“ಧ್ಯಾನ ನೇತ್ರ”

ಮನುಷ್ಯನಿಗೆ ನಾಲ್ಕು ಚಕ್ಷುಗಳಿರುತ್ತವೆ.

ಮೊದಲನೆಯದು ಚರ್ಮಚಕ್ಷುವು, ಎರಡನೆಯದು ಮನೋಚಕ್ಷುವು

ಮೂರನೆಯದು ದಿವ್ಯಚಕ್ಷುವು, ನಾಲ್ಕನೆಯದು ಜ್ಞಾನಚಕ್ಷುವು.

ಧ್ಯಾನನೇತ್ರ ಎಂದರೆ ದಿವ್ಯಚಕ್ಷುವು.

ಚಿತ್ತವೃತ್ತಿ ರಹಿತವಾದ ಸ್ಥಿತಿಯಲ್ಲಿ ವ್ಯಕ್ತವಾಗುವುದೇ ಧ್ಯಾನನೇತ್ರ.

ಧ್ಯಾನ ನೇತ್ರವೇ ಜ್ಞಾನ ನೇತ್ರಕ್ಕೆ ನಾಂದಿ.

ಧ್ಯಾನಚಕ್ಷುವು ವಿನಹ ಜ್ಞಾನಚಕ್ಷುವು ಅಸಂಭವ.

ಮನೋಚಕ್ಷುವು ಅರಳಿಸಿಕೊಂಡವರೇ ಕವೀಶ್ವರರು.

ಧ್ಯಾನಚಕ್ಷುವು ಅರಳಿಸಿಕೊಂಡವರೇ ಯೋಗೀಶ್ವರರು.

ಜ್ಞಾನಚಕ್ಷುವು ಅರಳಿಸಿಕೊಂಡವರೇ ಪುರುಷೋತ್ತಮರು, ಇಲ್ಲವಾದರೆ ಬುದ್ಧರು.

ಮಾನವನಿಗಿರುವ ಷಟ್‌ಚಕ್ರಗಳಲ್ಲಿ ಆರನೆಯ ಚಕ್ರ ಜ್ಞಾನನೇತ್ರ.

ಆಜ್ಞಾಚಕ್ರವೇ ಧ್ಯಾನಚಕ್ಷುವಿನ ಸ್ಥಾನ. ಅಂದರೆ, ಭ್ರೂಮಧ್ಯೆ.

ಈ ಧ್ಯಾನಚಕ್ಷುವು ಎಂಬುವ ದಿವ್ಯಚಕ್ಷುವು ಉತಜಿತವಾಗಬೇಕಾದರೆ ಆ ಸ್ಥಾನದ ಕೆಳಗೆ ಸ್ವಿಚ್ ಇದೆ. ಅದೇ ನಾಸಿಕ.

ನಾಸಿಕದಲ್ಲಿ ಕೆಳಗೆ ಮೇಲೆ ಪ್ರವಹಿಸುತ್ತಿರುವ ವಾಯು ಪ್ರವಾಹವನ್ನು ಗಮನಿಸುವುದೇ ಸ್ವಿಚ್ ಒತ್ತುವುದು ಎಂದರೆ. ಅದೇ ಆನಾಪಾನಸತಿ. ಆಗ ತಕ್ಷಣ ಧ್ಯಾನನೇತ್ರ ಉತ್ತೇಜಿತವಾಗುತ್ತದೆ.

ಶಿವನು ತ್ರಿನೇತ್ರನು, ಅಂದರೆ, ಪರಿಪೂರ್ಣವಾದ ದಿವ್ಯಚಕ್ಷುವು ಇರುವವನು, ಅಂದರೆ, ಪರಮ ಯೋಗೀಶ್ವರನು ಎಂದು ಅರ್ಥ.

ಭೂಮಿ ಮೇಲೆ ಹುಟ್ಟಿದ ಪ್ರತಿ ಮಾನವನೂ ತ್ರಿನೇತ್ರನಾಗಬೇಕು. ಅದೇ ಸ್ವಧರ್ಮ, ಅದೇ ಸ್ವತಂತ್ರ, ಅದೇ ಸ್ವರಾಜ್ಯ. ಆಗಲೇ ಸ್ವಾತಂತ್ರ್ಯ, ಆಗಲೇ ಸ್ವಯಂಭೂ. ಆಗಲೇ ಸ್ವಯಂಪ್ರಕಾಶ.

ಅದುವರೆಗೂ ನಾವು ಪರಾಧೀನರೇ, ನಾವು ಪರತಂತ್ರರೇ. ಅಲ್ಲಿಯುವರೆಗೂ ಕತ್ತಲೆಯ ರಾಜ್ಯವೇ; ಅದುವರೆಗೂ ಒಬ್ಬ ಕುರುಡ ಇನ್ನೊಬ್ಬ ಕುರುಡನಿಗೆ ದಾರಿ ತೋರಿಸಿದ ಹಾಗೆ, ಅದುವರೆಗೂ ಕುರುಡ ಎತ್ತು ಹೊಲದಲ್ಲಿ ಬಿದ್ದಹಾಗೆ; ಅದುವರೆಗೂ ’ಕತ್ತಿಯ ಮೇಲೆ ಕಸರತ್ತು ಮಾಡಿದ ಹಾಗೆ’.

ಮತ್ತೆ ಬೇಗ ಧ್ಯಾನ ಅಭ್ಯಾಸ ಪ್ರಾರಂಭಿಸೋಣವೇ ?

ಇನ್ನು ಒಂದು ಕ್ಷಣವಾದರೂ ಸಮಯ ವ್ಯರ್ಥ ಮಾಡುವುದು ಬೇಡ.

ಗುರಿ ತಿಳಿದುಕೊಂಡಿದ್ದೇವೆ, ಮಾರ್ಗ ತಿಳಿದುಕೊಂಡಿದ್ದೇವೆ, ಆದ್ದರಿಂದ, ಗಮನವನ್ನು ಹರಿಸೋಣ.