“ಪಿರಮಿಡ್ ಜ್ಞಾನ ನವರತ್ನಗಳು”

 

ಪ್ರತಿಯೊಬ್ಬ ಪಿರಮಿಡ್ ಮಾಸ್ಟರ್ ಕೂಡಾ ಜ್ಞಾನ ನವರತ್ನಗಳನ್ನು ಸದಾ ಮಸ್ತಿಷ್ಕದಲ್ಲಿ ಇಟ್ಟುಕೊಳ್ಳಬೇಕು. ಒಂದು ಕ್ಷಣ ಸಹ ಈ ನವರತ್ನಗಳು ಮಸ್ತಿಷ್ಕದಿಂದ ಜಾರಬಾರದು. ಪಿರಮಿಡ್ ಧ್ಯಾನ ಪ್ರಪಂಚದಲ್ಲಿ ನೂತನವಾಗಿ ಪ್ರವೇಶಿಸುವವರು ಈ ಪಿರಮಿಡ್ ಜ್ಞಾನ ನವರತ್ನಗಳನ್ನು ಕೂಲಂಕಷವಾಗಿ ಅರ್ಥಮಾಡಿಕೊಳ್ಳುತ್ತಿರಬೇಕು. ದಿನೇದಿನೆ ಅದರ ಅರಿವನ್ನು ಹೆಚ್ಚಿಸಿಕೊಳ್ಳುತ್ತಿರಬೇಕು. ಒಂದೇ ಬಾರಿ ಅದು ಪೂರ್ತಿ ಅರಿವಾಗುವುದಿಲ್ಲ.

ತಿನ್ನುತ್ತಾ ತಿನ್ನುತ್ತಾ ಬೇವು ಸಿಹಿಯಾಗಿರುತ್ತದೆ; ಹಾಡುತ್ತಾ ಹಾಡುತ್ತಾ ರಾಗ ಇಂಪಾಗುತ್ತದೆ. ಅದೇ ರೀತಿಯಲ್ಲಿ ಈ ಮೂಲ ಸಿದ್ಧಾಂತಗಳನ್ನು ಕುರಿತು ನಾವು ಅನೇಕ ಪುಸ್ತಕಗಳಿಂದ, ಅನೇಕ ಧ್ಯಾನ ಸಾಧನೆಗಳಿಂದ, ತುಂಬಾ ಆಲೋಚನೆಗಳಿಂದ, ಎಲ್ಲರ ಅನುಭವಗಳನ್ನು ಕೇಳಿಸಿಕೊಳ್ಳುವುದರಿಂದ ಯಾವತ್ತೊ ಒಂದು ದಿನ ಆ ಸಿದ್ಧಾಂತದ (ಫಿಲಾಸಫಿಯ)ಆ ಪೂರ್ಣ ಜ್ಞಾನ ಪ್ರಕಾಶದ ಪೂರ್ತಿ ರೂಪುರೇಖೆಗಳು ನಮಗೆ ಸಹ ಅನುಭವಕ್ಕೆ ಬರುತ್ತವೆ. ಆಗ ನಾವು ಸಹ ಒಬ್ಬ ‘ಪಿರಮಿಡ್ ಮಾಸ್ಟರ್’ ಆದಹಾಗೆ.

ಮೊಟ್ಟ ಮೊದಲನೆಯದು – ನಾನೇ ಎಲ್ಲಾ
ಎರಡನೆಯದು – ಜೀವನೇ ದೇವನು
ಮೂರನೆಯದು – ದೇಹವೇ ದೇವಾಲಯ
ನಾಲ್ಕನೆಯದು – ಶ್ವಾಸವೇ ಗುರುವು
ಐದನೆಯದು – ಸಮಯವೇ ಸಾಧನೆ
ಆರನೆಯದು – ಸಹನೆಯೇ ಪ್ರಗತಿ
ಏಳನೆಯದು – ಅನುಭವವೇ ಜ್ಞಾನ
ಎಂಟನೆಯದು – ದಾನವೇ ಧರ್ಮ
ಒಂಬತ್ತನೆಯದು – ಧರ್ಮವೇ ಪುಣ್ಯ