“ಕೂಡಿ ಬಾಳಿದರೆ ಸುಖವಿದೆ”

“ಯೋಗ”ವೆಂದರೆ “ಸಂಗಮ”
“ಯುಂಜತೇ ಇತಿ ಯೋಗಃ” ಎನ್ನುತ್ತದೆ ಶಾಸ್ತ್ರ
“ಯುಂಜತಿ” ಎಂದರೆ “ಬೆರೆಯುವಿಕೆ” ಯಾವುದಾದಾರೂ ಎರಡರ ಬೆರೆಯುವಿಕೆ
ಕೂಡಿ ಬಾಳಿದರೆ ಸುಖವಿದೆ .. ಸೇರದಿದ್ದರೆ ಸುಖವಿಲ್ಲ
***
ವಿಧವಿಧವಾದ ಯೋಗಗಳಿವೆ
ವಿಧವಿಧವಾದ ಅಂಗವಿನ್ಯಾಸಗಳಿಂದ, ಮುದ್ರೆಗಳಿಂದ, ಭಾವನಾ ಪ್ರದರ್ಶನಗಳೊಂದಿಗೆ ಕೂಡಿ ಇರುವುದೇ ..
“ನೃತ್ಯಯೋಗ”
ಸು-ನಾದದಿಂದ, ಸು-ಸ್ವರಗಳೊಂದಿಗೆ, ಸು-ಲಯಗಳೊಂದಿಗೆ ಏಕವಾಗಿ ತನ್ಮಯಸ್ಥಿತಿ ಹೊಂದುವುದೇ ..
“ನಾದಯೋಗ”
ಮಾಡುತ್ತಿರುವ ಪ್ರತಿಯೊಂದೂ ಕರ್ಮದಲ್ಲಿ ಅನ್ಯಭಾವನೆಯಿಲ್ಲದೇ ಏಕಾಗ್ರತೆಯಲ್ಲಿ ಇರುವುದೇ ..
“ಕರ್ಮನಿಷ್ಣಾತಯೋಗ”
ಪ್ರತಿಫಲಾಪೇಕ್ಷೆ ಇಲ್ಲದೇ ಸಕಲ ಕರ್ಮಗಳನ್ನೂ ಲೋಕಕಲ್ಯಾಣಾರ್ಥ ಮಾಡುವುದು .. “ಕರ್ಮಫಲತ್ಯಾಗಯೋಗ”
ಬಾಯಿಯಿಂದ ಬರುವ ಮಾತಿನ ಮೇಲೆ ಶಾಸ್ತ್ರೀಯವಾದ ಜಾಗರೂಕತೆಯೊಂದಿಗೆ, ಸರ್ವಕುಶಲೋಪರಿಯಾಗಿ
ಇರುವುದೇ .. “ಸುವಾಣಿಯೋಗ”
ಸ್ವಾಧ್ಯಾಯದ ಕುರಿತು .. ಸಜ್ಜನಸಾಂಗತ್ಯದ ಕುರಿತು .. ವಿಶೇಷವಾಗಿ ಅಂಕಿತವಾಗಿ ದೇಹಭಾವನೆ ಬಿಟ್ಟು
ಆತ್ಮಭಾವನೆಯೊಂದಿಗೆ ಇರುವುದು .. “ಜ್ಞಾನಯೋಗ”
ಪರಮಪುರುಷರ ಕುರಿತು, ಪರಮಯೋಗಿಗಳ ಕುರಿತು ದಾಸೋಹ ಭಾವನೆ ಹೊಂದಿರುವುದೇ .. “ಭಕ್ತಿಯೋಗ”
ಭೌತಿಕ ಕಾಯದೊಂದಿಗೆ ಮನಸ್ಸು ಏಕವಾಗಿ
ವಿಧವಿಧವಾದ ಆಸನ ರೀತಿಗಳಲ್ಲಿ .. ವಿಧವಿಧವಾದ ಪ್ರಾಣಾಯಾಮಗಳೊಂದಿಗೆ ..
ಕೂಡಿರುವುದೇ .. “ಹಠಯೋಗ”
ಶ್ವಾಸ ಪ್ರಕ್ರಿಯೆಯ ಮೇಲೆ ಏಕಧಾರೆಯಾಗಿ ಗಮನವಿರಿಸುತ್ತಾ ಚಿತ್ತವೃತ್ತಿಗಳನ್ನು ನಿರೋಧಿಸಿ
ನಾಡೀಮಂಡಲ ಶುದ್ಧಿ ಮಾಡಿಕೊಳ್ಳುತ್ತಾ ದಿವ್ಯಚಕ್ಷುವಿನ ಕಡೆಗೆ ಪ್ರಯಾಣಿಸುವುದೇ ..
“ಕ್ರಿಯಾಯೋಗ/ಧ್ಯಾನಯೋಗ”
ಸ್ವ-ಪರ ಬೇಧಗಳಿಲ್ಲದೇ “ಮಮಾತ್ಮಾ ಸರ್ವಭೂತಾತ್ಮ” ಎಂದು ಜೀವಿಸುವುದು .. “ಅದ್ವೈತಯೋಗ”
ಸಕಲ ಕಾರಣ-ಕಾರ್ಯ ಸಂಬಂಧಗಳನ್ನು .. ಪರಸ್ಪರ ಸ್ಪಂದನ-ಪ್ರತಿಸ್ಪಂದನಾದಿಗಳನ್ನು
ಅಧ್ಯಯನ ಮಾಡುತ್ತಾ ಪ್ರಕೃತಿಯ .. ಸಹಜ ವಿಕಾಸ ಸೂತ್ರಗಳನ್ನು
ಸಶಾಸ್ತ್ರೀಯವಾಗಿ ಅರ್ಥ ಮಾಡಿಕೊಳ್ಳುವುದು .. “ವಿಜ್ಞಾನಯೋಗ
ಸ್ವಂತ ಕಷ್ಟಗಳನ್ನು, ಸ್ವಂತ ನೋವುಗಳನ್ನು ಪಕ್ಕಕ್ಕೆ ಸರಿಸಿ
ಇತರ ಪ್ರಾಣಿಕೋಟಿಯ ಯೋಗಕ್ಷೇಮಗಳ ಮೇಲೆ ಗಮನವಿರಿಸುವುದು .. “ಸೇವಾಯೋಗ”
“ತಸ್ಮಾತ್ ಯೋಗೀ ಭವ”
ಯೋಗಿಗಳೆಲ್ಲರಿಗೂ ಪ್ರಣಾಮಗಳು
ಯೋಗೀಶ್ವರೆಲ್ಲರಿಗೂ ಸಾಷ್ಟಾಂಗ ಪ್ರಣಾಮಗಳು
“ಕೂಡಿ ಬಾಳಿದರೆ ಸುಖವಿದೆ”