“ಪೂರ್ಣ ವ್ಯಕ್ತಿತ್ವ ವಿಕಾಸ”

ಪ್ರತಿ ವ್ಯಕ್ತಿಗೂ ಒಂದು ವ್ಯಕ್ತಿತ್ವ ಇರುತ್ತದೆ.
ಪ್ರತಿ ವ್ಯಕ್ತಿಯು ಅಪರೂಪವೇ.
ಪ್ರತಿ ವ್ಯಕ್ತಿಯ ವ್ಯಕ್ತಿತ್ವವೂ ಅಪರೂಪವೇ.
ಪ್ರತಿ ವ್ಯಕ್ತಿಯೂ ಅದ್ಭುತವೇ ; ಪ್ರತಿ ವ್ಯಕ್ತಿಯು ಅನಂತವೇ.
ಆದರೆ, ಕೋಟ್ಯಾನು ಕೋಟಿ ವ್ಯಕ್ತಿಗಳು ಅದ್ಭುತವಾಗಿ ಜೀವಿಸುತ್ತಿಲ್ಲ ; ಉದಾಸೀನವಾಗಿ ಜೀವಿಸುತ್ತಿದ್ದಾರೆ
‘ಆ.. ನನ್ನಿಂದೇನಾಗುತ್ತದೆ ?’
‘ನಾನು ಕೇವಲ ಮಾನವ ಮಾತ್ರನು’
‘ನಾನು ದೇವರ ಕೈಯಲ್ಲಿ ಕೀಲುಬೊಂಬೆ.’
‘ಏನೋ ಜೀವನವನ್ನು ಕಳೆದರೆ ಸಾಕು’ ಎನ್ನುತ್ತಾ ಜೀವನವನ್ನು ಕಳೆಯುತ್ತಿದ್ದಾರೆ.
‘ಕೂಳಿಗಾಗಿಯೇ, ಕೋಟಿ ವಿದ್ಯೆಗಳು’ ಎಂದುಕೊಳ್ಳುತ್ತಾ, ಏನೂ ಸಾಧಿಸಲಾಗದೆ ತೃಪ್ತಿ ಇಲ್ಲದೆ ಜೀವಿಸುತ್ತಿದ್ದಾರೆ.
‘ನಾಲ್ಕು ಗೋಡೆಗಳ ಗೂಡೇ ಪರಮಾವಧಿ’ ಎನ್ನುತ್ತ ಜೀವಿಸುತ್ತಿದ್ದಾರೆ.
‘ನಾನು ಒಬ್ಬ ತಂದೆತಾಯಿಯರಿಗೆ ಹುಟ್ಟಿದ್ದೇನೆ. ಆದ್ದರಿಂದ, ನಾನೂ ಒಬ್ಬ ತಾಯಿಯಾಗಿಂi ಅಥವಾ ತಂದೆಯಾಗಿಂi
ಆದರೆ ಸಾಕು’ ಎಂದು, ‘ಅದೇ ಜೀವನದ ಪರಮಾವಧಿ’ ಎಂದು ಜೀವಿಸುತ್ತಿದ್ದಾರೆ.
‘ಜೀವನವೆಂದರೆ ದುಃಖಗಳ ಸಾಗರ’, ’ಮಾನವನಿಗೆ ದುಃಖವು ತಪ್ಪಿದ್ದಲ’ ಎಂದುಕೊಳ್ಳುತ್ತಾ, ಒಣವೇದಾಂತ ಹೇಳುತ್ತಾ ಮಾನವ ಜೀವಿಸುತ್ತಿದ್ದಾನೆ.
