” ಪತ್ರೀಜಿ ಸಂದೇಶಾಮೃತ “

“ಪಿರಮಿಡ್ ಮಾಸ್ಟರ‍್ಸ್ ಪದವಿ ಶಾಶ್ವತವಾದದ್ದು”

“ಪಿರಮಿಡ್ ಮಾಸ್ಟರ‍್ಸ್ ಎಲ್ಲರಿಗೂ ವಂದನೆಗಳು. ‘PM ಅಂದರೆ ಪ್ರೈಮ್ ಮಿನಿಸ್ಟರ್’ ಎಂದು ಪ್ರಾಪಂಚಿಕ ಅರ್ಥ. ಈ ಲೋಕದಲ್ಲಿ ಅನೇಕಾನೇಕ ಪ್ರೈಮ್ ಮಿನಿಸ್ಟರ್‌ಗಳು ಬರುತ್ತಿದ್ದಾರೆ .. ಹೋಗುತ್ತಿದ್ದಾರೆ. ಆದರೆ .. ಪ್ರೈಮ್ ಮಿನಿಸ್ಟರ್ ಎನ್ನುವುದು ಅವರಿಗೆ ಶಾಶ್ವತವಾದ ಪದವಿ ಅಲ್ಲವೇ ಅಲ್ಲ. ‘ಪಿರಮಿಡ್ ಮಾಸ್ಟರ್’ ಎನ್ನುವ ಪದವಿ ಶಾಶ್ವತವಾದದ್ದು .. ಸ್ಥಿರವಾದದ್ದು ಮತ್ತು ಎಲ್ಲಾ ಲೋಕಗಳಲ್ಲೂ ಪ್ರಶಸ್ತವಾದದ್ದು.”

“ಒಬ್ಬ ಮಾನವನು ಹೇಗೆ ಜೀವಿಸಿದರೆ ಮಾಧವನಾಗುತ್ತಾನೆ ಎಂಬುದನ್ನು ತಿಳಿದುಕೊಂಡು, ಹಾಗೆಯೇ ತಾನೂ ಸಹ ಚಾಚೂ ತಪ್ಪದೇ ಜೀವಿಸುವವನೇ ‘ಪಿರಮಿಡ್ ಮಾಸ್ಟರ್’. ತನ್ನ ಜೀವನಕ್ಕೆ ತಾನೇ ಸೃಷ್ಟಿಕರ್ತ ಎನ್ನುವ ಆತ್ಮಸತ್ಯವನ್ನು ವಿವರವಾಗಿ ಅರ್ಥಮಾಡಿಕೊಂಡು ‘ಮಮಾತ್ಮ ಸರ್ವಭೂತಾತ್ಮ’, ಎನ್ನುವ ವೇದವಾಕ್ಯವನ್ನು ಪ್ರತಿಯೊಂದು ಕ್ಷಣ ಆಚರಿಸುವವನೇ ‘ಪಿರಮಿಡ್ ಮಾಸ್ಟರ್’. ತನ್ನ ಭೂಲೋಕ ಪ್ರಯಾಣವನ್ನು ವಿನೋದ, ವಿಜ್ಞಾನ ವಿಲಾಸಯಾತ್ರೆಯಾಗಿ ರೂಪಿಸಿಕೊಳ್ಳುತ್ತಾ .. ಜೀವನದಲ್ಲಿ ಎದುರಾಗುವ ಯಾವುದೇ ರೀತಿಯ ಘಟನೆಗಳಿಗೂ ಸಹ ದುಃಖಿಸದೇ ಇರುವವನೇ ‘ಪಿರಮಿಡ್ ಮಾಸ್ಟರ್’.”

