“ಗುರುವಿನ ಮುಖೇನ ಬರುವುದೆಲ್ಲವೂ ನಮ್ಮ

ಅಂತರಾತ್ಮ ಪ್ರಬೋಧಗಳೆ”

 

ಜೀವನದಲ್ಲಿ ನಮಗೆ ಎದುರಾಗುವ ಪ್ರತಿಯೊಂದು ಸಮಸ್ಯೆಗೂ ತಕ್ಕ ಪರಿಹಾರ ಇದ್ದೇ ಇರುತ್ತದೆ! ಆ ಪರಿಹಾರವು ಸಹ .. ನಿಧಾನವಾಗಿ ಹುಡುಕಿದರೆ .. ನಮ್ಮ ಅಂತರಂಗದಲ್ಲೇ ಅಡಗಿರುತ್ತದೆ ಹೊರತು ಹೊರಗೆ ಬೇರೆಲ್ಲೂ ಇರುವುದಿಲ್ಲ! ನಿಜಕ್ಕೂ ಹೊರಗಿನವರ‍್ಯಾರೂ ನಮ್ಮ ಸಮಸ್ಯೆಯನ್ನು ಪರಿಹರಿಸಲಾರರು.

ನಮಗೆದುರಾಗುವ ಪ್ರತಿ ಸಮಸ್ಯೆಯನ್ನು ಕೂಲಂಕಷವಾಗಿ ಗಮನಿಸಿದರೆ .. ನಮ್ಮೊಳಗಿಂದ ಒಂದು ಪ್ರಶ್ನೆ ಉದಯಿಸುವಂತೆ ಮಾಡುತ್ತದೆ! ಆ ಪ್ರಶ್ನೆಯೇ .. ನಮ್ಮ ಸಮಸ್ಯೆಗೆ ಬೇಕಾದ ಉತ್ತರವನ್ನು ಕೂಡಾ ಹುಡುಕಿಕೊಡುತ್ತದೆ! ಅದರಿಂದಲೇ .. ಸಮಸ್ಯೆಗಳು ಬಂದಾಗಲೆಲ್ಲಾ ನಮ್ಮ ಮನಸ್ಸಿನೊಳಗಿನಿಂದ ಎಷ್ಟೆಷ್ಟೋ ಪ್ರಶ್ನೆಗಳು ಉದ್ಭವಿಸುತ್ತಾ ಇರುತ್ತವೆ.

ಯಾವಾಗ ಅವುಗಳಿಗೆಲ್ಲಾ ನಮ್ಮ ಅಂತರಂಗದೊಳಗಿನಿಂದಲೇ ನಮಗೆ ಸರಿಯಾದ ಉತ್ತರಗಳು ಲಭಿಸುತ್ತವೆಯೋ .. ಆಗ ನಮ್ಮ ಚಿತ್ತ ಶಾಂತಗೊಂಡು .. ನಾವು ಮಾನಸಿಕ ತೊಳಲಾಟದಿಂದ ಹೊರಬಂದು .. ಆ ಸಮಸ್ಯೆಯ ಪರಿಹಾರದ ಕಡೆಗೆ ನಮ್ಮ ಭೌತಿಕಪರವಾದ ಕೆಲಸಗಳನ್ನು ಶುರುಮಾಡುತ್ತೇವೆ. ಹೀಗೆ ಸಮಾಧಾನಗೊಂಡ ಮನಸ್ಸಿನೊಂದಿಗೆ ಭೌತಿಕಪರವಾದ ಕೆಲಸಗಳನ್ನು ಸಮರ್ಥವಾಗಿ ಕೈಗೊಂಡಾಗ ಆ ಸಮಸ್ಯೆಗೆ ಸಂಪೂರ್ಣವಾದ ಮತ್ತು ಅದ್ಭುತವಾದ ಪರಿಹಾರ ತಪ್ಪದೇ ಲಭಿಸುತ್ತದೆ.

