“ದೇವಾಲಯಗಳಲ್ಲಿ ಧ್ಯಾನಾಲಯಗಳು”

ಪ್ರತಿ ದೇವಾಲಯದಲ್ಲಿ ಒಂದು ಧ್ಯಾನಾಲಯ ಖಂಡಿತವಾಗಿ ಇರಲೇಬೇಕು

ಧ್ಯಾನಾಲಯ ’ಪಿರಮಿಡ್’ ಆಕಾರದಲ್ಲಿದ್ದರೆ ತುಂಬಾ ಒಳ್ಳೆಯದು

ಏಕೆಂದರೆ, ಪಿರಮಿಡ್‌ನಲ್ಲಿ ಮಾಡುವ ಧ್ಯಾನ ಮೂರುಪಟ್ಟು ಶಕ್ತಿವಂತವಾದದ್ದು. ಆದ್ದರಿಂದ,

ಒಟ್ಟು ಪ್ರತಿ ದೇವಾಲಯದಲ್ಲೂ ಒಂದು ಪಿರಮಿಡ್ ಧ್ಯಾನಾಲಯ ಬರಲೇಬೇಕು

ದೇವಾಲಯದಲ್ಲಿ ಭಕ್ತರೆಲ್ಲರೂ ಖಂಡಿತಾ ಧ್ಯಾನಾಭ್ಯಾಸ ಮಾಡಬೇಕು.

ಭಕ್ತರಾಗಿ ದೇವಾಲಯಗಳಲ್ಲಿ ಪವೇಶಿಸಿದವರು ’ಧ್ಯಾನಿಗಳಾಗಿ’ ಧ್ಯಾನಾಲಯಗಳಲ್ಲಿ

ತಯಾರಾಗಬೇಕು.

ಭಕ್ತರಿಗೆ ದೇವಾಲಯಗಳು ಧ್ಯಾನವನ್ನು ’ಕಾಣಿಕೆ’ಯಾಗಿ ನೀಡಬೇಕು

ಆ ಕಾಣಿಕೆ ಕೊಡಬೇಕಾದರೆ ದೇವಾಲಯಗಳಲ್ಲಿ ಧ್ಯಾನಾಲಯಗಳು ಇರಲೇಬೇಕು

ಭಕ್ತರೆಲ್ಲರೂ ಪ್ರತಿದಿನ ತಪ್ಪದೇ ಧ್ಯಾನ ಸಾಧನೆ ಮಾಡಬೇಕು

ಅಹಂ ಬ್ರಹ್ಮಾಸ್ಮಿ, ನಮ್ಮ ಶ್ವಾಸವೇ ನಮ್ಮ ಗುರುವು ಎಂದು ಭಕ್ತರೆಲ್ಲರೂ ತಿಳಿದುಕೊಳ್ಳಬೇಕು

ಪ್ರತಿ ದೇವಾಲಯದಲ್ಲೂ ಒಂದು ಧ್ಯಾನ ವಿದ್ಯಾ ಶಿಕ್ಷಕನು ತಪ್ಪದೇ ಇರಬೇಕು

ಪ್ರತಿ ದೇವಾಲಯದಲ್ಲೂ ಆತ್ಮ ವಿದ್ಯಾ, ಆತ್ಮ ಜ್ಞಾನ ಖಂಡಿತಾ ದಿನನಿತ್ಯಾ ಬೋಧಿಸಲ್ಪಡಬೇಕು

ಬಾಲ್ಯದಿಂದಲೇ ಎಲ್ಲರೂ ಧ್ಯಾನ ಮಾಡಬೇಕು.

ಧ್ಯಾನವೆಂದರೆ ಶ್ವಾಸದ ಮೇಲೆ ಗಮನ

ಧ್ಯಾನದಿಂದಲೇ ಪ್ರಜೆಗಳಿಗೆ ಆರೋಗ್ಯ ಲಭಿಸುತ್ತದೆ … ಆರೋಗ್ಯವೇ ಮಹಾಭಾಗ್ಯ.

