” ನಾವು .. ಆಧ್ಯಾತ್ಮಿಕ ವಿಜ್ಞಾನಿಗಳು “

 

“ನಾವು .. ಆಧ್ಯಾತ್ಮಿಕ ವಿಜ್ಞಾನಿಗಳು”

ನಮ್ಮ ಮೂಲ ಸಿದ್ಧಾಂತ .. ಆತ್ಮಪರವಾದ ಜೀವನವನ್ನು ಜೀವಿಸುವುದು

ಧ್ಯಾನದ ಮೂಲಕ ಆತ್ಮಜಾಗೃತಿಯನ್ನು ಪಡೆದ ಮರುಕ್ಷಣದಿಂದ ನಾವು ಕೈಗೊಳ್ಳಬೇಕಾದ ಮುಖ್ಯಕಾರ್ಯಕ್ರಮ .. ಆತ್ಮಶಾಸ್ತ್ರವನ್ನು ಕೂಲಂಕಷವಾಗಿ, ವಿವರವಾಗಿ ಅಧ್ಯಯನ ಮಾಡುವುದು! ಆತ್ಮಶಕ್ತಿಯನ್ನು ಕುರಿತು ಸಂಶೋಧನೆಗಳನ್ನು ಮಾಡುತ್ತಾ .. ಆ ಅನುಭವ ಜ್ಞಾನದಿಂದ ಆತ್ಮಪರವಾದ ಜೀವನವನ್ನು ಅರಿವಿನಿಂದ ಜೀವಿಸುವುದು.

“ನಾವು .. ಆಧ್ಯಾತ್ಮಿಕ ವಿಜ್ಞಾನಿಗಳು”

ನಮ್ಮ ಮೂಲ ಪ್ರಕೃತಿ-ಸ್ವಭಾವ .. ಸದಾ ವೈಜ್ಞಾನಿಕ ದೃಷ್ಟಿಕೋನ ಹೊಂದಿರುವುದು

ಆತ್ಮಶಕ್ತಿ ಸ್ವರೂಪರಂತೆ ಜೀವಿಸುವ ನಾವು .. ನಿಜ ಜೀವನದಲ್ಲಿ ನಮಗೆ ಎದುರಾಗುವ ಪ್ರತಿ ಒಂದು ಘಟನೆಯ ಬಗ್ಗೆ, ವ್ಯಕ್ತಿಯ ಬಗ್ಗೆ ಆಧ್ಯಾತ್ಮಿಕ ದೃಷ್ಟಿಕೋನವನ್ನು ಹೊಂದಿರಬೇಕು .. ಕರ್ಮ ಸಿದ್ಧಾಂತ ಅವಗಾಹನೆಯಿಂದ ಪ್ರತಿಕ್ಷಣ ಸಾಕ್ಷೀತತ್ವದಿಂದ ನಿಶ್ಚಲವಾಗಿ ಜೀವಿಸಬೇಕು.

“ನಾವು .. ಆಧ್ಯಾತ್ಮಿಕ ವಿಜ್ಞಾನಿಗಳು”

ನಮ್ಮ ಅಂತರ್ಗತ ಶಕ್ತಿ .. ಧ್ಯಾನ ಶಕ್ತಿ

ನಿರಂತರ ಧ್ಯಾನಸ್ಥಿತಿಯಲ್ಲಿರುವುದರಿಂದ ನಾವು ಹೊಂದುವ ಅನಂತವಾದ ವಿಶ್ವಶಕ್ತಿ ಆವಾಹನೆಯ ಮೂಲಕ ನಾವು .. ಶಕ್ತಿ ಸ್ವರೂಪರಂತೆ ಬೆಳಗಬೇಕು! ವಿಶ್ವಶಕ್ತಿಯ ಅಭಾವವೇ ಎಲ್ಲಾ ಅನರ್ಥಗಳಿಗೆ ಮೂಲಕಾರಣ. ಆದ್ದರಿಂದ, ಧ್ಯಾನದ ಮೂಲಕ ಆ ಅಭಾವವನ್ನು ಆಗಿಂದಾಗ ಭರ್ತಿ ಮಾಡಿಕೊಳ್ಳುತ್ತಾ ಪ್ರಾಪಂಚಿಕ, ಆಧ್ಯಾತ್ಮಿಕ ಎಲ್ಲಾ ಕೆಲಸಗಳನ್ನು ಸರಿಪಡಿಸಿಕೊಳ್ಳುತ್ತಿರಬೇಕು. ಜೀವನವನ್ನು ಪ್ರತಿಕ್ಷಣ ಒಂದು ಹಬ್ಬದಂತೆ ಸಂಭ್ರಮದಿಂದ ಆಚರಿಸಬೇಕು.

