” ಕಂಗ್ರಾಜ್ಯುಲೇಷನ್ಸ್ .. ಪಿರಮಿಡ್ ಮಾಸ್ಟರ್ಸ್ ! “

“ಆಟಗಳು – ಹಾಡುಗಳು?” .. “ಸಂಗೀತ?”..

“ವೈಜ್ಞಾನಿಕ ಸಂಶೋಧನೆಗಳು?” .. “ಪ್ರಕೃತಿ ಸಂರಕ್ಷಣೆ?” ..

“ಸಾಮಾಜಸೇವೆ?” .. “ದೇಶೋದ್ಧಾರ?” ..

“ಆತ್ಮಕಲ್ಯಾಣ?” .. “ಲೋಕಕಲ್ಯಾಣ?” ..

* * *

“ಭೌತಿಕ ಆಯಾಮದ ಮೇಲೆ ಮತ್ತೊಂದು ಜನ್ಮಪಡೆಯಬೇಕು .. ಮತ್ತೊಂದು ಭೌತಿಕ ಶರೀರದ ಮೂಲಕ ಇನ್ನೂ ಕೆಲವು ಅನುಭವಗಳನ್ನು ಪಡೆಯಬೇಕು; ಇನ್ನೂ ಹೆಚ್ಚು ಪ್ರಗತಿ ಸಾಧಿಸಬೇಕು” ಎಂದು ಮೇಲಿನಲೋಕಗಳ ಆತ್ಮಗಳು ನಿರ್ಣಯ ತೆಗೆದುಕೊಂಡಾಗ .. ಮೇಲಿನಲೋಕಗಳ ಮಹಾತ್ಮರ ಸಲಹೆಗಳಿಂದ .. ಅವರು ಹೊಸ ತಂದೆ – ತಾಯಿಯರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

“ಎಲ್ಲಿ ಹುಟ್ಟಬೇಕು?” .. “ಯಾರ ಹೊಟ್ಟೆಯಲ್ಲಿ ಹುಟ್ಟಬೇಕು?” .. “ಯಾವ ಕಾರಣದಿಂದ ಹುಟ್ಟಬೇಕು?” .. “ಹೆಣ್ಣಾಗಿಯೋ?” .. “ಗಂಡಾಗಿಯೋ?” .. “ಏನು ಸಾಧಿಸಬೇಕು?” .. “ಯಾರಯಾರ ಜೊತೆ ಸೇರಿ ಕೆಲಸಮಾಡಬೇಕು?” .. “ಹೊಸ ಕರ್ಮ ಅಂಟಿಕೊಳ್ಳದೆ ಹಳೆಯ ಕರ್ಮವನ್ನು ಯಾವ ರೀತಿಯಲ್ಲಿ ಸುಟ್ಟುಬೂದಿ ಮಾಡಬಲ್ಲೆ?” ಎನ್ನುತ್ತಾ ಅನೇಕ ರೀತಿಯಲ್ಲಿ ಯೋಚಿಸಿ ಒಂದು ಸಕ್ರಮವಾದ ಪ್ರಣಾಳಿಕೆಯಿಂದ “ಮತ್ತೊಂದು ಜನ್ಮ” ಎನ್ನುವ “ಮತ್ತೊಂದು ಸಾಹಸ ಕಾರ್ಯಕ್ರಮದಲ್ಲಿ” ಭಾಗವಹಿಸುವಿರಿ.

* * *

ಭೌತಿಕ ಆಯಾಮದೊಳಗೆ ಬರುವುದೆಂದರೆ ಅದು ತುಂಬಾ ಸಾಹಸಕೃತ್ಯ! ಆದ್ದರಿಂದಲೇ, ಅನೇಕ ಜನರಲ್ಲಿ ಕೆಲವರು ಮಾತ್ರವೇ ಭೂತಲ, ಅಂದರೆ, ಭೌತಿಕ ಆಯಾಮದೊಳಗೆ (physical plane) ಪ್ರವೇಶಿಸಲು ಸಾಹಸಮಾಡುತ್ತಾರೆ. ತುಂಬಾ ಹಾಯಾಗಿರುವ ಮೇಲಿನಲೋಕಗಳನ್ನು ತ್ಯಜಿಸಿ ಮತ್ತೆ “ಕಷ್ಟಗಳ ಪಾಲಾಗಲು” ಯಾರಿಗೆ ತಾನೆ ಇಷ್ಟವಿರುತ್ತದೆ ಹೇಳಿ ?!