ಧ್ಯಾನ ಮಾಡಿದರೆ ಆಸ್ಪತ್ರೆ ಖರ್ಚುಗಳು, ವೈದ್ಯರ ಶುಲ್ಕಗಳು, ಔಷಧಿ ಬಿಲ್ಲುಗಳು ಇರುವುದಿಲ್ಲ.

ಮನಸ್ಸು ಪ್ರಶಾಂತವಾಗಿದ್ದರೇನೆ, ಶರೀರ ಆರೋಗ್ಯಕರವಾಗುತ್ತದೆ

ಶ್ವಾಸದ ಮೇಲೆ ಗಮನ ಅಭ್ಯಾಸ ಮಾಡಿದರೇನೇ ಮನಸ್ಸು ಪ್ರಶಾಂತವಾಗಿರುತ್ತದೆ

ಮನಸ್ಸು ಸಮಾಧಾನವಾಗಿ, ಶಾಂತಿಯಿಂದ ಇದ್ದರೇನೆ ದೇಹ ಸಹ ಸಮಾಧಾನವಾಗಿರುತ್ತದೆ

ಧ್ಯಾನದಲ್ಲಿ ಪರಲೋಕಗಳನ್ನು ಕುರಿತು ಅನುಭವಪೂರ್ವಕವಾಗಿ ತಿಳಿದುಕೊಳ್ಳುತ್ತೇವೆ

ಇಹಲೋಕದಲ್ಲಿರುತ್ತಲೇ ಪರಲೋಕಗಳನ್ನು ಕುರಿತು ತಿಳಿದುಕೊಳ್ಳುವುದೇ ಆಧ್ಯಾತ್ಮಿಕ ಜೀವನ

ಶರೀರದಲ್ಲಿರುತ್ತಲೇ ಆತ್ಮವಾಗಿ ವಿಕಾಸ ಹೊಂದುವುದೇ ಆಧ್ಯಾತ್ಮಿಕ ಜೀವನ

ಸಂಸಾರದಲ್ಲಿರುತ್ತಾ ನಿರ್ವಾಣದಲ್ಲಿರುವುದೇ ಆಧ್ಯಾತ್ಮಿಕ ಜೀವನ

ಕಷ್ಟಗಳಲ್ಲಿರುತ್ತಲೇ ಧರ್ಮಬದ್ಧವಾಗಿ ಜೀವಿಸುವುದೇ ಆಧ್ಯಾತ್ಮಿಕ ಜೀವನ

’ಧರ್ಮ’ ಎಂದರೆ ಅಹಿಂಸೆ … ’ಅಧರ್ಮ’ ಎಂದರೆ ಹಿಂಸೆ

’ಹಿಂಸೆ’ ಎಂದರೆ ಪ್ರಾಣಿವಧೆ, ಪ್ರಾಣಿ ಭಕ್ಷಣೆ … ’ಅಹಿಂಸೆ’ ಎಂದರೆ ಸಸ್ಯಾಹಾರ

ಪ್ರತಿ ದೇವಾಲಯದಲ್ಲೂ ತಪ್ಪದೇ ಅಹಿಂಸೆಯನ್ನು ಕುರಿತು ಬೋಧಿಸಲ್ಪಡಬೇಕು

ಪ್ರತಿ ದೇವಾಲಯದ ಕರ್ತವ್ಯ ಸಸ್ಯಾಹಾರವನ್ನು ಕುರಿತು ತಪ್ಪದೇ ಬೋಧಿಸುವುದು

ದೇವಾಲಯಗಳೆಲ್ಲಾ ಧ್ಯಾನಾಲಯಗಳಾಗಲಿ !

ದೇವಾಲಯಗಳೆಲ್ಲಾ ಧರ್ಮಾಲಯಗಳಾಗಲಿ !!

ದೇವಾಲಯಗಳೆಲ್ಲಾ ಆತ್ಮವಿದ್ಯಾಲಯಗಳಾಗಲಿ !!!