“ತಾನು ನಿರಂತರ ಸಂತೋಷವಾಗಿರುತ್ತಾ ಅಕ್ಕಪಕ್ಕದವರಿಗೆ ಕೂಡಾ ಆನಂದಾಮೃತವನ್ನು ಹಂಚುವವನು, ಸಮಯವನ್ನು ಒಂದು ಕ್ಷಣ ಸಹ ವ್ಯರ್ಥಮಾಡದೇ ಪ್ರತಿನಿತ್ಯಾ ಕೃಷಿ ಮಾಡುವವನೇ ‘ಪಿರಮಿಡ್ ಮಾಸ್ಟರ್’. ಪ್ರಕೃತಿ ಸೂತ್ರಗಳನ್ನು ಗೌರವಿಸುತ್ತಾ ಆ ಸೌಂದರ್ಯವನ್ನು ಆಸ್ವಾದಿಸುತ್ತಾ .. ಸಕಲ ಜಗತ್ತಿನಲ್ಲಿರುವ ಪ್ರಾಣಿಗಳನ್ನು, ವೃಕ್ಷಗಳನ್ನು ತನ್ನ ಸಹಚರರಂತೇ ಪ್ರೀತಿಸುವವನೇ ‘ಪಿರಮಿಡ್ ಮಾಸ್ಟರ್’.”

“ಆಲೋಚನೆಗಳಲ್ಲಿ, ಮಾತುಗಳಲ್ಲಿ, ಕ್ರಿಯೆಗಳಲ್ಲಿ ಹಿಂಸೆಯನ್ನು ಖಂಡಿಸುತ್ತಾ, ಅಹಿಂಸೆಯನ್ನು ಬೋಧಿಸುತ್ತಾ, ಹಂಸವನ್ನು ಹಿಡಿಯುವ ಸರಿಯಾದ ಮಾರ್ಗವನ್ನು ಸರಳವಾಗಿ ಎಲ್ಲರಿಗೂ ಪ್ರಚಾರ ಮಾಡುವವನೇ ‘ಪಿರಮಿಡ್ ಮಾಸ್ಟರ್’.” ಎನ್ನುತ್ತಾ ಪತ್ರೀಜಿ ಪಿರಮಿಡ್ ಮಾಸ್ಟರ್‌ಗಳಿಗೆ ಇರುವ ಸುಸ್ಪಷ್ಟವಾದ ಲಕ್ಷಣಗಳನ್ನು ಅದ್ಭುತವಾಗಿ ತಿಳಿಸಿ ತಮ್ಮ ಸ್ಫೂರ್ತಿದಾಯಕವಾದ ಪ್ರವಚನದ ಮೂಲಕ ಎಲ್ಲರನ್ನೂ ಅಂತರ್ಮುಖರಾಗುವಂತೆ ಮಾಡಿದ್ದಾರೆ.

ತಮಗೆ ಭೋದನ್ ಪಟ್ಟಣದ ಜೊತೆಗೆ ಇರುವ ಅನುಬಂಧವನ್ನು ತಮ್ಮ ಪ್ರವಚನದಲ್ಲಿ ವಿವರಿಸುತ್ತಾ .. “ಈಗ ನಾವು ಅತ್ಯಂತ ವೈಭವವಾಗಿ ‘ತೆಲಂಗಾಣ ಧ್ಯಾನಮಹಾ ಚಕ್ರ-II’ ಕಾರ್ಯಕ್ರಮವನ್ನು ನಡೆಸುತ್ತಿರುವ ಈ ಸರಕಾರೀ ಜೂನಿಯರ್ ಕಾಲೇಜ್ .. ಒಂದು ಕಾಲದಲ್ಲಿ ನನಗೆ ವಿದ್ಯೆಯನ್ನು ಹೇಳಿಕೊಟ್ಟ ದೇವಾಲಯ ಎಂದು ತಿಳಿಸಿದರು.

