“ಏಳು ಶರೀರಗಳು”

ಮನುಷ್ಯ ಎಂದ ಮೇಲೆ ಇರುವುದು ಒಂದು ಶರೀರವೇ ಅಲ್ಲವೆ? ಹೌದು! ಅಲ್ಲ! ಹೊರಗೆ ನೋಡಿದರೆ ಒಂದೇ ಶರೀರ ಕಾಣುತ್ತದೆ ಆದರೇ ಅಂತರ್ಲೀನವಾಗಿ ಆರು ಶರೀರಗಳಿವೆ!

೧. Physical Body – ಅನ್ನಮಯಕೋಶ .. ಸ್ಥೂಲ ಶರೀರ
೨. Etheric Body – ಪ್ರಾಣಮಯಕೋಶ .. ಕಾಂತಿಮಯ ಶರೀರ
೩. Astral Body – ಭಾವನಾಮಯ ಶರೀರ, ಅಥವಾ ಮನೋಮಯಕೋಶ .. ಸೂಕ್ಷ ಶರೀರ
೪. Mental Body or Causal Body – ವಿಜ್ಞಾನಮಯಕೋಶ .. ಕಾರಣ ಶರೀರ
೫. Spiritual Body – ಆನಂದಮಯಕೋಶ .. ಮಹಾಕಾರಣ ಶರೀರ
೬. Cosmic Body – ವಿಶ್ವಮಯಕೋಶ .. ಮಹಾಕಾರಣ ಶರೀರ
೭. Nirvanic Body – ನಿರ್ವಾಣಮಯಕೋಶ .. ಮಹಾಕಾರಣ ಶರೀರ

ಮಾನವನ ಪ್ರಜ್ಞೆ consciousness ಭೌತಿಕ ಶರೀರದಲ್ಲಿ ಕೇಂದ್ರೀಕೃತವಾಗಿರುವಾಗ, ಅಂದರೆ, ಜಾಗ್ರತಾವಸ್ಥೆಯಲ್ಲಿದ್ದಾಗ, ಈ ಸ್ಥೂಲ ವಿಶ್ವದಲ್ಲಿ ವಿಹರಿಸುತ್ತಾ ಕರ್ಮಗಳನ್ನು ಮಾಡುತ್ತಿರುತ್ತಾನೆ. ಸ್ಥೂಲ ಶರೀರಕ್ಕೆ ಮರಣ ಹತ್ತಿರ ಬಂದಾಗ ಸೂಕ್ಷ್ಮಶರೀರ ಬಿಡುಗಡೆ ಆಗುತ್ತದೆ. ಕಾಂತಿಮಯ ಶರೀರ ಎಂಬುವುದು ಎರಡು ಮೂರು ದಿನಗಳವರೆಗೂ ಭೌತಿಕ ಶರೀರವನ್ನೇ ಅಂಟುಕೊಂಡಿದ್ದು (ಶರೀರ ಇದ್ದರೆ) ಅನಂತರ ನಿಧಾನಕ್ಕೆ ಕರಗಿಹೋಗುತ್ತದೆ.

ಸೂಕ್ಷ್ಮಶರೀರದಿಂದ ಸೂಕ್ಷ್ಮಲೋಕಗಳಲ್ಲಿ ತಾನು ಆ ಜನ್ಮದಲ್ಲಿ ಮಾಡಿದ ಕರ್ಮಗಳನ್ನು ನೋಡಿಕೊಂಡು ಪಶ್ಚಾತ್ತಾಪಪಟ್ಟು, ಆ ಸೂಕ್ಷ ಶರೀರವನ್ನು ಕೂಡಾ ವಿಸರ್ಜಿಸಿ ತನ್ನ ಸ್ವಂತ ಬಿಂಬವನ್ನು, ಸೂತ್ರಾತ್ಮವನ್ನು, ಎಂದರೆ ಕಾರಣ ದೇಹವನ್ನು ಸೇರುತ್ತಾನೆ. ನಿಜಕ್ಕೂ ಆ ಬಿಂಬ ಎಂದಿಗೂ ಕಾರಣ ಲಕವನ್ನು ಬಿಡುವುದಿಲ್ಲ. ಅದರೊಳಗಿಂದ ಉದ್ಭವಿಸಿದ ಒಂದು ಪ್ರತಿಬಿಂಬವೇ ಭೂಲೋಕಕ್ಕೆ ಬಂದು ಕರ್ಮಗಳನ್ನು ಮಾಡಿ, ಶರೀರವನ್ನು ಬಿಟ್ಟು, ಸೂಕ್ಷ್ಮಲೋಕಗಳಲ್ಲಿ ಕರ್ಮ ಫಲಗಳನ್ನು ಅನುಭವಿಸಿ ಪುನಃ ತನ್ನ ಮೂಲಬಿಂಬದಲ್ಲಿ ತಾನು ಲೀನವಾಗುತ್ತದೆ. ಈ ಪರ್ಯಟನೆಯ ಪೂರ್ಣ ಫಲವೇ ಜ್ಞಾನ.