ಚಿಕ್ಕ ಚಿಕ್ಕ ಸಮಸ್ಯೆಗಳಿಗೆ ಚಿಕ್ಕ ಚಿಕ್ಕ ಪರಿಹಾರಗಳು ಮತ್ತು ದೊಡ್ಡ ದೊಡ್ಡ ಸಮಸ್ಯೆಗಳಿಗೆ ದೊಡ್ಡ ದೊಡ್ಡ ಪರಿಹಾರಗಳ ಅಗತ್ಯವಿರುತ್ತದೆ. ಚಿಕ್ಕ ಸಮಸ್ಯೆಗಳಿಗೆ ನಮಗೆ ಹೆಚ್ಚಾಗಿ ಧೈರ್ಯದ ಅಗತ್ಯವಿಲ್ಲದಿದ್ದರೂ .. ದೊಡ್ಡ ಸಮಸ್ಯೆಗಳನ್ನು ಮಾತ್ರ ತಕ್ಕ ಧೈರ್ಯಸ್ಥೈರ್ಯಗಳಿಂದ ಎದುರಿಸಬೇಕು. ಚಿಕ್ಕ ಸಮಸ್ಯೆಗಳನ್ನು ಪರಿಹರಿಸಲು ನಮಗೆ ಸಾಧಾರಣ ಭೌತಿಕಪರವಾದ ಕೆಲಸಗಳು ಸಾಕು .. ಆದರೆ ದೊಡ್ಡಸಮಸ್ಯೆಗಳ ಪರಿಹಾರಕ್ಕೆ ಮಾತ್ರ“ಆತ್ಮಶಕ್ತಿ” ತುಂಬಾ ಅಗತ್ಯ.

ಒಂದು ವೇಳೆ ನಮಗಿಂತ ಹೆಚ್ಚು ಆತ್ಮಶಕ್ತಿಯನ್ನು ಹೊಂದಿರುವ ಸರಿಯಾದ ಗುರುವು ನಮಗೆ ದೊರಕಿದರೆ .. ದೊಡ್ಡ ಸಮಸ್ಯೆಗಳಿಗೇ ಅಲ್ಲದೆ ಅತಿ ಚಿಕ್ಕ ಸಮಸ್ಯೆಗಳ ಪರಿಹಾರಕ್ಕೆ ಕೂಡಾ ಅವರಿಂದ ನಾವು ಸಹಕಾರವನ್ನು ಕೋರಬಹುದು.

ಆದರೆ .. ಇಲ್ಲಿ ನಿಜಕ್ಕೂ ’ಸಮಸ್ಯೆ’ಯೆಂದರೆ .. ಯಾರಿಗೂ ಸರಿಯಾದ ಗುರು ದೊರೆಯದೇ ಇರುವುದು. ಇಂತಹ ಕ್ಲಿಷ್ಟಪರಿಸ್ಥಿತಿಯಲ್ಲಿ ನಾವು ಹೊರಗೆ ಯಾರೆಂದರೆ ಅವರನ್ನು “ಗುರುಗಳು” ಎಂದು ನಂಬದೇ .. ಧ್ಯಾನದಿಂದ ಶಾಸ್ತ್ರೀಯ ಪದ್ಧತಿಯಲ್ಲಿ ನಮ್ಮ ಅಂತರಂಗಕ್ಕೆ ಪ್ರಯಾಣಮಾಡುತ್ತಾ, ನಮ್ಮ “ಅಂತರಾತ್ಮ” ಎನ್ನುವ ಗುರುವನ್ನು ಆಯ್ಕೆ ಮಾಡಿಕೊಳ್ಳಬೇಕು. ನಿರಂತರ ಧ್ಯಾನಸಾಧನೆಯಿಂದ ಆ “ಅಂತರಾತ್ಮ”ದಿಂದಲೇ ಅನುಸಂಧಾನ ಹೊಂದುತ್ತಾ .. ಆ “ಅಂತರಾತ್ಮ”ದಿಂದಲೇ ಸಂದೇಶಗಳು ಪಡೆದುಕೊಳ್ಳಬೇಕು. ಒಂದು ವೇಳೆ ನಮ್ಮ ಅದೃಷ್ಟ ಚೆನ್ನಾಗಿದ್ದು ನಮ್ಮ ಅಂತರಾತ್ಮಕ್ಕೆ ಪ್ರತಿರೂಪವಾದ “ಗುರುವು” ಬಾಹ್ಯ ಪ್ರಪಂಚದಲ್ಲಿ ಲಭಿಸಿದರೆ .. ಆಗ ನಮಗೆ ನಮ್ಮ ಅಂತರಾತ್ಮದೊಂದಿಗೆ ಹೆಚ್ಚಾಗಿ ಕೆಲಸವಿರುವುದಿಲ್ಲ.