“ಷಕ್ಕರ್ ನಗರ್‌ನಲ್ಲಿ ಎಷ್ಟು ದೊಡ್ಡ ರಾಮಾಲಯವಿದೆಯೊ .. ಅದಕ್ಕೆ ಸರಿಸಮಾನ ಮಟ್ಟದಲ್ಲೇ ಮಸೀದಿ ಸಹ ಇದೆ. ಹೀಗೆ ಸರ್ವಮತ ಸಾರಾಂಶವನ್ನು ಅರ್ಥಮಾಡಿಕೊಳ್ಳಲೇ ವಿವಿಧ ಕುಲಗಳು, ಮತಗಳು, ಭಾಷೆಗಳ ಒಕ್ಕೂಟದಿಂದ ವಿಕಾಸಹೊಂದಿದ ‘ಷಕ್ಕರ್‌ನಗರ್’ನಲ್ಲಿ ನನ್ನ ಬಾಲ್ಯವನ್ನು ಕಳೆದಿದ್ದೇನೆ. ಪ್ರತಿಯೊಬ್ಬರ ಹುಟ್ಟು ಸಹ ಯಾವುದೋ ಒಂದು ಕಾರಣಕಾಗಿಯೇ .. ಆಯಾ ಪರಿಸ್ಥಿತಿಗಳನ್ನು, ಕುಟುಂಬಗಳನ್ನು, ಪ್ರದೇಶಗಳನ್ನು, ಕಲಿತುಕೊಳ್ಳಬೇಕಾದ ಪಾಠಗಳನ್ನು, ತಾನೇ ಆರಿಸಿಕೊಂಡಿರುತ್ತದೆ.

” ‘ಧ್ಯಾನ-ಸಸ್ಯಾಹಾರ ಜಗತ್’ ಆಗಿ ಈ ಪ್ರಪಂಚವನ್ನು ಬುಡಸಮೇತ ಬದಲಾಯಿಸಲು ನೀವೆಲ್ಲಾ ಅನೇಕ ಜನ್ಮಗಳಿಂದ ನನ್ನ ಜೊತೆಯಲ್ಲೇ ಹುಟ್ಟಿ, ನನ್ನ ಜೊತೆ ಸೇರಿ ಕೆಲಸಮಾಡುತ್ತಾ ಬಂದಿರುವಿರಿ. ಕಲಿಯುಗವನ್ನು ಕೃತಯುಗವಾಗಿ ಉನ್ನತೀಕರಿಸಲು ನಾವೆಲ್ಲರೂ ಹಗಲೂ-ರಾತ್ರಿ ಶ್ರಮಿಸಿದ್ದೇವೆ. ಕಳೆದ ಮೂವತ್ತು ವರ್ಷಗಳಿಂದ ನನ್ನ ಜೊತೆಯಲ್ಲೇ ನೀವೆಲ್ಲಾ ಸಹ ಕೂಡಾ ತುಂಬ ಶ್ರಮಿಸಿ ಪ್ರತಿಯೊಂದು ಹಳ್ಳಿಗಳಲ್ಲೂ, ಗ್ರಾಮಗಳಲ್ಲೂ ಮತ್ತು ಅನೇಕ ಪ್ರದೇಶಗಳಲ್ಲಿ ಕೂಡಾ ಓಡಾಡಿ ಧ್ಯಾನ ಪ್ರಚಾರ ಮಾಡಿ ಧ್ಯಾನಾವಶ್ಯಕತೆಯನ್ನು ತಿಳಿಸಿರುವಿರಿ.”

“ಇನ್ಮು ಮುಂದೆ ಧ್ಯಾನಕ್ಕಾಗಿ ಎಲ್ಲರೂ ನಮ್ಮ ಮನೆಗೇ ಬರುತ್ತಾರೆ. ನಮ್ಮ ಹತ್ತಿರವೇ ಎಲ್ಲಾ ಕಲಿತುಕೊಂಡು ಆರೋಗ್ಯಸಮೇತ ಎಲ್ಲಾ ಒದಗಿಸಿಕೊಳ್ಳುತ್ತಾರೆ. ಎಲ್ಲರೂ ದಿವ್ಯ ಆನಂದದಿಂದ ಮುಳುಗಿರುತ್ತಾರೆ.” ಎನ್ನುತ್ತಾ ಒಳ್ಳೆಯ ಜ್ಞಾನ ಸಂದೇಶವನ್ನು ನೀಡಿದರು.

