“ಜೈ ಧ್ಯಾನಜಗತ್ – ಜೈ ಜೈ ಪಿರಮಿಡ್ ಮಾಸ್ಟರ್‌ಗಳ ಜಗತ್”

 

“ಕಾರ್ಯದ ಹಿಂದೆ ಇರುವುದು ಕಾರಣ”

ಕಾರಣದ ಹಿಂದೆ ಇರುವುದು ಮಹಾಕಾರಣ
ಮಹಾಕಾರಣದ ಹಿಂದೆ ಇರುವುದು ಮಹಾಮಹಾಕಾರಣ
ಮಹಾಮಹಾ ಕಾರಣಾತ್ಮಕವಾದದ್ದೇ .. “ಆತ್ಮ-ಚೈತನ್ಯ ಸಾಮ್ರಾಜ್ಯ”
ಆ ಆತ್ಮ-ಚೈತನ್ಯ ಸಾಮ್ರಾಜ್ಯದಲ್ಲಿ ನಿರಂತರ ತೇಲಾಡುವುದೇ .. “ಆಧ್ಯಾತ್ಮಿಕತೆ”
ಆಧ್ಯಾತ್ಮಿಕತೆ ಇಲ್ಲದ ಪ್ರಾಪಂಚಿಕತೆ .. ಚುಕ್ಕಾಣಿ ಇಲ್ಲದೆ ಸಮುದ್ರದ ನಡುವೆ ಇರುವ ನಾವಿಕನಂತೆ
ಆಧ್ಯಾತ್ಮಿಕತಾ ಶೂನ್ಯವಾದ ಪ್ರಾಪಂಚಿಕತೆಯು ಅಸಂಗತವಾದದ್ದು .. ಅಲ್ಲೋಲಕಲ್ಲೋಲ … ಅಗಮ್ಯಗೋಚರ
ಆಧ್ಯಾತ್ಮಿಕತೆಯಿಂದ ಕೂಡಿದ ಪ್ರಾಪಂಚಿಕತೆಯೆಲ್ಲಾ ಸರಿಯಾದದ್ದು .. ಶಾಂತಿಮಯ .. ಗಮ್ಯಗೋಚರ

“ಯದ್ಭಾವಂ ತದ್ಭವತಿ”

ಶರೀರದ ಹುಟ್ಟು, ಬೆಳವಣಿಗೆ ಮತ್ತು ಅಂತ್ಯ ಇವುಗಳೆಲ್ಲಾ ಕೇವಲ ದೃಶ್ಯಮಾನ
ಅಂದರೆ .. ಅದು “ಪರದೆಯ ಮುಂದೆ ತೊಗಲು ಬೊಂಬೆಯಾಟ”ದಂತಹುದು
ತೆರೆಯ ಹಿಂದೆ ಇರುವುದು .. ಆಡಿಸುವುದು ಮಾನಸಿಕವಾದರೆ .. ಅದೇ ಮಹಾಕಾರಣ
ಮನಸ್ಸು ಮಹಾಕಾರಣವಾದರೇ .. ಶರೀರ ಎನ್ನುವುದು ಮಹಾಕಾರ್ಯ
ಮಹಾಕಾರಣವಾದ ಮನಸ್ಸಿನಲ್ಲಿರುವ ಅಲ್ಲೋಲಕಲ್ಲೋಲಗಳೇ .. ಪ್ರಪಂಚದಲ್ಲಿರುವ ಅಲ್ಲೋಲಕಲ್ಲೋಲಗಳು
ಮಹಾಕಾರಣವಾದ ಮನಸ್ಸು ಶಾಂತವಾದರೆ .. ಪ್ರಪಂಚವು ಕೂಡ ಶಾಂತವಾಗುತ್ತದೆ

“ಪ್ರಾಪಂಚಿಕತೆ” .. “ಆಧ್ಯಾತ್ಮಿಕತೆ”

ಪಂಚಭೂತಗಳಿಂದ ಕೂಡಿರುವುದೇ .. “ಭೌತಿಕ ಶರೀರ”
ಪಂಚಭೂತಗಳ ಹಿಂದೆ ಇರುವ ಮೂಲಭೂತ ಪ್ರಾಣಪ್ರವಾಹಗಳು “ಪಂಚತನ್ಮಾತ್ರೆಗಳು”
ಪಂಚತನ್ಮಾತ್ರೆಗಳು ಕಾರಣೀಭೂತಗಳಾದರೆ ಪಂಚಭೂತಗಳು ಕಾರ್ಯರೂಪಗಳು
“ಪ್ರಾಪಂಚಿಕತೆ” – “ಆಧ್ಯಾತ್ಮಿಕತೆ” .. ಈ ಎರಡರ ಮಧ್ಯೆ ಇರುವುದೇ ಮಹಾಕಾರಣವಾದ “ಮನಸ್ಸು”
ಮಹಾಕಾರಣ ಮನಸ್ಸಿಗೆ ಪ್ರತೀಕನಾದವನು .. “ಅರ್ಜುನ”
ಮಹಾಮಹಾಕಾರಣ ಬುದ್ಧಿಗೆ ಪ್ರತೀಕನಾದವನು .. “ಶ್ರೀಕೃಷ್ಣನು”
ಮನಸ್ಸಿಗೆ ಸಾರಥಿಯಾಗಿರುವುದು “ಬುದ್ಧಿ” .. ಅಂದರೆ “ಶ್ರೀಕೃಷ್ಣ”
“ಮನಸ್ಸು” ಎನ್ನುವುದು ಪಂಚೇಂದ್ರಿಯ ವಿಷಯ ಜನಿತವಾದದ್ದು. ಆದರೆ,
“ಬುದ್ಧಿ” ಎನ್ನುವುದು ಮಾತ್ರ ಆತ್ಮಜನಿತವಾದದ್ದು
ಪ್ರಾಪಂಚಿಕತೆಗೆ ಕನ್ನಡಿ ಹಿಡಿಯುವುದು ಮನಸ್ಸು .. ಆಧ್ಯಾತ್ಮಿಕತೆಗೆ ಕನ್ನಡಿ ಹಿಡಿಯುವುದು ಬುದ್ಧಿ
ಮನಸ್ಸು’ನಿಂದ ’ಬುದ್ಧಿ’ಯ ಕಡೆ .. ಮತ್ತು ’ಪ್ರಾಪಂಚಿಕತೆ’ಯಿಂದ ’ಆಧ್ಯಾತ್ಮಿಕತೆ’ಯ ಕಡೆ
ಮಾಡುವ ಮಹಾಪ್ರಯಾಣವೇ “ಆಧ್ಯಾತ್ಮಿಕತೆ”