ಇದೆಲ್ಲಾ … ‘ಸರಿಯಾದ ವ್ಯಕ್ತಿತ್ವ ವಿಕಾಸ’ ಇಲ್ಲದೆ ಇರುವುದರಿಂದ ಈ ರೀತಿ ಆಗುತ್ತದೆ. ಪ್ರಕೃತಿ ಸಹಜವಾದ ‘ವ್ಯಕ್ತಿತ್ವ ವಿಕಾಸ’ ಇಲ್ಲದೆ
ಅದ್ಭುತಗಳೆಲ್ಲಾ ಮಾಯವಾಗಿ ಅನರ್ಥಗಳೆಲ್ಲಾ ಉದ್ಭವಿಸುತ್ತಿವೆ.
‘ವ್ಯಕ್ತಿತ್ವ ವಿಕಾಸ’ ಎಂಬುವುದು ‘ಧ್ಯಾನ – ಆಧ್ಯಾತ್ಮಿಕತೆ’ಯಿಂದಲೇ ಸಂಭವಿಸುತ್ತದೆ. ಶುಭಸ್ಯ ಶೀಘ್ರಂ – ಅಂದರೆ, ಒಳ್ಳೆಯ ಕೆಲಸವು
ತಕ್ಷಣ ಪ್ರಾರಂಭವಾಗಬೇಕು. ಆದ್ದರಿಂದ.. ಚಿಕ್ಕ ವಯಸ್ಸಿನಿಂದಲೇ ‘ಧ್ಯಾನ – ಆಧ್ಯಾತ್ಮಿಕತೆ’ ಎಂಬು‘ಮಂತ್ರದಂಡ’ದಿಂದ..
ಒಂದುಅದ್ಭುತವಾದ ವ್ಯಕ್ತಿತ್ವ ವಿಕಾಸವಾಗಬೇಕಾಗಿದೆ. ಚಿಕ್ಕವಯಸ್ಸಿನಿಂದಲೇ ಮಕ್ಕಳಿಗೂ, ಯುವಜನರಿಗೂ, ಧ್ಯಾನ ಮತ್ತು ಆಧ್ಯಾತ್ಮಿಕತೆ ಎಂಬುವುದನ್ನು ಅಭ್ಯಾಸ ಮಾಡಿಸಬೇಕು. ಶರೀರದ ಇಂದ್ರಿಯಗಳು ಹೊರಗಿನ ದಿಕ್ಕಿಗೆ ಅರಳಿ ನಿಂತಿವೆ;ಹೊರನೋಟ ಪ್ರಾಪಂಚಿಕವಾದರೆ.. ಒಳನೋಟ ಎಂಬುವುದು ಆಧ್ಯಾತ್ಮಿಕ; ಹೊರಗಿರುವುದು ಮತ್ತು ಒಳಗಿರುವುದು ಈ ಎರಡನ್ನೂ ಸಮನ್ವಯ ಮಾಡುವುದೇ ಧ್ಯಾನ.
‘ಧ್ಯಾನ – ಆಧ್ಯಾತ್ಮಿಕತೆ’ ಎಂಬುವುದು ಚಿಕ್ಕಂದಿನಿಂದಲೇ, ಕಡ್ಡಾಯವಾಗಿಸಬೇಕು; ಆಧ್ಯಾತ್ಮಿಕತೆ ಬಹು ರಮಣೀಯವಾದದ್ದು, ಬಹುಸರಳವಾದದ್ದು, ಬಹು ಲಾಭದಾಯಕವಾದದ್ದು.
ಹೊರಪ್ರಪಂಚ ಎಷ್ಟು ವಿಶಾಲವಾದದ್ದೋ, ಎಷ್ಟು ದೊಡ್ಡದೋ, ಅದಕ್ಕಿಂತ ಶತಕೋಟಿ ಪಟ್ಟು ದೊಡ್ಡದು, ವಿಶಾಲವಾದದ್ದು
ಆಂತರಿಕ ಪ್ರಪಂಚ. ಆಂತರಿಕ ಪ್ರಪಂಚದ ಒಂದು ಚಿಕ್ಕ ಅಲೆಯೇ ಹೊರಪ್ರಪಂಚ.