 

ಮಾನವತ್ವ – ಮಾಧವತ್ವ”

“ಮೇಲಿನ ಲೋಕಗಳಿಂದ ಭೂಲೋಕಕ್ಕೆ ಕೆಳಗಿಳಿದು ಬಂದ ಮಾಧವರೆಲ್ಲರೂ .. ಇಲ್ಲಿ ಮಾನವರಂತೇ ಪರಿಗಣಿಸಲ್ಪಡುತ್ತಾರೆ. ಆದ್ದರಿಂದ, ಎಂತಹ ಆಧ್ಯಾತ್ಮಿಕ ಶಿಖರಗಳನ್ನು ಏರಿದ್ದರೂ ನಾವು ಈ ಲೋಕದಲ್ಲಿ ಅತಿ ಸಾಮಾನ್ಯರ ಹಾಗೇ ವರ್ತಿಸಬೇಕು. ಪ್ರಜೆಗಳು, ಭಜನೆಗಳು, ಪುರಾಣಗಳಲ್ಲಿರುವ ಕಥೆಗಳು ನಮಗೆ ಕಾಲಕ್ಷೇಪಕ್ಕಾಗಿಯೇ ಇರುವುದು. ಆದರೆ, ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಿಬೇಕಾದರೆ ಮಾತ್ರ ನಮ್ಮಲ್ಲಿರುವ ಆತ್ಮಶಕ್ತಿಯನ್ನು ಬಳಸಿಕೊಳ್ಳಲೇಬೇಕು. ಹೀಗಾಗಿ, ಧ್ಯಾನಸಾಧನೆ ನಮಗೆ ಖಂಡಿತಾ ಬೇಕಾಗಿದೆ.”

“ಮಾನವತ್ವ ಎಂದರೆ ಮಾಂಸಭಕ್ಷಣೆ ಮಾಡದೇ ಇರುವುದು. ಮಾಧವತ್ವ ಎಂದರೆ ಇತರ ಜೀವಿಗಳನ್ನು ಕೂಡಾ ಪ್ರೀತಿಸುವುದು ಎಂದು ತಿಳಿದುಕೊಳ್ಳಬೇಕು. ಈ ಸೃಷ್ಟಿಯಲ್ಲಿ ನಮ್ಮ ಹಾಗೆ ಜನ್ಮ ತಾಳಿದ ಇತರ ಪ್ರಾಣಿಗಳೆಲ್ಲಾ ಸಹ ನಮ್ಮ ಸ್ನೇಹಿತರೇ.”

“ಹಣೆಗೆ ಉದ್ದನಾಮಗಳು, ಅಡ್ಡನಾಮಗಳು, ವಿಭೂತಿ, ಕುಂಕುಮ ಹಚ್ಚಿಕೊಂಡು ಮಾಂಸ ತಿನ್ನುವುದನ್ನು ಮುಂದುವರೆಸಿದರೆ .. ಸಾಯುವುದಕ್ಕಿಂತಾ ಮುಂಚೆ ತುಂಬಾ ಕಷ್ಟಗಳು ಬರುತ್ತವೆ. ಅತ್ತೆಯು ಸೊಸೆಯ ಮೇಲಾಗಲಿ, ಸೊಸೆಯು ಅತ್ತೆಯ ಮೇಲಾಗಲೀ ಸೊಕ್ಕನ್ನು ತೋರಿಸಬಾರದು. ಗಂಡ ಹೆಂಡತಿಯನ್ನು ಹಿಂಸಿಸಬಾರದು. ಈ ಸೃಷ್ಟಿಯಲ್ಲಿ ಯಾರಿಗೂ ಯಾರ ಮೇಲೂ ಅಧಿಕಾರವಾಗಲಿ, ದೊಡ್ಡಸ್ತಿಕೆಯಾಗಲಿ ಇಲ್ಲವೆಂದು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು.”

