” ನವವಿಧ ಧರ್ಮಗಳು “

 

’ಧರ್ಮವೇ?’ .. ’ಅಧರ್ಮವೇ?

’ಧರ್ಮಾಚರಣೆಯೇ? .. ’ಅಧರ್ಮಾಚರಣೆಯೇ?

ಅವರವರ ಬುದ್ಧಿಯನ್ನು ಅವರವರೇ ಚುರುಕುಗೊಳಿಸುತ್ತಾ

ಆಗಿಂದಾಗ್ಗೆ ಧರ್ಮಾಧರ್ಮಗಳನ್ನು ತಿಳಿದುಕೊಳ್ಳುತ್ತಾ ಧರ್ಮವನ್ನೇ ಶರಣು ಬೇಡುತ್ತಿರಬೇಕು.

ಯತೋಭ್ಯುದಯ ನಿಶ್ರೇಯಸ ಸಿದ್ಧಿಃ ಸ ಧರ್ಮಃ

.. ಎಂದರು ವೈಶೇಷಿಕದರ್ಶನಕಾರರು – ಕಣಾದಮಹರ್ಷಿ

ಅಂದರೆ,

ಇಹಲೋಕಪರವಾಗಿ ಅಭ್ಯುದಯವನ್ನೂ ಮತ್ತು ಪರಲೋಕಪರವಾಗಿ ಜನ್ಮರಾಹಿತ್ಯ ಪದವಿಯನ್ನೂ

ಯಾವುದು ನೀಡುತ್ತದೆಯೋ .. ಅದನ್ನು ಧರ್ಮಎನ್ನುತ್ತಾರೆ

ಧರ್ಮಾಚರಣೆ

ಧರ್ಮಾಚರಣೆಯಿಂದಲೇ ಉನ್ನತಸ್ಥಿತಿ ಅಧರ್ಮಾಚರಣೆಯಿಂದ ಅಥೋಗತಿ.

ಯಾ ಮತಿಃ ಸಾ ಗತಿರ್ಭವೇತ್ ಎಂದನು ಅಷ್ಟಾವಕ್ರನು

ಅಂದರೆ,

ನಮ್ಮ ಮತಿ ಹೇಗೆ ಇರುತ್ತದೆಯೊ ನಮ್ಮ ಗತಿ ಖಂಡಿತವಾಗಿಯೂ ಹಾಗೆಯೇ ಇರುತ್ತದೆ.

ಮತಿಯಿಂದಲೇ ಗತಿ

ಧರ್ಮವನ್ನು ಶರಣು ಬೇಡಿದರೇ .. ಸುಮತಿ

ಧರ್ಮವನ್ನು ಲೆಕ್ಕಿಸದೆ ಅಧರ್ಮವನ್ನು ಕೈ ಹಿಡಿದರೆ .. ಕುಮತಿ

“ಧರ್ಮೋರಕ್ಷತಿರಕ್ಷಿತಃ”

ಯಾರಿಂದ ಧರ್ಮ ಕಾಪಾಡಲ್ಪಡುತ್ತದೆಯೊ .. ಅವರಿಂದ ರಕ್ಷಿಸಲ್ಪಟ್ಟ ಧರ್ಮವು ಮರಳಿ ಅವರನ್ನು ರಕ್ಷಿಸುತ್ತದೆ.

ಈ ಸತ್ಯವನ್ನು ಅರಿತವನು ಸದಾ ಧರ್ಮರಕ್ಷಣದಲ್ಲೇ ತನ್ನ ಜೀವನವನ್ನು ಕಳೆಯುತ್ತಾನೆ.

ಈ ಸತ್ಯವನ್ನು ಅರಿಯದವನು .. ತಿಳಿದೂ ಮರೆತವನು .. ಅಧೋಗತಿ ಪಾಲಾಗುತ್ತಾನೆ.

ಆಧರ್ಮಃರಕ್ಷತಿಭಕ್ಷಿತಃ

ಯಾರು ಅಧರ್ಮವನ್ನು ರಕ್ಷಿಸುತ್ತಾರೋ .. ಯಾರು ಅಧರ್ಮವನ್ನು ಪೋಷಿಸುತ್ತಾರೋ .. ಅಧರ್ಮಕ್ಕೆ ಕಾರಣೀಭೂತರಾಗುತ್ತಿರುತ್ತಾರೊ ಅವರಿಂದ ಸೃಷ್ಟಿಸಲ್ಪಟ್ಟ ಅಧರ್ಮ .. ಮರಳಿ ಅವರನ್ನೇ ಭಕ್ಷಿಸುತ್ತದೆ.

ಅವರಿಗವರೇ, ಕರ್ಮಗಳತೀರೆ

ನಮ್ಮ ವಾಸ್ತವಗಳಿಗೆ .. ಸದಾ .. ನಾವೇ ಸೃಷ್ಟಿಕರ್ತರು.

ನವವಿಧ ಧರ್ಮಗಳು

ಧರ್ಮ ಎನ್ನುವುದು ನವ ವಿಧಗಳಲ್ಲಿ ಮಾನವ ಜೀವನದಲ್ಲಿ ವಿರಾಜಿಸಿದೆ.

ಧ್ಯಾನಧರ್ಮ… ಪ್ರತಿದಿನ ತಪ್ಪದೆ ಧ್ಯಾನ ಅಭ್ಯಾಸದಲ್ಲಿ ಇರುವುದು

ಪ್ರತಿದಿನ ಸ್ವಲ್ಪ ಸಮಯವನ್ನು ಅವರ ಜೊತೆ ಅವರು ಕಳೆಯುವುದು.

