“ಗುರುದೇವರುಗಳೆಲ್ಲರಿಗೂ ಪ್ರಣಾಮಗಳು”

 

“ಗುರು ಪೂರ್ಣಿಮೆ”ಯನ್ನು
“ವ್ಯಾಸ ಪೂರ್ಣಿಮೆ” ಎಂದು ಸಹ ಹೇಳುತ್ತಾರೆ
ಶ್ರೀ ವೇದವ್ಯಾಸರು .. ಆದಿಗುರುಗಳಲ್ಲಿ ಅತ್ಯಂತ ವಿಶಿಷ್ಟಸ್ಥಾನವನ್ನು ಏರಿದವರು
ಆದ್ದರಿಂದಲೇ, ಗುರುಪೂರ್ಣಿಮೆ “ವ್ಯಾಸ ಪೂರ್ಣಿಮೆ”ಯಾಗಿ ವರ್ಣಿಸಲಾಗಿದೆ
“ವ್ಯಾಸ” ಅಂದರೆ “ವ್ಯಾಪ್ತವಾಗುವುದು”
ಏನು ವ್ಯಾಪ್ತವಾಗಬೇಕು?
ನಮ್ಮ ವಿವೇಕ ಎನ್ನುವುದು ವ್ಯಾಪ್ತಿ ಆಗಬೇಕು ..
ನಮ್ಮ ಕರುಣಾ ಹೃದಯ ಎನ್ನುವುದು ವ್ಯಾಪ್ತಿ ಹೊಂದಬೇಕು ..
ನಮ್ಮ ಆತ್ಮವಿಜ್ಞಾನ ಎನ್ನುವುದು ವ್ಯಾಪ್ತಿ ಹೊಂದಬೇಕು ..
“ವಿವೇಕ” ಅಂದರೆ ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂದು ಶಾಸ್ತ್ರೀಯವಾಗಿ ಹೇಳುವುದು.
“ವಿವೇಕ” ಅಂದರೆ ಯಾವುದು ಯುಕ್ತ, ಯಾವುದು ಅಯುಕ್ತ ಎನ್ನುವುದನ್ನು ಸ್ಪಷ್ಟಪಡಿಸುವುದು.
“ವಿವೇಕ” ಅಂದರೆ ಯಾವುದು ಶಾಶ್ವತ, ಯಾವುದು ಅಶಾಶ್ವತ ಎನ್ನುವುದು ತಿಳಿಸುವುದು.
“ವಿವೇಕ” ಅಂದರೆ ಯಾವುದು ಪ್ರಸ್ತುತ, ಯಾವುದು ಅಪ್ರಸ್ತುತ ಎನ್ನುವುದನ್ನು ವಿವರಿಸಿ ಹೇಳುವುದು
“ವಿವೇಕ” ಅಂದರೆ
ಯಾವುದು ಸರಿಯಾದದ್ದು, ಯಾವುದು ಸರಿಯಲ್ಲದ್ದು .. ಯಾವುದು ಸಂದರ್ಭ, ಯಾವುದು ಅಸಂದರ್ಭ
ಎಲ್ಲವನ್ನು ಅರಿಯುವಂತೆ ಮಾಡುವುದು.
ವಿವೇಕಕ್ಕೆ ಮತ್ತೊಂದು ಹೆಸರು “ಜ್ಞಾನ”
ವಿವೇಕೋದಯವೇ “ಜ್ಞಾನೋದಯ”
“ಗುರುಪೂರ್ಣಿಮೆ” ಎನ್ನುವುದು ಸಕಲ ಗುರುಗಳಿಗೂ ಅಂಕಿತವಾದದ್ದು
ಕಷ್ಟಪಟ್ಟು ನಮಗೆ ಅನೇಕಾನೇಕ ವಿಷಯಗಳನ್ನು ಹೇಳಿಕೊಟ್ಟಿರುವಂತಹ ಪ್ರತ್ಯಕ್ಷ ಗುರುಗಳನ್ನೂ ..