” ‘ನರಜನ್ಮ ಉತ್ತಮ’ ಎನ್ನುವ ಪದಕ್ಕೆ ಅರ್ಥವನ್ನು ತಿಳಿದುಕೊಂಡು ಅದನ್ನು ಸಾರ್ಥಕಮಾಡಿಕೊಳ್ಳಬೇಕು. ಸಕಲ ಸೃಷ್ಟಿಯಲ್ಲಿರುವ ಜೀವರಾಶಿಗಿಂತಾ ಅಧಿಕವಾಗಿ ‘ಬುದ್ಧಿ’ ಎನ್ನುವ ಲಕ್ಷಣವನ್ನು ಹೊಂದಿರುವ ನಾವು ಧ್ಯಾನದ ಮೂಲಕ ಆ ಬುದ್ಧಿಯನ್ನು ಶುದ್ಧಿ ಮಾಡಿಕೊಂಡು ಆಚರಣೆಯ ಮೂಲಕ ಬುದ್ಧರಾಗಬೇಕು. ಯಾವುದು ಪಾಪವೋ ಯಾವುದು ಪುಣ್ಯವೋ ತಿಳಿದುಕೊಂಡು .. ತಿಳಿದುಕೊಂಡ ನಂತರ ಬದಲಾವಣೆಗಾಗಿ ಪರಿಶ್ರಮಿಸುವುದೇ .. ಆತ್ಮವಿಕಾಸ.”

“ಕೇಳಿಸಿಕೊಳ್ಳುತ್ತಾ, ಕೇಳಿಸಿಕೊಳ್ಳುತ್ತಾ ರಾಗ ಅತಿಶಯವಾದಂತೆ, ತಿನ್ನುತ್ತಾ, ತಿನ್ನುತ್ತಾ ಬೇವು ಸಿಹಿಯಾಗಿ ತೋಚಿದಂತೆ ಎಂದೋ ಒಂದುದಿನ ನಾವು ಹೇಳುವ ಸರಿಯಾದ ಮಾತುಗಳು ಎಲ್ಲರೂ ಖಂಡಿತಾ ಕೇಳಿಸಿಕೊಳ್ಳುತ್ತಾರೆ.”

“ಆಧ್ಯಾತ್ಮಿಕತೆ – ಪ್ರಾಪಂಚಿಕತೆ ಎನ್ನುವುದು ಎರಡೂ ಅರ್ಧನಾರೀಶ್ವರರಂತೆ ಇರಬೇಕು. ಹಾಗಿದ್ದಾಗಲೇ ಮಾನವರು – ಸಮಸ್ತ ಪ್ರಾಣಿಕೋಟಿ ಸೇರಿ ಅನ್ಯೋನ್ಯವಾಗಿ, ಆನಂದವಾಗಿದ್ದು ಭೂಮಿ ಸ್ವರ್ಗದಂತೆ ಬದಲಾಗಿಸಲ್ಪಡುತ್ತದೆ. ಇದೇ ಸರ್ವಮತ ಸಾರಾಂಶ!”