ಆದರೆ .. “ಮೇಲಿನಲೋಕಗಳಿಂದ ಇನ್ನೂ ಅಧಿಕ ಉನ್ನತ ಮಟ್ಟದಲ್ಲಿರುವ ಲೋಕಗಳಿಗೆ ಹೋಗಬೇಕಾದರೆ ಭೌತಿಕ ಶರೀರಧಾರಿಯಾಗಿ ಭೂ ಆಯಾಮದ ಮೇಲೆ ಜನ್ಮಪಡೆದುಕೊಂಡು ಸುಗುಣಗಳನ್ನು ಇನ್ನೂ ಹೆಚ್ಚಾಗಿ ಬೆಳೆಸಿಕೊಳ್ಳಬೇಕು ಎನ್ನುವುದು ಸೃಷ್ಟಿನಿಯಮ. ಆದ್ದರಿಂದ .. ಸಾಹಸೀ ಆತ್ಮಗಳು ಮತ್ತೊಂದು ಬಾರಿ ಭೂಮಿಯ ಮೇಲೆ ಹುಟ್ಟಲು ನಿರ್ಣಯಿಸಿಕೊಳ್ಳುತ್ತವೆ!”

ಒಂದು ಆತ್ಮಪ್ರಣಾಳಿಕಾಬದ್ಧವಾಗಿ ತಂದೆ-ತಾಯಿಯರನ್ನು ಆಯ್ಕೆ ಮಾಡಿಕೊಂಡ ನಂತರ ಮೇಲಿನಲೋಕಗಳನ್ನು ಬಿಟ್ಟು ಭೂ ಆಯಾಮದ ಮೇಲೆ ಆಗಲಿರುವ ತಾಯಿಯ ಗರ್ಭದಲ್ಲಿರುವ ಪಿಂಡವನ್ನು ಆಕ್ರಮಿಸಿಕೊಳ್ಳುತ್ತದೆ! ಪಿಂಡಪ್ರವೇಶ ಯಾವಾಗ ಬೇಕಾದರೂ ಆಗಬಹುದು .. ಮೊದಲನೆಯ ತಿಂಗಳದಲ್ಲಾಗಲಿ .. ಕೊನೆಯ ತಿಂಗಳಲ್ಲಾಗಲಿ .. ಮತ್ತು ಪ್ರಸವಕ್ಕಿಂತಾ ಮುಂಚೆ ಅಂತಿಮ (ಕೊನೆಯ) ದಿನವಾಗಲೀ!

ಒಂದು ನಾಟಕದಲ್ಲಾಗಲೀ ಅಥವಾ .. ಒಂದು ಸಿನಿಮಾದಲ್ಲಿ ಆಗಲಿ ಪಾತ್ರಗಳನ್ನು ಆಯ್ಕೆ ಮಾಡಿಕೊಂಡ ಹಾಗೆಯೇ ನಾವು ಸಹ ಪಾತ್ರವನ್ನು ಆರಿಸಿಕೊಂಡು ಹುಟ್ಟುತ್ತೇವೆ; ಜೀವನದಾದ್ಯಂತ ಆ “ಪಾತ್ರದ ಹಣೆಯ ಬರಹ” .. ನಮ್ಮ ಜೀವನದ ವಿಧಾನದ ದಿಕ್ಕಾಗಿ ಬದಲಾಗಿ ನಮಗೆ ದೋಣಿಯ ಚುಕ್ಕಾಣಿ ಆಗುತ್ತದೆ.

