“ಧ್ಯಾನ ಯುವಜನ”

ಧ್ಯಾನ ಇಲ್ಲದ ಯುವಕರು ದೆವ್ವ ಹಿಡಿದ ಯುವಕರು
ಧ್ಯಾನ ಇಲ್ಲದ ಯುವಕರು ದೇವರು ತಿರಸ್ಕರಿಸಿದ ಯುವಕರು
ಧ್ಯಾನ ಇಲ್ಲದ ಯುವಕರು ಭಯ ಪೀಡಿತವಾದ ಯುವಕರು

ಧ್ಯಾನದಲ್ಲಿರುವ ಯುವಕರು ಭಯರಹಿತ ಯುವಕರು
ಧ್ಯಾನದಲ್ಲಿರುವ ಯುವಕರು ನಿರ್ಭಯ ಯುವಕರು
ಧ್ಯಾನ ಇಲ್ಲದ ಯುವಕರ ಪಾಡು ಹೇಗಿರುತ್ತದೆ ಅಂದರೆ,
ಹುಲಿಗಳ ನಡುವಿನ ಜಿಂಕೆಯ ಹಾಗೆ
ಧ್ಯಾನದಲ್ಲಿರುವ ಯುವಕರ ಸ್ಥಿತಿ ಹೇಗೆ ಇರುತ್ತದೆ ಅಂದರೆ …
ಜಿಂಕೆಗಳ ನಡುವಿನ ಹುಲಿಯ ಹಾಗೆ

ಧ್ಯಾನವು ‘ಒಂದು’ ಇದ್ದಂತೆ, ಉಳಿದಿದ್ದೆಲ್ಲಾ ‘ಸೊನ್ನೆ’ಯ ಹಾಗೆ
ಒಂದು ಇಲ್ಲದ ಸೊನ್ನೆಗಳಿಗೆ ಎಂತಹ ಬದುಕು
ಒಂದರ ಜೊತೆಯಲ್ಲಿದ್ದರೇ ಸೊನ್ನೆಗಳಿಗೆ ಬದುಕು

ಚಿಕ್ಕ ವಯಸ್ಸಿನಲ್ಲಿ ಸ್ವಲ್ಪ ಧ್ಯಾನ ಸಾಕು
20 ವರ್ಷದ ಯುವಕನಿಗೆ 20 ನಿಮಿಷಗಳ ಧ್ಯಾನ ಸಾಕು
ಚಿಕ್ಕ ಪ್ರಮಾಣದ ಧ್ಯಾನ ಬೆಟ್ಟದಷ್ಟು ವರ

ಧ್ಯಾನ ವರವನ್ನು ಹೊಂದೋಣವೆ …?
ಆತ್ಮ ಅಭಯವನ್ನು ಪಡೆದುಕೊಳ್ಳೋಣವೆ…?
ಪ್ರಜ್ಞಾದೀಪವನ್ನು ಬೆಳಗಿಸಿಕೊಳ್ಳೋಣವೆ…?

ಬನ್ನಿ, ಬನ್ನಿ, ತಕ್ಷಣವೇ ಬನ್ನಿ
ಎರಡು ಕಣ್ಣುಗಳನ್ನೂ ಮುಚ್ಚಿಕೊಳ್ಳಿ … ಕೇವಲ 20 ನಿಮಿಷಗಳು
ಶ್ವಾಸದ ಮೇಲೆ ಗಮನ ಇಡೋಣ ಸಕಲವೂ ಹೊಂದೋಣ.
ಅಷ್ಟೇ … ಅಷ್ಟೇ … ಅಷ್ಟೇ …