ಕ್ಷಣ ಕ್ಷಣ ಜಾಗರೂಕತೆ”

ಕ್ಷಣಕ್ಷಣಜಾಗರೂಕತೆ”

ಎನ್ನುವುದು ಧ್ಯಾನದಿಂದ,

ಆತ್ಮಜ್ಞಾನ ಪ್ರಕಾಶದಿಂದ,

ನಮಗೆ ಪ್ರಾಪ್ತಿಯಾಗುವ ಸ್ಥಿತಿ.

ಈ ಸ್ಥಿತಿಯಲ್ಲಿ ಸದಾಎಚ್ಚರಿಕೆ” ಯಿಂದ

ಇರುವುದು ನಡೆಯುತ್ತದೆ;

ಸದಾ “ವರ್ತಮಾನಸ್ಫೂರ್ತಿ”ಯಲ್ಲಿ ಇರುತ್ತೇವೆ,

ಭೂತ ಭವಿಷ್ಯತ್ ಕಾಲಗಳ ಛಾಯೆಗಳು ವರ್ತಮಾನದ ಮೇಲೆ

ಬೇಕೆಂದರೇನೆ ಬೀಳುತ್ತವೆ; ನಿರ್ಣಯಿಸಿದರೇನೆ ಇರುತ್ತವೆ.

ಒಬ್ಬ ಆಧ್ಯಾತ್ಮಿಕ ಶಾಸ್ತ್ರಜ್ಞನು,

ಆನಾಪಾನಸತಿ ಧ್ಯಾನದಲ್ಲಿ ನಿಪುಣನಾದ ನಂತರ,

ಆತ್ಮಜ್ಞಾನ ಪ್ರಕಾಶವನ್ನು ಹೊಂದಿದ ನಂತರ,

ನಿರಂತರ ಅಭ್ಯಾಸ ಮಾಡಬೇಕಾದ ಸ್ಥಿತಿಯೇ

“ಕ್ಷಣಕ್ಷಣಜಾಗರೂಕತೆ” .. ನಿರಂತರವರ್ತಮಾನಸ್ಫೂರ್ತಿ”.

ನಮ್ಮ ಒಳಗಿನ ಮನಸ್ಸಿನ ಪರಿಸ್ಥಿತಿಗಳಾಗಲೀ,

ನಮ್ಮ ಹೊರ ಪ್ರಪಂಚದ ಪರಿಸ್ಥಿತಿಗಳಾಗಲೀ,

ಕ್ಷಣಕ್ಷಣ ಸೃಷ್ಟಿಕ್ರಮದಲ್ಲಿ, ರೂಪಾಂತರ ಹೊಂದುತ್ತಲೇ ಇರುತ್ತವೆ.

ಯಾವ ಪರಿಸ್ಥಿತಿಯೂ ಸ್ಥಿರವಾದದ್ದಲ್ಲ ; ಪ್ರತಿಯೊಂದು ಅಸ್ಥಿರವೇ.

ನಿರಂತರಬದಲಾಗುವಲೋಕದಲ್ಲಿವರ್ತಮಾನಸಂದರ್ಭವನ್ನೂಸಮಸ್ಯೆಯನ್ನೂ,

ತತ್‌ಕ್ಷಣಗುರ್ತಿಸಿಅದಕ್ಕೆಅನುಗುಣವಾಗಿತತ್‌ಕ್ಷಣದಲ್ಲೇ

ಜಾಗರೂಕತೆಯಿಂದಸಮ್ಯಕ್ಸ್ಪಂದನೆಯಿಂದಸಮ್ಯಕ್ಪ್ರತಿಸ್ಪಂದನೆಯಿಂದ

ನಡೆದುಕೊಳ್ಳಲಾಗುವುದೇ “ಕ್ಷಣಕ್ಷಣಜಾಗರೂಕತೆಸ್ಥಿತಿ”.