“ಪಿರಮಿಡ್”

‘ಪಿರಮಿಡ್’ ಎಂಬ ಒಂದು ಪದದಲ್ಲಿ ಎರಡು ಪದಗಳಿವೆ. ‘ಪೈರಾ’ ಮತ್ತು ‘ಅಮಿಡ್’. ಪೈರಾ ಎಂದರೆ ಅಗ್ನಿ; ’ಅಮಿಡ್’ ಎಂದರೆ ಮಧ್ಯೆ. ಆ ಭೂತಕನ್ನಡಿಯ ಕೆಳಗಡೆ ಕಾಗದವನ್ನು ಇರಿಸಿದಾಗ ಸೌರಶಕ್ತಿಯು ಎರಡು-ಮೂರುಪಟ್ಟು ಹೆಚ್ಚುಹೆಚ್ಚಾಗಿ, ಅಲ್ಲಿ ಅಗ್ನಿಯು ಉದ್ಭವಿಸುತ್ತದೆ. ಸೌರಶಕ್ತಿಯು ಎಲ್ಲ ಕಡೆ ಇದ್ದರೂ ಸಹ ಹೇಗೆ ಕಾಗದವು ಸುಡುವುದಿಲ್ಲವೋ, ಅದೇ ರೀತಿ ವಿಶ್ವಶಕ್ತಿಯು ಎಲ್ಲ ಕಡೆ ಇದ್ದರೂ ಸಹ ನಾವು ಪಿರಮಿಡ್‌ನಲ್ಲಿ ಕುಳಿತಾಗ ಮಾತ್ರ ಅದನ್ನು ೩ಪಟ್ಟು ಅಧಿಕವಾಗಿ ಸ್ವೀಕರಿಸುತ್ತೇವೆ. ಪಿರಮಿಡ್‌ಗೆ ೫೨ ಡಿಗ್ರೀ ಕೋನ (angle) ಇರಬೇಕು. ಉತ್ತರ-ದಕ್ಷಿಣ ದಿಕ್ಕಿಗೆ ಅದನ್ನು ಅಳವಡಿಸಬೇಕು. ಸೌರಶಕ್ತಿಯೊಂದಿಗೆ ಆ ಭೂತಕನ್ನಡಿಯು ಯಾವ ರೀತಿಯಲ್ಲಿ ಕೆಲಸ ಮಾಡುತ್ತದೊ ಅದೇ ರೀತಿಯಲ್ಲಿ ಪಿರಮಿಡ್ ಸಹ ವಿಶ್ವಶಕ್ತಿಯನ್ನು ಕೇಂದ್ರೀಕರಿಸುತ್ತದೆ. ಸೌರಶಕ್ತಿಯು ಕಣ್ಣಿಗೆ ಕಾಣದಿದ್ದರೂ ಅದರ ಪ್ರಭಾವವು ಕಾಣುತ್ತದೆ. ವಿಶ್ವಶಕ್ತಿಯ ಪ್ರಭಾವವೂ ಸಹ ಪಿರಮಿಡ್‌ನ ಕೆಳಗೆ ಕುಳಿತು ಧ್ಯಾನ ಮಾಡಿದರೆ ಮಾತ್ರ ಲಭ್ಯವಾಗುತ್ತದೆ. ಎಲ್ಲಿ ಪಿರಮಿಡ್ ಇಲ್ಲವೊ, ಅಲ್ಲಿ ಪಿರಮಿಡ್ ಇದೆ ಎಂದು ಊಹಿಸಿಕೊಂಡು ಧ್ಯಾನ ಮಾಡಿದರೆ ಸ್ವಲ್ಪ ಲಾಭ ಪಡೆಯಬಹುದು. ಪಿರಮಿಡ್‌ನ ನಾಲ್ಕು ದಿಕ್ಕುಗಳು ಸಹ ನಾಲ್ಕು ಶರೀರಗಳನ್ನು ಸೂಚಿಸುತ್ತವೆ. ೧. ಸ್ಥೂಲ ಶರೀರ, ೨. ಸೂಕ್ಷ್ಮ ಶರೀರ, ೩. ಕಾರಣ ಶರೀರ, ೪. ಮಹಾಕಾರಣ ಶರೀರ.

೧೯೮೦ರಲ್ಲಿ ಮೊದಲ ಬಾರಿಗೆ ಪಿರಮಿಡ್ ಶಕ್ತಿಯನ್ನು ನಾನು ನೋಡಿದೆ. ಪಿರಮಿಡ್ ಎಂದರೇನೆ ಅಗ್ನಿ ಮಧ್ಯೆ. ಅದರಲ್ಲಿನ ಮತ್ತೊಂದು ಅಗ್ನಿ ಮಧ್ಯೆಯೇ ‘ಕಿಂಗ್ಸ್ ಛೇಂಬರ್, ಸೆಂಟ್ರಲ್ ಪಾಯಿಂಟ್. ಅಲ್ಲಿ ಶೀಘ್ರವಾಗಿ ಭೌತಿಕ ಶರೀರದಿಂದ ಸೂಕ್ಷ್ಮ ಶರೀರವು ಬಿಡುಗಡೆಯಾಗುತ್ತದೆ.