ಮೇಲಿನಲೋಕಗಳಿಂದ ಇನ್ನೂ ಹೆಚ್ಚು ಉನ್ನತ ಮಟ್ಟದ ಲೋಕಗಳನ್ನು ತಲುಪಿರುವ ಉನ್ನತ ಹಂತದ ಆತ್ಮಗಳು ತಮ್ಮ ಸ್ವಂತ ಕಲ್ಯಾಣವನ್ನು ಪೂರ್ಣಗೊಳಿಸಿಕೊಂಡವರು. ಆದ್ದರಿಂದ, ಅವರು ಪುನಃ ಜನ್ಮ ಪಡೆಯಲು ನಿರ್ಣಯಿಸಿದಾಗ .. ಲೋಕಕಲ್ಯಾಣಕ್ಕಾಗಿಯೇ ಟೊಂಕಕಟ್ಟಿ ನಿಂತುಕೊಳ್ಳುತ್ತಾರೆ. ಅವರೆ, :ಪಿರಮಿಡ್ ಮಾಸ್ಟರ್ಸ್”!

* * *

“ಬೋಧಿಸತ್ತ್ವರು” ಅಂದರೆ, ಒಂದೇ ಕಡೆ ಇದ್ದುಕೊಂಡು ಆಧ್ಯಾತ್ಮಿಕ ವಿದ್ಯೆಯನ್ನು ಧ್ಯಾನ ಸಾಧನೆಯನ್ನೂ ಬೋಧಿಸುವವರು; ಬುದ್ಧರು ಅಂದರೆ, ಹಳ್ಳಿ ಹಳ್ಳಿಗಳನ್ನು ಸುತ್ತಿ, ದೇಶ ವಿದೇಶಗಳನ್ನು ಸಂಚರಿಸಿ, ಅನೇಕಾನೇಕ ಪಟ್ಟಣಗಳಲ್ಲಿ ಆಧ್ಯಾತ್ಮಿಕ ವಿದ್ಯೆಯನ್ನು, ಧ್ಯಾನ ಸಾಧನೆಯನ್ನು ಬೋಧಿಸುವವರು.

ಕಳೆದಜನ್ಮದಲ್ಲೇ “ಬೋಧಿಸತ್ತ್ವ”ರಾಗಿ ತುಂಬಾ ಎತ್ತರಕ್ಕೆ ಬೆಳೆದಿರುವ ಪಿರಮಿಡ್ ಮಾಸ್ಟರ್‌ಗಳೂ ಮತ್ತೊಂದು ಮೆಟ್ಟಲು ಮೇಲಕ್ಕೆ ಹತ್ತಿ “ಬುದ್ಧ”ರಾಗಿ ಬೆಳೆಯಲಿಕ್ಕಾಗಿ ಇನ್ನೂ ಹೆಚ್ಚಾಗಿ ಪರಿಶ್ರಮಿಸಲು ನಿಶ್ಚಯಿಸಿಕೊಂಡು ಈಬಾರಿ ಭೂಮಿಯ ಮೇಲೆ ಅವತರಿಸಿದ್ದಾರೆ!

“ಈ ಬಾರಿ ಭೂಮಿಯನ್ನೆಲ್ಲಾ ನಿಜವಾದ ಆಧ್ಯಾತ್ಮಿಕತೆಯಲ್ಲಿ ಮುಳುಗಿಸುತ್ತೇನೆ” .. “ಈ ಬಾರಿ ಪ್ರತಿಯೊಬ್ಬ ಮಾನವನನ್ನೂ ಒಬ್ಬ ಯೋಗಿಯನ್ನಾಗಿ, ಒಬ್ಬ ಋಷಿಯನ್ನಾಗಿ ಮಾಡುತ್ತೇನೆ .. ಎಲ್ಲರನ್ನೂ ಆತ್ಮಸ್ವರೂಪರನ್ನಾಗಿ, ನಿರ್ಭಯರಾಗಿ ಬದಲಾಯಿಸುತ್ತೇನೆ” .. “ಈ ಬಾರಿ ಪ್ರಾಣಿ ಪ್ರಪಂಚವನ್ನು ಮಾನವಕುಲದ ಕ್ರೂತ ಆಕ್ರಮಣಗಳಿಂದ ರಕ್ಷಿಸುತ್ತೇನೆ” ..