ಹೀಗೆ ಲಭಿಸಿದ ಅಂತರಾತ್ಮಕ್ಕೆ ಪ್ರತಿರೂಪವಾದ ನಿಜವಾದ ಗುರು ನಮ್ಮ ಅಂತರಾತ್ಮದ ಬಾಹ್ಯರೂಪವೇ ಆದ್ದರಿಂದ ಅಂತಹ ಗುರುವಿನ ಬೋಧನೆಗಳು ನಮಗೆ ಅರ್ಥವಾದರೂ ಆಗದಿದ್ದರೂ ಸರಿ, ಅದಕ್ಕೆ ಪ್ರತ್ಯುತ್ತರ ಹೇಳದೆ ಕೆಲಸ ನಿರ್ವಹಿಸಬೇಕಾದ್ದೇ!! ಏಕೆಂದರೆ ಗುರುವಿನ ಮೂಲಕ ಬರುವುದೆಲ್ಲಾ ನಮ್ಮ ಅಂತರಾತ್ಮ ಪ್ರಬೋಧಗಳೇ ಆದ್ದರಿಂದ ಇಂತಹ ಗುರುವಿನ ಬೋಧನೆಗಳು ನಮಗೆ .. ನಮ್ಮ ಸತ್ವರ ಜ್ಞಾನೋದಯಕ್ಕೂ, ನಮ್ಮ ತಕ್ಷಣದ ಉತ್ತರಗಳಿಗೂ .. ಮತ್ತೆ ನಮ್ಮ ತಕ್ಷಣದ ಪರಿಹಾರಗಳಿಗೂ ಹತ್ತಿರದ ಮಾರ್ಗವಾಗಿ ನಿಲ್ಲುತ್ತದೆ.

“ಧ್ಯಾನ” ನಮ್ಮಲ್ಲಿರುವ ಆತ್ಮಶಕ್ತಿಯನ್ನು ಹೆಚ್ಚಿಸಿ ಸಮಸ್ಯೆಗಳನ್ನು ಎದುರಿಸಬಲ್ಲ ಸಾಮರ್ಥ್ಯವನ್ನು, ಮತ್ತು ಬುದ್ಧಿ ಕುಶಲತೆಯೊಂದಿಗೆ ನಮ್ಮ ಸಮಸ್ಯೆಗಳನ್ನು ಸಾವಧಾನವಾಗಿ ಎದುರಿಸಬಲ್ಲ ಸ್ಥಿರಚಿತ್ತವನ್ನು ನೀಡುತ್ತದೆ. ಅದರಿಂದ ನಾವು ನಮಗೆ ಹತ್ತಿರದಲ್ಲಿರುವ ಭೌತಿಕಪರವಾದ ಸಂಪನ್ಮೂಲಗಳ ಜೊತೆಗೆ ನಮ್ಮ ಆತ್ಮಕ್ಕೆ ಇರುವಂತಹ ಅನಂತ ಶಕ್ತಿಗಳನ್ನು ಕೂಡ ಕ್ರೋಢೀಕರಣಗೊಳ್ಳಿಸಿ .. ಸಮಸ್ಯೆಯನ್ನು ಮತ್ತಷ್ಟು ಸಮರ್ಥವಾಗಿ ಎದುರಿಸಬಲ್ಲೆವು. ಆಗ ಸೋಲು-ಗೆಲುವಿನ ವಿಷಯ ಪಕ್ಕಕ್ಕಿಟ್ಟರೆ .. “ನಿಜಕ್ಕೂ ಸಮಸ್ಯೆಯ ಕಡೆಗೆ ನಾವು ಯಾವ ರೀತಿಯಲ್ಲಿ ಅರಿವನ್ನು ಗಳಿಸಿದ್ದೇವೆ” ಎನ್ನುವುದರ ಮೇಲೆ “ಫಲಿತ” ಎನ್ನುವುದು ಆಧಾರಪಟ್ಟಿರುತ್ತದೆ.