“ನಾವು .. ಆಧ್ಯಾತ್ಮಿಕ ವಿಜ್ಞಾನಿಗಳು”

ನಮ್ಮ ಗಾಢವಾದ ಆಸೆ .. ಆಂತರಿಕ ಪ್ರಪಂಚವನ್ನು ಸಂಶೋಧಿಸುವುದು

ಬಾಹ್ಯ ಪ್ರಪಂಚಕ್ಕೆ ಸಂಬಂಧಿಸಿದ ಕೆಲಸಗಳನ್ನು ಅರಿವಿನಿಂದ ನಿರ್ವಹಿಸುತ್ತಲೇ .. ಸಮಯ ಸಿಕ್ಕಿದಾಗಲೆಲ್ಲಾ ಧ್ಯಾನಸಾಧನೆಯಲ್ಲಿ ಮುಳುಗಬೇಕು.

ಆಂತರಿಕ ಪ್ರಪಂಚವನ್ನು ಇನ್ನೂ ಹೆಚ್ಚು ಹೆಚ್ಚಾಗಿ ಸಂಶೋಧಿಸಿಕೊಳ್ಳುತ್ತಾ .. ಅನೇಕಾನೇಕ ಸಮಾಂತರ ಲೋಕಗಳಲ್ಲಿ ವಿಹರಿಸುತ್ತಾ .. ಅಲ್ಲಿಯ ಜ್ಞಾನವನ್ನು ಸಂಗ್ರಹಿಸಿಕೊಳ್ಳುತ್ತಿರಬೇಕು.

“ನಾವು .. ಆಧ್ಯಾತ್ಮಿಕ ವಿಜ್ಞಾನಿಗಳು”

ನಮ್ಮ ಸುಪ್ತ ಸಾಮರ್ಥ್ಯ .. ಹೊಳಹು

ನಮ್ಮ ಬಾಹ್ಯ ಮತ್ತು ಆಂತರಿಕ ಪ್ರಪಂಚಗಳಲ್ಲಿ ನಮಗೆ ಎಲ್ಲಿ ಎಂತಹ ಸಂದರ್ಭ ಎದುರಾದರೂ.. ಆತ್ಮಶಕ್ತಿ ಸ್ವರೂಪರಾದ ನಾವು .. ನಮ್ಮ ಸಹಜವಾದ ಹೊಳಹನ್ನು ಅನುಸರಿಸಿ .. ನಿರ್ಣಯಗಳನ್ನು ತೆಗೆದುಕೊಳ್ಳುತ್ತಾ .. ವಿಜಯ ಪಥದಲ್ಲಿ ಮುನ್ನಡೆಯುತ್ತಿರಬೇಕು.

“ನಾವು .. ಆಧ್ಯಾತ್ಮಿಕ ವಿಜ್ಞಾನಿಗಳು”

ನಮ್ಮ ಧೃಡವಾದ ಬಯಕೆ .. ಸಕಲ ಮಾನವಕುಲದ ಸೌಹಾರ್ದತೆ

ಸ್ವಂತ ಆತ್ಮಪ್ರಜ್ಞೆಯಿಂದ ಜೀವಿಸುವವರಿಗೆ ಸಕಲ ಪ್ರಾಣಿಕೋಟಿಯಲ್ಲಿರುವ ಸರ್ವಾತ್ಮತತ್ವ ಅರಿವಾಗುತ್ತದೆ. ಅದಕ್ಕಾಗಿ ನಾವು ಕೈಗೊಳ್ಳುತ್ತಿರುವ ಬೃಹತ್ ಧ್ಯಾನ-ಜ್ಞಾನ-ಸಸ್ಯಾಹಾರ ಪ್ರಚಾರ ತರಂಗಗಳು ಈ ಭೂಮಂಡಲವನ್ನು ಎಲ್ಲ ಮಾನವರಲ್ಲಿ ಭ್ರಾತೃತ್ವವನ್ನು ತುಂಬಿಸಿಬಿಡುತ್ತವೆ. ಆಗಲೇ ಸಕಲ ಮಾನವಕುಲಕ್ಕೆ ಪರಸ್ಪರ ಶ್ರೇಯಸ್ಸನ್ನು ಬಯಸಿ ಎಲ್ಲರೂ ಪ್ರಶಾಂತ ಜೀವನವನ್ನು ನಡೆಸಬಲ್ಲವರಾಗುತ್ತಾರೆ!