“ಈ ಬಾರಿ ಮುಖ್ಯವಾಗಿ ಪಿರಮಿಡ್‌ಗಳನ್ನು ಎಲ್ಲಾ ಪ್ರದೇಶಗಳಲ್ಲೂ ಸ್ಥಾಪಿಸಿ .. ವಿಶ್ವಶಕ್ತಿಯನ್ನು ಭೂ ಆಯಾಮದ ಮೇಲೆ ತರುತ್ತೇನೆ” .. “ಈ ಬಾರಿ ನನ್ನ ಹಾಗೆ ಇರುವವರೆಲ್ಲರ ಜೊತೆ ಸೇರಿ ಒಂದು ಮಹಾ ಸಾಮೂಹಿಕ ವ್ಯವಸ್ಥೆಯನ್ನು ತಯಾರು ಮಾಡುತ್ತೇನೆ .. ಎಲ್ಲರ ಜೊತೆ ಒಂದಾಗಿ ಒಂದು ಸಮಷ್ಟಿಪ್ರಜ್ಞೆಸಹಿತ ಜೀವಿಸುತ್ತೇನೆ” ಎನ್ನುತ್ತಾ ಉನ್ನತ ಮಟ್ಟದ ಗುರಿಗಳನ್ನು ಏರ್ಪಡಿಸಿಕೊಂಡಿರುವವರೇ “ಪಿರಮಿಡ್ ಮಾಸ್ಟರ್ಸ್”!

ಆ ಅತ್ಯಂತ ಅದ್ಭುತ ಗುರಿಗಳ ಸಾಧನೆಗೆ ಅನುಗುಣವಾಗಿ ಭೌತಿಕ ಜೀವನಗಳ ಪ್ರಣಾಳಿಕೆಗಳನ್ನು ತಯಾರು ಮಾಡಿಕೊಂಡು ಭಾರೀ ಏರ್ಪಾಟುಗಳಿಂದ, ಅತ್ಯುನ್ನತ ಹಂತದ ಕ್ಷಮತೆಗಳಿಂದ ಈಗ ಈ ಭೂಮಿಯ ಮೇಲೆ ಸದ್ಯಕ್ಕೆ ಬಂದಿರುವವರೇ .. ಪಿರಮಿಡ್ ಮಾಸ್ಟರ್ಸ್!

* * *

ಹಿಂದಿನ ವರ್ಷ .. 2012ನೆಯ ವರ್ಷ ಪೂರ್ಣಗೊಂಡ ಸಮಯದಲ್ಲಿ .. “ಧ್ಯಾನಮಹಾಚಕ್ರ – III” ಸಂದರ್ಭದಲ್ಲಿ, ಕೈಲಾಸಪುರಿಯಲ್ಲಿ “ಕಾಸ್ಮಿಕ್ ಪಾರ್ಟಿ”ಯನ್ನು ಅತ್ಯಂತ ಅದ್ದೂರಿಯಾಗಿ ಆಚರಿಸಿದೆವು!

ನಿಜಕ್ಕೂ ಹೇಳಬೇಕಾದರೇ ನಮ್ಮ ಈ ಜನ್ಮದ ಆಕಾಂಕ್ಷೆಗಳೆಲ್ಲಾಪೂರ್ಣವಾಗಿವೆ; ಬಂದ ಕೆಲಸವನ್ನು ನಾವು ಮೂಲಭೂತವಾಗಿ ಪೂರ್ಣಗೊಳಿಸಿದೆವು; ಇನ್ನೂ ಉಳಿದ ಜೀವನವು ಕೇವಲ “ಬೊನಸ್” ತರಹದ್ದು! ಹೆಚ್ಚುವರಿಯಾಗಿ ದೊರೆತಿರುವುದು.

“ಕಾಸ್ಮಿಕ್ ಪಾರ್ಟಿ” ಸಂಭ್ರಮಗಳು ಆಚರಿಸಿದ ಒಂದು ವರ್ಷದ ಅನಂತರ ಪುನಃ ಈಗ “ಧ್ಯಾನ ಮಹಾಚಕ್ರ-IV”ರಲ್ಲಿದ್ದೇವೆ; ಈ ರೀತಿಯಾಗಿ “ಪಿರಮಿಡ್ ಮಾಸ್ಟರ್ಸ್” ಆಗಿ ಭೂಮಿಯ ಮೇಲೆ ಲೋಕಕಲ್ಯಾಣಾರ್ಥವಾಗಿ ಬಂದಿರುವಂತಹ ಮಹಾತ್ಮರಿಗೆಲ್ಲರಿಗೂ “ಧ್ಯಾನಮಹಾಚಕ್ರ-IV” ಸಂದರ್ಭವಾಗಿ ಅಭಿನಂದನೆಗಳು!

