಲವು ಜನ್ಮಗಳು ಶುದ್ಧ ಸಾತ್ವಿಕಗುಣ ಪ್ರಕೃತಿಯಿಂದಜೀವಿಸಿ ಕೊನೆಗೆ ನಿರ್ಗುಣ ಪ್ರಕೃತಿಯಲ್ಲಿ ಜೀವಿಸುತ್ತಾ ತಮ್ಮ ತಮ್ಮ ಜೀವನ ಕಾರ್ಯಕಲಾಪಗಳನ್ನು ಕೈಗೊಳ್ಳುತ್ತಿರುತ್ತಾರೆ.

ಮಹಾಭಾರತದಲ್ಲಿ ಪಾಂಡವರಿಗೆ, ಕೌರವರಿಗೆ ಮಧ್ಯೆ ಸಂಧಾನವನ್ನು ನೆರವೇರಿಸಲು ಶ್ರೀಕೃಷ್ಣನು ಹಸ್ತಿನಾಪುರಕ್ಕೆ ಹೋದನು. ಯುದ್ಧನಿವಾರಣಾ ಮಾರ್ಗಕ್ಕೆ ಇರುವ ಧರ್ಮಾಧರ್ಮ ವಿಚಕ್ಷಣಾ ವಿಶೇಷಗಳೆಲ್ಲವನ್ನೂ ದುರ್ಯೊಧನಾದಿಗಳಿಗೆ ಸ್ಪಷ್ಟವಾಗಿ ತಿಳಿಸಿದನು!

ಶ್ರೀ ಕೃಷ್ಣನು ಹೇಳಿದ ಪ್ರಕೃತಿ ಧರ್ಮಗಳೆಲ್ಲವನ್ನೂ ಶ್ರದ್ಧೆಯಿಂದ ಕೇಳಿದ “ಕಾಂತ ದಾಸನಾದ” ದುರ್ಯೋಧನನು.

“ಜಾನಾಮಿ ಧರ್ಮಃ ನ ಚ ಮೇ ಪ್ರವೃತ್ತಿಃ
ಜಾನಾಮಿ ಅಧರ್ಮಃ ನ ಚ ಮೇ ನಿವೃತ್ತಿಃ”

“ನನಗೆ ಧರ್ಮ ಅಂದರೆ ಏನು ಎಂದು ಗೊತ್ತು .. ಅಧರ್ಮ ಅಂದರೆ ಏನು ಎಂದೂ ಗೊತ್ತು! ಅವೆರೆಡೂ ಮಾಡುವುದರಿಂದ ದೊರೆಯುವ ಫಲಗಳು ಕೂಡಾ ಗೊತ್ತು. ಆದರೂ ನನ್ನ ಸಹಜ ಪ್ರಕೃತಿ ನನ್ನನ್ನು ಅಧರ್ಮ ಮಾಡು ಎಂದು ಹೇಳುತ್ತಿz. ಆದ್ದರಿಂದ, ನಾನು ಅದೇ ಮಾಡುತ್ತೇನೆ” ಎಂದು ಹೇಳಿ ಯುದ್ಧಕ್ಕೆ ಸನ್ನದ್ಧನಾದನು!