ಆತ್ಮವು ಆತ್ಮದಲ್ಲಿ ಆತ್ಮವಾಗಿ ಹೊಂದಿಕೊಂಡು ಇರುವುದು.

ಅಹಿಂಸಾಧರ್ಮ… ಸಸ್ಯಾಹಾರದಿಂದಲೇ ಮಾನವ ಜೀವನವನ್ನು ಸಾಗಿಸುವುದು.

ಭೌತಿಕಪರವಾಗಿ ಯಾವ ಪ್ರಾಣಿಯ ಮೇಲೆ ಅತ್ಯಾಚಾರ, ಹತ್ಯಾಚಾರ ಮಾಡದೇ ಇರುವುದು.

ಮಿತ್ರಧರ್ಮ… ಸಕಲ ಪ್ರಾಣಿಕೋಟಿ ಜೊತೆ ಸ್ನೇಹಶೀಲತೆ.

ಕರುಣಾಧರ್ಮ… ದಯನೀಯ ಸ್ಥಿತಿಯಲ್ಲಿರುವ ಇತರ ಪ್ರಾಣಿಗಳಿಗೆ ಸಾಧ್ಯವಾದಷ್ಟು ಸಹಾಯ ಮಾಡುವುದು.

ಶಾಂತಧರ್ಮ… ಶಿರಿಡಿಸಾಯಿಬಾಬಾ ಅವರು ಪ್ರವಚಿಸಿದ ಸಬೂರಿ ಪಿರಮಿಡ್ ಜ್ಞಾನ ನವರತ್ನಗಳಲ್ಲಿರುವ ಸಹನೆ

ಆರೋಗ್ಯಧರ್ಮ… ಪಾಂಚಭೌತಿಕ ಶರೀರವನ್ನು ಕುರಿತು ನಮ್ಮ ಜಾಗ್ರತೆ, ನಮ್ಮ ಕರ್ತವ್ಯ, ನಮ್ಮ ಶ್ರದ್ಧೆ

ಮಿತಾಹಾರ ಮತ್ತು ನಿರಾಹಾರ … ಇವುಗಳಿಗೆ ತಕ್ಕ ಸ್ಥಾನವನ್ನು ಕಲ್ಪಿಸುವುದು.

ಸ್ವಾಧ್ಯಾಯಧರ್ಮ… ಬುದ್ಧಿ ಶಕ್ತಿಯನ್ನು ಆಗಿಂದಾಗ ಹೆಚ್ಚಿಸಿಕೊಳ್ಳುತ್ತಾ, ಇನ್ನು ಅಧಿಕವಾಗಿ ವಿಸ್ತಾರಗೊಳಿಸುವ ಪ್ರಕ್ರಿಯೆ.

ವಿನಯಧರ್ಮ… ನಮಗಿಂತಾ ಆಯುಷ್ಯ, ಬುದ್ಧಿ ಅಧಿಕವಾಗಿರುವವರ ಹತ್ತಿರ ಹೊಂದಿಕೊಂಡು ಇರುವುದು.

ದಾನಧರ್ಮ… ನಮಗೆ ಅವಶ್ಯಕತೆ ಇರುವಷ್ಟು ನಾವು ನಮ್ಮ ಹತ್ತಿರ ತಪ್ಪದೆ ಇಟ್ಟುಕೊಂಡು

ನಮ್ಮ ಸ್ವಂತ ಅವಶ್ಯಕತೆಗಿಂತಾ ಹೆಚ್ಚಾಗಿರುವ ಸಂಪತ್ತನ್ನು ಲೋಕಕಲ್ಯಾಣಕ್ಕಾಗಿ ಉಪಯೋಗಿಸುವುದು … ಆದರೆ,

ಯೋಗ್ಯತೆಯನ್ನು ನೋಡಿ ದಾನ ಮಾಡಬೇಕು… ಅಪಾತ್ರದಾನ ಮಾಡಲೇಬಾರದು.

ಅಪಾತ್ರದಾನ ಅಂದರೆ, ಅದು ಬೂದಿಯಲ್ಲಿ ಹಾಕಿದ ಪನ್ನೀರು (ಸುಗಂಧ ಜಲ) ಇದ್ದಹಾಗೆ.

ಜಯಜಯಧ್ವನಿ

ಹೀಗೆ, ಶ್ರೀ ಸಿಂಹಾಚಲ ಲಕ್ಷ್ಮೀ ನರಸಿಂಹಸ್ವಾಮಿ ದಯೆಯಿಂದ ಧ್ಯಾನ ಮಹಾಚಕ್ರ-2 ದಲ್ಲಿ

ಧರ್ಮ ನವವಿಧವಾಗಿ ನಮಗೆ ಸಾಕ್ಷಾತ್ಕಾರ ನೀಡಿದೆ.

ನವವಿಧ ಧರ್ಮಗಳಿಗೆ ಜಯ ಜಯ ಧ್ವನಿ

ವಿಶಾಖ ಮಹಾನಗರ ಧ್ಯಾನ ಮಹಾಚಕ್ರಕ್ಕೆ ಜಯ ಜಯ ಧ್ವನಿ

ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಅವರಿಗೆ ಶತಸಹಸ್ರಕೋಟಿ ವಂದನೆಗಳು

ಜೈ ಪಿರಮಿಡ್ ಮಾಸ್ಟರ‍್ಸ್ .

ಜೈ ಜೈ ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟೀಸ್ ಮೂವ್‌ಮೆಂಟ್ ..