” ಧ್ಯಾನಮಹಾವಿಜ್ಞಾನ .. ಐನ್‌ಸ್ಟೀನ್ ಸಾಪೇಕ್ಷತಾ ಸಿದ್ಧಾಂತ “

“E = mc2” .. ಸಾಪೇಕ್ಷತಾ ಸಿದ್ಧಾಂತ

ವಿಶ್ವವಿಖ್ಯಾತ ಭೌತಶಾಸ್ತ್ರಜ್ಞರು

ಮತ್ತು

ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಸರ್ ಅಲ್ಬರ್ಟ್ ಐನ್‌ಸ್ಟೀನ್ ಮಹನೀಯರು

ಪ್ರಪಂಚದ ಮನುಕುಲಕ್ಕೆ ನೀಡಿದ ಮಹಾ ವೈಜ್ಞಾನಿಕ ಸೂತ್ರ!

“E = mc2” ಸಾಪೇಕ್ಷತಾ ಸಿದ್ಧಾಂತ ನಮಗೆ

“ನಿರ್ದಿಷ್ಟವಾದ ಕಾಂತಿವೇಗ C – (Velocity of light .. c = 3 x 10^5 KM / sec)ನಲ್ಲಿ

ಪ್ರಯಾಣಿಸಲ್ಪಟ್ಟ ಒಂದು ದ್ರವ್ಯರಾಶಿ m (mass) ..

ಶಕ್ತಿ E = (Energy) ಯಾಗಿ ರೂಪಾಂತರ ಹೊಂದುತ್ತದೆ”

ಎನ್ನುವ ಶಕ್ತಿ ವಿನಿಮಯ ಮಹಾಸೂತ್ರವನ್ನು ತಿಳಿಸುತ್ತದೆ.

ವಿಶ್ವವು ವೈಜ್ಞಾನಿಕ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದಂತಹ ಈ ಮಹಾಸೂತ್ರವನ್ನು ಆಧಾರವಾಗಿಟ್ಟುಕೊಂಡು

ಅಣುಶಕ್ತಿಯಿಂದ ಮೊದಲುಗೊಂಡು ಎಲಕ್ಟ್ರಾನಿಕ್, ಸೂಪರ್ ಕಂಪ್ಯೂಟರ್‌ಗಳು, ಗ್ರಹಾಂತರ ಸಂಶೋಧನೆಗಳವರೆಗೂ

ಆಧುನಿಕ ಪ್ರಪಂಚದಲ್ಲಿ ನಡೆದ ಆವಿಷ್ಕಾರಗಳು ಅನೇಕಾನೇಕ ..

ಅದೇ ಸ್ಫೂರ್ತಿಯಿಂದ ..

E = mc2 ಸಾಪೇಕ್ಷತಾ ಸಿದ್ಧಾಂತವನ್ನು “ವೈಜ್ಞಾನಿಕ ಆಧ್ಯಾತ್ಮಿಕತೆ” ಗೆ ಕೂಡಾ ಅನ್ವಯಿಸಿಕೊಂಡರೆ ..

ಕಾಂತಿ ಸದೃಶವಾದ ಸ್ಪಷ್ಟತೆ C = Clarity ಯನ್ನು ಹೊಂದಿದ .. ಸಜ್ಜನಸಾಂಗತ್ಯ-C1 + ಸ್ವಾಧ್ಯಾಯ-C2 ಗಳಿಂದ .. ಕೂಡಿದ

ಧ್ಯಾನ m – meditation

ಶಕ್ತಿಪ್ರದಾಯಕವಾದ ದಿವ್ಯಜ್ಞಾನಪ್ರಕಾಶ E= Enlightenment ಗೆ ದಾರಿಮಾಡಿಕೊಡಿತ್ತದೆ”

E = mc2

ದಿವ್ಯಜ್ಞಾನಪ್ರಕಾಶ (E) = ಧ್ಯಾನ (m) x ಸ್ವಾಧ್ಯಾಯದಿಂದ ಸ್ಪಷ್ಟತೆ (C1) x ಸಜ್ಜನ ಸಾಂಗತ್ಯದಿಂದ ಸ್ಪಷ್ಟತೆ (C2)

E = Enlightenment = ದಿವ್ಯಜ್ಞಾನಪ್ರಕಾಶ

m = meditation = ಧ್ಯಾನ

C=Clarity ಸ್ಪಷ್ಟತೆ

/\

ಸ್ವಾಧ್ಯಾಯದಿಂದ ಸ್ಪಷ್ಟತೆ-C1 ಸಜ್ಜನಂಗತ್ಯದಿಂದ ಸ್ಪಷ್ಟತೆ-C2

ಸಾಪೇಕ್ಷತಾ ಸಿದ್ಧಾಂತ ಮಂಡಿಸಿದ

ಭೌತಶಾಸ್ತ್ರಜ್ಞರಾದ ಸರ್ ಅಲ್ಬರ್ಟ್ ಐನ್‌ಸ್ಟೀನ್ ಮಹಾಶಯರಿಗೆ ಶತಕೋಟಿ ಪಿರಮಿಡ್ ಧ್ಯಾನ ವಂದನೆಗಳು