“ನಾವು .. ಆಧ್ಯಾತ್ಮಿಕ ವಿಜ್ಞಾನಿಗಳು”

ನಮ್ಮ ಉದಾತ್ತ ಆಶಯ .. ಸಸ್ಯಾಹಾರೀ ಜೀವನ ಕ್ರಮವನ್ನು ಜಗತ್ತಿನಾದ್ಯಂತ ಪ್ರಸಾರಿಸುವುದು

ನಮ್ಮ ಹಾಗೇ ಈ ಸೃಷ್ಟಿಯಲ್ಲಿ ಪ್ರತಿಯೊಂದು ಜೀವಿ ಸಹ ತನ್ನ ಸ್ವಂತ ಕಲ್ಯಾಣಕ್ಕಾಗಿಯೇ ಜನ್ಮಪಡೆಯುತ್ತದೆ. ಈ ಮೂಲಸತ್ಯಕ್ಕೆ ಅನುಗುಣವಾಗಿ ಸೋದರ ಪ್ರಾಣಿಕುಲದ ಸಂರಕ್ಷಣೆಯ ಜವಾಬ್ದಾರಿಯನ್ನು ಕೈಗೊಂಡಿರುವ ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟೀಸ್ ಮೂವ್‌ಮೆಂಟ್ .. ಸಸ್ಯಾಹಾರ ಪ್ರಚಾರವನ್ನು ಅಧಿಕಗೊಳಿಸುತ್ತಿದೆ.

“ನಾವು .. ಆಧ್ಯಾತ್ಮಿಕ ವಿಜ್ಞಾನಿಗಳು”

ನಮ್ಮ ಅತಿ ಮುಖ್ಯವಾದ ಧ್ಯೇಯ .. ನಮ್ಮ ಜೊತೆ ಎಲ್ಲರ ಆತ್ಮಜ್ಞಾನ ಪ್ರಕಾಶ

ಸಕಲ ವಿಶ್ವಕ್ಕೇ ಪ್ರಯೋಗಶಾಲೆಯಂತೆ ಇರುವ ಈ ಭೂಮಿಯ ಮೇಲೆ ಒಬ್ಬೊಬ್ಬರ ಜೀವನವೇ ಒಂದೊಂದು ಪ್ರಯೋಗ! ಈ ಪ್ರಯೋಗಗಳ ಮೂಲಕ ನಮ್ಮ ಜೊತೆ ಸಹಕರಿಸುತ್ತಿರುವ ಉನ್ನತ ಆಯಾಮದಲ್ಲಿರುವ ಮಾಸ್ವರ್‌ಗಳೂ ಸಹ ದಿವ್ಯಜ್ಞಾನವನ್ನು ಹೊಂದುತ್ತಿರುತ್ತಾರೆ.

“ನಾವು .. ಆಧ್ಯಾತ್ಮಿಕ ವಿಜ್ಞಾನಿಗಳು”

ನಮ್ಮ ಮುಖ್ಯ ಕಾರ್ಯಕ್ರಮ ..

ಜನಸಾಮಾನ್ಯರಿಗೆ ಕೂಡಾ ಸಮಗ್ರ ಆರೋಗ್ಯ ಶಾಸ್ತ್ರ ಸೂತ್ರಗಳನ್ನು ತಿಳಿಸುವುದು

ಯಾವ ಶಾಸ್ತ್ರ-ವಿಜ್ಞಾನವಾದರೂ ಸಮಾಜದಲ್ಲಿರುವ ವಿವಿಧ ರಂಗಗಳಲ್ಲಿರುವ ಕೆಳಮಟ್ಟದ ಹಂತದಲ್ಲಿರುವ ವ್ಯಕ್ತಿಗೆ ಸಹ ಗೊತ್ತಾಗಿ .. ಅದರ ಮೂಲಕ ಅವರ ಜೀವನ ಸಹ ಉನ್ನತವಾಗಿ ಬದಲಾದಾಗಲೇ .. ಆ ಶಾಸ್ತ್ರ ಸಂಶೋಧನೆಯ ವಿಜ್ಞಾನಕ್ಕೆ ಅರ್ಥ-ಪರಮಾರ್ಥ ಸಿಗುತ್ತದೆ. ಹಾಗೆಯೇ, ವಿವಿಧ ರೀತಿಯಲ್ಲಿರುವ ಆರೋಗ್ಯ ಶಾಸ್ತ್ರ ಪ್ರಯೋಗ ಫಲಿತಾಂಶಗಳನ್ನೂ ಕೂಡಾ ಸಾಮಾನ್ಯರಿಗೆಲ್ಲರಿಗೂ ತಲುಪಲೇಬೇಕು ಎನ್ನುವ ಧ್ಯೇಯದಿಂದ ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟೀಸ್ ಮೂವ್‌ಮೆಂಟ್ ವಿಸ್ತಾರವಾಗಿ ಧ್ಯಾನ ಆರೋಗ್ಯ ಶಿಬಿರಗಳನ್ನು ನಡೆಸುತ್ತಿದೆ!