“ಮಹಾತ್ಮಾ ಗಾಂಧೀಜಿ ‘ಸಬ್ ಕೋ ಸನ್ಮತಿ ದೇ ಭಗವಾನ್’ ಎನ್ನುತ್ತಾ ಭಗವಂತನನ್ನು ಪ್ರಾರ್ಥಿಸಿದರು. ‘ಭಗವಾನ್’ ಅಂದರೆ ಎಲ್ಲೋ ಆಕಾಶದಲ್ಲಿಲ್ಲ. ಮಾನವರೆಲ್ಲರೂ ಬುದ್ಧಿಯನ್ನು ಶುದ್ಧಿಮಾಡಿಕೊಂಡು ಸಕಲ ಪ್ರಾಣಿಕೋಟಿ ಜೊತೆ ಕಲೆತುಬೆರೆತು ಇರುವುದೇ ಸನ್ಮತಿ ಅದೇ ಭಗವಾನ್ ತತ್ವ ಮತ್ತು ಆ ಸನ್ಮತಿ ಇರುವವರೆಲ್ಲಾ ಕೂಡಾ ಭಗವಂತರೇ! ‘ರಾಮ’ ಎಂದರೆ ಆತ್ಮರಾಮನೆಂದೂ, ‘ಸೀತೆ’ ಎಂದರೆ ಧ್ಯಾನದಿಂದ ಲಭಿಸುವ ‘ವಿಶ್ವಪ್ರಾಣಶಕ್ತಿ’ ಎಂದು ತಿಳಿದುಕೊಳ್ಳಬೇಕು. ‘ದಶಕಂಠ’ ಅಂದರೆ ಹತ್ತು ಬಗೆಯ ಆಲೋಚನೆಗಳನ್ನು ಮಾಡುತ್ತಾ ವಿವಿಧ ರೀತಿಯ ಪ್ರಲೋಭನೆಗಳಿಗೆ ಒಳಗಾಗುವ ಚಿತ್ತಚಾಂಚಲ್ಯ ಇರುವವನೆಂದೂ, ಅಂಥವರೆಲ್ಲಾ ಚರಿತ್ರಹೀನರಾಗುತ್ತಾರೆಂದು ಅರ್ಥ.”

” ‘ವಾಯುಪುತ್ರನೆಂದರೆ’ ಪ್ರತಿಕ್ಷಣ ಶ್ವಾಸದ ಮೇಲೆ ಗಮನವಿಟ್ಟು ಆತ್ಮಾರಾಮನ ಜೊತೆ ಅನುಸಂಧಾನವಾಗಿ ಸೀತೆ ಎನ್ನುವ ವಿಶ್ವಶಕ್ತಿಯನ್ನು ಹುಡುಕಿ ತಂದುಕೊಂಡು ಆತ್ಮಶಕ್ತಿಯನ್ನು ಬೆಳೆಸುವ ಶಕ್ತಿಶಾಲಿ ಎಂದು ಗ್ರಹಿಸಬೇಕು.”

‘ವಿಭೀಷಣ’ ಅಂದರೆ .. ವಿವೇಕದಿಂದ ಯುಕ್ತಾಯುಕ್ತಿಗಳನ್ನು ವಿಚಾರಿಸಿ ‘ದುರ್ಭುದ್ದಿ’ ಎನ್ನುವ ರಾವಣನಿಂದ ಬೇರ್ಪಟ್ಟು ‘ಸದ್ಭುದ್ಧಿ’ ಎನ್ನುವ ರಾಮನನ್ನು ಸೇರಿದವನು ಎಂದು ಅರ್ಥ.