ಮಾನವಜೀವನ = ಪ್ರಾಪಂಚಿಕ ಜೀವನ + ಆಧ್ಯಾತ್ಮಿಕ ಜೀವನ

ಪ್ರಾಪಂಚಿಕತೆಯಲ್ಲಿ ಇರುತ್ತಲೇ ಆಧ್ಯಾತ್ಮಿಕತೆಯಲ್ಲಿ ವಿರಾಜಿಸಬೇಕು
ಧ್ಯಾನ ಸಾಧನೆಯಿಂದಲೇ ಉನ್ನತವಾದ ಈ “ದ್ವಿ ಅಶ್ವಾರೋಹಣ” ಎನ್ನುವುದು ಸುಸಾಧ್ಯವಾಗುತ್ತದೆ
ಇದೇ “ಎರಡು ಕುದುರೆಗಳ ಮೇಲಿನ ಸವಾರಿ” ಎಂದರೆ
“ಪದ್ಮಪತ್ರಮಿವಾಂಭಸ” ಎಂದರೆ “ತಾವರೆಯ ಎಲೆಯ ಮೇಲಿರುವ ನೀರಹನಿ”
“ತಾವರೆಯ ಎಲೆಯ ಮೇಲಿರುವ ನೀರಹನಿ”ಯಂತೆ ಒಂದು ಕಡೆ ಅಶಾಶ್ವತ ತತ್ವದಲ್ಲಿ ನಿವಸಿಸುತ್ತಲೇ .. ಮತ್ತೊಂದು ಕಡೆ ಶಾಶ್ವತ ತತ್ತ್ವದಲ್ಲಿ ಜೀವಿಸಬೇಕು
ಪ್ರಾಪಂಚಿಕತೆಯಲ್ಲಿ ಸುಃಖ-ದುಃಖಗಳು, ಸೋಲು-ಗೆಲವುಗಳು, ಮಾನ-ಅವಮಾನಗಳು ಪ್ರಕೃತಿ ಸಹಜ
ಅದೇ ವಿಧವಾಗಿ ಆಧ್ಯಾತ್ಮಿಕತೆಯಲ್ಲಿ ನಿರಂತರ ಆನಂದ ಎನ್ನುವುದು ಮಹಾಸಹಜ
ಲಕ್ಷಾಂತರ ಸಂಖ್ಯೆಯಲ್ಲಿರುವ “ಅದ್ವೈತಾನುಭವಯೋಧರು – ಪಿರಮಿಡ್ ಮಾಸ್ಟರ್ಸ್” ಎಲ್ಲರೂ ಮಹಾ ಮಹಾಧನ್ಯರು
ಇನ್ನು ಉಳಿದ ಕೋಟ್ಯಾಂತರ ಮಾನವರೆಲ್ಲರೂ ಇನ್ನೊಂದು ದಶಕದ ಕಾಲದಲ್ಲೇ ಪಿರಮಿಡ್ ಮಾಸ್ಟರ್‌ಗಳಾಗಿ ಆಗಲಿದ್ದಾರೆ!
“ಧ್ಯಾನಜಗತ್” ಆಹ್ವಾನ .. “ಪಿರಮಿಡ್ ಮಾಸ್ಟರ್‌ಗಳ ಜಗತ್”ಗೆ ಆಹ್ವಾನ

“14 ದಿನಗಳ ಕಾಲ”

ಡಿಸೆಂಬರ್ 18 ರಿಂದ 31ರವರೆಗೆ “ಕೈಲಾಸಪುರಿ” .. ಕಡ್ತಾಲ್ ಗ್ರಾಮ, ಮಹಬೂಬ್‌ನಗರ್ ಜಿಲ್ಲೆಯಲ್ಲಿ ನಡೆಯಲಿರುವ “ಧ್ಯಾನಮಹಾಚಕ್ರ -5ಧ್ಯಾನಮಹೋತ್ಸವಗಳ” ಸಂದರ್ಭದಲ್ಲಿ
ಎಲ್ಲರಿಗೂ ಇದೇ ಆಹ್ವಾನಪತ್ರಿಕೆ

ಜೈ ಅಹಿಂಸಾ ಜಗತ್! ಜೈ ಶಾಕಾಹಾರ ಜಗತ್!! ಜೈ ಧ್ಯಾನಜಗತ್!!!!