” ಪಾರಿಜಾತ ಪುಷ್ಪಗಳು “

” ಎನ್‌ಲೈಟೆನ್‌ಮೆಂಟ್ ” ಎನ್ನುವ ಆಂಗ್ಲ ಪದಕ್ಕೆ ಕನ್ನಡದಲ್ಲಿ “ಯಥಾರ್ಥಜ್ಞಾನಪ್ರಕಾಶ” ಎಂದು ಒಂದು ಅರ್ಥ

ಇನ್ನೊಂದು ರೀತಿ ಹೇಳಬೇಕಾದರೆ ..

” ಎನ್‌ಲೈಟೆನ್‌ಮೆಂಟ್ ” ಅಂದರೆ “ಬುದ್ಧಿಯ ಸಂಪೂರ್ಣ ಪರಿಪಕ್ವ ಸ್ಥಿತಿ” ಮತ್ತು

“ಮಾನವ ಕುಲದ ವಿಕಾಸದಲ್ಲಿನ ಅತ್ಯುನ್ನತವಾದ ಪರಾಕಾಷ್ಠೆಯ ಸ್ಥಿತಿ “

ಮಾನವಜೀವನವನ್ನು ಮೂಲಭೂತವಾದ ಯಥಾರ್ಥ ಸ್ವರೂಪದಲ್ಲಿ ತಿಳಿದುಕೊಂಡಿರುವವನೇ ” ಎನ್‌ಲೈಟೆನ್ಡ್ ಮಾಸ್ಟರ್ “

ಮದರ್ ಥೆರೆಸ್ಸಾ, ಮಹಾತ್ಮಾಗಾಂಧೀ ಅಂತಹವರು ಪ್ರಾಪಂಚಿಕ ಪರವಾಗಿ ಎನ್‌ಲೈಟೆನ್ಡ್ ಮಾಸ್ಟರ್‌ಗಳು

ಗೌತಮ ಬುದ್ಧ, ಮಹಾವೀರ, ಏಸುಪ್ರಭು ಅಂತಹವರು ಆಧ್ಯಾತ್ಮಿಕ ಪರವಾಗಿ ಎನ್‌ಲೈಟೆನ್ಡ್ ಮಾಸ್ಟರ್‌ಗಳು

ಸಕಲ ಪ್ರಾಣಿಕೋಟಿಯ ಉನ್ನತಿಗೆ, ಪ್ರಗತಿಗೆ

ಕೈಲಾದಷ್ಟು ಸಹಾಯ ಸಹಕಾರಗಳನ್ನು ಸದಾ ನೀಡುತ್ತಾ ಇರುವವರೇ “ಎನ್‌ಲೈಟೆನ್ಡ್ ಮಾಸ್ಟರ್‌ಗಳು”

ಪ್ರಾಪಂಚಿಕ ಎನ್‌ಲೈಟೆನ್‌ಮೆಂಟ್ – ಯಥಾರ್ಥಜ್ಞಾನಪ್ರಕಾಶ .. ಎನ್ನುವುದು ಮೊದಲನೆಯ ಮೆಟ್ಟಿಲು

ಆಧ್ಯಾತ್ಮಿಕ ಎನ್‌ಲೈಟೆನ್‌ಮೆಂಟ್ – ದಿವ್ಯಜ್ಞಾನಪ್ರಕಾಶ .. ಎನ್ನುವುದು ಎರಡನೆಯ ಮೆಟ್ಟಿಲು

“ನಿರಂತರ ಪರೋಪಕಾರ” ಎನ್ನುವುದು ಪ್ರಾಪಂಚಿಕ ಎನ್‌ಲೈಟೆನ್‌ಮೆಂಟಾದರೆ

ಅದರೊಂದಿಗೆ “ಪರಲೋಕ ಜ್ಞಾನವನ್ನು” ಹೊಂದುತ್ತಾ ಇರುವುದೇ “ಸ್ಪಿರಿಚ್ಯುವಲ್ ಎನ್‌ಲೈಟೆನ್‌ಮೆಂಟ್”

ಭುವಿಗೆ ಸಂಬಂಧಿಸಿದ್ದು “ಯಥಾರ್ಥಜ್ಞಾನಪ್ರಕಾಶವಾದರೆ”

“ಸ್ಪಿರಿಚ್ಯುವಲ್ ಎನ್‌ಲೈಟೆನ್‌ಮೆಂಟ್” ಎನ್ನುವುದು “ದಿವಿ”ಗೆ ಸಂಬಂಧಿಸಿದ “ದಿವ್ಯಜ್ಞಾನಪ್ರಕಾಶ”