“Pyramid unites all Religions. Pyramid is the most secular objective.” ಜಾತಿ, ಮತ ಭೇದಗಳಿಲ್ಲದೆ ಹಿಂದು, ಮುಸ್ಲಿಮ್, ಕ್ರೈಸ್ತರು, ಸಿಖ್ಖರು…ಇತ್ಯಾದಿ ಎಲ್ಲರಿಗೂ ಅವಕಾಶವಿದೆ. ವಿವಿಧ ಜನಾಂಗವನ್ನೆಲ್ಲಾ ಒಂದು ಕಡೆ ಸೇರಿಸುವುದೇ ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟೀಸ್ ಮೂವ್‌ಮೆಂಟ್‌ನ ಧ್ಯೇಯವಾಗಿದೆ. “Pyramid is the only symbol, secular symbol and most scientific symbol.”ಪಿರಮಿಡ್ ಎಂಬುದು ಆರ್ಗ್ಯಾನಿಕ್ ಕೆಮಿಸ್ಟ್ರಿ ತರಹದ್ದು. ಮನೆಯ ತುಂಬಾ ಪಿರಮಿಡ್‌ಗಳಿರಬೇಕು. ನಮ್ಮ ಹತ್ತಿರದಲ್ಲಿರುವ ಮೇಜಿನ ಮೇಲೆ ಪಿರಮಿಡ್ ಇಟ್ಟರೆ ನಮ್ಮ ಮನಸ್ಸು ಏಕಾಗ್ರತೆಯಿಂದ ಇರುತ್ತದೆ. ಬೇಕಾಬಿಟ್ಟಿಯಾಗಿ ಹೋಗುವುದಿಲ್ಲ. ಮನಸ್ಸನ್ನು ಶಾಂತವಾಗಿಡುತ್ತದೆ.

ಪಿರಮಿಡ್‌ಗಳು ‘ಧ್ಯಾನ’ಕ್ಕೆ ದಾರಿ ತೋರಿಸುತ್ತವೆ. ಪಿರಮಿಡ್‌ಗಳು ಕೇವಲ ಧ್ಯಾನಕ್ಕಾಗಿಯೆ ನಿರ್ಮಾಣವಾಗಿದೆ. ಈಗ ಬಹಳಷ್ಟು ಪಿರಮಿಡ್ ಧ್ಯಾನ ಕೇಂದ್ರಗಳು ಸ್ಥಾಪನೆಗೊಂಡಿವೆ. ಅವುಗಳನ್ನು ಪ್ರತಿಯೊಬ್ಬ ಜನಸಾಮಾನ್ಯನು, ನಾಗರೀಕನು ಉಪಯೋಗಿಸಿಕೊಳ್ಳಬೇಕು. ಪ್ರತಿಯೊಂದು ನಗರ, ಹಳ್ಳಿಯಲ್ಲೂ ಸಹ ಪಿರಮಿಡ್ ಧ್ಯಾನ ಕೇಂದ್ರ ಇರಬೇಕು. ಇತರೆ ಲೋಕಗಳಲ್ಲೂ ಸಹ ಬ್ರಹ್ಮಾಂಡಗಾತ್ರದ (ಬೃಹತ್ ಆಕಾರದ) ಕ್ರಿಸ್ಟಲ್‌ಗಳಿಂದ (ಸ್ಫಟಿಕಗಳಿಂದ) ಮಾಡಲಾದ ಪಿರಮಿಡ್‌ಗಳನ್ನು ನೋಡಬಹುದು. ಬಹಳಷ್ಟು ಲೋಕಗಳಿವೆ, ಪ್ರತಿ ಲೋಕದಲ್ಲಿ ಸಹ ಪಿರಮಿಡ್‌ನ ತಂತ್ರಜ್ಞಾನವಿದೆ.

ಪ್ರತಿಯೊಬ್ಬ ಪಿರಮಿಡ್ ಮಾಸ್ಟರ್ ಕೂಡ ಧ್ಯಾನಾಭ್ಯಾಸವನ್ನು ಮಾಡುತ್ತಾ, ಧ್ಯಾನಾಭ್ಯಾಸವನ್ನು ಮಾಡಿಸುತ್ತಾ ಮತ್ತು ಒಂದು ಪಿರಮಿಡ್ಡನ್ನು ನಿರ್ಮಿಸಿದರೆ ಆತನ ಜನ್ಮವು ಧನ್ಯತೆಯನ್ನು ಹೊಂದಿ ಪರಿಪೂರ್ಣ ಮಾನವನಾಗುತ್ತಾನೆ. ನಮ್ಮ ಬಳಿ ಇರುವ ಹಣಕ್ಕೆ ಮತ್ತು ಆರ್ಥಿಕ ಮಟ್ಟಕ್ಕೆ ಅನುಗುಣವಾಗಿ ಚಿಕ್ಕದು ಅಥವಾ ದೊಡ್ಡ ಪಿರಮಿಡ್ಡನ್ನು ನಿರ್ಮಿಸಿ ಪ್ರಪಂಚಕ್ಕೆ ನೀಡಬೇಕು. ಮನೆಯ ತುಂಬಾ ಪಿರಮಿಡ್‌ಗಳನ್ನು ಇಟ್ಟುಕೊಳ್ಳಬೇಕು. ಜಗತ್ತಿನಲ್ಲಿ ಪ್ರತಿಯೊಬ್ಬರೂ ಪಿರಮಿಡ್ ತಯಾರಿಕೆ ಎನ್ನುವ ಕಲೆಯನ್ನು ಕಲಿತುಕೊಳ್ಳಬೇಕು. ನಮ್ಮ ಧ್ಯಾನವು ನಮ್ಮ ಆತ್ಮದ ಉನ್ನತಿಗೆ… ನಮ್ಮ ಧ್ಯಾನ ಪ್ರಚಾರವು, ಪಿರಮಿಡ್ ನಿರ್ಮಾಣವು ಪ್ರಪಂಚದ ಶಾಂತಿಗೆ.

-ಬ್ರಹ್ಮರ್ಷಿ ಪತ್ರೀಜಿ