ದಿನಕ್ಕೆ ಒಮ್ಮೆಯಾದರೂ ಆಂತರಿಕ ಪ್ರಪಂಚದಲ್ಲಿ ಮುಳುಗಲೇಬೇಕು.
ಆಂತರಿಕ ಪ್ರಪಂಚದಲ್ಲಿ ಮುಳುಗುವುದು .. ಅದರ ಹೆಸರೇ ಧ್ಯಾನ …
ದಿನನಿತ್ಯದ ಧ್ಯಾನದಿಂದಲೇ ಒಳ್ಳೆಯ ಆಧ್ಯಾತ್ಮಿಕತೆ ಅಭ್ಯಾಸವಾಗುತ್ತದೆ ; ಒಳ್ಳೆಯ ಆಧ್ಯಾತ್ಮಿಕತೆಯಿಂದಲೇ ಒಳ್ಳೆಯ ವ್ಯಕ್ತಿತ್ವ ವಿಕಾಸ.
‘ವ್ಯಕ್ತಿತ್ವ ವಿಕಾಸ’ ಎಂದರೆ ಶ್ರೀಮಂತನಾಗುವುದಷ್ಟೇ ಅಲ್ಲ.
‘ವ್ಯಕ್ತಿತ್ವ ವಿಕಾಸ’ ಎಂದರೆ ಬಲಶಾಲಿ ಆಗುವುದಷ್ಟೇ ಅಲ್ಲ.
‘ವ್ಯಕ್ತಿತ್ವ ವಿಕಾಸ’ ಎಂದರೆ ಸಕಲ ಕಲಾರಾಧಕನು ಆಗಬೇಕು.
‘ವ್ಯಕ್ತಿತ್ವ ವಿಕಾಸ’ ಎಂದರೆ ಶಾಶ್ವತ ಕುತೂಹಲ ಉಳ್ಳ ವಿದ್ಯಾರ್ಥಿ ಆಗುವುದು.
‘ವ್ಯಕ್ತಿತ್ವ ವಿಕಾಸ’ ಎಂದರೆ ಸಕಲ ಪ್ರಾಣಿಕೋಟಿಗಳಲ್ಲಿ ಮಿತ್ರತ್ವ ಸ್ವಭಾವದಿಂದಿರುವುದು.
‘ವ್ಯಕ್ತಿತ್ವ ವಿಕಾಸ’ ಎಂದರೆ ಇತರರ ವ್ಯಕ್ತಿತ್ವ ವಿಕಾಸಕ್ಕೆ ಸದಾಕಾಲದಲ್ಲೂ ಮಿತಿಯಿಲ್ಲದೆ ಸಹಾಯ ಮಾಡುವ ಸ್ವಭಾವದಿಂದಿರುವುದು.
‘ವ್ಯಕ್ತಿತ್ವ ವಿಕಾಸ’ ಎಂದರೆ ಪ್ರಕೃತಿ ಸೌಂದರ್ಯಗಳನ್ನು ಆಸ್ವಾದಿಸುವುದು; ಪ್ರಕೃತಿ ಸೌಂದರ್ಯದಲ್ಲೇ ಜೀವಿಸುವುದು.
‘ವ್ಯಕ್ತಿತ್ವ ವಿಕಾಸ’ ವೆಂದರೆ ತೀರ್ಪಿಲ್ಲದ ಮಾತೃಸಹಜ ಸಹನೆಯನ್ನು ಹೊಂದಿರುವುದು .
‘ವ್ಯಕ್ತಿತ್ವ ವಿಕಾಸ’ ವೆಂದರೆ ಎಲ್ಲದರಲ್ಲೂ ಖಚಿತತೆಗಾಗಿ ಕಷ್ಟ ಪಟ್ಟು ಕೆಲಸ ಮಾಡುವ ಸ್ವಭಾವ ಹೊಂದಿರುವುದು.