“ಸ್ಪಿರಿಚ್ಯುವಲ್ ಎನ್‌ಲೈಟೆನ್‌ಮೆಂಟ್” ಅಂದರೆ “ಪರಲೋಕ ಜ್ಞಾನದಿಂದ ಕೂಡಿದ ಆತ್ಮದ ಪೂರ್ಣ ವಿಕಸಿತಸ್ಥಿತಿ”

ಪರಲೋಕ ಜ್ಞಾನದಿಂದ ಪರಿಪುಷ್ಠವಾಗಿರುವವರೇ ದಿವ್ಯಜ್ಞಾನಪ್ರಕಾಶದಿಂದ ತುಂಬಿರುವ ಮಾಸ್ಟರ್‌ಗಳು

“ಎನ್‌ಲೈಟೆನ್‌ಮೆಂಟ್ಗೆ ಸ್ಪಿರಿಚ್ಯುವಾಲಿಟಿ” ಎನ್ನುವುದು ಜೊತೆಗೂಡಿದರೆ ಮಾತ್ರವೇ ಪುಷ್ಪಕ್ಕೆ ಪರಿಮಳ ಬಂದಹಾಗೆ!

“ಪರಿಮಳವಿಲ್ಲದ ಪುಷ್ಪ” ಸಂಪೂರ್ಣವಾದ ಪುಷ್ಪ ಆಗಲಾರದು ಅಲ್ಲವೇ!

ದಿವ್ಯಜ್ಞಾನಪ್ರಕಾಶದಿಂದ ಕೂಡಿದ ಸುಗಂಧ ಪರಿಮಳ ಭರಿತವಾದ

“ಪಾರಿಜಾತ ಪುಷ್ಪ”ದ ಹಾಗೆ ಅರಳುವುದೇ ಪ್ರತಿಯೊಬ್ಬ ಮಾನವನ ಧ್ಯೇಯ!

“ಪಾರಿಜಾತ ಪುಷ್ಪ” ಎನ್ನುವುದು ಭುವಿಗೆ ಸಂಬಂಧಿಸಿದ ಸಾಮಾನ್ಯ ಪುಷ್ಪ ಅಲ್ಲ ..

ಅದು “ದಿವಿ”ಗೆ ಸಂಬಂಧಿಸಿದ “ದೇವಲೋಕದ ಕುಸುಮ”

ಸ್ಪಿರಿಚ್ಯುವಲ್ ಎನ್‌ಲೈಟೆನ್‌ಮೆಂಟ್ = “ಪಾರಿಜಾತ ಪುಷ್ಪ”

ಸ್ಪಿರಿಚ್ಯುವಲ್ ಎನ್‌ಲೈಟೆನ್‌ಮೆಂಟ್ =

ಧ್ಯಾನಾಭ್ಯಾಸ + ಸಜ್ಜನಸಾಂಗತ್ಯ ಅಭ್ಯಾಸ + ಸ್ವಾಧ್ಯಾಯ ಅಭ್ಯಾಸ

ಎಷ್ಟು ಹೆಚ್ಚಾಗಿ ನಾವು ಧ್ಯಾನ ಅಭ್ಯಾಸ ಮಾಡುತ್ತೇವೆಯೋ ..

ಎಷ್ಟು ಹೆಚ್ಚಾಗಿ ನಾವು ಸ್ವಾಧ್ಯಾಯ ಅಭ್ಯಾಸ ಮಾಡುತ್ತೇವೆಯೋ ..

ಎಷ್ಟು ಹೆಚ್ಚಾಗಿ ನಾವು ಸಜ್ಜನ ಸಾಂಗತ್ಯ ಅಭ್ಯಾಸ ಮಾಡುತ್ತೇವೆಯೋ ..

ಅಷ್ಟು ಹೆಚ್ಚಾಗಿ ನಾವು ಸುಗಂಧ ಪರಿಮಳಭರಿತ ದಿವ್ಯಪಾರಿಜಾತ ಪುಷ್ಪಗಳ ಹಾಗೆ ವಿಕಸಿಸುತ್ತೇವೆ ಪಿರಮಿಡ್ ಮಾಸ್ಟರ್‌ಗಳೆಲ್ಲರೂ ದಿವ್ಯಜ್ಞಾನಪ್ರಕಾಶದಿಂದ ಅರಳಿದ ಪಾರಿಜಾತ ಕುಸುಮಗಳು!

ಭೂಲೋಕದಲ್ಲಿ ಇನ್ನು ಎಲ್ಲರೂ ಪಾರಿಜಾತ ಪುಷ್ಪಗಳ ಹಾಗೆ ಅರಳುವಂತಾಗಲಿ!