ಈ ರೀತಿಯಾಗಿ ಪ್ರತಿ ಒಂದು ಜನ್ಮದಲ್ಲೂ ಸ್ವಲ್ಪ ಸ್ವಲ್ಪ ಜ್ಞಾನವನ್ನು ಶೇಖರಿಸಿಕೊಂಡರೆ ಕ್ರಮವಾಗಿ ಒಂದೊಂದು ಲೋಕವನ್ನೂ ದಾಟುತ್ತಾ, ಪೂರ್ಣ ಆತ್ಮಜ್ಞಾನವನ್ನು ಹೊಂದುವುದರಿಂದ ಕಾರಣಲೋಕಗಳನ್ನು ಬಿಟ್ಟು ಮಹಾಕಾರಣ ಲೋಕಗಳಲ್ಲಿ ಪ್ರವೇಶಿಸುತ್ತದೆ. ಬಿಂಬಾತ್ಮ ಕಾರಣಲೋಕಗಳಲ್ಲಿ ಇರುವವರೆಗೂ ಜನ್ಮ ತಪ್ಪುವುದಿಲ್ಲ. ಆನಂತರ ಬೇಕೆಂದುಕೊಂಡರೆ ಬರುತ್ತದೆ. ಇಲ್ಲದಿದ್ದರೇ ಇಲ್ಲ. ತನ್ನನ್ನು ತಾನು ಸಂಪೂರ್ಣವಾಗಿ ತಿಳಿದುಕೊಳ್ಳುವುದೇ ಜನ್ಮರಾಹಿತ್ಯ ಪದವಿಯನ್ನು, ಮೋಕ್ಷವನ್ನು ಹೊಂದುವುದು. ಅಂದರೆ, ಇದರಿಂದ ಅಂಶಾತ್ಮ ಪೂರ್ಣಾತ್ಮದ ಜೊತೆ ಸಾಲೋಕ್ಯವನ್ನೂ, ಸಾಮೀಪ್ಯವನ್ನೋ, ಸಾರೂಪ್ಯವನ್ನೋ, ಅಂತಿಮವಾಗಿ ಸಾಯುಜ್ಯವನ್ನು ಚಿರಕಾಲದಲ್ಲೇ ಹೊಂದುತ್ತದೆ. ಸಾಯುಜ್ಯವನ್ನು, ಐಕ್ಯತೆಯನ್ನು ಸಾಧಿಸಿದಾಗ ತಾನೂ ಪರಮಾತ್ಮನಾಗಿ, ತಾರೆಯಾಗಿ, ಚಿರಕಾಲ ಅಚಲವಾಗಿ, ಸ್ವಯಂಭೂ ಆಗಿ, ಆದಿತ್ಯನಾಗಿ, ಸರ್ವಲೋಕ ಜ್ಞಾನಪ್ರದಾತನಾಗಿ, ಶಕ್ತಿ ಪ್ರದಾತನಾಗಿ ಉಳಿಯುತ್ತದೆ.

ಧ್ಯಾನದಲ್ಲಿ ಒಂದೊಂದು ಬಾರಿ ಒಂದೊಂದು ಲೋಕಕ್ಕೆ ಹೋಗುತ್ತಿರುತ್ತೇವೆ. ಆಯಾ ಲೋಕ ಪರಿಧಿಯ ಅನುಸಾರವಾಗಿ, ಆಯಾ ಶರೀರಗಳನ್ನು ಸ್ವಯಂಚಾಲಿತವಾಗಿ (ತಾನಾಗಿಯೇ) ಕರೆದುಕೊಂಡು ಹೋಗುತ್ತದೆ. ಉದಾ: ಭೂಮಿಯಿಂದ ರಾಕೆಟ್ ಬಿಟ್ಟಾಗ ಸರಿಯಾದ ಗುರಿಯನ್ನು ಸೇರುವಷ್ಟರಲ್ಲಿ, ಅದಕ್ಕೆ ಅಲ್ಲಿಯವರೆಗೂ ಇಂಧನವಾಗಿ ಉಪಂiಗವಾಗಿದ್ದು ಅಲ್ಲಿ ಬಿಟ್ಟು ಬಿಡಲಾಗುತ್ತದೆ. ಅದೇ ತರಹ ಲೋಕಗಳ ಅನುಸಾರವಾಗಿ ಶರೀರ ಬದಲಾವಣೆ ಇರುತ್ತದೆ.

ನಮ್ಮ ಜೀವನ ಇರುವುದು

ಅನ್ನಮಯ ಕೋಶದಿಂದ … ವಿಷಯಾನಂದಕ್ಕಾಗಿ
ಮನೋಮಯ ಕೋಶದಿಂದ … ಭಜನಾನಂದಕ್ಕಾಗಿ
ವಿಜ್ಞಾನಮಯ ಕೋಶದಿಂದ … ಜ್ಞಾನಾನಂದಕ್ಕಾಗಿ
ಆನಂದಮಯ ಕೋಶದಿಂದ … ಬ್ರಹ್ಮಾನಂದಕ್ಕಾಗಿ

ಇಂತಹ ಆನಂದಾವನ್ನು ದಿನಾ ಹೊಂದಬೇಕಾದರೆ ದಿನಾ ಕನಿಷ್ಠ,

ಒಂದು ಗಂಟೆ … ಧ್ಯಾನ
ಒಂದು ಗಂಟೆ … ಸ್ವಾಧ್ಯಾಯ
ಒಂದು ಗಂಟೆ … ಸಜ್ಜನ ಸಾಂಗತ್ಯ ಮಾಡಲೇಬೇಕು

ಉಳಿದ ಸಮಯದಲ್ಲಿ ಸಂತೋಷದಿಂದ ಇರುತ್ತಾ ಜೀವಿತವನ್ನು ಆನಂದವಾಗಿ ಅನುಭವಿಸಿರಿ.