ಮತ್ತು ಸಕಲ ಪರೋಕ್ಷ ಗುರುಗಳನ್ನೂ .. ಎಲ್ಲರನ್ನೂ .. ಆತ್ಮೀಯ ಸ್ಮರಣೆಗೆ ತಂದುಕೊಳ್ಳುವ ಸಮಯ ಗುರು ಪೂರ್ಣಿಮೆ
“ಯಃ ಯಾಚಿನೋತಿ, ಆಚರತಿ, ಆಚಾರಯತಿ ಚ ಸಃ ಆಚಾರ್ಯಃ”
“ಯಾರು ವಿವೇಕವನ್ನು, ಜ್ಞಾನವನ್ನು ಯಾಚಿಸುತ್ತಾರೋ .. ಮತ್ತು ಸ್ವಯಂ ಆಚರಣೆಯಲ್ಲಿಡುತ್ತಾರೋ ..
ಅಷ್ಟೇಅಲ್ಲದೆ, ಇತರರಿಗೆ ಕೂಡ ಆಚರಿಸುವಂತೆ ಮಾಡುತ್ತಾರೊ ಅಂಥವರನ್ನು ’ಆಚಾರ್ಯರು’ ಎನ್ನುತ್ತಾರೆ”
ಆಚಾರ್ಯರು ಎಲ್ಲರೂ ಸಹ ನಿರಂತರ ತಮ್ಮ ತಮ್ಮ ಹಂತಗಳಲ್ಲಿ
ವಿವೇಕವನ್ನೂ, ಜ್ಞಾನವನ್ನೂ .. ಆಗಿಂದಾಗ ಇನ್ನೂ ಹೆಚ್ಚಾಗಿ ಆಶಿಸುತ್ತಾ, ಅರ್ಜಿಸುತ್ತಾ ಇರುತ್ತಾರೆ.
ತಮ್ಮ ತಮ್ಮ ಹಂತಗಳಲ್ಲಿ ಆಚರಣೆಯಲ್ಲಿ ಇಡಲು ಇನ್ನಷ್ಟು ಅಭ್ಯಾಸ ಮಾಡುತ್ತಲೇ ಇರುತ್ತಾರೆ.
ತಮ್ಮ ತಮ್ಮ ಹಂತಗಳಲ್ಲಿ ಇತರರಿಂದ ಆಚರಿಸುವಂತೆ ಮಾಡಲು ಸದಾ ಕೃಷಿ ಮಾಡುತ್ತಲೇ ಇರುತ್ತಾರೆ.
“ಮಾತೃದೇವೋಭವ” .. “ಪಿತೃದೇವೋಭವ” .. “ಆಚಾರ್ಯದೇವೋಭವ”
ತಾಯಿ ಪ್ರಥಮ ಗುರುವು, ತಂದೆ ದ್ವಿತೀಯ ಗುರುವು
ಆಚಾರ್ಯರು ತೃತೀಯ ಗುರುಗಳು
ಜನ್ಮ ನೀಡಿದವರು, ಬೆಳೆಸಿದವರು ಎಲ್ಲರೂ ತಾಯಿಯರೇ .. ಮತ್ತು ತಂದೆಯರೇ ..
ವಿದ್ಯಾಬುದ್ಧಿಗಳನ್ನು ಹೇಳಿಕೊಡುವವರೆಲ್ಲರೂ
ಆತ್ಮಬೋಧೆ ಮಾಡುವವರೆಲ್ಲರೂ .. ಆಚಾರ್ಯರೇ
ಎಲ್ಲಾ ತಂದೆ-ತಾಯಿಯರಿಗೆ, ಆಚಾರ್ಯ ಗುರುದೇವರುಗಳೆಲ್ಲರಿಗೂ
“ಗುರುಪೂರ್ಣಿಮೆ” ಸಂದರ್ಭವಾಗಿ ಅನಂತಕೋಟಿ ಪ್ರಣಾಮಗಳು !