ಭವಿಷ್ಯತ್ತಿನಲ್ಲಿ ನಮ್ಮ “PSSM” ಕುರಿತು ಪ್ರಪಂಚವೆಲ್ಲಾ ಅರಿತುಕೊಳ್ಳುತ್ತದೆ! “ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟಿಸ್ ಮೂವ್‌ಮೆಂಟ್” ಹಾದಿಯಲ್ಲಿ ಎಲ್ಲರೂ ಆನಂದವಾಗಿ ಪ್ರವೇಶಿಸುತ್ತಾರೆ! “ಸ್ವಸ್ಥಿತಿ”ಯನ್ನು ಅರಿತುಕೊಳ್ಳುವುದರಿಂದ ಎಲ್ಲರೂ “ಸ್ವಸ್ಥತೆ”ಯನ್ನು ವಿಶೇಷವಾಗಿ ಅನುಭವಿಸುತ್ತಾರೆ! ಇನ್ನೂ ಶಾರೀರಕ, ಮಾನಸಿಕ, ಆರ್ಥಿಕ, ಸಾಂಘಿಕ ಸ್ವಸ್ಥತೆಯನ್ನು ಪ್ರಪಂಚ ಮಾನವಕುಲವೆಲ್ಲಾ ಎಲ್ಲಾ ಪುಷ್ಕಳವಾಗಿ ಆಸ್ವಾಧಿಸಬಲ್ಲವರಾಗುತ್ತಾರೆ.

2016ಕ್ಕೆಲ್ಲಾ “ಪಿರಮಿಡ್ ಜಗತ್”ಗೆ ವಿಶ್ವದಾದ್ಯಂತ ಸ್ವಾಗತ ಬಯಸುತ್ತದೆ! 2020ಕ್ಕೆಲ್ಲಾ “ಸಸ್ಯಾಹಾರ ಜಗತ್” ಎನ್ನುವ ನಿನಾದ ಪ್ರಪಂಚದಾದ್ಯಂತ ಪ್ರತಿಧ್ವನಿಸುತ್ತದೆ.

* * *

ಪ್ರತಿವರ್ಷ ಡಿಸೆಂಬರ್ ತಿಂಗಳ ಅಂತ್ಯದಲ್ಲಿ, ತಪ್ಪದೇ ಕೈಲಾಸಪುರಿಯಲ್ಲಿ ನಾವೆಲ್ಲಾ ಭೇಟಿಯಾಗುತ್ತೇವೆ! ಪ್ರತಿವರ್ಷ ಧ್ಯಾನ ಜ್ಞಾನ ವಿಜಯೋತ್ಸವಗಳು ತುಂಬಾ ಅದ್ಭುತವಾಗಿ ಆಚರಿಸುತ್ತೇವೆ!

“ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟೀಸ್ ಮೂವ್‌ಮೆಂಟ್‌ನ 18 ಮಾರ್ಗಸೂಚೀ ತತ್ವಗಳು” ಈಗ ಲಕ್ಷಾಂತರ ಪಿರಮಿಡ್ ಮಾಸ್ಟರ್‌ಗಳ ಪ್ರತಿನಿತ್ಯದ ಆಚರಣೆಯಾಗಿ, ಅದೊಂದು ಜೀವನವಿಧಾನವಾಗಿ ಬಿಟ್ಟದೆ!