ಕುರುಕ್ಷೇತ್ರ ಯುದ್ಧರಂಗದಲ್ಲಿ ಮಧ್ಯೆ ಕುಳಿತು .. ವೈರಿ ಪಕ್ಷದಲ್ಲಿರುವ ತನ್ನ ಬಂಧುವರ್ಗವನ್ನು ನೋಡಿ ವಿಚಲಿತ ಮನಸ್ಕನಾದ ಅರ್ಜುನ ಧನುರ್ಬಾಣಗಳನ್ನು ಕೆಳಗೆ ಹಾಕಿ ಯುದ್ಧ ಮಾಡಲಾರೆನೆಂದು ಹೇಡಿಯಂತೆ ಮಾತನಾಡಿದನು.
ಪಲಾಯನವಾದವನ್ನು ಹೇಳುತ್ತಿದ್ದ ಚಿಂತಾದಾಸನಾದ ಅರ್ಜುನನಿಗೆ ಶ್ರೀಕೃಷ್ಣನು ಆತನ ಸಹಜ ಪ್ರಕೃತಿಯಾದ ಕ್ಷಾತ್ರಗುಣವನ್ನು ನೆನಪಿಸಿ “ಹೇಡಿಯಂತೆ ಯುದ್ಧರಂಗದಿಂದ ಓಡಿ ಹೋಗುವುದು ನಿನ್ನ ‘ಸ್ವಂತ ಪ್ರಕೃತಿ’ ಸ್ವಲ್ಪ ಮಾತ್ರವೂ ಅಲ್ಲ. ಆದ್ದರಿಂದ, ಎದ್ದು ಗಾಂಢೀವವನ್ನು ಕೈಯಲ್ಲಿ ಹಿಡಿದು ಯುದ್ಧಮಾಡು” ಎನ್ನುತ್ತಾ ಕರ್ತವ್ಯವನ್ನು ಬೋಧಿಸಿದನು!

ಹೀಗೆ ನಾವೆಲ್ಲಾ ಕೂಡಾ ಹೀಗೆ ಅನೇಕಾನೇಕ ಜನ್ಮಗಳಿಗೆ ಸೇರಿದ ಯಾವ ಗುಣ ಸಂಚಯಗಳಿಂದ ಹುಟ್ಟುತ್ತೇವೊ .. ಅದೇ ನಮ್ಮ “ಸ್ವಂತ ಪ್ರಕೃತಿ” ಮತ್ತು ನಮ್ಮ ಸ್ವಂತ ಸ್ಥಿತಿ ಆಗುತ್ತದೆ. ಹಾಗೆ ಸ್ವಸ್ಥಿತಿಯಲ್ಲಿ ಜೀವಿಸುವವರೆಲ್ಲಾ ಕೂಡಾ ಪ್ರಕೃತಿ ಪುತ್ರರು ಎಂದು ಕರೆಯಲ್ಪಡುತ್ತಾರೆ.

ಪಿರಮಿಡ್ ಮಾಸ್ಟರ‍್ಸ್ ಎಲ್ಲರೂ ಕೂಡ ನಿಜವಾದ “ಪ್ರಕೃತಿ ಪುತ್ರರು”! ಅವರ ಸಹಜ ಪ್ರಕೃತಿ “ಧ್ಯಾನ” ಮಾಡುವುದು .. “ಸ್ವಾಧ್ಯಾಯ”ಮಾಡುವುದು .. ಮತ್ತು “ಸಜ್ಜನ ಸಾಂಗತ್ಯ” ಮಾಡುವುದು! ಬೇರೆಯವರ ಸಹಜ ಪ್ರಕೃತಿಯನ್ನು ಬದಲಾಯಿಸಬೇಕೆಂದು ಅವರು ಎಂದಿಗೂ ಪ್ರಯತ್ನಿಸುವುದಿಲ್ಲ. ತಮ್ಮಂತೆಯೇ ಅವರೂ ಸಹ ತಮ್ಮ ಸಹಜ ಪ್ರಕೃತಿಯಲ್ಲಿ ಜೀವಿಸುತ್ತಿದ್ದಾರೆಂದು ಸುಸ್ಪಷ್ಟವಾಗಿ ತಿಳಿದುಕೊಂಡು ಮತ್ತು ಹಾಗೆಯೇ ವರ್ತಿಸುತ್ತಾ ಅವರು ಲೋಕಕಲ್ಯಾಣಾರ್ಥಕ್ಕಾಗಿ ತಮ್ಮ ಜೀವನ ವ್ಯಾಪಾರಗಳನ್ನು ಕೈಗೊಳ್ಳುತ್ತಿರುತ್ತಾರೆ. ಅಂತಹವರು ಎಲ್ಲಿಗೆ ಹೋದರೂ ಯಾವ ಕಾರ್ಯಕ್ರಮದಲ್ಲಿ ಮಗ್ನರಾದರೂ .. ಅವರಿಗೆ ವಿಜಯವೇ ಸಿದ್ಧಿಸುತ್ತದೆ!