“ನಚಿಕೇತ”

ಎಲ್ಲರೂ ‘ಪ್ರಜಲ್ಪ’ (ಕೆಲಸಕ್ಕೆ ಬಾರದ ಮಾತುಗಳು) ತೆಗೆಯಬೇಕು; ಧ್ಯಾನಮಾಡಿ ಆತ್ಮವನ್ನು ಅನುಭವಿಸಬೇಕು.

‘ಪ್ರಜಲ್ಪ’ (ಕೆಲಸಕ್ಕೆ ಬಾರದ ಮಾತುಗಳು) ತೆಗೆಯಬೇಕು; ರಾಕ್ಷಸತ್ವ ಎಂದರೆ ಹಿಂಸೆ; ಮಾನವತ್ವ ಎಂದರೆ ಮೂರ್ಖತನ. ಮಾನವರೆಲ್ಲರು ಮೂರ್ಖರು.-ಮಾತನಾಡಬೇಕಾಗಿದ್ದು ‘ಆತ್ಮ’ ಕುರಿತು, ‘ಮೂರನೆಯಕಣ್ಣು’ ಕುರಿತು, ‘ಬುದ್ಧನ’ ಕುರಿತು, ‘ಸಾಕ್ರೆಟೀಸ್’ ಕುರಿತು, ‘ರಮಣ ಮಹರ್ಷಿ’ ಕುರಿತು, ‘ಪರಲೋಕಗಳ’ ಕುರಿತು. ನಚಿಕೇತನಿಗೆ ಯಮಧರ್ಮರಾಜ ಮೂರು ವರಗಳನ್ನು ಕೊಟ್ಟಿದನು. ಮೊದಲನೆಯ ವರ ನನ್ನ ತಂದೆ ಅನೇಕ ಪಾಪಗಳನ್ನು ಮಾಡಿದ್ದಾನೆ, ಉಪಯೋಗವಿಲ್ಲದ್ದನ್ನು ದಾನಧರ್ಮ ಮಾಡಿದ್ದಾನೆ. ಅದನ್ನೆಲ್ಲಾ ತೆಗೆದುಹಾಕಿ ಎಂದನು. ಎರಡನೆಯ ವರ, ದೇಶದಲ್ಲಿ ಎಲ್ಲರೂ ಸುಃಖವಾಗಿರಬೇಕು ಎಂದು ಕೋರಿದನು. ಮೂರನೆಯ ವರ ನಿನಗಾಗಿ ಏನಾದರೂ ಕೋರಿಕೊ ಎಂದು ಯಮಧರ್ಮರಾಜ ಕೇಳಿದಾಗ, ಮನುಷ್ಯ ಸತ್ತ ನಂತರ ಎಲ್ಲಿಗೆ ಹೋಗುತ್ತಾನೆ ಅಂತಹ ವಿಷಯಗಳು ತಿಳಿದುಕೊಳ್ಳಬೇಕು ಎಂದು ಕೇಳಿದನು. ನಚಿಕೇತನಿಗೆ ಆಗ ಹನ್ನೊಂದು ವರ್ಷ – ಎಲ್ಲರೂ ಹಾಗಿರಬೇಕು – ಮನುಷ್ಯನು ಶರೀರವಾ ಅಥವಾ ಆತ್ಮ ಪದಾರ್ಥವಾ? ಎಂದು ಕೇಳಿದ.

ಕೆಲಸಕ್ಕೆ ಬರುವ ಮಾತುಗಳು ಮಾತನಾಡುವುದೇ ದೈವತ್ವ. ಉಪಂiಗಕರವಾದ ಮಾತುಗಳು ಧ್ಯಾನ ಮಾಡಿದರೇನೆ ಬರುತ್ತವೆ. ಆದ್ದರಿಂದ, ‘ಉಪಯೋಗಕರವಾದ ಧ್ಯಾನ’ ಮಾಡಿ. ಧ್ಯಾನ ಮಾಡಿ ಆತ್ಮವನ್ನು ಅನುಭವಿಸಿದವನೇ ದೇವನು. ಎಲ್ಲರ ಮಾತುಗಳನ್ನು ಕೇಳಿ ಮಾತನಾಡುವವನು ಪಂಡಿತನು ಮಾತ್ರವೇ, ಅದು ದಿವ್ಯತ್ವವಲ್ಲ.