ಇಲ್ಲಿ ನಾವು ತಿಳಿದುಕೊಳ್ಳಬೇಕಾದ ಪರಮಸತ್ಯವೇನೆಂದರೆ .. ಯಾವ ಗುರುವು ಕೂಡಾ ಬೇರೆ ಯಾರ ಸಮಸ್ಯೆಯನ್ನೂ ತನ್ನ ಹೆಗಲ ಮೇಲೆ ಹಾಕಿಕೊಳ್ಳುವುದಿಲ್ಲ. ಆದರೆ .. ಆ ಸಮಸ್ಯೆಗಳ ಮೇಲೆ ಶಾಸ್ತ್ರೀಯ ದೃಕ್ಪಥವನ್ನು ಏರ್ಪಡಿಸುತ್ತಾರೆ; ಬೇಕಾದ ಧೈರ್ಯ ಹೇಳುತ್ತಾರೆ! ಸಮಸ್ಯೆಗಳು ಮಾತ್ರ ಅವರಿಗೆ ಅವರೇ ಪರಿಹರಿಸಿಕೊಳ್ಳಬೇಕು. ಏಕೆಂದರೆ, ನಮ್ಮ ಸಮಸ್ಯೆಗಳ ಯುದ್ಧಗಳು ನಮಗಿರುವಂತೆ .. ಗುರುಗಳಿಗೂ ಕೂಡಾ ಅವರ ಸಮಸ್ಯೆಗಳ ಯುದ್ಧಗಳು ಅವರ ಪರಿಧಿಯಲ್ಲಿ ಅವರಿಗೂ ಇರುತ್ತವೆ. “ಜೀವನ”ವೆಂದರೆ “ಒಂದು ಕ್ರೀಡಾರಂಗದಂತಹ ಯುದ್ಧರಂಗ!” ಅದಕ್ಕೆ ಆದಿ, ಅಂತ್ಯವಿಲ್ಲ! ಅಲ್ಲಿ ಅವರವರೇ ಒಂಟಿಯಾಗಿ ಹೋರಾಡಲೇಬೇಕು!

ಆತ್ಮಜ್ಞಾನ ಇಲ್ಲದವರಿಗೆ “ಜೀವನ”ವೆಂದರೆ “ಒಂದು ದುರ್ಭರವಾದ .. ಭೀಭತ್ಸ್ಯವಾದ ಯುದ್ಧ”ದಂತೆ ಕಾಣಿಸುತ್ತದೆ, ಮತ್ತು ಅದೇ ಜೀವನ ಒಬ್ಬ ಆತ್ಮಜ್ಞಾನಿಗೆ “ತನ್ನ ಆತ್ಮೋನ್ನತಿಗೋಸ್ಕರ ಆಡುವ ಒಂದು ಮಹಾಕ್ರೀಡೆ”ಯಂತೆ ಅನಿಸುತ್ತದೆ. ಯಾವಾಗ, ನಾವು ಪೂರ್ತಿ ಪ್ರಾಪಂಚಿಕತೆಯಲ್ಲಿ ಬಿದ್ದು ಆತ್ಮಜ್ಞಾನ ಲೋಪದಿಂದ ಕೂಡಿ “ಜೀವನ ಒಂದು ಆಟ” ಎನ್ನುವ ವಿಷಯ ಮರೆಯುತ್ತೇವೋ .. ಆಗ ನಮಗೆ ಎದುರಾಗುವ ಸಮಸ್ಯೆಗಳ ಸವಾಲುಗಳು ನಮಗಿಂತ ದೊಡ್ಡದಾಗಿ ಭೂತಗಳಂತೆ ನಮ್ಮನ್ನು ಭಯಪಡಿಸುತ್ತದೆ. ಅದೇ ನಾವು ಸರಿಯಾದ ಆಧ್ಯಾತ್ಮಿಕ ಮಾರ್ಗದಲ್ಲಿ ಪಯಣಿಸುತ್ತಾ ಆತ್ಮಜ್ಞಾನಪ್ರಕಾಶಕರಾಗಿ ಬದಲಾಗಿ ಸಮಸ್ಯೆಗಳಿಗೆ ಸರಿಯಾದ ಅರಿವಿನಿಂದ ವರ್ತಿಸಿದರೆ .. ಇನ್ನು ಸಮಸ್ಯೆಗಳು ನಮಗಿಂತ ಚಿಕ್ಕದಾಗಿ ಬದಲಾಗಿ ಅವುಗಳಿಗೆ ಪರಿಹಾರಗಳು ಸುಲಭವಾಗಿ ದೊರೆಯುತ್ತವೆ.