“‘ದಶರಥ’ ಎಂದರೆ ಐದು ಕರ್ಮೇಂದ್ರಿಯಗಳು, ಐದು ಜ್ಞಾನೇಂದ್ರಿಯಗಳನ್ನು ಹೊಂದಿರುವ ರಥವನ್ನು .. ಅಂದರೆ ದೇಹವನ್ನು ಸಕ್ರಮ ಮಾರ್ಗದಲ್ಲಿ ಪಯಣಿಸುವಂತೆ ಮಾಡುವ ಜ್ಞಾನಿ ಎಂದು ಅರ್ಥ. ಆತನ ಮೂವರು ಹೆಂಡತಿಯರು ‘ಕೌಸಲ್ಯ’ ಸತ್ವಗುಣಕ್ಕೆ, ‘ಸುಮಿತ್ರ’ ರಜೋಗುಣಕ್ಕೆ, ‘ಕೈಕೇಯಿ’ ತಮೋಗುಣಕ್ಕೆ ಪ್ರತೀಕ. ಇದೇ ನಿಜವಾದ ಆಧ್ಯಾತ್ಮಿಕ ರಾಮಾಯಣ! ಈ ಆಧ್ಯಾತ್ಮಿಕ ರಾಮಾಯಣ ತತ್ವ ನಮಗೆ ಅರ್ಥವಾಗಬೇಕಾದರೆ ಧ್ಯಾನಮಾಡಿ ನಮ್ಮ ಅಂತರಂಗದೊಳಗೆ ಪ್ರಯಾಣ ಮಾಡಬೇಕಾದ್ದೇ .. ವಿಶ್ವಶಕ್ತಿಯನ್ನು ಆವಾಹನೆ ಮಾಡಿಕೊಂಡು ಶಕ್ತಿವಂತರಾಗಬೇಕಾದ್ದೇ .. ಕರ್ಮೇಂದ್ರಿಯ ಜ್ಞಾನದಿಂದ ಪಂಚೇಂದ್ರಿಯ ಜ್ಞಾನದಿಂದ ತ್ರಿಗುಣಾತೀತರಾಗಿ ಬದಲಾಗಬೇಕಾದ್ದೆ .. ಚಂಚಲವಾದ ಮನಸ್ಸನ್ನು ನಾಭೀಸ್ಥಾನದ ಹತ್ತಿರ ಭೇದಿಸಿ ಅಧೋಮುಖ ಮಟ್ಟವನ್ನು ದಾಟಿ ಊರ್ಧ್ವಮುಖ ಹಂತಕ್ಕೆ ಪ್ರಯಾಣ ಬೆಳೆಸಿ ಮೋಕ್ಷವನ್ನು ಹೊಂದಬೇಕಾದ್ದೇ” ಎನ್ನುತ್ತಾ ಅನೇಕಾನೇಕ ರಹಸ್ಯಗಳನ್ನು ಅದ್ಭುತವಾಗಿ ವಿವರಿಸಿದರು.

 

ಭಾರತದೇಶವೇ ವಿಶ್ವಕ್ಕೆ ಮಾರ್ಗದರ್ಶಿ”

“ಬ್ರಹ್ಮ ಒಬ್ಬನೇ .. ಪರಬ್ರಹ್ಮ ಒಬ್ಬನೇ. ಶರೀರಗಳು ಬೇರೆಯಾದರೂ, ಸ್ವರೂಪಗಳು, ಸ್ವಭಾವಗಳು ಬೇರೆ ಬೇರೆಯಾಗಿ ಕಾಣಿಸಿದರೂ ಪ್ರತಿಯೊಂದು ಪ್ರಾಣಿಯಲ್ಲೂ ಇರುವ ಪರಬ್ರಹ್ಮ .. ಒಬ್ಬನೇ. ನಮ್ಮ ಪಿರಮಿಡ್ ಧ್ಯಾನ-ಸಸ್ಯಾಹಾರ ಪ್ರಚಾರದ ಗುರಿ ಅದೇ. ಅನೇಕ ಜನ ಮಹಾನುಭಾವರು, ಯೋಗಿಗಳು, ಜ್ಞಾನಿಗಳು, ವಿಶ್ವದಲ್ಲಿ ಎಲ್ಲೆಲ್ಲೋ ಮೂಲೆಮೂಲೆಗಳಲ್ಲಿ ಜನಿಸಿ .. ಭಾರತದೇಶದ ಆಧ್ಯಾತ್ಮಿಕತೆಯ ಹಿರಿತನವನ್ನು ಗುರುತಿಸಿ ಇಲ್ಲಿಗೆ ಬಂದು .. ಅನೇಕ ನಿಗೂಢವಾದ ವಿಷಯಗಳನ್ನು ಕಲಿತುಕೊಂಡಿದ್ದಾರೆ.”

