“ಪಿರಮಿಡ್ ಮಾಸ್ಟರ್‌ಗಳು”

 

ಆಧ್ಯಾತ್ಮಿಕಶಾಸ್ತ್ರದಲ್ಲಿ ಪ್ರಾವೀಣ್ಯತೆಯನ್ನು ಸಾಧಿಸಬೇಕಾದರೆ ಧ್ಯಾನ, ಸ್ವಾಧ್ಯಾಯ, ಸಜ್ಜನ ಸಾಂಗತ್ಯ ಎಂಬುವ ತ್ರಿರತ್ನಗಳ ಜೊತೆ ‘ಆಚಾರ್ಯ ಸಾಂಗತ್ಯ’ ಸಹ ತಪ್ಪದೇ ಬೇಕಾಗಿದೆ.

ಧ್ಯಾನ ಮಾಡುತ್ತಾ ಉಳಿದದ್ದು ಮಾಡದೇ ಹೋದರೆ ಸಂದೇಹಗಳು ಪೂರ್ತಿಯಾಗಿ ಹೋಗುವುದಿಲ್ಲ. ಹಾಗೆಯೇ, ಸ್ವಾಧ್ಯಾಯ ಮಾಡುತ್ತಾ ಉಳಿದದ್ದು ಮಾಡದೇ ಇದ್ದರೆ ಇನ್ನೂ ಸಂದೇಹಗಳು ಇರುತ್ತವೆ. ಆದ್ದರಿಂದ, ಧ್ಯಾನ, ಸ್ವಾಧ್ಯಾಯ, ಸಜ್ಜನ ಸಾಂಗತ್ಯಗಳ ಜೊತೆ ‘ಆಚಾರ್ಯ ಸಾಂಗತ್ಯ’ ಕೂಡಾ ಮಾಡಿದರೆ ಇನ್ನು ಯಾವರೀತಿಯಾದ ಸಂದೇಹಗಳು ಇರುವುದಿಲ್ಲ.

ಸಜ್ಜನ ಸಾಂಗತ್ಯಕ್ಕು, ಅಚಾರ್ಯ ಸಾಂಗತ್ಯಕ್ಕು ವ್ಯತ್ಯಾಸವೇನು?

‘ಸಜ್ಜನ ಸಾಂಗತ್ಯ’ವೆಂದರೆ ಸತ್ಯ ತಿಳಿದುಕೊಂಡವರ ಜೊತೆ ಸೇರುವುದು. ‘ಸಜ್ಜನರು’ ಎಂದರೆ ಪರಿಪೂರ್ಣವಾಗಿ ಆಧ್ಯಾತ್ಮಿಕತೆಯನ್ನು ಕುರಿತು ಅವಗಾಹನೆ ಇರುವವರು. ಆದರೆ, ಅಚಾರ್ಯರು ಎಂದರೆ ಸತ್ಯ ತಿಳಿದುಕೊಂಡಿರುವವರು ಮಾತ್ರವೇ ಅಲ್ಲದೇ ಸಂಪೂರ್ಣವಾಗಿ ಜೀವನವನ್ನು ಸಮರ್ಪಿಸಿದವರು.

‘ಆಚಾರ್ಯ ಸಾಂಗತ್ಯ’ ಎಂದರೆ ‘ಆಚಾರ್ಯತನವನ್ನು ಹೊಂದಿದವರ ಜೊತೆ ಸೇರಿ ಜೀವಿಸುವುದು’.

‘ಆಚಾರ್ಯತನ’ ಎಂದರೇ ಆಧ್ಯಾತ್ಮಿಕತೆಯಲ್ಲಿ ಪರಿಪೂರ್ಣ ಪ್ರಗತಿಯನ್ನು ಸಾಧಿಸಿ ಅದರಲ್ಲಿ ಪೂರ್ಣವಾಗಿ ಜೀವಿಸುವವರನ್ನೇ ‘ಆಚಾರ್ಯ’ರೆನ್ನುತ್ತೇವೆ. ಆದ್ದರಿಂದ, ಸಜ್ಜನ ಸಾಂಗತ್ಯದ ಜೊತೆ ‘ಆಚಾರ್ಯ ಸಾಂಗತ್ಯ’ ಕೂಡಾ ಅವಶ್ಯಕ.

ಪಿರಮಿಡ್‌ಗೆ ನಾಲ್ಕು ಭುಜಗಳಿರುತ್ತವೆ. ಅದರಲ್ಲಿ ನಾಲ್ಕು ಭುಜಗಳಿಗೆ ನಾಲ್ಕು ಆಧ್ಯಾತ್ಮಿಕಶಾಸ್ತ್ರ ವಿಭಾಗಗಳಾದ ಧ್ಯಾನ, ಸ್ವಾಧ್ಯಾಯ, ಸಜ್ಜನ ಸಾಂಗತ್ಯ, ಆಚಾರ್ಯ ಸಾಂಗತ್ಯ ಸರಿಯಾಗಿ ಹೊಂದಿಕೊಳ್ಳುತ್ತವೆ.

ಈ ನಾಲ್ಕು ವಿಭಾಗಗಳನ್ನೂ ಪರಿಪೂರ್ಣವಾಗಿ ಆಚರಿಸುವವರು ‘ಪಿರಮಿಡ್ ಮಾಸ್ಟರ್‌ಗಳು’.