“ತೆಲುಗಿನವರು ಜಗತ್ತಿಗೇ ಬೆಳಕು ನೀಡುವವರು”

ಪಿರಮಿಡ್ ಮಾಸ್ಟರ್ಸ್ ತುಂಬಾ ಬೆವರುಸುರಿಸಿ ಇಷ್ಟು ಜನ ಬುದ್ಧರನ್ನು ತಯಾರುಮಾಡಿದ್ದಕ್ಕೆ ತುಂಬಾ ಹೆಮ್ಮೆ ಪಡುತ್ತಿದ್ದೇನೆ. ಚಂದ್ರನ ಮೇಲೆ ಹೆಜ್ಜೆ ಇಟ್ಟ ಆಕಾಶಯಾನಿಗಿಂತಾ ಮತ್ತು ಶಾಸ್ತ್ರಜ್ಞರಿಗಿಂತಾ ಒಬ್ಬ ಬುದ್ಧನು ಶ್ರೇಷ್ಠನೆಂದು ತಿಳಿಸಿದರು. ಆತ್ಮ ತಾಯಿಯ ಹಾಗೆ. ಮನಸ್ಸು ಮಗುವಿನ ಹಾಗೆ. ತಾಯಿಯ ಹತ್ತಿರ ಇರುವ ಮಗು ಹೇಗೆ ಪ್ರಶಾಂತವಾಗಿ ಇರಬಲ್ಲದೊ; ಹಾಗೆಯೇ ಮನಸ್ಸು ಆತ್ಮದ ಹತ್ತಿರವಿದ್ದರೇನೆ ಮನುಷ್ಯ ಆನಂದವಾಗಿ ಇರಬಲ್ಲವನಾಗುತ್ತಾನೆ. ಆತ್ಮ ಮನಸ್ಸುಗಳ ಮಿಲನವೇ ಯೋಗ. ಅದೇ ಪಿರಮಿಡ್ ಧ್ಯಾನಿಗಳು ಮಾಡುತ್ತಿರುವ ಯಜ್ಞ . ಇದಕ್ಕೆ ತೆಲುಗಿನವರು ಮುಂದೆ ಇದ್ದು ಪ್ರಪಂಚಕ್ಕೆ ಬೆಳಕನ್ನು ನೀಡುತ್ತಿದ್ದಾರೆ … ಅದಕ್ಕೇ ‘ತೆಲುಗಿನವರು ಜಗತ್ತನ್ನು ಬೆಳಗುತ್ತಿರುವವರು’.