” ಒಂದು ಯುಗದ ಅಂತ್ಯ … ಒಂದು ಯುಗದ ಆರಂಭ “

“21 ಡಿಸೆಂಬರ್ 2012 ರಿಂದ 31 ಡಿಸೆಂಬರ್ 2012 ವರೆಗೆ ಕಾಸ್ಮಿಕ್ ಪಾರ್ಟಿ”

ಭೂಮಿ ತನ್ನ ಸುತ್ತಲೂ ತಾನು ತಿರುಗಲು ಒಂದು ದಿನ
ಚಂದ್ರನು ಭೂಮಿ ಸುತ್ತಲೂ ಸುತ್ತಲು ಒಂದು ತಿಂಗಳು
ಭೂಮಿ ಸೂರ್ಯನ ಸುತ್ತಲೂ ಸುತ್ತಲು ಒಂದು ವರ್ಷ
ಸೂರ್ಯನು ತನ್ನ ಸೌರಕುಟುಂಬದ ಜೊತೆ ತನ್ನ ಮೂಲ ಕೇಂದ್ರವಾದ ‘ಎಲ್ಸಿಯಾನ್’ ಸುತ್ತಲೂ
ಒಮ್ಮೆ ಪರಿಭ್ರಮಿಸಲು ಅಗತ್ಯವಿರುವ 26,೦೦೦ ವರ್ಷಗಳು .. “ಒಂದು ಯುಗ”
ಪ್ರತಿಯೊಂದು 26,೦೦೦ ವರ್ಷಗಳಿಗೂ, ಒಂದು ಯುಗಾಂತ್ಯ, ಒಂದು ಮಹಾಪ್ರಳಯ
ಹೀಗೆ ಪ್ರತಿ 26,೦೦೦ ವರ್ಷಗಳಿಗೂ ಒಂದು ಬಾರಿ ಭೂಮಂಡಲದಲ್ಲಿ ಭಾರೀ ಬದಲಾವಣೆ ನಡೆಯುವುದು ..
ಮತ್ತು ಅನೇಕಾನೇಕ ನಕ್ಷತ್ರಲೋಕಗಳ ಮಿತ್ರರು ಅವುಗಳ ಪ್ರಭಾವವನ್ನು ಕಡಿಮೆಗೊಳಿಸಲು ಮಾಡುತ್ತಿರುವ ನಿರಂತರ ಸೇವೆಗಳು
ನಮಗೆ ಗೊತ್ತಿದೆ.
ಸುಮಾರು ಒಂದು ಲಕ್ಷವರ್ಷಗಳ ಹಿಂದೆ “ಲೈರಾ” ಎನ್ನಲಾಗುವ ಒಂದು 12ನೆಯ ಆಯಾಮದ ಗ್ರಹದಲ್ಲಿ
ನಮ್ಮ “ಗೆಲಾಕ್ಟಿಕ್ ಫೆಡರೇಷನ್”ನ ಒಂದು ದೊಡ್ಡ ಸಮಾವೇಶ ನಡೆದು
3ನೆಯ ಆಯಾಮವಾದ ಭೂಮಂಡಲದ ಮೇಲೆ ಒಬ್ಬ ಹೊಸ ಮಾನವನ ಆವಿರ್ಭಾವಕ್ಕೆ ಒಂದು ನಿರ್ದಿಷ್ಟವಾದ ಪ್ರಣಾಳಿಕೆ
ಸಿದ್ಧವಾಗಿದೆ
ಅದುವರೆಗೂ “ಎರಡು ಜೋಡಿಯ DNA” ಹೊಂದಿದ್ದ ಮಾನವನು “12 ಜೋಡಿಯ DNA” ಪಡೆದು
ಮುಂದಿನ ಒಂದು ಲಕ್ಷವರ್ಷಗಳ ಕಾಲ ಆನಂದವಾಗಿರಲು ಸರ್ವಸಿದ್ಧತೆಗಳು ನಡೆದಿದ್ದವು
ಅಂದುಕೊಂಡ ಹಾಗೆ ಎಲ್ಲವೂ ನಡೆದು ಒಂದು ಲಕ್ಷ ವರ್ಷಗಳು ಕಳೆದುಹೋಗಿವೆ .. ಈ ನಡುವೆ ಮೂರು ಪ್ರಳಯಗಳು
ಸಂಭವಿಸಿವೆ