“ಶ್ರೀ ಸದಾನಂದ ಯೋಗಿಯವರು ಕೂಡಾ ಭೌಗೋಳಿಕವಾಗಿ ವಿದೇಶೀಯರೇ. ಆದರೂ ನಮ್ಮ ದೇಶಕ್ಕೆ ಬಂದು .. ನಮ್ಮ ತೆಲುಗು ಪ್ರಾಂತವಾದ ಕರ್ನೂಲಿಗೆ ಬಂದು ತಲುಪಿ, ನನಗೆ ತನ್ನ ಜ್ಞಾನವನ್ನು ನೀಡಿ, ಅವರಿಗೆ ಸೇವೆ ಮಾಡುವ ಭಾಗ್ಯವನ್ನು ನನಗೆ ನೀಡಿದರು. ಅವರ ದಿವ್ಯಮಾರ್ಗದರ್ಶದಲ್ಲಿ ನಾನು, ನನ್ನ ಜೊತೆ ನೀವೆಲ್ಲಾ ಕೂಡಾ ಈ ವಿಶ್ವಯಜ್ಞದಲ್ಲಿ ಭಾಗವಹಿಸುತ್ತಿದ್ದೇವೆ. ನಾವು ಕೈಗೊಂಡಿರುವ ಧ್ಯಾನ-ಸಸ್ಯಾಹಾರ ಪ್ರಚಾರ ಕಾರ್ಯಕ್ರಮಗಳು ಭವಿಷ್ಯತ್ತಿನಲ್ಲಿ ನಮಗೆ ವಿಶ್ವಸಂಘದಲ್ಲಿ ವಿಶಿಷ್ಟವಾದ ಸ್ಥಾನವನ್ನು ಒದಗಿಸಲಿವೆ.”

‘ಸತ್ಯಮೇವ ಜಯತೇ’ ಎಂದು, ‘ಅಹಿಂಸಾ ಪರಮೋ ಧರ್ಮ’ ಎಂದು ಲೋಕಕ್ಕೆ ಸಾರಿ ಹೇಳಿದ ಪರಮ ಪವಿತ್ರವಾದ ಆಧ್ಯಾತ್ಮಿಕ ಪರಂಪರೆಯನ್ನು ಪಡೆದಿರುವ ದೇಶ ನಮ್ಮ ಭಾರತದೇಶ .. ಭವಿಷ್ಯತ್ತಿನಲ್ಲಿ ಇನ್ನೂ ಅಧಿಕವಾಗಿ ಪ್ರಪಂಚ ಪ್ರಜೆಗಳಿಗೆ ಮಾರ್ಗದರ್ಶಕ ದೇಶ ಆಗಲಿದೆ ಎನ್ನುತ್ತಾ ತಮ್ಮ ದಿವ್ಯಸಂದೇಶವನ್ನು ನೀಡಿದರು.

ಹೀಗೆ ಮೂರು ದಿನಗಳವರೆಗೆ ನಡೆದ ಕಾರ್ಯಕ್ರಮಗಳಲ್ಲಿ ಬ್ರಹ್ಮರ್ಷಿ ಪತ್ರೀಜಿ ತಮ್ಮ ಕೊಳಲು ನಾದಾಮೃತದೊಂದಿಗೆ ಅತಿ ಸರಳವಾದ ಜ್ಞಾನಾಮೃತವನ್ನು ಕೂಡಾ ಅತ್ಯಂತ ಸ್ನೇಹಪೂರ್ವಕವಾಗಿ ಎಲ್ಲರಿಗೂ ನೀಡಿ .. ಎಲ್ಲರ ಜನ್ಮಗಳನ್ನು ಧನ್ಯವಾಗಿಸಿದರು.