ಅನೇಕಾನೇಕ ಪಿರಮಿಡ್ ಪತ್ರಿಕೆಗಳ ಮೂಲಕ .. ಅನೇಕಾನೇಕ ಭಾರತೀಯ ಭಾಷೆಗಳಲ್ಲಿ .. ವಿಶೇಷವಾಗಿ ಪಿರಮಿಡ್ ಮಾಸ್ಟರ್‌ಗಳ ಧ್ಯಾನ ಅನುಭವಗಳೂ .. ಸ್ವಸ್ಥತಾನುಭವಗಳೂ .. ಈಗ ಲಭ್ಯವಾಗುತ್ತಿವೆ. ಅನೇಕಾನೇಕ ಪಿರಮಿಡ್ ವೆಬ್‌ಸೈಟ್‌ಗಳ ಮೂಲಕ ಪ್ರಪಂಚದಾದ್ಯಂತ ಪ್ರತಿಕ್ಷಣ ನಮ್ಮ PSSM ಸಮಾಚಾರಗಳು ವಿಶೇಷವಾಗಿ ಪ್ರಸಾರಗೊಳ್ಳುತ್ತಿವೆ. ಭವಿಷ್ಯತ್ತಿನಲ್ಲಿ ಪ್ರಪಂಚದ ಎಲ್ಲಾ ಭಾಷೆಗಳಲ್ಲೂ ಸಹ ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟೀಸ್ ಮೂವ್‌ಮೆಂಟ್‌ನ ಸಮಾಚಾರ ಲಭ್ಯವಾಗುತ್ತದೆ! ಆ ರೀತಿಯಲ್ಲಿ ವಿಶ್ವವ್ಯಾಪ್ತಿವಾಗಿರುವ ಸತ್ಯಪಿಪಾಸುಗಳು ಮತ್ತು ಮುಮುಕ್ಷು ಜನರು .. ಎಲ್ಲರೂ .. ಅವರವರ ಮಾತೃಭಾಷೆಗಳ ಮೂಲಕ ನಿಜವಾದ ಆಧ್ಯಾತ್ಮಿಕ ಸತ್ಯಗಳನ್ನು ಪಡೆಯುತ್ತಾರೆ ಮತ್ತು ಗ್ರಹಿಸುತ್ತಾರೆ.

“ಸತ್ಯಂ ವದ – ಧರ್ಮಂ ಚರ”

“ಸತ್ಯಗಳನ್ನೇ ಮಾತನಾಡಬೇಕು ಧರ್ಮಗಳನ್ನೇ ಆಚರಿಸಬೇಕು”

ಯಾವ ಸತ್ಯಗಳು?? ಯಾವ ಧರ್ಮಗಳು??

ಇರುವ ನಿಜವಾದ ಸತ್ಯಗಳು ನಾಲ್ಕು :

1) “ನಾವು ಆತ್ಮ ಪದಾರ್ಥ .. ಅಣು ಪದಾರ್ಥವಲ್ಲ”

2) “ನಮ್ಮ ವಾಸ್ತವಗಳು ನಮ್ಮ ಆಯ್ಕೆಗಳ ಪ್ರತಿರೂಪಗಳು”

3) “ಆತ್ಮಶಕ್ತಿಯಿಂದ ಸಾಧಿಸಲಾರದ್ದು ಯಾವುದೂ ಇಲ್ಲ”

4) “ಸೃಷ್ಟಿಯಲ್ಲಿ ಹೊಸ ಲೋಕಗಳೂ, ಹೊಸ ಪ್ರಾಣಿಗಳೂ ಆಗಿಂದಾಗಲೇ ಉದ್ಭವಿಸುತ್ತಲೇ ಇರುತ್ತವೆ”

ಪಿರಮಿಡ್ ಮಾಸ್ಟರ್‌ಗಳು ಆಚರಿಸಬೇಕಾದ ಧರ್ಮಗಳು ನಾಲ್ಕು:

1) “ಸಸ್ಯಾಹಾರ ಸೇವನೆ .. ಅಹಿಂಸೆ/ಸಸ್ಯಾಹಾರಪ್ರಚಾರ”

2) “ಪ್ರತಿನಿತ್ಯ ಧ್ಯಾನಾಭ್ಯಾಸ .. ಧ್ಯಾನ ಪ್ರಚಾರ”

3) “ಪ್ರತಿನಿತ್ಯ ಸ್ವಾಧ್ಯಾಯ ಅಭ್ಯಾಸ .. ಸ್ವಾಧ್ಯಾಯ ಪ್ರಚಾರ”

4) “ಪಿರಮಿಡ್‌ಗಳ ನಿರ್ಮಾಣ”

My dear Friends ! My dear Pyramid masters ! My dear Gods ! ಎಲ್ಲರಿಗೂ 2014ರ ನೂತನ ವರ್ಷದ ವಿಶೇಷ ಅಭಿನಂದನೆಗಳು!