“ನಾಲ್ಕನೆ ಪ್ರಳಯ” ಹತ್ತಿರ ಬರುವ ಸಮಯಕ್ಕೆ ಅನೇಕಾನೇಕ ನಕ್ಷತ್ರವಾಸಿಗಳು
ಭೂಮಿಯ ಮೇಲೆ ಮಾನವರಾಗಿ ಹುಟ್ಟಿ 12 ಜೋಡಿಯ DNA ನಿರ್ಮಾಣಕ್ಕೆ ತುಂಬಾ ಸಹಾಯ, ಸಹಕಾರ ನೀಡಿದರು
ಸಕಲ ನಕ್ಷತ್ರಲೋಕವಾಸಿಗಳ ಪ್ರಯತ್ನಗಳೆಲ್ಲಾ ಸಫಲಗೊಳ್ಳುತ್ತಿರುವ ದಿನಗಳಿವು
ಪ್ರಸ್ತುತ ಸಮಯದಲ್ಲಿ ಲಕ್ಷಾಂತರ ಜನರು ಮಾಸ್ಟರ್‌ಗಳಾಗಿ, ಹೊಸ ಮಾನವರಾಗಿ ತಯಾರಾಗಿದ್ದಾರೆ
ಕೋಟ್ಯಾಂತರ ಮಾನವರಲ್ಲಿ ಹೊಸ ಆತ್ಮಚೈತನ್ಯವು ತುಂಬಿತುಳುಕುತ್ತಿದೆ
ಇಂತಹ ಅದ್ಭುತ ಸಮಯದಲ್ಲಿ ನಾವಿದ್ದೇವೆ
21 ಡಿಸೆಂಬರ್, 2012 ಕ್ಕೆ ಪ್ರಣಾಳಿಕೆಯ ಪ್ರಕಾರ ಎಲ್ಲಾ ಸಕ್ರಮವಾಗಿ ನಡೆದು,
ನಾಲ್ಕನೆಯ ಪ್ರಳಯದಿಂದ ಮಾನವಜನಾಂಗವನ್ನು ಉಳಿಸಲಾಗಿದೆ. ಭೂಮಿಯು ಪ್ರಸ್ತುತ ವಿಶೇಷವಾಗಿ ಸುರಕ್ಷಿತವಾಗಿದೆ.
ಅಷ್ಟೇಅಲ್ಲದೆ, 3ನೆಯ ಆಯಾಮದ ಭೂಮಿಯು .. 5 ನೆಯ ಆಯಾಮದ ಭೂಮಿಯಾಗಿ ಬದಲಾಗಲಿದೆ.
21 ಡಿಸೆಂಬರ್ 2012 ಒಂದು ಯುಗಾಂತ್ಯದ ಸಂಕೇತವಾಗಿದೆ .. ಮತ್ತೊಂದು ಹೊಸ ಯುಗಕ್ಕೆ ನಾಂದಿಯಾಗಿದೆ.
ಇವೆಲ್ಲಕ್ಕಾಗಿ, ಒಂದು ದೊಡ್ಡ “ಕಾಸ್ಮಿಕ್ ಪಾರ್ಟಿ”ಯ ರೂಪದಲ್ಲಿ … ಅನೇಕಾನೇಕ ಗೆಲಾಕ್ಸಿಗಳಲ್ಲಿ ಸಂಭ್ರಮಗಳನ್ನು ಆಚರಿಸಲಾಗುತ್ತಿದೆ.
ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟೀಸ್ ಮೂವ್‌ಮೆಂಟ್ ವತಿಯಿಂದ ಹೈದರಾಬಾದ್‌ನ ಕಡ್ತಾಲ್‌ನಲ್ಲಿ
ಈ “ಕಾಸ್ಮಿಕ್ ಪಾರ್ಟಿ” ಸಂಭ್ರಮಗಳನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ.
ಎಲ್ಲರಿಗೂ ದಿವ್ಯ, ನವ್ಯ, ಭವ್ಯ ಯುಗದ ಶುಭಾಶಯಗಳು…
ಎಲ್ಲಾ ನಕ್ಷತ್ರಲೋಕ ವಾಸಿಗಳಿಗೆ ಪ್ರತ್ಯೇಕವಾದ ಕೃತಜ್ಞತಾಪೂರ್ವ ಅಭಿನಂದನೆಗಳು