“ನಾನು ಸ್ವರ್ಗಾಧಿಪತಿಯಾದ ದೇವರ ಕುಮಾರನು” ಎನ್ನುತಾರೆ ಜೀಸಸ್. ಅಂದರೆ, ನಾನು ಸ್ವರ್ಗ ನಿಯಮಗಳೊಂದಿಗೆ ಕೂಡಿರುವ ಒಬ್ಬ ಗುರುವಿನ ಶಿಷ್ಯ ಎಂದು ತಮ್ಮ ಬಗ್ಗೆ ಹೇಳಿಕೊಳ್ಳುತ್ತಾರೆ.

ಇಲ್ಲಿ “ಸ್ವರ್ಗ”ವೆಂದರೆ ಒಂದು ಪ್ರದೇಶ, ಅಥವಾ ಸ್ಥಳವಲ್ಲ.” ಸ್ವರ್ಗ”ವೆಂದರೆ ಆತ್ಮದ ಸ್ಥಿತಿ! “ಗುರು” ಎಂದರೆ ಸ್ವರ್ಗಸ್ಥಿತಿಯಲ್ಲಿ ಇರುವ ಒಬ್ಬ ಪುರುಷೋತ್ತಮನು! “ಸ್ವರ್ಗ”ವೆಂದರೆ ಎಲ್ಲಾ ಆನಂದವೇ. ಯಾರು ತಮ್ಮ ಅಂತರಾತ್ಮಕ್ಕೆ ಪ್ರತಿರೂಪವಾದ ಗುರುವಿನೊಂದಿಗೆ ಸದಾ ಇರುತ್ತಾರೋ ಅವರು ಸ್ವರ್ಗದಲ್ಲಿದ್ದಂತೆ!

ನಮ್ಮ ಅಂತರಾತ್ಮಕ್ಕೆ ಪ್ರತಿರೂಪವಾದ ಸರಿಯಾದ “ಗುರು”ವೆಂದರೆ ಸ್ವರ್ಗಕಲೆಯನ್ನು ಚೆನ್ನಾಗಿ ಉಪಾಸನೆ ಮಾಡಿದ ಸ್ವರ್ಗಾಧಿಪತಿಯಾದ್ದರಿಂದ, ನಾವೆಲ್ಲಾ ಕೂಡಾ ಸ್ವರ್ಗಾಧಿಪತಿಯ ಕುಮಾರರಂತೆ ಇರೋಣ .. ಮತ್ತು ನಮ್ಮ ಶ್ವಾಸರೂಪದಲ್ಲಿರುವ ನಮ್ಮ ಗುರುವಿನೊಂದಿಗೆ ಇದ್ದು ನಮ್ಮ ಸಮಸ್ಯೆಗಳನ್ನು ನಾವೇ ಪರಿಹರಿಸಿಕೊಳ್ಳೋಣ.