“ನಾವು .. ಆಧ್ಯಾತ್ಮಿಕ ವಿಜ್ಞಾನಿಗಳು”

ನಮ್ಮೆಲ್ಲರ ಸಮಾನ ವೇದಿಕೆ .. IFSS

ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟೀಸ್ ಮೂವ್‌ಮೆಂಟ್‌ನಲ್ಲಿರುವ ಅತಿ ಮುಖ್ಯ ವಿಭಾಗ ಭಾರತೀಯ ಆಧ್ಯಾತ್ಮಿಕ ಶಾಸ್ತ್ರಜ್ಞರ ಒಕ್ಕೂಟ. IFSS. ಒಂದೇ ರೀತಿಯ ಧ್ಯೇಯೋದ್ದೇಶಗಳನ್ನು ಹೊಂದಿರುವ, ವಿವಿಧ ಆಧ್ಯಾತ್ಮಿಕ ಸಂಸ್ಥೆಗಳನ್ನು, ಆಧ್ಯಾತ್ಮಿಕ ಗುರುಗಳನ್ನೂ, ಆಧ್ಯಾತ್ಮಿಕ ಶಾಸ್ತ್ರ ಬೋಧಕರನ್ನೂ, ಆಧ್ಯಾತ್ಮಿಕ ಶಾಸ್ತ್ರ ಸಂಶೋಧಕರನ್ನೂ ದೇಶದಾದ್ಯಂತ ಗುರುತಿಸಿ .. ಅವರೆಲ್ಲರನ್ನೂ ಒಂದು ಸಮಾನ ವೇದಿಕೆಯ ಮೇಲೆ ತಂದು ಅವರೆಲ್ಲರೂ ಪರಸ್ಪರ ಬೆಳೆಯಲು ವಿಶೇಷವಾಗಿ ಪರಿಶ್ರಮಿಸುತ್ತಿದೆ ಈ IFSS. ದೇಶದಾದ್ಯಂತ ವಿವಿಧ ರಾಜ್ಯಗಳಲ್ಲಿ ಅನೇಕ ಸಮಾವೇಶಗಳನ್ನು ನಿರ್ವಹಿಸುತ್ತಿರುವ ಅದ್ಭುತವಾದ ಜ್ಞಾನಸಂಪತ್ತನ್ನು ಎಲ್ಲರಿಗೂ ಹಂಚುತ್ತಿರುವ “PSSM IFSS ಮಾಸ್ಟರ್‌ಗಳ ತಂಡ”ವನ್ನು ಅಭಿನಂದಿಸಬೇಕಾದ್ದೆ!

“ನಾವು .. ಆಧ್ಯಾತ್ಮಿಕ ವಿಜ್ಞಾನಿಗಳು”

ನಮ್ಮ ಅಂತಿಮ ಕನಸು .. ವಿಶ್ವ ಆಧ್ಯಾತ್ಮಿಕ ಸರ್ಕಾರ ಸ್ಥಾಪನೆ

ಪ್ರಜೆಗಳಿಗಾಗಿ .. ಪ್ರಜೆಗಳ ಮೂಲಕ .. ಪ್ರಜೆಗಳಿಂದ .. ಚುನಾಯಿಸಿದ ಪ್ರಜಾಸತ್ತಾತ್ಮಕ ಸರ್ಕಾರ .. “ಯಥಾ ಪ್ರಜಾ .. ತಥಾ ರಾಜಾ” ಎನ್ನುವಂತೆ ಸಹಜವಾಗಿಯೇ ಪ್ರಜಾಶಕ್ತಿ ಸಮೂಹಗಳ ಆತ್ಮದ ಬೆಳವಣಿಗೆ ತಕ್ಕಂತೆಯೇ ಇರುತ್ತದೆ. ಅದಕ್ಕೆ ಜಾಗೃತಿಗೊಳಿಸಲಾದ ಆತ್ಮಗಳು.. ಉನ್ನತವಾದ ಮೌಲ್ಯವನ್ನು ಹೊಂದಿರುವ ಸರ್ಕಾರವನ್ನು ಅವು ಚುನಾಯಿಸುತ್ತವೆ. ಆದ್ದರಿಂದ, ಧ್ಯಾನ, ಜ್ಞಾನ ಪ್ರಚಾರಗಳ ಮೂಲಕ ಆತ್ಮಗಳನ್ನು ಜಾಗೃತಿಗೊಳಿಸುವುದೇ ನಮ್ಮ ಕೆಲಸ!