“ಎಲ್ಲರೂ ಪರಮ ಶಿವನಹಾಗೆ ಬದಲಾಗಬೇಕು”

ಮಧುರ ಮಧುರ ! ಎಲ್ಲಾ ಮಧುರ !

ದೇಹ ಮಧುರ ! ಆತ್ಮ ಮಧುರ !

ಹೂವು ಮಧುರ ! ಹೂವಲ್ಲಿರುವ ಜೇನು ಮಧುರ !

ಮಧುರ ! ಮಧುರ ! ಎಲ್ಲಾ ಮಧುರ !

ಧ್ಯಾನ ಮಾಡದೇ ಇರುವವರಿಗೆ ಎಲ್ಲಾ ದುಃಖ.

ಧ್ಯಾನ ಮಾಡುವವರಿಗೆ ಎಲ್ಲಾ ಆನಂದ.

ಧ್ಯಾನ ಮಾಡದೇ ಇರುವವರಿಗೆ ಸಿರಿತನ, ಬಡತನ ಎಲ್ಲಾ ದುಃಖ.

ಧ್ಯಾನ ಮಾಡುವವರಿಗೆ ಸಿರಿತನ, ಬಡತನ ಎರಡೂ ಆನಂದ.

ಧ್ಯಾನಮಾಡದೇ ಇರುವವರಿಗೆ ಹಣ ಇದ್ದರೂ ಬಾಧೆ, ಇಲ್ಲದಿದ್ದರೂ ಬಾಧೆ.

ಧ್ಯಾನಮಾಡುವವರಿಗೆ ಹಣವಿದ್ದರೂ, ಇಲ್ಲದಿದ್ದರೂ ಸದಾ ಸಂತೋಷವೇ.

ಧ್ಯಾನದಲ್ಲೇ ಆನಂದ, ಆರೋಗ್ಯ, ಅಂದ, ಯೋಗನಿದ್ರೆ ಎಲ್ಲಾ ಅಡಗಿವೆ.

ಹಣ್ಣಲ್ಲಿ ಬೀಜ ಅಡಗಿರುವ ಹಾಗೆ ಧ್ಯಾನದಲ್ಲೇ ಎಲ್ಲಾ ಅಡಗಿವೆ. ಇದು ತಿಳಿದುಕೊಳ್ಳಬೇಕಾದರೆ ದಿನನಿತ್ಯ ಧ್ಯಾನ ಮಾಡಿದರೆ ಎಲ್ಲಾ ಅರ್ಥವಾಗುತ್ತದೆ.

‘ ಶಿವನು ’ ಏನು ಮಾಡುತ್ತಿದ್ದಾನೆ? ಸದಾ ಧ್ಯಾನದಲ್ಲಿರುತ್ತಾ ತನ್ನ ದಿವ್ಯಚಕ್ಷುವಿನಿಂದ ಎಲ್ಲಾ ಗಮನಿಸುತ್ತಿದ್ದಾನೆ. ಮತ್ತೆ ಪ್ರಜೆಗಳು ಏನು ಮಾಡುತ್ತಿದ್ದಾರೆ? ತಿನ್ನುವುದು, ಕುಡಿಯುವುದು, ನಿದ್ರಿಸುವುದು ಮಾಡುತ್ತಿದ್ದಾರೆ .

ಶಿವನಹಾಗೆ ಧ್ಯಾನಮಾಡಿ ದಿವ್ಯಚಕ್ಷುವು ಸಂಪಾದಿಸಿಕೊಳ್ಳಬೇಕು. ’ ಸಾವಿಗೆ ’ ಭಯಪಡಬಾರದು. ಏಕೆಂದರೆ, ನಮಗೆ ಸಾವೇ ಇಲ್ಲ. ನಾವು ಎಲ್ಲಿಂದ ಬಂದಿದ್ದೇವೊ ಅಲ್ಲಿಗೆ ಮರಳಿ ಹೋಗುವುದೇ ಸಾವು. ಆದ್ದರಿಂದ, ಧ್ಯಾನದಲ್ಲೇ ಸುಖ, ಸಂತೋಷ, ಶಾಂತಿ, ಆನಂದ ಇದೆಯೆಂದು ಗ್ರಹಿಸಿ ನಿರಂತರ ಧ್ಯಾನಸಾಧನೆಯಿಂದ ಅನುಭವಪೂರ್ವಕವಾಗಿ ತಿಳಿದುಕೊಳ್ಳಬೇಕು.